ಪ್ರಿಯಾಂಕಾ ಗಾಂಧಿಗೆ ಹೂವಿಲ್ಲದ ಬೊಕ್ಕೆ ಕೊಟ್ಟ ಕಾಂಗ್ರೆಸ್ ನಾಯಕ! – “ಪುಷ್ಪಗುಚ್ಛ ಹಗರಣ”ಎಂದು ಬಿಜೆಪಿ ನಾಯಕರಿಂದ ಗೇಲಿ!

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಎರಡೂ ಪಕ್ಷಗಳ ಬಿಡುವಿಲ್ಲದೇ ಪ್ರಚಾರ ನಡೆಸುತ್ತಿವೆ. ಅದರಂತೆ ಕಾಂಗ್ರೆಸ್ ಕೂಡ ಐದು ರಾಜ್ಯಗಳಲ್ಲಿ ವಿವಿಧ ಯೋಜನೆಗಳನ್ನು ಘೋಷಿಸುತ್ತಾ ಜನರ ಮನವೊಲಿಸಲು ನಾನಾ ಸರ್ಕಸ್ ಮಾಡುತ್ತಿವೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮಧ್ಯಪ್ರದೇಶದ ಇಂದೋರ್ ಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಕಾಂಗ್ರೆಸ್ ನಾಯಕರು ಅವರನ್ನು ಅಭಿನಂದಿಸುವ ವೇಳೆ ಓರ್ವ ನಾಯಕ ಹೂವೇ ಇಲ್ಲದ ಬೊಕ್ಕೆಯೊಂದನ್ನು ವೇದಿಕೆ ಮೇಲೆ ನೀಡಿದ ಪ್ರಸಂಗ ನಡೆದಿದೆ. ಸದ್ಯ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಚಹಾ ಕೊಟ್ಟಿಲ್ಲ ಅಂತಾ ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟು ಹೊರಟ ವೈದ್ಯರು!
ನವೆಂಬರ್ 17 ರಂದು ಇಂದೋರ್ನಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶದ ಇಂದೋರ್ನಲ್ಲಿ ಚುನಾವಣಾ ಜಾಥಾವನ್ನು ಏರ್ಪಡಿಸಿದ್ದರು. ಈ ಚುನಾವಣಾ ಜಾಥಾದಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಅವರನ್ನು ವೇದಿಕೆ ಮೇಲೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಪ್ರಿಯಾಂಕಾ ಗಾಂಧಿಗೆ ಹೂವಿಲ್ಲ ಖಾಲಿ ಬೊಕ್ಕೆಯನ್ನು ಕೊಟ್ಟು ಸ್ವಾಗತಿಸಿದ್ದಾರೆ, ಬೊಕ್ಕೆ ನೋಡಿದ ಪ್ರಿಯಾಂಕಾ ಇದೇನಿದು ಇದರಲ್ಲಿ ಹೂವೇ ಇಲ್ಲವಲ್ಲಾ ಅಂತಾ ಹೇಳಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ನಾಯಕರು ಮುಜುಗರಕ್ಕೆ ಒಳಗಾದ ಪ್ರಸಂಗ ನಡೆಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕ ರಾಕೇಶ್ ತ್ರಿಪಾಠಿ ಅವರು ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು ಇದು ಕಾಂಗ್ರೆಸ್ ನವರ “ಪುಷ್ಪಗುಚ್ಛ ಹಗರಣ” ಎಂದು ಗೇಲಿ ಮಾಡಿದ್ದಾರೆ.
गुलदस्ता घोटाला 😜
गुलदस्ते से गुल गायब हो गया.. दस्ता पकड़ा दिया 😂😂
मध्यप्रदेश के इंदौर में प्रियंका वाड्रा की रैली में एक कांग्रेसी गुलदस्ता देने पहुंचा लेकिन कांग्रेसी खेल हो गया।#MPElections2023 pic.twitter.com/y7Qmyldp94— राकेश त्रिपाठी Rakesh Tripathi (@rakeshbjpup) November 6, 2023