DCಗೆ ಸೋಲಿನ ಗೆರೆ ಎಳೆದ್ರಾ KL? – ಮುಂಬೈ ವಿರುದ್ಧ ಸೋತ ಬಳಿಕ ರಾಹುಲ್ ಟ್ರೋಲ್

ಭಾನುವಾರ ರಾತ್ರಿಯೇ ಪ್ಲೇಆಫ್ ಹಂತಕ್ಕೆ ಗುಜರಾತ್, ಬೆಂಗಳೂರು ಹಾಗೇ ಪಂಜಾಬ್ ತಂಡಗಳು ಕ್ವಾಲಿಫೈ ಆಗಿದ್ವು. ಬಟ್ ನಾಲ್ಕನೇ ಸ್ಥಾನಕ್ಕಾಗಿ ಮೂರು ಟೀಮ್ಗಳ ನಡುವೆ ಪೈಪೋಟಿ ಇತ್ತು. ಬಟ್ ರಾಜಸ್ಥಾನ ವಿರುದ್ಧ ಸೋಲೋ ಮೂಲಕ ಲಕ್ನೋ ತಂಡ ಅರ್ಹತೆ ಕಳ್ಕೊಂಡ್ರೆ ಇದೀಗ ಮುಂಬೈ ವಿರುದ್ಧ ಮುಗ್ಗರಿಸೋ ಮೂಲಕ ಡೆಲ್ಲಿ ಕೂಡ ರೇಸ್ನಿಂದ ಹಿಂದೆ ಸರಿದಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ MIಗೆ ಭರ್ಜರಿ ಜಯ – ಪ್ಲೇಆಫ್ಸ್‌ಗೇರಿದ ಮುಂಬೈ ಇಂಡಿಯನ್ಸ್!
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ವು. ಈ ಪಂದ್ಯಕ್ಕೂ ಮುನ್ನ ಎರಡೂ ತಂಡಗಳಿಗೂ ಪ್ಲೇಆಫ್ ಪ್ರವೇಶಿಸೋ ಅವಕಾಶ ಇತ್ತು. ಆದ್ರೆ ಎಂಐ ವಿರುದ್ಧ ಸೋಲೋ ಮೂಲಕ ಡೆಲ್ಲಿ ಟೀಂ ನಾಕೌಟ್ಗೆ ಅರ್ಹತೆಯನ್ನ ಕಳ್ಕೊಂಡಿದೆ. ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ಗೆ ಇಳೀತು. ಬಟ್ ಮುಂಬೈ ಪರ ಒನ್ಸ್ ಅಗೇನ್ ಓಪನರ್ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ರು. 5 ರನ್ ಗಳಿಸಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರ್ಕೊಂಡ್ರು. ಇನ್ನೇನು ರಿಕಲ್ಟನ್ ಮತ್ತು ಜಾಕ್ಸ್ ಜೋಡಿ ಸೆಟಲ್ ಆಯ್ತು ಅನ್ನುವಷ್ಟ್ರಲ್ಲೇ ಇಬ್ಬರ ವಿಕೆಟ್ಗಳು ಉರಳಿದ್ವು. ಬಟ್ ನಾಲ್ಕನೇ ಸ್ಲಾಟ್ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. 43 ಬಾಲ್ಗಳಲ್ಲೇ 73 ರನ್ ಬಾರಿಸಿದ್ರು. ಮುಂಬೈ ಪರ ಸೂರ್ಯಕುಮಾರ್ ಯಾದವ್ ಮತ್ತು ನಮನ್ ಧೀರ್ ಕೊನೆಯ 12 ಎಸೆತಗಳಲ್ಲಿ 48 ರನ್ ಗಳಿಸಿದರು. ಪರಿಣಾಮ ಮುಂಬೈ ತಂಡ 20 ಓವರ್ಗಳಲ್ಲಿ 180 ರನ್ ಕಲೆ ಹಾಕಿತ್ತು. ಡೆಲ್ಲಿ ಪರ ಮುಖೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ದುಷ್ಮಂತ ಚಮೀರ, ಮುಸ್ತಾಫಿಜುರ್ ರೆಹಮಾನ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಪ್ಲೇಆಫ್ ರೇಸ್ನಲ್ಲಿ ಜೀವಂತವಾಗಿರೋ ಕನಸಿನಲ್ಲೇ ಟಾರ್ಗೆಟ್ ಬೆನ್ನತ್ತಿದ ಡಿಸಿ ಪರ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ನಿಲ್ಲಲೇಇಲ್ಲ. ಕೆಎಲ್ ರಾಹುಲ್ 11 ರನ್, ಡುಪ್ಲೆಸಿ 6 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಸಮೀರ್ ರಿಜ್ವಿ 39 ರನ್, ವಿಪ್ರಾಜ್ 20, ಅಶುತೋಶ್ 18 ರನ್ ಗಳಿಸಿದ್ದು ಬಿಟ್ರೆ ಉಳಿದವ್ರೆಲ್ಲಾ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆಯೇ ಆಡಿದ್ರು. ಅಂತಿಮವಾಗಿ 121 ರನ್ ಗಳಿಸುವಸ್ಟ್ರಲ್ಲೇ ಆಲೌಟ್ ಆದ ಡಿಸಿ ಮ್ಯಾಚ್ ಜೊತೆ ಪ್ಲೇಆಫ್ ಅವಕಾಶವನ್ನೂ ಕೈಚೆಲ್ಲಿದ್ರು.
ಡೆಲ್ಲಿ ಕ್ಯಾಪಿಟಲ್ಸ್ ಟೀಂ ಈ ಸೀಸನ್ನಲ್ಲಿ ಆರಂಭದ ಪಂದ್ಯಗಳಲ್ಲಿ ಟಾಪ್ ಪರ್ಫಾಮೆನ್ಸ್ ನೀಡಿತ್ತು. ಮೊದಲ 6 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿತ್ತು. ಅದರಲ್ಲೂ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕ್ಟರಿ ಬಾರಿಸೋ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪರ್ ಆಗಿತ್ತು. ಅದ್ರಲ್ಲೂ ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಡೆಲ್ಲಿ ಪರ ಕನ್ನಡಿಗ ಕೆಎಲ್ ರಾಹುಲ್ ಕಾಂತಾರ ಶೈಲಿಯಲ್ಲಿ ವೃತ್ತ ಎಳೆದು ಸಂಭ್ರಮಿಸಿದ್ದರು. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ಈ ಗೆಲುವು ಆದ್ಮೇಲೆ ಬೀಳೋಕೆ ಶುರು ಮಾಡಿದ ಡೆಲ್ಲಿ ಮತ್ತೆ ಮೇಲೇಳಲೇ ಇಲ್ಲ.
ಗೆದ್ದು ಸೋತ ಡೆಲ್ಲಿ!
ಮುಂಬೈ ವಿರುದ್ಧ ಐದನೇ ಪಂದ್ಯ ಆಡಿ 12 ರನ್ ಗಳಿಂದ ಸೋಲು
ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸೂಪರ್ ಓವರ್ ಗೆಲುವು
ಗುಜರಾತ್ ಟೈಟಾನ್ಸ್ ವಿರುದ್ಧ 7 ವಿಕೆಟ್ ಗಳಿಂದ ಸೋಲನುಭವಿಸಿದ್ರು
ಲಕ್ನೋ ವಿರುದ್ಧ ಗೆದ್ರೂ ಬೆಂಗಳೂರು ವಿರುದ್ಧ 6 ವಿಕೆಟ್ಗಳ ಸೋಲು
ಕೊಲ್ಕತ್ತಾ ವಿರುದ್ಧ 14 ರನ್, ಗುಜರಾತ್ ವಿರುದ್ಧ 10 ವಿಕೆಟ್ ಗಳ ಸೋಲು
ಸತತ ಸೋಲುಗಳಿಂದ ಕಂಗೆಟ್ಟ ಡೆಲ್ಲಿ ಮುಂಬೈ ವಿರುದ್ಧ ಸೋತು ಔಟ್