Whats Is Your Name? – ಕರುವಿನ ಜೊತೆ ಮುದ್ದು ಕಂದನ ಸಂಭಾಷಣೆ!

Whats Is Your Name? – ಕರುವಿನ ಜೊತೆ ಮುದ್ದು ಕಂದನ ಸಂಭಾಷಣೆ!

ಮಕ್ಕಳಿಗೆ ಪ್ರಾಣಿಗಳು ಅಂದ್ರೆ ಇಷ್ಟ ಆಗುತ್ತೆ. ಮನೆಯಲ್ಲಿ ಹಸು ಸಾಕುವವರು ಅವುಗಳನ್ನ ತೋರಿಸಿ ಮಕ್ಕಳಿಗೆ ಊಟ ಮಾಡಿಸುತ್ತಾರೆ. ಇನ್ನು ಪುಟಾಣಿ ಮಕ್ಕಳು ಕೂಡ ಹಸು, ಕರುಗಳ ಜೊತೆ ಆಟವಾಡುತ್ತಾರೆ. ಅವುಗಳೊಂದಿಗೆ ಮುದ್ದು ಮುದ್ದಾಗಿ ಮಾತನಾಡುವುದನ್ನ ನೋಡೋದೆ ಒಂದು ರೀತಿಯ ಖುಷಿ. ಇದೀಗ ಇಲ್ಲೊಂದು ಮಗು ಕರುವಿನೊಂದಿದೆ ಇಂಗ್ಲಿಷ್‌ ನಲ್ಲಿ ಮಾತನಾಡಿದೆ.

ಇದನ್ನೂ ಓದಿ: ಕಿಲ್ಲರ್‌ ಕಲ್ಲಂಗಡಿಗೆ ಮತ್ತೊಂದು ಬಲಿ! – ಕಲ್ಲಂಗಡಿ ಹಣ್ಣು ಸೇವಿಸಿ ಓರ್ವ ಸಾವು, ಇನ್ನೋರ್ವನ ಸ್ಥಿತಿ ಗಂಭೀರ

ಮಕ್ಕಳು ಏನು ಮಾಡಿದ್ರು ಚೆಂದಾನೆ. ಈ ಪುಟಾಣಿಗಳು ತಮ್ಮ ನಡೆ ನುಡಿ, ಮಾತಿನಿಂದಲೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ. ಆದರೆ ಇದೀಗ ಈ ಪುಟಾಣಿ ಕರುವಿನ ಜತೆಗೆ ಸಂಭಾಷಣೆಗೆ ಇಳಿದಿದೆ. ನಿನ್ನ ಹೆಸರೇನು ಎಂದು ಇಂಗ್ಲಿಷ್‌ ನಲ್ಲಿ ಹೇಳುತ್ತಿದೆ. ಮಗುವಿನ ಮಾತನ್ನ ಕೇಳಿ ಕರು ಸೈಲೆಂಟ್‌ ಆಗಿ ಕೂತಿದೆ. ಈ ಮುಗ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

lifewithdevisha ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುಗ್ಧ ಮನಸ್ಸುಗಳ ನಡುವಿನ ಶುದ್ಧ ಸಂಭಾಷಣೆಯನ್ನು ಕಾಣಬಹುದು. ಪುಟಾಣಿಯೊಂದು ಕರುವಿನ ಜತೆಗೆ ಮಾತಿಗಿಳಿಗಿದೆ. ಕರುವಿನ ಮುಂದೆ ಕುಳಿತು ನಿನ್ನ ಹೆಸರೇನು ಎಂದು ಕೇಳುತ್ತಿದ್ದಂತೆ ಕರುವು ಮಾತ್ರ ಅತ್ತಿಂದ ಇತ್ತ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು. ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಾನು ಬಾಲ್ಯದಲ್ಲಿ ಹೀಗೆಯೇ ಇದ್ದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಹೆಸರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು, ಮುಗ್ಧ ಮನಸ್ಸುಗಳು ಎಂದಿದ್ದಾರೆ.

Shwetha M

Leave a Reply

Your email address will not be published. Required fields are marked *