ಬಾಲಿವುಡ್ ಮರೆಯದ ಮೀನಾ ಕುಮಾರಿ ಬದುಕು ಹೇಗಿತ್ತು? – ಸಿನಿಮಾ ಆಗಲಿದೆ ದಿಗ್ಗಜ ನಟಿಯ ದುರಂತ ಅಂತ್ಯ

ಬಾಲಿವುಡ್ ಮರೆಯದ ಮೀನಾ ಕುಮಾರಿ ಬದುಕು ಹೇಗಿತ್ತು? – ಸಿನಿಮಾ ಆಗಲಿದೆ ದಿಗ್ಗಜ ನಟಿಯ ದುರಂತ ಅಂತ್ಯ
ಬಾಲಿವುಡ್ ಮರೆಯದ ಮೀನಾ ಕುಮಾರಿ ಬದುಕು ಹೇಗಿತ್ತು? – ಸಿನಿಮಾ ಆಗಲಿದೆ ದಿಗ್ಗಜ ನಟಿಯ ದುರಂತ ಅಂತ್ಯ

ಬಾಲಿವುಡ್ ಜಗತ್ತು ಎಂದೆಂದಿಗೂ ಮರೆಯದ ನಟಿ ಅಂದರೆ ಮೀನಾ ಕುಮಾರಿ. ಬಾಲಿವುಡ್‌ನ ದಿಗ್ಗಜ ನಟಿ ಮೀನಾ ಕುಮಾರಿಯವರ ಬದುಕು ಕೂಡಾ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿರಲಿಲ್ಲ. ಇದೀಗ ದುರಂತ ಅಂತ್ಯ ಕಂಡ ಮೇರು ನಟಿ ಮೀನಾ ಕುಮಾರಿಯವರ ಬದುಕಿನ ಕಥೆ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ಯಶ್‌ ಜೊತೆ ರಾಮಾಯಣದಲ್ಲಿ ನಟಿಸಲ್ಲ ಎಂದ ಬಾಲಿವುಡ್‌ ನಟ – ಕಾರಣವೇನು ಗೊತ್ತಾ?

ತೆರೆಯ ಮೇಲೆ ಮಿಂಚಿ ಸಣ್ಣ ವಯಸ್ಸಿಗೆ ಅಂತ್ಯ ಕಂಡ ನಟಿ ಮೀನಾ ಕುಮಾರಿ. ಸಿಲ್ಕ್ ಸ್ಮಿತಾ, ಕನ್ನಡದ ನಟಿ ಕಲ್ಪನಾ, ಶಕೀಲಾ ಅವರ ಕಥೆ ಈಗಾಗಲೇ ಸಿನಿಮಾ ಆಗಿದೆ. ಇವರ ಸಾಲಿಗೆ ಬಾಲಿವುಡ್ ನಟಿ ಮೀನಾ ಕುಮಾರಿಯ ಜೀವನ ಕತೆಯೂ ಸೇರಲಿದೆ. ಮಹಜಬೀನ್ ಬಾನೊ ಅಲಿಯಾಸ್ ಮೀನಾ ಕುಮಾರಿ, ಬಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದವರು. 1938 ರಲ್ಲಿ ತಮ್ಮ ಎಂಟನೇ ವಯಸ್ಸಿಗೆ ವಯಸ್ಸಿಗೆ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಮೀನಾ ಕುಮಾರಿ. ನಂತರ ತಮ್ಮ 13ನೇ ವಯಸ್ಸಿಗೆ ನಾಯಕಿಯಾದರು. ಮೀನಾ ಕುಮಾರಿ ಸಿನಿಮಾ ವೃತ್ತಿ ಜೀವನ ಪ್ರೇಕ್ಷಕರೆದುರು ಅದ್ಭುತವಾಗಿಯೇ ಇತ್ತು. ಆದರೆ ಮೀನಾರ ಖಾಸಗಿ ಬದುಕು ನರಕವಾಗಿತ್ತು. ಅದಕ್ಕೆ ಕಾರಣ ಮೀನಾ ಕುಮಾರಿಯ ಲವ್ ಸ್ಟೋರಿ.

ಕಮಲ್ ಅಮ್ರೋಹಿ ಅವರು ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದರು. ಆದರೆ, ಮೀನಾ ಕುಮಾರಿ ಕಮಲ್ ಪ್ರೀತಿಗೆ ಶರಣಾಗಿದ್ದರು. ಕಮಲ್ ಅವರನ್ನು ಗುಟ್ಟಾಗಿ ಮೀನಾ ಕುಮಾರಿ ಮದುವೆ ಆಗಿದ್ದರು. ಮದುವೆಯಾದ ಮೇಲೆ ಮೀನಾ ಕುಮಾರಿ ಜೀವನ ನರಕವಾಗಿತ್ತು. ಪತಿಯಿಂದ ಸಾಕಷ್ಟು ಹಿಂಸೆ, ನೋವುಗಳನ್ನು ಅನುಭವಿಸಿದ ಮೀನಾ ಕುಮಾರಿ, ಕುಡಿತಕ್ಕೆ ದಾಸರಾದರು. ಕೇವಲ 38 ವರ್ಷ ವಯಸ್ಸಿನವರಾಗಿದ್ದಾಗ ಲಿವರ್ ಸಮಸ್ಯೆಯಿಂದ ಪ್ರಾಣ ಬಿಟ್ಟರು.

ಈಗ ಮೀನಾ ಕುಮಾರಿಯವರು ದುರಂತ ಬದುಕು ಸಿನಿಮಾ ಆಗುತ್ತಿದೆ. ನಟಿ ಕಿಯಾರಾ ಅಡ್ವಾಣಿ ಮೀರಾ ಕುಮಾರಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ತಾಯಿ ಆಗುವ ಖುಷಿಯಲ್ಲಿರುವ ಕಿಯಾರಾ ಅಡ್ವಾಣಿ ಈ ಆಫರ್​ಗೆ ಇನ್ನೂ ಓಕೆ ಎಂದಿಲ್ಲ ಅಂತಾ ಹೇಳಲಾಗುತ್ತಿದೆ. ಈಗಾಗಲೇ ಮೀನಾ ಕುಮಾರಿ ಬದುಕಿನ ಬಗ್ಗೆ ಕೆಲವು ಡಾಕ್ಯುಮೆಂಟರಿಗಳು, ಪುಸ್ತಕಗಳು ಕೂಡಾ ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಅವರ ಬದುಕಿನ ಬಗ್ಗೆ ಸಿನಿಮಾ ಮಾಡಲು ಸಿದ್ಧತೆಗಳು ಶುರುವಾಗಿದೆ.

Sulekha