ಎರಡು PAN Card ಬಳಸಬಹುದಾ? – ಆದಾಯ ತೆರಿಗೆ ಇಲಾಖೆ ಹೀಗಂದಿದ್ದೇಕೆ?

ಹಣಕಾಸಿನ ವಹಿವಾಟುಗಳಲ್ಲಿ ಈಗ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು, ತಿಂಗಳ ಪಿಂಚಣಿ ಸ್ವೀಕರಿಸುವುದರಿಂದ ಹಿಡಿದು ಕೋಟಿ ಕೋಟಿ ವ್ಯವಹಾರ ಮಾಡುವವರ ವರೆಗೆ ಎಲ್ಲರಿಗೂ ಈಗ ಪ್ಯಾನ್ ಕಾರ್ಡ್ ಬೇಕೇ ಬೇಕು. ಬ್ಯಾಂಕ್ ಅಕೌಂಟ್ಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರೋದ್ರಿಂದ ಬ್ಯಾಂಕ್ ಮೂಲಕ ನಡೆಸುವ ಪ್ರತಿಯೊಂದು ವ್ಯವಹಾರ ಕೂಡ ಪ್ಯಾನ್ ಕಾರ್ಡ್ ಗೆ ಎಂಟ್ರಿಯಾಗಿರುತ್ತದೆ.. ಇದರಿಂದ ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆ ಸಂಗ್ರಹಿಸಲು ಸುಲಭವಾಗುತ್ತದೆ. ಹಾಗಿದ್ದರೂ ಆದಾಯ ತೆರಿಗೆ ಅಧಿಕಾರಿಗಳು ಪ್ಯಾನ್ ಕಾರ್ಡ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತಾರೆ. ಇಲ್ಲದಿದ್ದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ವಿವಾದಗಳ ಸುಳಿಯಲ್ಲಿ ಡಿಬಾಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸ್ ದಾಖಲು
ಪ್ಯಾನ್ ಕಾರ್ಡ್ ಮಾಹಿತಿಯ ಆಧಾರದ ಮೇಲೆ ಸರ್ಕಾರವೇನೋ ಆದಾಯ ತೆರಿಗೆ ಸಂಗ್ರಹಿಸುತ್ತದೆ. ಆದರೆ, ಕೆಲವರು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಬಳಸುತ್ತಾರೆ. ತೆರಿಗೆ ವಂಚಿಸಲು ಮತ್ತು ಸರ್ಕಾರಕ್ಕೆ ಮೋಸ ಮಾಡಲು ಹೀಗೆ ಮಾಡುತ್ತಾರೆ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ದೇಶದಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪ್ಯಾನ್ ಕಾರ್ಡ್ ಇರಬೇಕು.
ನಕಲಿ ಪ್ಯಾನ್ ಕಾರ್ಡ್ ಹೊಂದಿರುವುದು ಅಥವಾ ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವುವವರಿಗೆ ಸರ್ಕಾರ ರೂ.10 ಸಾವಿರ ದಂಡ ವಿಧಿಸುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 272B ಅಡಿಯಲ್ಲಿ ದಂಡ ಪಾವತಿಸಬೇಕಾಗುತ್ತದೆ.
ಇನ್ನು ಕಾರ್ಡ್ ಕಳ್ಳತನವಾಗಿದ್ರೆ, ನೀವು ತಕ್ಷಣವೇ ಪೊಲೀಸರಿಗೆ ದೂರು ನೀಡುವುದು ಅವಶ್ಯಕ. ನಿಮ್ಮ ಕಾರ್ಡ್ ಕಳ್ಳತನವಾದರೆ, ಅದನ್ನು ವಂಚನೆಗಳಿಗೆ ಬಳಸಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುಬೇಕಾಗುತ್ತದೆ.
ಇನ್ನು ಪ್ಯಾನ್ ಕಾರ್ಡ್ಗಳು ಎಷ್ಟು ಕಾಲ ಮಾನ್ಯವಾಗಿರುತ್ತವೆ ಎನ್ನುವ ಬಗ್ಗೆಯೂ ಕೆಲವರಿಗೆ ಪ್ರಶ್ನೆಗಳಿವೆ. ವಾಸ್ತವವಾಗಿ, ಒಮ್ಮೆ ಪ್ಯಾನ್ ಕಾರ್ಡ್ ನೀಡಿದರೆ, ಅದು ಆ ವ್ಯಕ್ತಿಯ ಜೀವಿತಾವಧಿಯುದ್ದಕ್ಕೂ ಮಾನ್ಯವಾಗಿರುತ್ತದೆ. ಸಾವಿನ ನಂತರ ಪ್ಯಾನ್ ಕಾರ್ಡ್ ಕಾನೂನು ಪ್ರಕಾರ ರದ್ದಾಗುತ್ತದೆ. ಇನ್ನು ಪಾನ್ ಕಾರ್ಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗೊಂದಲಗಳಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಅನೇಕರು ಪ್ಯಾನ್ ಕಾರ್ಡ್ ನವೀಕರಿಸದಿದ್ದರೆ ಅಮಾನ್ಯವಾಗುತ್ತದೆ ಎಂಬ ಸುಳ್ಳು ಸಂದೇಶ ಹರಡುತ್ತಾರೆ.
ಇನ್ನು ಪ್ಯಾನ್ನಂಬರ್ ಬಳಸಿ ಬ್ಯಾಂಕ್ ಖಾತೆ ಹಾಗೂ ಇತರೆ ಮಾಹಿತಿಯಿಂದ ಹಣ ಡ್ರಾ ಮಾಡಿ ವಂಚಿಸುವವರೂ ಇದ್ದಾರೆ. ಹೀಗಾಗಿ ಪ್ಯಾನ್ ವಿವರವನ್ನು ಶೇರ್ ಮಾಡುವುದಕ್ಕಿಂತಲೂ ಮೊದಲು ಎಚ್ಚರಿಕೆಯಿಂದಿರಿ. PAN ಅಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ಇದನ್ನು ಜನಸಂಖ್ಯೆಗೆ ಅನುಗುಣವಾಗಿ ಹೊಂದಿಸುವುದರಿಂದ, ಇಲ್ಲಿ ಬದಲಾವಣೆ ಅಥವಾ ರಿಪಿಟೀಷನ್ ಇರೋದಿಲ್ಲ. ಹೀಗಾಗಿ ನಿಮ್ಮ ಪ್ಯಾನ್ ಕಾರ್ಡ್ ವಿಚಾರದಲ್ಲಿ ಎಚ್ಚರಿಕೆಯಿಂದಿರಿ ಮತ್ತು ಮಾಹಿತಿ ಗೌಪ್ಯತೆ ಕಾಪಾಡಿಕೊಳ್ಳಿ.