‘ನಾನು ನೋವಿನಿಂದ ಬಳಲುತ್ತಿದ್ದೇನೆ, ಅದರಿಂದ ಹೊರಬರಲಾರದ ಸ್ಥಿತಿಗೆ ತಲುಪಿದ್ದೇನೆ’ – ದುಲ್ಕರ್ ಸಲ್ಮಾನ್‌ಗೆ ಏನಾಗಿದೆ?

‘ನಾನು ನೋವಿನಿಂದ ಬಳಲುತ್ತಿದ್ದೇನೆ, ಅದರಿಂದ ಹೊರಬರಲಾರದ ಸ್ಥಿತಿಗೆ ತಲುಪಿದ್ದೇನೆ’ – ದುಲ್ಕರ್ ಸಲ್ಮಾನ್‌ಗೆ ಏನಾಗಿದೆ?

ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್ ತಮ್ಮ ನಟನೆಯಿಂದಲೇ ಅಭಿಮಾನಿಗಳ ಮನಗೆದ್ದಿರುವ ಹೀರೋ. ದುಲ್ಕರ್ ಸಲ್ಮಾನ್ ಅಭಿನಯದ ‘ಸೀತಾ ರಾಮಂ’ ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಬಳಿಕ ಅದೇ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ದುಲ್ಕರ್ ಸಲ್ಮಾನ್ ಅಭಿಮಾನಿಗಳಿಗೆ ಮತ್ತಷ್ಟೂ ಹತ್ತಿರವಾಗಿದ್ದರು. ಈಗ ಅಭಿಲಾಷ್ ಜೋಶಿ ನಿರ್ದೇಶನದ ‘ಕಿಂಗ್ ಆಫ್ ಕೋಥಾ’ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ಇದರ ಮಧ್ಯೆಯೇ ನಟ ದುಲ್ಕರ್ ಅವರು, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿ, ಕಣ್ಣೀರಿಟ್ಟಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇದನ್ನೂ ಓದಿ:ಕನಸಿನ ಬೆನ್ನತ್ತಿದ ರಕ್ಷಿತ್ ಶೆಟ್ಟಿ – ಮುಂದಿನ ಎರಡು ಸಿನಿಮಾಗೆ ಕೊಡಲಿಯೇ ಸ್ಫೂರ್ತಿ!

ದುಲ್ಕರ್ ಸಲ್ಮಾನ್ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ.? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿರುವ ದುಲ್ಕರ್ ಸಲ್ಮಾನ್ ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋಗೆ ಪ್ರಶ್ನೆಗಳ ಸುರಿಮಳೆ ಬರುತ್ತಿದ್ದಂತೆ ನಟ ಈ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ನಟ ದುಲ್ಕರ್ ಗೆ ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲವಂತೆ. ಇದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ ಎಂದು ನಟ ಹೇಳಿದ್ದಾರೆ. ಸಂದರ್ಭಗಳು ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಾನು ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸುತ್ತಿದ್ದೇನೆ. ಸಿಕ್ಕಾಪಟ್ಟೆ ಗೊಂದಲದಲ್ಲಿ ಇದ್ದೇನೆ. ಇದರಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮನದಾಳದ ನೋವು ತೆರೆದಿಟ್ಟಿದ್ದಾರೆ. ನಾನು ಇನ್ನೂ ಏನನ್ನೋ ಹೇಳಲು ಬಯಸುತ್ತೇನೆ. ಆದರೆ ಅದನ್ನು ಹೇಳಲು ಆಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಇರುವ ಈ ನೋವನ್ನು ಹೇಳುವುದೋ, ಬೇಡವೋ ತಿಳಿಯುತ್ತಿಲ್ಲ. ಆದರೆ ಈ ನೋವಿನಿಂದ ಹೊರಕ್ಕೆ ಬರಲಾರದ ಹಂತವನ್ನು ನಾನು ತಲುಪಿದ್ದೇನೆ ಎನ್ನಿಸುತ್ತಿದೆ. ನಾನು ಅದನ್ನು ಹೇಳಲಾರದೇ ತೊಳಲಾಡುತ್ತಿದ್ದೇನೆ ಎಂದು ನಟ ಕಣ್ಣೀರಾಗಿದ್ದಾರೆ.

ಈ ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ನಟ ದುಲ್ಕರ್ ವೀಡಿಯೋ ಡಿಲೀಟ್ ಮಾಡಿದ್ದಾರೆ.

suddiyaana