ಕೋಟ್ಯಂತರ ಬಳಕೆದಾರರಿರುವ ವಾಟ್ಸಾಪ್ ಬ್ಯಾನ್ – Whatsapp ಬ್ಯಾನ್ ಮಾಡಿದ್ದು ಯಾಕೆ ಗೊತ್ತಾ?
ಸ್ಮಾರ್ಟ್ ಫೋನ್ ಬಳಕೆದಾರರು ಫೋನ್ ಮಾಡಿಲ್ಲ ಅಂದ್ರೂ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡ್ತಾರೆ. ಅಷ್ಟರ ಮಟ್ಟಿಗೆ ಈ ಅಪ್ಲಿಕೇಷನ್ ಫೇಮಸ್ ಆಗಿದೆ. ಆದ್ರೆ ಈ ದೇಶಗಳಲ್ಲಿ ವಾಟ್ಸಾಪ್ ನೇ ಬ್ಯಾನ್ ಮಾಡ್ಲಾಗಿದೆ. ಯಾವ್ಯಾದ ದೇಶಗಳಲ್ಲಿ ಮತ್ತು ಯಾಕೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : Horror ಫಿಲ್ಮ್ ನೋಡೋದು ಆರೋಗ್ಯಕ್ಕೆ ಒಳ್ಳೇದಾ? – ಭೂತದ ಸಿನಿಮಾಗಳಿಂದ ಸಣ್ಣ ಆಗಬಹುದು!
ಜಗತ್ತಿನಾದ್ಯಂತ 200 ಕೋಟಿಗೂ ಹೆಚ್ಚು ಜನ ವಾಟ್ಸಾಪ್ ಅಪ್ಲಿಕೇಷನ್ ಬಳಕೆ ಮಾಡ್ತಾರೆ. ಭಾರತದಲ್ಲಂತೂ 80ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಆದ್ರೆ ಆರು ದೇಶಗಳಲ್ಲಿ ಮಾತ್ರ ವಿವಿಧ ಕಾರಣಗಳಿಂದ ವಾಟ್ಸಾಪ್ ಬಳಕೆಗೆ ನಿರ್ಬಂಧ ಹೇರಲಾಗಿದೆ. ಬಲಿಷ್ಠ ರಾಷ್ಟ್ರವಾಗಿರುವ ಚೀನಾದಲ್ಲೇ ವಾಟ್ಸಾಪ್ ಬ್ಯಾನ್ ಮಾಡಲಾಗಿದೆ. ಅಲ್ಲಿನ ಕಟ್ಟುನಿಟ್ಟಾದ ಸೆನ್ಸಾರ್‌ಶಿಪ್ ನೀತಿಗಳಿಂದಾಗಿ ಜನಸಾಮಾನ್ಯರು ವಾಟ್ಸಾಪ್ ಬಳಸುವಂತಿಲ್ಲ. ಇರಾನ್ ನಲ್ಲೂ ನಾಗರಿಕ ದಂಗೆ ಮತ್ತು ಪ್ರತಿಭಟನೆಗಳಿಂದಾಗಿ ವಾಟ್ಸಾಪ್ ಬಳಕೆಗೆ ನಿಷೇಧ ಹೇರಲಾಗಿದೆ. ಇನ್ನು ಹುಚ್ಚು ದೊರೆ ಅಂತಾನೇ ಕರೆಸಿಕೊಳ್ಳೋ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾ ಕೂಡ ವಾಟ್ಸಾಪ್ ನಿಷೇಧಿಸಿದೆ. ಅಂತರ್ಯುದ್ಧದ ಕಾರಣ ಸಿರಿಯಾದಲ್ಲೂ ವಾಟ್ಸಾಪ್ ಅಪ್ಲಿಕೇಷನ್ನನ್ನು ನಿರ್ಬಂಧಿಸಲಾಗಿದೆ. ಯುಎಇ ಮತ್ತು ಒಮನ್ ದೇಶಗಳಲ್ಲೂ ವಾಟ್ಸಾಪ್ ಬಳಕೆಗೆ ಅನುಮತಿ ಇಲ್ಲ.