ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿರಾಟ್ ಕೊಹ್ಲಿ – ರನ್ ಮೆಷಿನ್ ಚೇಸಿಂಗ್ ಸ್ಟೈಲ್ ಹೇಗಿದೆ?

ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ವಿರಾಟ್ ಕೊಹ್ಲಿ – ರನ್ ಮೆಷಿನ್ ಚೇಸಿಂಗ್ ಸ್ಟೈಲ್ ಹೇಗಿದೆ?

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ. 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೊಗಸಾದ ಶತಕ ಬಾರಿಸಿದ್ದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಗೆ ನ್ಯೂಜಿಲೆಂಡ್‌ ವಿರುದ್ಧವೂ ಸೆಂಚುರಿ ಬಾರಿಸುವ ಅವಕಾಶ ವಿತ್ತು. ಸಿಕ್ಸರ್‌ ಬಾರಿಸಿ ಸೆಂಚುರಿ ಜೊತೆಗೆ ತಂಡಕ್ಕೆ ಪಂದ್ಯ ಗೆದ್ದುಕೊಡುವ ಪ್ರಯತ್ನ ಮಾಡಿದ್ದರು. ಆದರೆ, ಕ್ಯಾಚ್‌ ಔಟ್‌ ಆಗುವ ಮೂಲಕ 95ನ ರನ್‌ಗೆ ವಿಕೆಟ್‌ ಒಪ್ಪಿಸಿದರು. ಕೊಹ್ಲಿ ಕ್ರೀಸ್​​ನಲ್ಲಿ ನಿಂತ್ಕೊಂಡ್ರು ಅಂದ್ರೆ ಭಾರತ ಗೆಲ್ತು ಅಂತಾನೆ ಅರ್ಥ. ಕೊಹ್ಲಿ ಚೇಸಿಂಗ್​ನಲ್ಲಿ ಎಕ್ಸ್​ಪರ್ಟ್ ಆಗೋಕೆ ಕಾರಣ ಏನು?

ಇದನ್ನೂ ಓದಿ: ವಿಶ್ವಕಪ್ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ – ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ದಾಖಲೆ ಮುರಿದ ಮಹಮ್ಮದ್ ಶಮಿ

ಈ ಬಾರಿಯ ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನ ಸೋಲಿಸಬೇಕು ಎಂದು ಎದುರಾಳಿಯ ಅದ್ಯಾವುದೇ ತಂಡವಾಗಲಿ ಮೊದಲಿಗೆ ವಿರಾಟ್ ಕೊಹ್ಲಿಯನ್ನ ಬೇಗನೆ ಔಟ್ ಮಾಡಲೇಬೇಕು. ಕೊಹ್ಲಿಗೆ ಅಂತಾನೆ ಪ್ರತ್ಯೇಕ ಸ್ಟ್ರ್ಯಾಟಜಿ ನಡೆಸಲೇಬೇಕಷ್ಟೆ. ಫುಟ್ಬಾಲ್​​ನಲ್ಲಿ ಲಿಯೋನೆಲ್​ ಮೆಸ್ಸಿ ಗ್ರೌಂಡ್​​​ನಲ್ಲಿದ್ದಾರೆ ಅಂದ್ರೆ ಎದುರಾಳಿ ತಂಡದ ಕನಿಷ್ಠ ಮೂವರು ಆಟಗಾರರಾದ್ರೂ ಮೆಸ್ಸಿಯನ್ನ ಸುತ್ತುವರಿದಿರ್ತಾರೆ. ಮೆಸ್ಸಿ ಕಾಲಿಗೆ ಬಾಲ್ ಸಿಗದಂತೆ ಎಚ್ಚರಿಕೆ ವಹಿಸ್ತಾರೆ. ಆದ್ರಿಲ್ಲಿ ಕೊಹ್ಲಿ ಬ್ಯಾಟ್​​ಗೆ ಬಾಲ್ ಸಿಗದ ರೀತಿಯಂತೂ ಏನೂ ಮಾಡೋಕೂ ಆಗಲ್ಲ. ಆದ್ರೂ ಬೌಲರ್ಸ್​​ಗಳು ವಿಶೇಷ ರಣತಂತ್ರ ಹೆಣೆದಿಲ್ಲ ಅಂದ್ರೆ ಯಾವ ಟೀಂಗೂ ಭಾರತವನ್ನ ಸೋಲಿಸೋಕೆ ಸಾಧ್ಯವಿಲ್ಲದಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಂತಾ ಕೊಹ್ಲಿ ಬೇಗನೇ ಔಟ್ ಆಗಬೇಕು.. ಭಾರತ ಸೋಲ್ಬೇಕು ಅಂತಾ ಹೇಳ್ತಿಲ್ಲ.. ವಿರಾಟ್ ಕೊಹ್ಲಿ ಅನ್ನೋ ಒಬ್ಬ ಬ್ಯಾಟ್ಸ್​​ಮನ್​ನಿಂದಾಗಿ ಒಪೊಸಿಶನ್​​ ಟೀಂಗಳ ಪಿಕ್ಚರ್ ಬಿಡ್ತಿದೆ. ಉಳಿದೆಲ್ಲಾ ಬ್ಯಾಟ್ಸ್​​ಮನ್​ಗಳನ್ನ ಔಟ್ ಮಾಡೋದು ಒಂದು ಟಾಸ್ಕ್ ಆದ್ರೆ, ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡೋದು ಅದಕ್ಕಿಂತ ದೊಡ್ಡ ಟಾಸ್ಕ್ ಆಗಿದೆ. ಚೇಸಿಂಗ್ ವಿಚಾರಕ್ಕೆ ಬಂದಾಗಂತೂ ಒನ್ ಮ್ಯಾನ್ ಆರ್ಮಿ ವಿರಾಟ್​ ಕೊಹ್ಲಿ ತಮ್ಮ ವಿರಾಟ ರೂಪವನ್ನ ಪ್ರದರ್ಶಿಸುತ್ತಲೇ ಇದ್ದಾರೆ.

ಕಳೆದ ವರ್ಷ ಅಂದ್ರೆ 2022ರ ಅಕ್ಟೋಬರ್ 23ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಟಿ-20 ವರ್ಲ್ಡ್​​ಕಪ್ ನಡೆದಿತ್ತು. ಆ ಪಂದ್ಯದಲ್ಲೂ ಟೀಂ ಇಂಡಿಯಾವನ್ನ ಗೆಲ್ಲಿಸಿದ್ದು ವಿರಾಟ್ ಕೊಹ್ಲಿಯೇ. ಹ್ಯಾರಿಸ್ ರವೂಫ್ ಬಾಲ್​ ಹೊಡೆದ ಎರಡು ಸಿಕ್ಸರ್​ಗಳನ್ನ ಯಾರಿಗೂ ಮರೆಯೋಕೆ ಸಾಧ್ಯವಿಲ್ಲ. ಆ ರೋಚಕ ಮ್ಯಾಚ್​ ನಡೆದು ಈಗ ಭರ್ತಿ ಒಂದು ವರ್ಷವಾಗಿದೆ. ವಿರಾಟ್ ಆ ಇನ್ನಿಂಗ್ಸ್​​ ಆಡಿ ಒಂದು ವರ್ಷವಾಗಲು ಇನ್ನು ಒಂದು ದಿನ ಬಾಕಿಯಿರುವಾಗಲೇ ಈಗ ನ್ಯೂಜಿಲ್ಯಾಂಡ್ಸ್​​ ವಿರುದ್ಧ ವರ್ಲ್ಡ್​​ಕಪ್​ ಅಂಥದ್ದೇ ಮತ್ತೊಂದು ಇನ್ನಿಂಗ್ಸ್ ಆಡಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.

ಸದ್ಯ ವರ್ಲ್ಡ್​ ಕ್ರಿಕೆಟ್​​ನಲ್ಲಿ ವಿರಾಟ್ ಕೊಹ್ಲಿಯಂತ ಬೆಸ್ಟ್ ರನ್ ಚೇಸರ್ ಇನ್ಯಾರೂ ಕೂಡ ಇಲ್ಲ. ಇದನ್ನ ಮೇಲಿಂದ ಮೇಲೆ ವಿರಾಟ್ ಪ್ರೂವ್ ಮಾಡ್ತಾನೆ ಇದ್ದಾರೆ. ಖುದ್ದು ಕೊಹ್ಲಿಯೇ ಹೇಳಿಕೊಂಡಿರುವ ಪ್ರಕಾರ ಅವರು ಯಾವಾಗಲೂ ಚಾಲೆಂಜ್​​ಗಳನ್ನ ಎದುರಿಸೋಕೆ ಇಷ್ಟಪಡ್ತಾರೆ. ಟಫ್ ಸ್ವಿಚ್ಯುವೇಷನ್​ಗಳಲ್ಲಿ, ಕಂಡೀಷನ್​​ಗಳಲ್ಲಿ ಆಡೋಕೆ ಬಯಸ್ತಾರೆ. ಕೊಹ್ಲಿಯ ಈ ಗುಣ ಅವರನ್ನ ಚೇಸಿಂಗ್​​ ಎಕ್ಸ್​​​ಪರ್ಟ್​ ಆಗಿಸಿರೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಹೀಗಾಗಿ ವಿಕೆಟ್​ಗಳು ಬಿದ್ದಾಗಲೂ, ಪ್ರೆಷರ್ ಜಾಸ್ತಿ ಇದ್ರೂ ಕೊಹ್ಲಿ ಅದನ್ನ ಹ್ಯಾಂಡಲ್​​ ಮಾಡೋ ಕಲೆಗಾರಿಕೆ ಹೊಂದಿದ್ದಾರೆ. ಒಬ್ಬ ಫೈಟರ್​ಗಷ್ಟೇ ಈ ರೀತಿ ಚೇಸ್​ ಮಾಡಿ ಗೆಲ್ಲೋಕೆ ಸಾಧ್ಯ.

Sulekha