HEAD ಗೆ ತಲೆಬಾಗಿದ ಭಾರತ – ಭಾರತದ ಸೋಲಿಗೆ ಏನು ಕಾರಣ? ಆಸ್ಟ್ರೇಲಿಯಾ ಗೆದ್ದು ಬೀಗಲು ಸಾಧ್ಯವಾಗಿದ್ದು ಹೇಗೆ?

HEAD ಗೆ ತಲೆಬಾಗಿದ ಭಾರತ –  ಭಾರತದ ಸೋಲಿಗೆ ಏನು ಕಾರಣ? ಆಸ್ಟ್ರೇಲಿಯಾ ಗೆದ್ದು ಬೀಗಲು ಸಾಧ್ಯವಾಗಿದ್ದು ಹೇಗೆ?

ಟ್ರಾವಿಸ್‌ ಹೆಡ್‌ ಆಟಕ್ಕೆ ಇಡೀ ಟೂರ್ನಿಯಲ್ಲಿ ಸೋಲದ ಭಾರತ ಫೈನಲ್‌ನಲ್ಲಿ ತಲೆಬಾಗಿದೆ. ವಿಶ್ವಕಪ್‌ ಫೈನಲ್‌ನಲ್ಲಿ ಟ್ರಾವಿಸ್‌ ಹೆಡ್‌ ನಿಜಕ್ಕೂ ಅದ್ಭುತ ಆಟವಾಡಿದ್ದಾರೆ. ಫೀಲ್ಡಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚಿದ ಹೆಡ್‌ ಮುಂದೆ ಭಾರತದ ಆಟಗಾರರು ಶರಣಾಗಬೇಕಾಯ್ತು. ಅಹಮದಾಬಾದ್‌ನ ಬೌಲರ್‌ಗಳಿಗೆ ನೆರವಾಗುತ್ತಿದ್ದ ಮೋದಿ ಗ್ರೌಂಡ್‌ನಲ್ಲಿ ಟ್ರಾವಿಸ್‌ ಹೆಡ್‌ ಮಾತ್ರ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಇನ್ನಿಂಗ್ಸ್‌ ಬಿಲ್ಡ್‌ ಮಾಡಿ, ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಇದರೊಂದಿಗೆ ಭಾರತದ ಮೂರನೇ ವಿಶ್ವಕಪ್‌ ಗೆಲ್ಲುವ ಕನಸು ಭಗ್ನವಾದರೆ, ಆಸ್ಟ್ರೇಲಿಯಾ ಆರನೇ ಬಾರಿಗೆ ಕಪ್‌ಗೆ ಮುತ್ತಿಕ್ಕಿದೆ.. ಭಾರತದ ಸೋಲಿಗೆ ಏನು ಕಾರಣ.. ಆಸ್ಟ್ರೇಲಿಯಾ ಗೆದ್ದು ಬೀಗಲು ಕಾರಣವಾದ ಅಂಶಗಳೇನು ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ:ವಿಶ್ವಕಪ್ ಫೈನಲ್‌ಗೆ ಈ ರೀತಿ ಪಿಚ್ ಬೇಕಿತ್ತಾ? –ಬ್ಯಾಟ್ ಬೀಸಲು ಒದ್ದಾಡಿದ ಭಾರತದ ದಿಗ್ಗಜ ಬ್ಯಾಟರ್‌ಗಳು

ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ನೀರು ಕುಡಿಸಿದ್ದ ಭಾರತಕ್ಕೆ ಇಪ್ಪತ್ತು ವರ್ಷಗಳ ನಂತರ ಸೇಡು ತೀರಿಸಿಕೊಳ್ಳುವ ಅದ್ಭುತ ಅವಕಾಶವೊಂದು ಸಿಕ್ಕಿತ್ತು.. ಆದರೆ, ಟಾಸ್‌ ಸೋತಾಗಲೇ ಟೀಂ ಇಂಡಿಯಾದ ಬಾನಂಗಳದಲ್ಲಿ ಸೋಲಿನ ಕರಿಮೋಡ ಹರಿದಾಡಲು ಶುರುವಾಗಿತ್ತು. ವಿಶ್ವದ ಅತಿದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್‌ ಆಯ್ದುಕೊಂಡಿದ್ದರು. ಅಷ್ಟೇ ಅಲ್ಲ. ಬಿಗ್‌ ಮ್ಯಾಚ್‌ನಲ್ಲಿ ಯಾವುದೇ ಸವಾಲು ಎದುರಿಸಲು ಸಜ್ಜು ಎಂಬ ಮೈಂಡ್‌ ಗೇಮ್‌ ರವಾನಿಸುವಲ್ಲಿ ಯಶಸ್ವಿಯಾಗಿದ್ದರು. ಯಾಕೆಂದರೆ, ಭಾರತ ಚೇಸಿಂಗ್‌ ಮಾಸ್ಟರ್‌ ಎನ್ನುವುದು ಆಸ್ಟ್ರೇಲಿಯಾಗೆ ಚೆನ್ನಾಗೇ ಗೊತ್ತಿತ್ತು.. ಅಲ್ಲದೆ ಅದ್ಭುತ ಫಾರ್ಮ್‌ನಲ್ಲಿರುವ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಅಬ್ಬರಿಸುವ ಸಾಧ್ಯತೆಯೂ ದಟ್ಟವಾಗಿತ್ತು.. ಇದರ ಜೊತೆಗೆ ಮೋದಿ ಸ್ಟೇಡಿಯಂನ ಪಿಚ್‌ ಕೂಡ ಮೊದಲ ಹತ್ತು ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳ ತಾಳ್ಮೆಯನ್ನು ಟೆಸ್ಟ್‌ ಮಾಡೋದಲ್ಲದೆ ಬೌಲರ್‌ಗಳ ಪಾರಮ್ಯ ಮೆರೆಯಲು ನೆರವಾಗುವಂತಿತ್ತು.. ಇದನ್ನೇ ಪ್ಯಾಟ್‌ ಕಮಿನ್ಸ್‌ ಚೆನ್ನಾಗಿ ಬಳಸಿಕೊಂಡರು. ಕಮಿನ್ಸ್‌ ಲೆಕ್ಕಾಚಾರದಂತೆ ಸ್ಟಾರ್ಕ್‌ ಮೊದಲ ಓವರ್‌ನಿಂದಲೇ ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು. ಒಂದು ಲಕ್ಷದ ಮುವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ಭಾರತದ ಬ್ಯಾಟ್ಸ್‌ಮನ್‌ಗಳ ಪರದಾಟ ಕ್ರಿಕೆಟ್‌ ಪ್ರೇಮಿಗಳನ್ನು ನಿರಾಶೆಯ ಕಡಲಲ್ಲಿ ಮುಳುಗಿಸಿತ್ತು..

ಒಂದು ಕಡೆ ಬಿಗ್‌ ಸ್ಕೋರ್‌ ಸೆಟ್‌ ಮಾಡುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.. ಮತ್ತೊಂದೆಡೆ ಆಸ್ಟ್ರೇಲಿಯಾ ಬ್ಯಾಟಿಂಗ್‌ ವೇಳೆ ಭಾರತದ ಫೀಲ್ಡಿಂಗ್‌ ಅತ್ಯಂತ ಕಳಪೆ ಮಟ್ಟದಲ್ಲಿತ್ತು.. ಮೊದಲ ಬಾಲ್‌ ಎಸೆಯಲು ಶುರು ಮಾಡಿದಾಗ ಭಾರತೀಯ ಫೀಲ್ಡರ್‌ಗಳು ಇನ್ನೂ ಕಳಪೆ ಬ್ಯಾಟಿಂಗ್‌ನ ಬೇಸರದಿಂದ ಹೊರಬಂದಿರಲಿಲ್ಲ.. ಇದರಿಂದಾಗಿಯೇ ಮೊದಲ ಎಸೆತದಲ್ಲಿ ಪಡೆಯಬಹುದಾಗಿದ್ದ ಕ್ಯಾಚ್‌ ಕೈಚೆಲ್ಲಿದ್ದರು.. ಎರಡನೇ ಓವರ್‌ನಲ್ಲಿ ಶಮಿ ಮೊದಲ ವಿಕೆಟ್‌ ಕಬಳಿಸಿ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ರು.. ಸತತ ಎರಡು ವಿಕೆಟ್‌ ಕಿತ್ತ ಬುಮ್ರಾ ಫೈನಲ್‌ನಲ್ಲಿ ನಂದೇ ಆಟ ಎಂಬ ರೀತಿಯಲ್ಲೇ ಅಬ್ಬರಿಸಿದ್ರು.. ಆದ್ರೆ ಮತ್ತೊಂದು ತುದಿಯಲ್ಲಿ ನಿಂತಿದ್ದ ಟ್ರಾವಿಸ್‌ ಹೆಡ್‌ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಇನ್ನಿಂಗ್ಸ್‌ ಬಿಲ್ಡ್‌ ಮಾಡ್ತಾ ಹೋದ್ರು.. ಇದರೊಂದಿಗೆ ಡ್ರೀಮ್‌ ಫೈನಲ್‌ನಲ್ಲಿ ಆಡ್ತಿದ್ದ ಭಾರತ ಟೀಂನ ಕನಸು ಭಗ್ನವಾಗುತ್ತಾ ಹೋಯ್ತು.. ಲೀಗ್‌ನಿಂದ ಹಿಡಿದು ಸೆಮಿಫೈನಲ್‌ವರೆಗೆ ಸೋಲಿಲ್ಲದ ಸರದಾರನಂತೆ ಮಿಂಚುತ್ತಾ.. ತಾವಂದುಕೊಂಡಿದ ಪ್ಲ್ಯಾನ್‌ ಅನ್ನು ಸರಿಯಾಗಿ ಕಾರ್ಯರೂಪಕ್ಕೆ ತರುತ್ತಾ ಪಂದ್ಯದ ನಂತರ ಪಂದ್ಯ ಗೆಲ್ಲುತ್ತಾ ಫೈನಲ್‌ವರೆಗೂ ಬ್ಲೂ ಬಾಯ್ಸ್‌ ಎಂಟ್ರಿ ಕೊಟ್ಟಿದ್ದರು.. ರಾಹುಲ್‌ ದ್ರಾವಿಡ್‌ ಕೋಚಿಂಗ್‌ನಲ್ಲಿ ರೋಹಿತ್‌ ಶರ್ಮಾ ಕ್ಯಾಫ್ಟನ್ಸಿಯಲ್ಲಿ ಸಣ್ಣ ಹುಳುಕು ಕೂಡ ಇರಲಿಲ್ಲ.. ಆದ್ರೆ ಫೈನಲ್‌ ಮಾತ್ರ ಕಂಪ್ಲೀಟ್‌ ಭಿನ್ನ ರೀತಿಯಲ್ಲೇ ನಡೆದುಹೋಯ್ತು.. ಇದಕ್ಕೆ ಕಾರಣ ಆಸ್ಟ್ರೇಲಿಯಾದ ಮೈಂಡ್‌ ಗೇಮ್‌.. ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾದ ಪ್ಲಾನ್‌ ಸರಿಯಾಗಿಯೇ ಇತ್ತು ಎನ್ನುವುದು ಮೊದಲ ಓವರ್‌ನಿಂದಲೇ ಗೋಚರಿಸಲು ಶುರುವಾಗಿತ್ತು.. ರೋಹಿತ್‌ ಶರ್ಮಾ ಎಂದಿನಂತೆ ಅಬ್ಬರಿಸಲು ಶುರು ಮಾಡಿದ್ದೇನೋ ಸರಿ.. ಆದ್ರೆ ಯಾರೂ ಅಂದುಕೊಳ್ಳದ ರೀತಿಯಲ್ಲಿ ಟ್ರಾವಿಸ್‌ ಹೆಡ್‌, ಇಂದು ರೋಹಿತ್‌ ಶರ್ಮಾ ಅವರ ಕ್ಯಾಚ್‌ ಹಿಡಿದು, ಭಾರತದ ಅದ್ಭುತ ಇನ್ನಿಂಗ್ಸ್‌ಗೆ ಬ್ರೇಕ್ ಹಾಕಿಸಿದ್ರು.. ಶರ್ಮಾ ಔಟಾಗುತ್ತಿದ್ದಂತೆ ಭಾರತದ ಇನ್ನಿಂಗ್ಸ್‌ ಫಿಫ್ತ್‌ ಗೇರ್‌ನಿಂದ ಸಡನ್ನಾಗಿ ಸೆಕೆಂಡ್‌ ಗೇರ್‌ಗೆ ಶಿಫ್ಟ್‌ ಆಯ್ತು.. ಎಯ್ಟಿ ಟು ಹಂಡ್ರೆಡ್‌ ಸ್ಪೀಡ್‌ನಲ್ಲಿದ್ದ ಟೀಂ ಇಂಡಿಯಾದ ಬ್ಯಾಟಿಂಗ್‌ ಸ್ಪೀಡ್‌ ಸಡನ್ನಾಗಿ Fourtyಗೆ ಶಿಫ್ಟ್‌ ಆಗೋಯ್ತು.. ಅದಾದ ನಂತರ ವಿರಾಟ್‌ ಕೊಹ್ಲಿ ಮತ್ತು ಕೆ ಎಲ್‌ ರಾಹುಲ್‌ ಟೀಂ ಇಂಡಿಯಾದ ಬ್ಯಾಟಿಂಗ್‌ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರೂ ಅದೇನೋ ಟೆನ್ಷನ್‌ನಲ್ಲೇ ಇನ್ನಿಂಗ್ಸ್‌ ಬಿಲ್ಡ್‌ ಮಾಡ್ತಾ ಹೋದ್ರು.. ವರ್ಲ್ಡ್‌ ಕ್ಲಾಸ್‌ ಬ್ಯಾಟ್ಸ್‌ಮನ್‌ಗಳು ಮೈಚಳಿ ಬಿಟ್ಟು ಆಡಿರುತ್ತಿದ್ದರೆ ಭಾರತದ ಸ್ಕೋರ್‌ ಕನಿಷ್ಟ 280ರ ಗಡಿ ತಲುಪೋದಿಕ್ಕೆ ಸಾಧ್ಯವಿತ್ತು.. ಆದ್ರೆ ಅತಿಯಾದ ಒತ್ತಡಕ್ಕೆ ಒಳಗಾದವರಂತೆ ಇಬ್ಬರೂ ಆಡ್ತಾ ಹೋದ್ರೇ ಹೊರತು, ಆಸ್ಟ್ರೇಲಿಯಾದ ಬೌಲರ್‌ಗಳನ್ನು ಹೆದರಿಸುವ ಕೆಲಸಕ್ಕೆ ಕೈಹಾಕಲೇ ಇಲ್ಲ.. ಒಂದು ಕಡೆಗೆ ಪಿಚ್‌ ಬೌಲರ್‌ಗಳಿಗೆ ಸಹಾಯ ಮಾಡ್ತಿತ್ತು ನಿಜ.. ಆಸ್ಟ್ರೇಲಿಯಾದ ಫೀಲ್ಡರ್‌ಗಳು ಪಾದರಸಕ್ಕಿಂತಲೂ ಸ್ಪಲ್ಪ ಜಾಸ್ತಿಯೇ ಚುರುಕಾಗಿದ್ದರು.. ಆಸ್ಟ್ರೇಲಿಯಾದ ಆಟಗಾರರು ಭಾರತದ ಮೇಲೆ ಒತ್ತಡ ಹೇರಿದ್ರೇ ಹೊರತು ರೋಹಿತ್‌ ಶರ್ಮಾ ಹೊರತು ಪಡಿಸಿದ್ರೆ ಬೇರೆ ಯಾವ ಬ್ಯಾಟ್ಸ್‌ಮನ್‌ ಕೂಡ ಆಸ್ಟ್ರೇಲಿಯಾದ ಆಟಗಾರರಿಗೆ ಬ್ಯಾಟಿಂಗ್‌ನಲ್ಲಿ ಹೆದರಿಕೆ ಹುಟ್ಟಿಸಲಿಲ್ಲ.. ಭಾರತ ಅಂತಿಮವಾಗಿ ಸೋಲಿನ ಕಹಿಯೊಂದಿಗೆ ವಿಶ್ವಕಪ್‌ ಅಭಿಯಾನವನ್ನು ಕೊನೆಗೊಳಿಸಿದೆ.. ರಾಹುಲ್‌ ದ್ರಾವಿಡ್‌ ಕೋಚಿಂಗ್‌ನಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸವನ್ನು ಬ್ಲೂಬಾಯ್ಸ್‌ ಮೂಡಿಸಿದ್ದರು.. ಇದೇ ಟೂರ್ನಮೆಂಟ್‌ನಲ್ಲಿ ವಿರಾಟ್‌ ಕೊಹ್ಲಿ ಅತಿಹೆಚ್ಚು ಸ್ಕೋರ್‌ ಗಳಿಸಿದ ದಾಖಲೆ ನಿರ್ಮಾಣ ಮಾಡಿದ್ರು.. ಶತಕಗಳ ಅರ್ಧಶತಕದ ದಾಖಲೆ ತಮ್ಮದಾಗಿಸಿಕೊಂಡರು.. ವಿಶ್ವಕಪ್‌ನಲ್ಲಿ ಶಮಿ ಒಂದಾದ ಮೇಲೊಂದು ದಾಖಲೆಗಳಲ್ಲಿ ತಮ್ಮ ಹೆಸರು ಬರೆಸಿಕೊಂಡರು.. ಆದ್ರೆ ಅವೆಲ್ಲವೂ ಈಗ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಭಾಸವಾಗುತ್ತಿವೆ.. ಕಪ್‌ ಇಲ್ಲದೆ ಭಾರತ ನಿರಾಶೆಯಲ್ಲಿ ಮುಳುಗಿದೆ.. ಇಪ್ಪತ್ತು ವರ್ಷಗಳ ನಂತರದ ಸೇಡು ತೀರಿಸಿಕೊಳ್ಳುವ ಅವಕಾಶ ಕೈಚೆಲ್ಲಿದೆ.. ಆಸ್ಟ್ರೇಲಿಯಾ ಮಾತ್ರ ನಾವೇ ವಿಶ್ವಕ್ರಿಕೆಟ್‌ನಲ್ಲಿ ಯಾರಿಗೂ ಬೆದರದ ಬೆಸ್ಟ್‌ ಟೀಂ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.. ಅಂತಿಮವಾಗಿ ಹೇಳೋದು ಒಂದೇ ಮಾತು.. ಗುಡ್‌ ಕ್ರಿಕೆಟ್‌ ಗೆದ್ದಿದೆ.. ಒಳ್ಳೆಯ ಆಟವಾಡಿದ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.. ಬೆಟರ್‌ ಲಕ್‌ ನೆಕ್ಸ್ಟ್‌ ಟೈಮ್‌ ಅನ್ನೋದಷ್ಟೇ ಈಗ ಟೀಂ ಇಂಡಿಯಾಗೆ ಅಭಿಮಾನಿಗಳು ಮಾಡಬಹುದಾದ ವಿಷ್‌.. ಸೋಲು ಗೆಲುವು ಇದ್ದದ್ದೇ.. ಫೈನಲ್‌ನಲ್ಲೂ ಅಷ್ಟೇನೇ.. ಯಾರೋ ಒಬ್ಬರು ಗೆಲ್ಲಬೇಕು.. ಇನ್ನೊಬ್ಬರು ಸೋಲಲೇಬೇಕು.. ಸೋತಾಗ ಟೀಂ ಅನ್ನು ಬೈಯ್ಯಬೇಕಾದ ಅವಶ್ಯಕತೆಯಿಲ್ಲ.. ಯಾಕಂದ್ರೆ ಈ ವಿಶ್ವಕಪ್‌ನಲ್ಲಿ ಫೈನಲ್‌ ಒಂದು ಬಿಟ್ರೆ ಹತ್ತು ಮ್ಯಾಚ್‌ಗಳಲ್ಲಿ ಅಬ್ಬರದ ಗೆಲುವಿನ ಸವಿಯನ್ನು ಕ್ರಿಕೆಟ್‌ ಪ್ರೇಮಿಗಳಿಗೆ ಉಣಿಸಿದ್ದು ಇದೇ ಟೀಂ ಎನ್ನುವುದನ್ನು ಮರೆಯಬಾರದು.. ಒನ್ ಬ್ಯಾಡ್‌ ಡೇ.. ಫೈನಲ್‌ನಲ್ಲಿ ಬಂದಿರೋದು ಮಾತ್ರ ಬೇಸರದ ಸಂಗತಿ..

 

Sulekha