ಹಾಡು ಬದಲಿಸಿದ್ದು ಕಾವೇರಿ ಅನ್ನೋ ನಿಜ ಗೊತ್ತಾಗುತ್ತಾ? – ವೈಷ್ಣವ್‌ಗೆ ಸತ್ಯ ಗೊತ್ತಾದರೆ ಮುಂದೇನು?

ಹಾಡು ಬದಲಿಸಿದ್ದು ಕಾವೇರಿ ಅನ್ನೋ ನಿಜ ಗೊತ್ತಾಗುತ್ತಾ? – ವೈಷ್ಣವ್‌ಗೆ ಸತ್ಯ ಗೊತ್ತಾದರೆ ಮುಂದೇನು?

ಕಲರ್ಸ್ ಕನ್ನಡವಾಹಿನಿಯಲ್ಲಿ ಮೂಡಿ ಬರುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರಾವಾಹಿಯಲ್ಲಿ ಮುಂದಿನ ಎಪಿಸೋಡ್ ಹೀಗೆ ಇರುತ್ತೆ ನೋಡಿ ಎಂದು ಅನೇಕರು ಮೆಸೇಜ್ ಹಾಕುತ್ತಿದ್ದಾರೆ. ಯಾಕೆಂದರೆ, ಸ್ವಂತ ಮಗನಿಗೆ ಅವಮಾನವಾದರೂ ಕಾವೇರಿಗೆ ತಾನು ಸೋಲಬಾರದು. ಮಗ ತನ್ನ ಸುತ್ತಲೇ ಸುತ್ತಬೇಕು ಎಂಬ ಮಹಾದಾಸೆಯಿರುವ ಮಹಾತಾಯಿ ಕಾವೇರಿ ಅದ್ಯಾಕೆ ಮಗನಿಗೆ ಮದುವೆ ಮಾಡಿಸಿದ್ದಳೋ.. ಮಗ ಮತ್ತು ಸೊಸೆ ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. ಇದರ ಮಧ್ಯೆ ಪ್ರೊಡಕ್ಷನ್ ಕಂಪೆನಿಗೆ ವೈಷ್ಣವ್ ಬರೆದ ಹಾಡಿನ ಬದಲು ಲಕ್ಷ್ಮೀ ಬರೆದ ಹಾಡನ್ನು ಕಳಿಸಿ ಎಡವಟ್ಟು ಮಾಡಿದ ಕಾವೇರಿ ಈಗ ಸಿಕ್ಕಿಬೀಳುವ ಆತಂಕದಲ್ಲಿದ್ದಾಳೆ.

ಇದನ್ನೂ ಓದಿ: ಸ್ಟಾರ್ ಕ್ರಿಕೆಟರ್ ಜೊತೆ ನಟಿ ಪೂಜಾ ಹೆಗ್ಡೆ ಲವ್ – ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಅಂತಾ ಬಾಲಿವುಡ್‌ನಲ್ಲಿ ಪುಕಾರು

ಹಾಡಿನ ಟೈಟಲ್ ಲಾಂಚ್ ದಿನವೇ ಎಲ್ಲರಿಗೂ ಹಾಡು ಆಯ್ಕೆ ಆಗಿರೋದು ಲಕ್ಷ್ಮೀ ಬರೆದ ಹಾಡು ಎನ್ನುವ ಸತ್ಯ ಗೊತ್ತಾಗಿತ್ತು. ವಿಪರ್ಯಾಸವೆಂದರೇ ಅಂದೇ ಲಕ್ಷ್ಮೀಗೂ ಸತ್ಯ ಗೊತ್ತಾಗಿದ್ದು. ಇದನ್ನು ಮಾಡಿದೋರು ಯಾರು ಎಂದು ಪ್ರಶ್ನೆ ಮಾಡಿದಾಗ ಕಾವೇರಿಯ ತಪ್ಪನ್ನು ಲಕ್ಷ್ಮೀ ತನ್ನ ಮೇಲೆ ಹಾಕಿಕೊಂಡಿದ್ದಳು. ಈಗ ವೈಷ್ಣವ್ ಎಷ್ಟೇ ಸಲ ಸತ್ಯ ಬಾಯಿ ಬಿಡಿಸಿದರೂ ಲಕ್ಷ್ಮೀ ಸತ್ಯ ಹೇಳುತ್ತಿಲ್ಲ. ವೈಷ್ಣವ್ ತಲೆ ಮೇಲೆ ಆಣೆ ಮಾಡಿ ನಾನು ಹಾಡು ಬದಲಾಯಿಸಿದ್ದು ಅಂತ ಲಕ್ಷ್ಮೀ ಹೇಳುತ್ತಿಲ್ಲ. ಇದರಿಂದಲೇ ವೈಷ್ಣವ್‌ಗೆ ತನ್ನ ಪತ್ನಿ ಹಾಡು ಬದಲಾಯಿಸಿಲ್ಲ, ಇದರ ಹಿಂದೆ ಬೇರೆ ಯಾರೋ ಇದ್ದಾರೆ ಅಂತ ಗೊತ್ತಾಗಿದೆ.

ಆದರೆ, ಕಾವೇರಿ ಲೆಕ್ಕಾಚಾರವೇ ಬೇರೆ. ಮಗನಿಗೆ ನಾನೇ ಈ ಕಿತಾಪತಿ ಮಾಡಿದ್ದು ಅಂತಾ ಗೊತ್ತಾದರೆ ಏನು ಮಾಡಲಿ ಎಂದು ತನ್ನ ಸ್ವಾರ್ಥವನ್ನೇ ತೋರಿಸುತ್ತಿದ್ದಾಳೆ. ನಿದ್ದೆ ಇಲ್ಲದೆ ಒದ್ದಾಡುತ್ತಿದ್ದಾಳೆ. ಇನ್ನೊಂದು ಕಡೆ ಲಕ್ಷ್ಮೀಯೇ ಕಾವೇರಿಗ ಏನಾದರೊಂದು ಪರಿಹಾರ ಹುಡುಕೋಣ, ನೀವು ಚಿಂತೆ ಬಿಟ್ಟು ಆರಾಮಾಗಿರಿ ಎಂದು ಸಲಹೆ ಕೊಡುತ್ತಿದ್ದಾಳೆ. ಇದು ವೈಷ್ಣವ್, ಸುಪ್ರೀತಾ ಕಣ್ಣಿಗೆ ಬಿದ್ದಿದೆ. ನಿಜಕ್ಕೂ ಅತ್ತೆ-ಸೊಸೆ ಮಾತನಾಡಿಕೊಳ್ಳೋದು ವೈಷ್ಣವ್‌ಗೆ ಕೇಳಿರುತ್ತಾ? ಇಷ್ಟು ಬೇಗ ಸತ್ಯ ಹೊರಬೀಳುತ್ತಾ ಎನ್ನೋದು ಈಗ ಇರುವ ಪ್ರಶ್ನೆ. ವೀಕ್ಷಕರ ಪ್ರಕಾರ ಇದು ಕನಸು ಆಗುವ ಸಾಧ್ಯತೆಯೇ ಹೆಚ್ಚಿದೆ. ಏನೇ ಆದರೂ ಕಾವೇರಿ ಮಾತ್ರ ಸೋಲೋದಿಲ್ಲ, ಅವಳು ಏನಾದರೊಂದು ಪ್ಲ್ಯಾನ್ ಹುಡುಕುತ್ತಾಳೆ. ಲಕ್ಷ್ಮೀ ಬಳಿ ಕಾವೇರಿ ಬೇಡಿಕೊಳ್ಳುತ್ತಿರುತ್ತಾಳೆ. ಆಗ ವೈಷ್ಣವ್ ಅಮ್ಮ ಅಂತ ಕಿರುಚಿಕೊಳ್ತಾನೆ. ಆದರೆ, ಇದನ್ನು ಕನಸಾಗಿಯೇ ವೀಕ್ಷಕರ ಮುಂದೆ ತೋರಿಸಲಿದೆ ಧಾರಾವಾಹಿ ತಂಡ ಅನ್ನೋ ವಿಚಾರ ಚರ್ಚೆಗೆ ಬಂದಿದೆ. ವೈಷ್ಣವ್ ಗೆ ಸತ್ಯ ಗೊತ್ತಾಗುತ್ತದೆ. ಆದರೆ ಅದು ಕನಸು ಅಥವಾ ನಿಜವೋ ನೋಡಬೇಕು ಎಂದು ಮುಂದಿನ ಎಪಿಸೋಡ್ ಗೆ ಕಾಯುತ್ತಿದ್ದಾರೆ ವೀಕ್ಷಕರು.

Sulekha