ಅಟಲ್ ಸೇತುವೆಯ ಸ್ಪೆಷಾಲಿಟಿ ಏನು? -ಸೇತುವೆ ನಿರ್ಮಾಣದ ವೇಳೆ ಎದುರಾಗಿದ್ದ ಸವಾಲುಗಳೇನು?
ಇದುವರೆಗೆ ಮುಂಬೈನಲ್ಲಿ ಬಾಂದ್ರಾ ಟು ವರ್ಲಿ ಸೀಲಿಂಕ್ ಬ್ರಿಡ್ಜ್ ಎಲ್ಲರ ಗಮನ ಸೆಳೀತಾ ಇತ್ತು. ಸಮುದ್ರದ ಮೇಲಿನ ಈ ಸೇತುವೆಯೇ ಮುಂಬೈನ ಮೇನ್ ಅಟ್ರಾಕ್ಷನ್ ಆಗಿತ್ತು. ಆದ್ರೀಗ ಅದಕ್ಕಿಂತ ನಾಲ್ಕು ಪಟ್ಟು ದೊಡ್ಡ ಸೇತುವೆಯೊಂದು ಮುಂಬೈನಲ್ಲೇ ನಿರ್ಮಾಣವಾಗಿದೆ. ಹೇಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಅನ್ನೋದು ದೊಡ್ಡ ತಲೆನೋವಾಗಿದ್ಯೋ, ಅದೇ ರೀತಿ ಮುಂಬೈನಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ಇದೆ. ಆದ್ರೀಗ ಈ ಪ್ರಾಬ್ಲಂಗೆ ಮುಕ್ತಿ ನೀಡೋಕೆ ದೇಶದ ಅತೀ ದೊಡ್ಡ ಸೇತುವೆ ಮುಂಬೈ ಸಮುದ್ರದ ಮೇಲೆ ತಲೆ ಎತ್ತಿ ನಿಂತಿದೆ. ಓಲ್ಡ್ ಮುಂಬೈ ಮತ್ತು ನವೀ ಮುಂಬೈಯಲ್ಲಿ ಕನೆಕ್ಟ್ ಮಾಡೋ ಸೇತುವೆ ಇದಾಗಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗೆ ಅಟಲ್ಸೇತು ಅಂತಾ ನಾಮಕರಣ ಮಾಡಲಾಗಿದೆ. ಪ್ರಧಾನಿ ಮೋದಿ ಈ ಸೇತುವೆಯನ್ನ ಉದ್ಘಾಟಿಸಿದ್ದಾರೆ. ಹಾಗಿದ್ರೆ ಈ ಅಟಲ್ ಸೇತುವೆಯ ಸ್ಪೆಷಾಲಿಟಿ ಏನು? ಇದ್ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ? ಸೇತುವೆ ನಿರ್ಮಾಣದ ವೇಳೆ ಎದುರಾಗಿದ್ದ ಸವಾಲುಗಳೇನು? ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ – ಸೇತುವೆಯ ವಿಶೇಷತೆ ಏನು?
ಹೇಳಿಕೇಳಿ ಮುಂಬೈ ದೇಶದ ವಾಣಿಜ್ಯ ನಗರಿ. ಭಾರತದ ಅತ್ಯಂತ ಬ್ಯುಸಿಯೆಸ್ಟ್ ಸಿಟಿ ಅಂದ್ರೆ ಅದು ಮುಂಬೈ. ಹೀಗಾಗಿಯೇ ಮುಂಬೈ ನೆವರ್ ಸ್ಲೀಪ್ಸ್ ಅನ್ನೋ ಒಂದು ಮಾತಿದೆ. ಆದ್ರೆ ದಕ್ಷಿಣ ಮುಂಬೈ ಅಂದ್ರೆ ಓಲ್ಡ್ ಮುಂಬೈನಿಂದ ನವೀ ಮುಂಬೈಗೆ ಸಾಗೋದು ಅಂದ್ರೆ ದೊಡ್ಡ ಸಾಹಸವಾಗಿತ್ತು. ರಸ್ತೆ ಮೂಲಕ ಸುಮಾರು ಎರಡು ಗಂಟೆಗಳ ಜರ್ನಿ. ಹೀಗಾಗಿಯೇ ಸಮುದ್ರದ ಮೇಲೆ ಸೇತುವೆ ನಿರ್ಮಿಸೋ ಮೂಲಕ ದಕ್ಷಿಣ ಮುಂಬೈ ಮತ್ತು ನವೀ ಮುಂಬೈಯನ್ನ ಕನೆಕ್ಟ್ ಮಾಡಲಾಗಿದೆ. ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಇದಾಗಿದ್ದು, ಒಟ್ಟು 21.8 ಕಿಲೋ ಮೀಟರ್ ಉದ್ದ ಇದೆ. ಬರೀ ಸಮುದ್ರದ ಮೇಲೆಯೇ 16.5 ಕಿಲೋ ಮೀಟರ್ ದೂರ ಸೇತುವೆ ಕಟ್ಟಲಾಗಿದೆ. ಇದ್ರಿಂದಾಗಿ ಸೌತ್ ಮುಂಬೈನಿಂದ ನವೀ ಮುಂಬೈಗೆ ಸುಮಾರು 1 ಗಂಟೆ 40 ನಿಮಿಷಗಳ ಜರ್ನಿ ಕಡಿತವಾಗಿದೆ. ಇನ್ಮುಂದೆ ಕೇವಲ 20 ನಿಮಿಷಗಳಲ್ಲೇ 21 ಕಿಲೋ ಮೀಟರ್ ದೂರ ಪ್ರಯಾಣಿಸಬಹುದು. ಈ ಮಹಾ ಸೇತುವೆಯ ನಿರ್ಮಾಣಕ್ಕೆ 7,500 ಮಂದಿ ಸಿಬ್ಬಂದಿ ಕೆಲಸ ಮಾಡಿದ್ರು. ಜಗತ್ತಿನ 12ನೇ ಅತೀ ದೊಡ್ಡ ಸೇತುವೆ ಇದಾಗಿದೆ.
ನಿಮಗೆ ಗೊತ್ತಿರಲಿ, ಸೌತ್ ಮುಂಬೈನಿಂದ ನವೀ ಮುಂಬೈಗೆ ಇಂಥದ್ದೊಂದು ಸೇತುವೆ ನಿರ್ಮಾಣ ಮಾಡಬೇಕೆಂಬ ಯೋಜನೆ ಇಂದು ನಿನ್ನೆಯದ್ದಲ್ಲ. 60 ವರ್ಷಗಳ ಹಿಂದೆಯೇ ಇಮಥದ್ದೊಂದು ಯೋಜನೆಗೆ ಪ್ಲ್ಯಾನ್ ಮಾಡಲಾಗಿತ್ತು. 1962ರಲ್ಲಿ ಪ್ರಥಮ ಬಾರಿಗೆ ಬ್ರಿಡ್ಜ್ ನಿರ್ಮಾಣದ ಪ್ರಪೋಸಲ್ನ್ನ ಆಗಿನ ಕೇಂದ್ರ ಸರ್ಕಾರದ ಮುಂದಿಡಲಾಗುತ್ತೆ. ಆದ್ರೆ ಬ್ರಿಡ್ಜ್ ಹೇಗೆ ಮಾಡಬೇಕು? ಎಲ್ಲಿಂದ ಎಲ್ಲಿಗೆ ಕನೆಕ್ಟ್ ಮಾಡಬೇಕು ಅನ್ನೋ ಬಗ್ಗೆ ಕೇವಲ ಒಂದು ರಿಪೋರ್ಟ್ ಸಬ್ಮಿಟ್ ಮಾಡೋಕೆ ಸುಮಾರು 30 ವರ್ಷಗಳೇ ಬೇಕಾಯ್ತು. ಕೊನೆಗೆ 1994ರಲ್ಲಿ ಫಿಸಿಬಿಲಿಟಿ ರಿಪೋರ್ಟ್ ಸಲ್ಲಿಸಲಾಗುತ್ತೆ. ಅಂದ್ರೆ ಮುಂಬೈನ ಸಮುದ್ರದ ಮೇಲೆ ಈ ರೀತಿಯ ಸೇತುವೆ ನಿರ್ಮಾಣ ಮಾಡೋಕೆ ಸಾಧ್ಯಾನಾ? ಇಲ್ವಾ? ಎಷ್ಟು ಸೇಫ್ ಇವೆಲ್ಲದರ ಬಗ್ಗೆ ಕೊನೆಗೂ ಒಂದು ರಿಪೋರ್ಟ್ ಸಲ್ಲಿಕೆಯಾಗುತ್ತೆ. ಆದ್ರೆ ಈ ರಿಪೋರ್ಟ್ ಕೂಡ ಫೈಲ್ಗಳ ಮಧ್ಯೆ ಧೂಳು ಹಿಡಿದು ಬಿದ್ದಿರುತ್ತೆ. 10 ವರ್ಷಗಳ ಬಳಿಕ ಅಂದ್ರೆ 2004ರಲ್ಲಿ ಮತ್ತೊಮ್ಮೆ ಈ ರಿಪೋರ್ಟ್ನ್ನ ಸ್ಟಡಿ ಮಾಡಿ 2006ರಲ್ಲಿ ಟೆಂಡರ್ ಕರೆಯಲಾಗುತ್ತೆ. ಆದ್ರೆ ಕಾರ್ಪೋರೇಟ್ ವಲಯದಲ್ಲಾದ ಪೈಪೋಟಿ, ಲಿಟಿಗೇಶನ್ ಮತ್ತು ಜೊತೆಗೆ ಪ್ರಾಜೆಕ್ಟ್ನ್ನ ಪುಶ್ ಮಾಡೋಕೆ ಮಹಾರಾಷ್ಟ್ರ ಸರ್ಕಾರ ಕೂಡ ಹಿಂದೇಟು ಹಾಕಿದ್ರಿಂದ ಯೋಜನೆ ಮತ್ತೆ ಪೆಂಡಿಂಗ್ ಆಯ್ತು. ಫೈನಲಿ 2017ರಲ್ಲಿ ಈ ಮೆಗಾ ಪ್ರಾಜೆಕ್ಟ್ಗೆ ಸಂಬಂಧಿಸಿ ಒಂದಷ್ಟು ಆ್ಯಕ್ಟಿವಿಟಿ ಶುರುವಾಗುತ್ತೆ. ಮುಂಬೈ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ ಈ ಯೋಜನೆಯನ್ನ ಮುನ್ನೆಲೆಗೆ ತರುತ್ತೆ. ಹಾಗೆಯೇ ಸೇತುವೆ ನಿರ್ಮಾಣ ವಿಚಾರದಲ್ಲಿ ಜಪಾನ್ ಜೊತೆಗೆ ಒಪ್ಪಂದ ಕೂಡ ನಡೆಯುತ್ತೆ. ಜಪಾನ್ ಸಹಕಾರದೊಂದಿಗೆ ಈ ಸೇತುವೆಯನ್ನ ನಿರ್ಮಾಣ ಮಾಡಲಾಗುತ್ತೆ. 2018ರ ಏಪ್ರಿಲ್ನಲ್ಲಿ 21.8 ಕಿಲೋ ಮೀಟರ್ ಉದ್ದದ 6 ಲೈನ್ ಸೇತುವೆ ನಿರ್ಮಾಣ ಕಾರ್ಯ ಶುರುವಾಗುತ್ತೆ.
ಇನ್ನು ಸೌತ್ ಮುಂಬೈನಿಂದ ನವೀ ಮುಂಬೈಯನ್ನ ಕನೆಕ್ಟ್ ಮಾಡೋ ಈ ಸೇತುವೆಗೂ ಟೋಲ್ ದರ ನಿಗದಿ ಪಡಿಸಲಾಗಿದೆ. ವನ್ ವೇ ಟ್ರಿಪ್ಗೆ 250 ರೂಪಾಯಿ ಚಾರ್ಜ್ ಆಗುತ್ತೆ. ಅದೇ 2 ವೇ ಟ್ರಿಪ್ಗೆ 375 ರೂಪಾಯಿ ಆಗುತ್ತೆ. 100 ಕಿಲೋ ಮೀಟರ್ ಸ್ಪೀಡ್ ಲಿಮಿಟ್ ಕೂಡ ಇದ್ದು, ಟೂ ವಿಲ್ಲರ್ಗಳಿಗೆ ಎಂಟ್ರಿ ಇರೋದಿಲ್ಲ. ಸೇತುವೆಯುದ್ದಕ್ಕೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮರಾಗಳನ್ನ ಅಳವಡಿಸಲಾಗಿದೆ. ಯಾವುದೇ ವೆಹಿಕಲ್ 100 ಕಿಲೋ ಮೀಟರ್ಗಿಂತ ಹೆಚ್ಚು ಸ್ಪೀಡ್ ಹೋದ್ರೆ ಆಟೋಮೆಟಿಕಲಿ ಕಂಟ್ರೋಲ್ ರೂಮ್ಗೆ ಸಿಗ್ನಲ್ ಪಾಸ್ ಆಗುತ್ತೆ. ಆ್ಯಕ್ಸಿಡೆಂಟ್ ಆದ್ರೆ, ವೆಹಿಕಲ್ಗಳಿಗೆ ಪ್ರಾಬ್ಲಂ ಆಗಿ ಸೇತುವೆ ಮಧ್ಯೆ ಸ್ಥಗಿತಗೊಂಡ್ರೂ ಈ ಕ್ಯಾಮರಾ ಮೂಲಕವೇ ಎಮರ್ಜೆನ್ಸಿ ಸಂದೇಶ ರವಾನೆಯಾಗುತ್ತೆ.
ಇಲ್ಲಿ ಇನ್ನೊಂದು ಸೂಕ್ಷ್ಮ ವಿಚಾರ ಕೂಡ ಇದೆ. ಇಡೀ ಸೇತುವೆಯನ್ನ ಪರಿಸರ ಸ್ನೇಹಿಯಾಗಿಯೇ ಕಟ್ಟಲಾಗಿದೆ. ಯಾಕಂದ್ರೆ ಈ ಹಿಂದೆ ಪರಿಸರ ಪ್ರೇಮಿಗಳು ಈ ಬ್ರಿಡ್ಜ್ ನಿರ್ಮಾಣವನ್ನ ವಿರೋಧಿಸಿದ್ರು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಸೇತುವೆ ನಿರ್ಮಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ಇಡೀ ಬ್ರಿಡ್ಜ್ನಲ್ಲಿ ಲೈಟ್ ಹೊತ್ತಿಕೊಳ್ಳುತ್ತೆ. ಸೇತುವೆ ಮೇಲೆ ಲೈಟ್ ಉರಿಯೋದ್ರಿಂದ ಕೆಳಗಡೆ ಇರೋ ಸಮುದ್ರ ಜೀವಿಗಳಿಗೆ ಡಿಸ್ಟರ್ಬ್ ಆಗಬಾರದು ಅಂತಾ 1,112 ಸ್ಪೆಷಲ್ ಲೈಟ್ ಪೋಲ್ಗಳನ್ನ ಅಳವಡಿಸಲಾಗಿದೆ. ಇಲ್ಲಿ ಲೈಟ್ ಆನ್ ಆದಾಗ ಬೆಳಕು ನೇರವಾಗಿ ಸೇತುವೆ ಮೇಲೆಯಷ್ಟೇ ಬೀಳುತ್ತೆ. ಸಮುದ್ರಕ್ಕೆ ಇದ್ರ ಬೆಳಕು ಬೀಳೋದೇ ಇಲ್ಲ. ಇದ್ರ ಜೊತೆಗೆ ನಾಯ್ಸ್ ಬ್ಯಾರಿಯರ್ ಅಂದ್ರೆ ಶಬ್ದ ನಿಗ್ರಹ ತಡೆಗೋಡೆಯನ್ನ ಕೂಡ ಸೇತುವೆಯ ಎರಡೂ ಬದಿಗೆ ಅಳವಡಿಸಲಾಗಿದೆ. ಸುಮಾರು 8.5 ಕಿಲೋ ಮೀಟರ್ ದೂರದವರೆಗೆ ಈ ನಾಯ್ಸ್ ಬ್ಯಾರಿಯರ್ ಮತ್ತು 6 ಕಿಲೋ ಮೀಟರ್ ವ್ಯೂ ಬ್ಯಾರಿಯರ್ ಇದೆ. ಸೇತುವೆ ಮೇಲೆ ಹೋಗುವಾಗ ಎರಡೂ ಕಾರ್ನರ್ನಲ್ಲಿ ಏನೂ ಕೂಡ ಕಾಣಿಸೋದಿಲ್ಲ. ಇದನ್ನ ಫಿಕ್ಸ್ ಮಾಡೋಕೆ ಒಂದು ಮೇನ್ ರೀಸನ್ ಕೂಡ ಇದೆ. ಮುಂಬೈನ ಸಮುದ್ರ ತೀರಕ್ಕೆ ಪ್ರತಿ ವರ್ಷ ವಿದೇಶಗಳಿಂದ ಫ್ಲೆಮಿಂಗೋ ಹಕ್ಕಿಗಳು ವಲಸೆ ಬರ್ತಾವೆ. ಕೆಲ ತಿಂಗಳುಗಳ ಕಾಲ ಈ ಫ್ಲೆಮಿಂಗೋಗಳು ಮುಂಬೈ ಸಮುದ್ರ ತೀರದಲ್ಲೇ ಬೀಡು ಬಿಡುತ್ತವೆ. ಅಲ್ಲೇ ಸಂತಾನೋತ್ಪತ್ತಿ ಕೂಡ ಮಾಡುತ್ತವೆ. ಹೀಗಾಗಿ ವಾಹನಗಳ ಸೌಂಡ್ನಿಂದ ಅವುಗಳಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಸೇತುವೆ ಮೇಲೆ ನಾಯ್ಸ್ ಬ್ಯಾರಿಯರ್ ಫಿಕ್ಸ್ ಮಾಡಿದ್ದಾರೆ. ಜೊತೆಗೆ ಫ್ಲೆಮಿಂಗೋಗಳು ಬೀಡು ಬಿಡುವ ಸಮುದ್ರ ಪ್ರದೇಶದ ಉದ್ದಕ್ಕೂ ಈ ಸೇತುವೆಗೂ ಪಿಂಕ್ ಪೇಂಟಿಂಗ್ ಮಾಡಲಾಗಿದೆ. ಸೇಮ್ ಫ್ಲೆಮಿಂಗೋಗಳ ಕಲರ್. ಹೀಗಾಗಿ ವಾಹನಗಳ ಶಬ್ದದಿಂದಾಗಲಿ, ಸೇತುವೆಯನ್ನ ನೋಡಿಯಾಗಲಿ ಅವುಗಳಿಗೆ ಡಿಸ್ಬರ್ಬ್ ಆಗೋದಿಲ್ಲ.
ಇನ್ನು ಈ ಮೆಗಾ ಸೇತುವೆಯನ್ನ ನಿರ್ಮಿಸೋದು ಅಷ್ಟೊಂದು ಸುಲಭ ಇರಲಿಲ್ಲ. ಸ್ನೇಹಿತರೇ, ಒಂದ್ಸಾರಿ ಯೋಚನೆ ಮಾಡಿ ನೋಡಿ, ಸಮುದ್ರದ ಮೇಲೆ ಈ ರೀತಿಯ ಸೇತುವೆ ನಿರ್ಮಾಣ ಮಾಡಬೇಕು ಅಂದ್ರೆ ಸಿಬ್ಬಂದಿ ಎಷ್ಟು ರಿಸ್ಕ್ ತಗೊಂಡಿರಬೇಡ. ಅತ್ಯಂತ ದೊಡ್ಡ ಚಾಲೆಂಜ್ ಅಂದ್ರೆ ಸಮುದ್ರದ ನಡುವೆ ಪಿಲ್ಲರ್ಗಳನ್ನ ಅಳವಡಿಸೋದು. ಸಮುದ್ರದ ಕೆಳ ಭಾಗದಲ್ಲಿರೋ ನೆಲವನ್ನ 47 ಮೀಟರ್ ಅಗೆದು ಬಳಿಕ ಪಿಲ್ಲರ್ನ್ನ ನಿಲ್ಲಿಸಲಾಗಿದೆ. ಹಾಗೆಯೇ ಈ ಸಮುದ್ರ ಭಾಗದಲ್ಲಿ ಒಎನ್ಜಿಸಿ, ಭಾಭಾ ಪರಮಾಣು ಸಂಶೋಧನಾ ಕೇಂದ್ರ ಕೂಡ ಬರುತ್ತೆ. ಇವುಗಳಿಗೆ ಸಂಬಂಧಿಸಿದ ಪೈಪ್ಲೈನ್ ಮೆಟೀರಿಯಲ್ಗಳು ಕೂಡ ಈ ಸಮುದ್ರದ ಅಡಿಯಲ್ಲಿ ಇದ್ದಿರಬಹುದು. ಆ ಬಗ್ಗೆಯೂ ಎಚ್ಚರಿಕೆ ವಹಿಸಿಯೇ ಸೇತುವೆಗೆ ಬೇಕಾದ ಪಿಲ್ಲರ್ನ್ನ ಅಳವಡಿಸಲಾಗಿದೆ. ಸುಮಾರು ಒಂದು ಸಾವಿರ ವರ್ಷ ಈ ಬ್ರಿಡ್ಜ್ನ ಲೈಫ್ಟೈಮ್. ಅಟಲ್ ಸೇತುವೆಯಲ್ಲಿ ಸಂಚಾರ ಮಾಡೋದ್ರಿಂದ ಸೌತ್ ಮುಂಬೈನಿಂದ ನವೀ ಮುಂಬೈಗೆ 30 ಕಿಲೋ ಮೀಟರ್ ರೆಡ್ಯೂಸ್ ಆದಂತಾಗುತ್ತೆ. ಇದ್ರಿಂದ ಇಂಧನ ಕೂಡ ಸೇವ್ ಆಗುತ್ತೆ. ವರ್ಷಕ್ಕೆ ಅಂದಾಜು 1 ಕೋಟಿ ಲೀಟರ್ ಇಂಧನ ಉಳಿತಾಯವಾಗಲಿದ್ಯಂತೆ. ಹಾಗೆಯೇ ಪೊಲ್ಯೂಷನ್ ಕೂಡ ಕಡಿಮೆಯಾಗುತ್ತೆ.
ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಚಾರವನ್ನ ಕೂಡ ಹೇಳಲೇಬೇಕು. ಸಮುದ್ರದಲ್ಲಿ ಸೇತುವೆ ನಿರ್ಮಾಣ ಮಾಡೋದು ಅಂದ್ರೆ ಎಂಥಾ ರಿಸ್ಕೀ ಕೆಲಸ ಅನ್ನೋದು ನಿಮಗೆ ಗೊತ್ತೇ ಇದೆ. ಕಳೆದ 5 ವರ್ಷಗಳಿಂದ ಡೇಲಿ ಬೇಸಿಸ್ನಲ್ಲಿ 5,403 ಮಂದಿ ಈ ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ರು. ಈ ಸಂದರ್ಭದಲ್ಲಿ 7 ಮಂದಿ ಕೆಲಸಗಾರರು ಜೀವ ಕಳೆದುಕೊಂಡಿದ್ರು. ಹಾಗೆಯೇ ಕೊರೊನಾದಿಂದಾಗಿ ಸೇತುವೆ ನಿರ್ಮಾಣದಲ್ಲೂ ಒಂದಷ್ಟು ಡಿಲೇ ಆಗಿತ್ತು. ಇದ್ರಿಂದ 2,192 ಕೋಟಿ ರೂಪಾಯಿ ಹೆಚ್ಚುವರಿ ಖರ್ಚಾಗಿತ್ತು. ಆದ್ರೆ, ಈ ಸೇತುವೆಯಿಂದಾಗಿ ಭವಿಷ್ಯದಲ್ಲಿ ಇಡೀ ಮುಂಬೈಯೇ ಬದಲಾಗಲಿದೆ. ದೇಶದ ಆರ್ಥಿಕತೆಗೂ ಸಾಕಷ್ಟು ಬೂಸ್ಟ್ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಆಗಬೇಕು ಅನ್ನೋದಾದ್ರೆ ಟ್ರಾನ್ಸ್ಪೋರ್ಟ್ ಬೆಳಿಲೇಬೇಕು. ಟ್ರಾನ್ಸ್ಪೋರ್ಟ್ಗೆ ಇಂಥಾ ಸೇತುವೆಗಳು, ರಸ್ತೆಗಳು ಅನಿವಾರ್ಯ. ಸೌತ್ ಮುಂಬೈ ಮತ್ತು ನವೀ ಮುಂಬೈ ಏರ್ಪೋರ್ಟ್ನ್ನ ಕೂಡ ಈ ಅಟಲ್ ಸೇತುವೆ ಕನೆಕ್ಟ್ ಮಾಡುತ್ತೆ. ಹಾಗೆಯೇ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತದ ಟ್ರಾವೆಲ್ ಟೈಮ್ ಕೂಡ ಈಗ ಕಡಿತವಾಗುತ್ತೆ. ಓವರ್ಆಲ್ ಆಗಿ ಈ ಅಟಲ್ ಸೇತುವೆ ನಿಜಕ್ಕೂ ದೇಶದ ಪಾಲಿಗೆ ವರದಾನ ಅಂತಾ ಹೇಳಬಹುದು. ಈಗ ರಾಮಮಂದಿರ ಬೇರೆ ನಿರ್ಮಾಣವಾಗಿದೆ. ಇದೇ ಹೊತ್ತಲ್ಲಿ ಸಮುದ್ರದ ಮೇಲೆಯೇ ಇಥದ್ದೊಂದು ಸುಸಜ್ಜಿತ ಸೇತುವೆ ಕೂಡ ಲೋಕಾರ್ಪಣೆಯಾಗಿದೆ. ಅಂದು ತ್ರೇತಾಯುಗದಲ್ಲಿ ರಾಮನಿಗಾಗಿ ವಾನರರ ಸೇನೆ ಸಮುದ್ರದಲ್ಲಿ ಕಲ್ಲು ತುಂಬಿ ಸೇತುವೆಯನ್ನ ನಿರ್ಮಾಣ ಮಾಡಿದ್ರು. ಈಗ ಕಲಿಯುಗದಲ್ಲಿ ಅತ್ಯಾಧುನಿಕ ಸೇತುವೆ ಸಮುದ್ರದ ಮೇಲೆಯೇ ನಿರ್ಮಾಣವಾಗಿದೆ. ಅದೇನೇ ಇರಲಿ, ಸುಸಜ್ಜಿತ ಸೇತುವೆಯೇನೊ ನಿರ್ಮಾಣವಾಗಿದೆ. ಆದ್ರೆ ಇದನ್ನ ಜವಾಬ್ದಾರಿಯಿಂದ ಬಳಸೋ ಹೊಣೆ ದೇಶದ ಜನರ ಮೇಲಿದೆ.