ಸಾಕೇತ್ ಕೊನೇ ಕರೆಯನ್ನ ಅಮ್ಮ ಸ್ವೀಕರಿಸಿದರೆ ಉಳಿಯಬಹುದಿತ್ತು..! – ಸಾವಿನ ರಹಸ್ಯ ಬಯಲು ಮಾಡಿದ ಕೊನೇ ಸಂದೇಶ

ಸಾಕೇತ್ ಕೊನೇ ಕರೆಯನ್ನ ಅಮ್ಮ ಸ್ವೀಕರಿಸಿದರೆ ಉಳಿಯಬಹುದಿತ್ತು..! – ಸಾವಿನ ರಹಸ್ಯ ಬಯಲು ಮಾಡಿದ ಕೊನೇ ಸಂದೇಶ

ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಸಾವನ್ನಪ್ಪಿರುವ ಸುದ್ದಿ ಹೆತ್ತವರಿಗೆ ಬರಸಿಡಿಲಿನಂತೆ ಬಂದೆರಗಿದೆ. ಮಗನ ಸಾವನ್ನು ಹೆತ್ತವರು ಸ್ವೀಕರಿಸಲು ಇನ್ನೂ ರೆಡಿಯಿಲ್ಲ. ಆದರೆ, ಸಾಕೇತ್ ಶ್ರೀನಿವಾಸಯ್ಯ ಸತ್ತಿದ್ದು ಯಾಕೆ?, ಹೇಗೆ?, ಕೊನೇ ಸಂದೇಶದಲ್ಲಿ ಸಾವಿನ ರಹಸ್ಯ ಅಡಗಿತ್ತಾ ಎಂಬ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ:ಕೋಟೆನಾಡಿನಲ್ಲಿ ದುರಂತ – ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಸೂ*ಸೈ*ಡ್!

ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕರ್ನಾಟಕ ಮೂಲದ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಸಾವು ಪೊಲೀಸರಿಗೆ ಸವಾಲ್ ಆಗಿದೆ. ಸಾಕೇತ್​ ಸಾವಿಗೆ ಕಾರಣ ಏನು ಅನ್ನೋದೆ ನಿಗೂಢವಾಗಿದೆ. ಸಾಕೇತ್ ಕಾಣೆಯಾದ 6 ದಿನಗಳ ಬಳಿಕ ಅಂಜಾ ಸರೋವರದ ಬಳಿ ಆರು ದಿನಗಳ ಬಳಿ ಶವವಾಗಿ ಪತ್ತೆಯಾಗಿದ್ದ. ಇದೀಗ ಸಾಕೇತ್ ಪೋಷಕರು ನಮ್ಮ ಮಗ ಸತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಸಾಕೇತ್  ಮಾಡಿರುವ ಕೊನೇ ಪೋಸ್ಟ್​ ಅನುಮಾನಕ್ಕೆ ಕಾರಣವಾಗಿದೆ. ಮೃತ ಸಾಕೇತ್ ಶ್ರೀನಿವಾಸಯ್ಯ, ತನ್ನ ಕೊನೇ ಪೋಸ್ಟ್​ನಲ್ಲಿ ಪ್ರೀತಿಯ ಗೆಳೆಯ ಕೇದಾರ್ ಸುರೇಶ್​ ಎಂಬಾತನನ್ನ ಸ್ಮರಿಸಿಕೊಂಡಿದ್ದಾನೆ. ಸಾಕೇತ್ ಗೆಳೆಯ ಕೇದರ್ 2023ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗ್ತಿದೆ. ಐಐಟಿ-ಎಂನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ಪದವಿಪೂರ್ವ ವಿದ್ಯಾರ್ಥಿ ಕೇದರ್,  ಏಪ್ರಿಲ್ 2023 ರಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಇದೀಗ ಸಾಕೇತ್ ತನ್ನ ಕೊನೆಯ ಪೋಸ್ಟ್​​ನಲ್ಲಿ ಆತ್ಮಹತ್ಯೆಗೆ ಶರಣಾದ ಕೇದರ್​​ನನ್ನ ನೆನೆದಿರೋದು ನಾನಾ ಅನುಮಾನಕ್ಕೂ ಕಾರಣವಾಗಿದೆ.

ಮಾನಸಿಕವಾಗಿ ನೊಂದಿದ್ದ ಸಾಕೇತ್ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ ಎನ್ನುವ ಅನುಮಾನ ಕೂಡ ಮೂಡಿದೆ. ಸಾಕೇತ್ ಶ್ರೀನಿವಾಸಯ್ಯನಿಗೆ ಒಂಟಿತನ ಕಾಡ್ತಿತ್ತು ಎಂದು ಆತನ ಸ್ನೇಹಿತರೊಬ್ಬರು ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ನನ್ನನ್ನ ಕೇರ್ ಮಾಡೋರೆ ಇಲ್ಲ ಅನ್ನೊ ಭಾವನೆಯಿಂದ ಸಾಕೇತ್​ ನೊಂದಿದ್ದ ಎಂದು  ರೂಮ್​ ಮೇಟ್​ ಬನೀಟ್ ಸಿಂಗ್ ಹೇಳಿದ್ದಾರೆ. ಸೋಮವಾರ ತಾಯಿಗೂ ಕೊನೆಯ ಬಾರಿ ಸಾಕೇತ್  ಕಾಲ್ ಮಾಡಿದ್ದ. ಆದರೆ, ಕಾರಾಣಾಂತರಗಳಿಂದ ಅಂದು ಕೂಡ‌ ತಾಯಿ ಕಾಲ್ ಪಿಕ್ ಮಾಡಿಲ್ಲ. ಇದಾದ ಕೆಲ ನಿಮಿಷದಲ್ಲಿಯೇ ಸಾಕೇತ್ ಕಣ್ಮರೆ ಆಗಿದ್ದಾರೆ. ಒಂದು ವೇಳೆ ತಾಯಿ ಮಗನ ಕಾಲ್ ರಿಸೀವ್ ಮಾಡಿದ್ದರೆ, ಸಾಕೇತ್ ಮನಸು ಬದಲಾಗುತ್ತಿತ್ತೋ ಏನೋ. ವಿಧಿಲೀಲೆ ಅಷ್ಟೇ.

ಇನ್ನು ಸಾಕೇತ್, ನಾಪತ್ತೆಯಾಗುವ ಎರಡು ವಾರಗಳ ಮೊದಲೇ ಆತನ ವರ್ತನೆಯಲ್ಲಿ ಭಾರೀ ಬದಲಾವಣೆಯಾಗಿತ್ತು ಎಂದು ರೂಮ್‌ಮೇಟ್ ಹೇಳಿದ್ದಾರೆ. ಅಂತರಾಷ್ಟ್ರೀಯ ವಿದ್ಯಾರ್ಥಿಯ ಜೀವನ ತುಂಬಾ ಕಷ್ಟ ಗುರು.. ಕಳೆದ ಎರಡು ವಾರಗಳಿಂದ ಸಾಕೇತ್ ಸರಿಯಾಗಿ ಊಟ ಮಾಡುತ್ತಿರಲಿಲ್ಲ, ನಿದ್ದೆ ಮಾಡುತ್ತಿರಲಿಲ್ಲ. ಕೇವಲ ಚಿಪ್ಸ್ ಮತ್ತು ಕುಕ್ಕೀಸ್ ತಿಂದು ಬದುಕಿದ್ದ ಎಂದು ಬನೀತ್ ಸಿಂಗ್ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸಾಕೇತ್ ಮಾನಸಿಕವಾಗಿ ಎಷ್ಟು ಕುಗ್ಗಿಹೋಗಿದ್ದರು ಎಂಬುದಕ್ಕೆ ರೂಮ್‌ಮೇಟ್ ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ‘ಒಮ್ಮೆ ಸಾಕೇತ್ ಕೆಂಪು ಬಣ್ಣದ ಬಾತ್‌ರೋಮ್ (Bathrobe) ಧರಿಸಿಯೇ ಕಾಲೇಜಿನ ಕ್ಲಾಸ್‌ಗೆ ಹೋಗಿ ಬಂದಿದ್ದ. ಆಗ ನಾನು ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ‘ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ ಜನ ನನ್ನ ಬಗ್ಗೆ ಏನ್ ಬೇಕಾದ್ರೂ ಅಂದುಕೊಳ್ಳಲಿ, ನನಗೆ ಚಿಂತೆಯಿಲ್ಲ’ ಎಂದು ಹೇಳಿದ್ದ.  ಅಂದರೆ ಸಾಕೇತ್ ಗೆ ಒಂಟಿತನ ಕಾಡುತ್ತಿತ್ತಾ ಎಂಬ ಪ್ರಶ್ನೆ ಎದ್ದಿದೆ.

ಕರ್ನಾಟಕ ಮೂಲದ ಸಾಕೇತ್, ಬೆಂಗಳೂರಿನ ಶ್ರೀ ವಾಣಿ ಎಜುಕೇಷನ್ ಸೆಂಟರ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದರು. ನಂತರ ಐಐಟಿ ಮದ್ರಾಸ್‌ನಲ್ಲಿ ಪದವಿ ಮುಗಿಸಿ, ಉನ್ನತ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿವಿ ಸೇರಿದ್ದರು. ಇವರು ‘ಹೈಪರ್‌ಲೂಪ್ ಕೂಲಿಂಗ್ ಸಿಸ್ಟಮ್’ಗೆ ಪೇಟೆಂಟ್ ಪಡೆದ ಆರು ಸಂಶೋಧಕರಲ್ಲಿ ಒಬ್ಬರಾಗಿದ್ದರು.

Sulekha