ಇಶಾನ್ ಕಿಶನ್‌ಗೆ ಹೊಟ್ಟೆಕಿಚ್ಚು ಯಾಕೆ? – ಕೋಚ್ ರಾಹುಲ್ ದ್ರಾವಿಡ್ ವಾರ್ನಿಂಗ್ ಮಾಡಿದ್ಯಾಕೆ?
ಇಶಾನ್ ಕಿಶನ್ ಈಗಾಗ್ಲೇ ಟೀಂನಿಂದ ಔಟಾಗಿದ್ದಾರೆ. ಯಾವ ಸೀರಿಸ್ಗೂ ಕೂಡ ಇಶಾನ್ರನ್ನ ಪಿಕ್ ಮಾಡ್ತಾ ಇಲ್ಲ. ಇಶಾನ್ ಕಿಶನ್ ಅರ್ಧದಲ್ಲೇ ಟೀಮ್ ಇಂಡಿಯಾವನ್ನು ತೊರೆಯಲು ಮತ್ತೋರ್ವ ಆಟಗಾರನ ಆಯ್ಕೆ ಕಾರಣ. ಇದನ್ನು ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಕೋಚ್ ರಾಹುಲ್ ದ್ರಾವಿಡ್ ಡೊಮೆಸ್ಟಿಕ್ ಕ್ರಿಕೆಟ್ ಆಡಿ ಬರುವಂತೆ ಇಶಾನ್ ಕಿಶನ್‌ಗೆ ಸೂಚನೆ ಬೇರೆ ಕೊಟ್ಟಿದ್ರು. ಬಟ್ ಇಶಾನ್ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ರಣಜಿಯಾಗಲಿ ಯಾವುದೇ ಫಸ್ಟ್ ಕ್ಲಾಸ್ ಮ್ಯಾಚ್ಗಳನ್ನ ಆಡ್ತಾ ಇಲ್ಲ. ಅಷ್ಟೇ ಯಾಕೆ, ಇಶಾನ್ ಕಿಶನ್ ಎಲ್ಲಿದ್ದಾರೆ? ಏನ್ಮಾಡ್ತಾ ಇದ್ದಾರೆ ಅನ್ನೋದೆ ಯಾರಿಗೂ ಗೊತ್ತಿಲ್ಲ. ಆದ್ರೆ ಕೋಚ್ ರಾಹುಲ್ ದ್ರಾವಿಡ್ ಮತ್ತೊಮ್ಮೆ ಇಶಾನ್ ಕಿಶನ್‌ಗೆ ವಾರ್ನಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ದ್ರಾವಿಡ್ ಸೂಚನೆಗೂ ಅಹಂಕಾರಿ ಇಶಾನ್ ಕಿಶನ್ ಡೋಂಟ್‌ಕೇರ್- ಟೀಂ ಇಂಡಿಯಾ ಬಾಗಿಲು ಬಂದ್?
ಇಶಾನ್ ಕಿಶನ್ ಒಬ್ಬ ಗ್ರೇಟ್ ಟ್ಯಾಲೆಂಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಟ್ ಇಶಾನ್ ಕಿಶನ್ ಅದೇನೋ ಟ್ರಬಲ್ನಲ್ಲಿ ಸಿಕ್ಕಿ ಹಾಕಿಕೊಂಡಿರುವಂತೆ ಕಾಣ್ತಿದೆ. ಇಂಡಿಯನ್ ಟೀಮ್ನಲ್ಲಂತೂ ಆಡ್ತಿಲ್ಲ. ಆದ್ರೆ ಫಸ್ಟ್ ಕ್ಲಾಸ್ ಕ್ರಿಕೆಟ್ ಸೇರಿದಂತೆ ಇತರೆ ಯಾವುದೇ ಟೂರ್ನಿಯಲ್ಲೂ ಇಶಾನ್ ಕಿಶನ್ ಆಡ್ತಿಲ್ಲ. ಈ ಹಿಂದೆ ಕೋಚ್ ದ್ರಾವಿಡ್ ಒಂದಷ್ಟು ಡೊಮೆಸ್ಟಿಕ್ ಮ್ಯಾಚ್ಗಳನ್ನ ಅಡಿ ಬರುವಂತೆ ಇಶಾನ್ ಕಿಶನ್‌ಗೆ ಸಲಹೆ ಕೊಟ್ಟಿದ್ರು. ಆದ್ರೆ ಇಶಾನ್ ಮಾತ್ರ ಇದುವರೆಗೂ ಡೊಮೆಸ್ಟಿಕ್ ಮ್ಯಾಚ್ಗಳಲ್ಲಿ ಆಡೋಕೆ ಮುಂದಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಸೆಕೆಂಡ್ ಟೆಸ್ಟ್ ಬಳಿಕ ಇಶಾನ್ ಕಿಶನ್ ವಿಚಾರವಾಗಿ ಕೋಚ್ ರಾಹುಲ್ ದ್ರಾವಿಡ್ರನ್ನ ಮತ್ತೆ ಪ್ರಶ್ನೆ ಮಾಡಲಾಗಿದ್ದು, ಈ ವೇಳೆ ದ್ರಾವಿಡ್ ನೀಡಿರೋ ಸ್ಟೇಟ್ಮೆಂಟ್ ಈಗ ಟಾಕಿಂಗ್ ಪಾಯಿಂಟ್ ಆಗಿದೆ. ದ್ರಾವಿಡ್ ಹೇಳಿರೋ ಪ್ರಕಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಬ್ರೇಕ್ ಬೇಕು ಅಂತಾ ಕೇಳಿದ್ರಂತೆ. ಹೀಗಾಗಿ ಇಶಾನ್ಗೆ ಬ್ರೇಕ್ ನೀಡಲಾಗಿದೆ. ಆದ್ರೆ ಮತ್ತೆ ಟೀಂ ಇಂಡಿಯಾ ಪರ ಆಡೋಕೆ ರೆಡಿ ಇದ್ದಾರೆ ಅನ್ನೋದಾದ್ರೆ ಒಂದಷ್ಟು ಕ್ರಿಕೆಟ್ ಮ್ಯಾಚ್ಗಳನ್ನ ಆಡಲೇಬೇಕು. ಹಾಗಂತಾ ಡೊಮೆಸ್ಟಿಕ್ ಮ್ಯಾಚ್ಗಳನ್ನೇ ಆಡ್ಬೇಕು ಅಂತಾ ಹೇಳ್ತಿಲ್ಲ. ಸಮ್ ಫಾರ್ಮ್ ಆಫ್ ಕ್ರಿಕೆಟ್ ಆಡಲೇಬೇಕು ಅನ್ನೋದಾಗಿ ದ್ರಾವಿಡ್ ಹೇಳಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾಕ್ಕೆ ಮತ್ತೊಬ್ಬ ವಿಕೆಟ್ ಕೀಪರ್ ನ ಎಂಟ್ರಿಯಾಗಿದೆ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಕಾರಣ ಅವರನ್ನು ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕಣಕ್ಕಿಳಿಸಲಾಗಿತ್ತು. ಇದರಿಂದ ಇಶಾನ್ ಕಿಶನ್ ಅವಕಾಶ ವಂಚಿತರಾಗಿದ್ದರು. ಈ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಜೊತೆ ಇಶಾನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಇಶಾನ್ ಕಿಶನ್ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರವಾಗಿ ಕಣಕ್ಕಿಳಿದಿಲ್ಲ. ಇದೀಗ ಯುವ ವಿಕೆಟ್ ಕೀಪರ್ನ ನಡೆಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಜಿತೇಶ್ ಶರ್ಮಾಗೆ ತಂಡದಲ್ಲಿ ಸ್ಥಾನ ನೀಡಿದಕ್ಕೆ ಇಶಾನ್ ಕಿಶನ್ ಹೊಟ್ಟೆಕಿಚ್ಚು ಪಟ್ಟಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.