Whatsapp ಬಳಕೆದಾರರೇ ಹುಷಾರ್ – ಇಂತಹ Message ಕ್ಲಿಕ್ ಮಾಡಿದ್ರೆ ಅಪಾಯ ಗ್ಯಾರಂಟಿ!
ಈಗಂತೂ ಡಿಜಿಟಲ್ ಇಂಡಿಯಾ. ಬಹುತೇಕ ವ್ಯವಹಾರಗಳು ಆನ್ಲೈನ್ನಲ್ಲೇ ಮುಗಿಯುತ್ತವೆ. ಹಾಗಂತ ನೀವು ಸ್ವಲ್ಪ ಯಾಮಾರಿದ್ರೆ ಅಕೌಂಟ್ ಖಾಲಿಯಾಗುತ್ತೆ. ನಿಮ್ಮ ಫೋನ್ಗೆ ಬರುವ ಮೆಸೇಜ್ಗಳ ಬಗ್ಗೆ ನೀವು ಸದಾ ಕೇರ್ಫುಲ್ ಆಗಿರಬೇಕಾಗುತ್ತೆ. ಇಲ್ಲದಿದ್ರೆ ನಿಮ್ಮ ಹಣ ಕ್ಷಣಾರ್ಧದಲ್ಲೇ ಕಳ್ಳರ ಪಾಲಾಗುತ್ತೆ.
ಇದನ್ನೂ ಓದಿ : ಹೆಚ್ಚು ಉಪ್ಪು ತಿಂದ್ರೆ ಬಿಪಿ ಮಾತ್ರವಲ್ಲ ಶುಗರ್ ಕೂಡ ಬರುತ್ತೆ!
ಭದ್ರತಾ ಕಂಪನಿಯಾಗಿರುವ ಮ್ಯಾಕ್ ಅಫೀ ಇತ್ತೀಚೆಗೆ ಅಧ್ಯಯನದ ವರದಿಯೊಂದನ್ನ ಬಿಡುಗಡೆ ಮಾಡಿದೆ. ವರದಿಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ನೀವು ಬಹುಮಾನ ಗೆದ್ದಿದ್ದೀರಿ ಎಂದು ಬರುವ ಶೇಕಡಾ 99 ರಷ್ಟು ಮೆಸೇಜ್ ಗಳು ಫೇಕ್ ಆಗಿರುತ್ತವೆ. ಹಾಗೇ ಕೆಲಸದ ಆಫರ್ ಇದೆ ಎಂದು ಯಾವ ವೃತ್ತಿಪರ ಕಂಪನಿಗಳೂ WhatsApp ಅಥವಾ ನಾರ್ಮಲ್ ಮೆಸೇಜ್ ಕಳಿಸಲ್ಲ. ಮೆಸೇಜ್ಗಳಲ್ಲಿ URL/ಲಿಂಕ್ ಮೂಲಕ KYC ಅನ್ನು ಪೂರ್ಣಗೊಳಿಸಲು ಕೇಳುವ ಸಂದೇಶಗಳೂ ಕೂಡ ಹಣ ದೋಚುವ ಪ್ಲ್ಯಾನ್ಗಳೇ ಆಗಿರುತ್ತೆ. ಜೊತೆಗೆ OTT ಜನಪ್ರಿಯತೆ ಹೆಚ್ಚಾದಂತೆ ಸ್ಕ್ಯಾಮರ್‌ಗಳು ನೆಟ್‌ಫ್ಲಿಕ್ಸ್ ಅಥವಾ ಇತರ OTT ಚಂದಾದಾರಿಕೆಗಳ ಹೆಸರಲ್ಲೂ ಮೆಸೇಜ್ ಕಳಿಸಿ ಜನರನ್ನ ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಮೆಸೇಜ್ಗಳ ವಿಚಾರದಲ್ಲಿ ಅಲರ್ಟ್ ಆಗಿರಬೇಕಾಗುತ್ತೆ.