ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ. ಆದರೆ ಸಣ್ಣ ಮಕ್ಕಳಲ್ಲೂ ಈ ಸಮಸ್ಯೆ ಇತ್ತೀಚೆಗೆ ಹೆಚ್ಚಾಗಿ ಕಾಣಲಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳೂ ಕೂದಲು ಉದುರುವಿಕೆ ಮತ್ತು ಬಿಳಿ ಕೂದಲು ಸಮಸ್ಯೆ ಎದುರಿಸುತ್ತಿದ್ದಾರೆ ಇದು ಚಿಂತಾಜನಕವಾಗಿದೆ. ಒಂದು ಕೂದಲು ಬಿಳಿಯಾಗುತ್ತಿದ್ದಂತೆ ಅದನ್ನು ಅನೇಕರು ಕೀಳುತ್ತಾರೆ. ಹೀಗೆ ಬಿಳಿಯಾದ ಕೂದಲನ್ನು ಕಿತ್ತರೆ ಅದರ ಸುತ್ತಲಿನ ಕೂದಲು ಬಿಳಿಯಾಗುತ್ತದೆ ಎಂಬುದು ಅನೇಕರ ನಂಬಿಕೆ. ಇದು ನಿಜವಾ, ಸುಳ್ಳಾ ಅಂತಾ ಅನೇಕರಲ್ಲಿ ಗೊಂದಲ ಇದೆ.

ಇದನ್ನೂ ಓದಿ: ನೀವು ಮಧ್ಯಾಹ್ನದ ವೇಳೆ ನಿದ್ದೆ ಮಾಡ್ತೀರಾ?

ಕೂದಲಿನ ಕೋಶಕದಲ್ಲಿ ಮೆಲನಿನ್ ಕಡಿಮೆಯಾದಾಗ ನಿಮ್ಮ ಕೂದಲಿನ ಬಣ್ಣ ಬದಲಾವಣೆಯಾಗುತ್ತದೆ. ನಿಮ್ಮ ಜೀವಕೋಶಗಳು ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಂತೆ, ನಿಮ್ಮ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ, ನಿಮ್ಮ ಬೂದು ಕೂದಲನ್ನು ಕಿತ್ತುಕೊಳ್ಳುವುದರಿಂದ ಉಳಿದ ಕೂದಲುಗಳು ಕೂಡ ಬಿಳಿಯಾಗುತ್ತವೆ ಎಂಬುದು ನಿಜವಲ್ಲ. ಆದರೆ, ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲ ಬೇರಿಗೆ ತೊಂದರೆಯಾಗಬಹುದು. ಹೀಗಾಗಿ, ಕೂದಲು ಕೀಳುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ, ಬೇರೆ ಕೂದಲು ಬಿಳಿಯಾಗುವುದಕ್ಕೂ ನಿಮ್ಮ ಕೂದಲು ಕಿತ್ತುಕೊಳ್ಳುವುದಕ್ಕೂ ಸಂಬಂಧವಿಲ್ಲ.

ಒಂದು ಕೂದಲು ಕಿತ್ತುಕೊಂಡರೆ ಅದು ಇತರ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಬಹುದು. ಇದು ನಿರ್ದಿಷ್ಟ ಸ್ಥಳದಲ್ಲಿ ಕೂದಲು ಮತ್ತೆ ಬೆಳೆಯುವುದನ್ನು ತಡೆಯಬಹುದು.ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಚರ್ಮಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಸೂರ್ಯನಿಗೆ ಅತಿಯಾದ ಶಾಖ ಕೂದಲಲ್ಲಿ ಮೆಲನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗುತ್ತದೆ.

ಇನ್ನು ಧೂಮಪಾನವು ದೇಹದ ಮೇಲೆ ವಿವಿಧ ನೆಗೆಟಿವ್ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ಧೂಮಪಾನವು ನೆತ್ತಿಯಲ್ಲಿ ರಕ್ತದ ಹರಿವನ್ನು ತಡೆಯುತ್ತದೆ. ಇದು ಕೂದಲಿನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ವಾಸ್ತವವಾಗಿ, ಧೂಮಪಾನವು ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಒತ್ತಡ ಮತ್ತು ಆತಂಕದಂತಹ ಇತರ ಅಸ್ವಸ್ಥತೆಗಳು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅತಿಯಾದ ಒತ್ತಡವು ನಿದ್ರೆಯ ಕೊರತೆ, ಹಸಿವಿನ ಕೊರತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದಕ್ಕೆ ಕಾರಣವಾಗಬಹುದು.

Shwetha M