ಭಾರತಕ್ಕೆ ಮಸಿ ಬಳಿಯೋ ಪ್ರಯತ್ನ ಕೈ ಹಾಕಿದ ಕಿಡಿಗೇಡಿಗಳು! – ವಿದೇಶಿಗರಿಂದ  ʼWHAT’S WRONG WITH INDIAʼ ಷಡ್ಯಂತ್ರ

ಭಾರತಕ್ಕೆ ಮಸಿ ಬಳಿಯೋ ಪ್ರಯತ್ನ ಕೈ ಹಾಕಿದ ಕಿಡಿಗೇಡಿಗಳು! – ವಿದೇಶಿಗರಿಂದ  ʼWHAT’S WRONG WITH INDIAʼ ಷಡ್ಯಂತ್ರ

ಭಾರತದ ಮೇಲೆ ನೇರವಾಗಿ ದಾಳಿ ಮಾಡಲು ಸಾಧ್ಯವಿಲ್ಲ ಅಂತಾ ಅನೇಕ ಶತ್ರು ರಾಷ್ಟ್ರಗಳಿಗೆ ಗೊತ್ತೇ ಇದೆ.  ಹೀಗಾಗಿ ಭಾರತದ ವಿರುದ್ಧ ಏನಾದ್ರೂ ಒಂದು ಕುತಂತ್ರಗಳನ್ನು ಮಾಡುತ್ತಲೇ ಇರುತ್ತವೆ. ಇದೀಗ ಶತ್ರು ರಾಷ್ಟ್ರಗಳ ಮತ್ತೊಂದು ಕುತಂತ್ರ ಬಯಲಾಗಿದೆ. ಸೋಶಿಯಲ್‌ ಮೀಡಿಯಾ ಮೂಲಕ ಭಾರತವನ್ನು ಸದೆಬಡಿಯಲು ಮುಂದಾಗಿದೆ. ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ WHAT’S WRONG WITH INDIA ಅಂದ್ರೆ ಭಾರತದ ಸಮಸ್ಯೆ ಏನು? ಎಂಬ ವಿಚಿತ್ರ ಟ್ರೆಂಡ್ ಶುರುವಾಗಿದೆ.

ಇದನ್ನೂ ಓದಿ: ಚೈತ್ರಾ ಆಚಾರ್‌ ಸಿಕ್ಕಾಪಟ್ಟೆ ಬೋಲ್ಡ್‌ – ಪಡ್ಡೆ ಹುಡುಗರ ಹೃದಯ ಕದ್ದ ನಟಿ

ಹೌದು, ಭಾರತದ ಅಭಿವೃದ್ಧಿಯನ್ನು ಸಹಿಸಿಕೊಳ್ಳಲಾಗದವರು ದೇಶಕ್ಕೆ ಮಸಿ ಬಳಿಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.  ಸಾಮಾಜಿಕ ಜಾಲತಾಣ X ನಲ್ಲಿ WHAT’S WRONG WITH INDIA ಅಂದ್ರೆ ಭಾರತದ ಸಮಸ್ಯೆ ಏನು? ಎಂಬ ವಿಚಿತ್ರ ಟ್ರೆಂಡ್ ಶುರುವಾಗಿದೆ. ವಿದೇಶದಲ್ಲಿ ನಡೆದ ವಿಚಿತ್ರ ಘಟನೆಗಳ ವಿಡಿಯೋಗಳನ್ನು Xನಲ್ಲಿ ಹರಿಬಿಟ್ಟು ಭಾರತದಲ್ಲಿ ಏನೋ ಸಮಸ್ಯೆ ಆಗಿದೆ ಅಂತಾ ದೇಶದಲ್ಲಿ ಆಗದ ಘಟನೆಗಳ ವಿಡಿಯೋವನ್ನು ಸುಖಾ ಸುಮ್ಮನೆ ಭಾರತದ ತಲೆಗೆ ಕಟ್ಟಲಾಗುತ್ತಿದೆ.

ಇಲ್ಲ ಸಲ್ಲದ ವಿಡಿಯೋಗಳನ್ನು ಹರಿ ಬಿಟ್ಟು ವಾಟ್ಸ್ ರಾಂಗ್ ವಿತ್ ಇಂಡಿಯಾ ಎಂಬ ಹ್ಯಾಷ್‌ ಟ್ಯಾಗ್ ಹಾಕುವವರ ವಿರುದ್ಧ ಭಾರತೀಯರು ಆಕ್ಷೇಪಿಸಿದ್ದಾರೆ. ಅಂತಹ ಪೋಸ್ಟ್‌ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರೀ ಟ್ವಿಟ್ ಮಾಡುತ್ತಿದ್ದಾರೆ. ಆದರೆ ವಿದೇಶಿಗರ ಈ ಟ್ವಿಟ್​ಗಳಲ್ಲಿ ಯಾವುದೇ ಸತ್ಯವಲ್ಲ. ಬಹುತೇಕ ವಿಡಿಯೋಗಳು ಸುಳ್ಳುಗಳಿಂದ ಕೂಡಿದೆ ಎಂದು ಭಾರತೀಯರು ಎತ್ತಿ ತೋರಿಸುತ್ತಿದ್ದಾರೆ. ವಾಟ್ಸ್ ರಾಂಗ್ ವಿತ್ ಇಂಡಿಯಾ ಹೆಸರಿನಲ್ಲಿ ಯಾರೇ ವಿಡಿಯೋಗಳನ್ನು ಹಾಕಿದರೂ ಲಕ್ಷ ಲಕ್ಷ ವೀವ್ಸ್​ ಪಡೆದುಕೊಳ್ಳುತ್ತಿದೆ. ಇತ್ತ ಟ್ವೀಟರ್ ಖಾತೆಯಲ್ಲಿ ಈ ಟ್ರೆಂಡ್​ ಆಗುತ್ತಿದ್ದಂತೆ ಭಾರತದ ಸಾಧನೆಗಳನ್ನು MyGovIndia ಟ್ವೀಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದೆ.

Shwetha M