ಸತತ ಗೆಲುವು ಕಂಡಿರುವ ಟೀಂ ಇಂಡಿಯಾ ಸೀಕ್ರೆಟ್ ಏನು? – ಭಾರತ ತಂಡದ ಪ್ಲಸ್ ಮತ್ತು ಮೈನಸ್ ಯಾವುದು ಗೊತ್ತಾ?

ಸತತ ಗೆಲುವು ಕಂಡಿರುವ ಟೀಂ ಇಂಡಿಯಾ ಸೀಕ್ರೆಟ್ ಏನು? – ಭಾರತ ತಂಡದ ಪ್ಲಸ್ ಮತ್ತು ಮೈನಸ್ ಯಾವುದು ಗೊತ್ತಾ?

ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಇದುವರೆಗೂ ಟಾಪ್​ ಕ್ಲಾಸ್ ಪರ್ಫಾಮೆನ್ಸ್​ ನೀಡ್ತಾ ಬಂದಿದೆ. ಆಡಿರುವ ಎಲ್ಲಾ 5 ಮ್ಯಾಚ್​ಗಳನ್ನ ಕೂಡ ಗೆದ್ದುಕೊಂಡು ಪಾಯಿಂಟ್ಸ್​ ಟೇಂಬಲ್​ನಲ್ಲಿ ನಂಬರ್-1 ಪೊಸೀಷನ್​ನಲ್ಲಿದೆ. ವಿಶ್ವಕಪ್​ ಗೆಲ್ಲೋಕೆ ಟೀಂ ಇಂಡಿಯಾ ಫೇವರೇಟ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೂ ಒಂದು ವಿಚಾರದಲ್ಲಿ ಮಾತ್ರ ಟೀಂ ಇಂಡಿಯಾ ಬಗ್ಗೆ ಒಂದಷ್ಟು ಟೆನ್ಷನ್​​ಗಳಿವೆ. ಟೀಂ ಇಂಡಿಯಾ ಗೆಲುವಿನ ಸೀಕ್ರೆಟ್ ಮತ್ತು ತಂಡಕ್ಕೆ ಪ್ಲಸ್ ಪಾಯಿಂಟ್​ ಆಗಿರುವ ಕೆಲ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರ ಭಾರತ ಪರ್ಯಟನೆ – ಸ್ಟೇಡಿಯಂಗಳು ಫುಲ್ ಹೌಸ್ ಆಗಲು ಕ್ರಿಕೆಟರ್ಸ್ ಟೂರ್..!

ವರ್ಲ್ಡ್​​ಕಪ್​​ನಲ್ಲಿ ಈವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದ ಖುಷಿಯಲ್ಲಿದೆ ಟೀಮ್ ಇಂಡಿಯಾ. ಪ್ರತಿ ಪಂದ್ಯವನ್ನು ಕೂಡ ಗೆದ್ದಿರುವುದರಿಂದ ಟೀಂ ಇಂಡಿಯಾ ಪ್ಲೇಯರ್ಸ್​ ಫುಲ್ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಆಡಿರುವ ಎಲ್ಲಾ ಐದೂ ಮ್ಯಾಚ್​ಗಳಲ್ಲೂ ಟೀಂ ಇಂಡಿಯಾ ಮೊದಲು ಬೌಲಿಂಗ್​ ಮಾಡಿದೆ. ಬಳಿಕ ಚೇಸಿಂಗ್ ಮಾಡುವ ಮೂಲಕ ಗೆದ್ದಿದೆ. ಚೇಸಿಂಗ್ ಮೂಲಕವೇ ಎಲ್ಲಾ ಪಂದ್ಯಗಳನ್ನ ಗೆದ್ದುಕೊಂಡು ಬಂದಿದೆ. ಇದು ಪ್ಲಸ್ ಪಾಯಿಂಟ್ ಅನ್ನೋದು ಒಂದು ಕಡೆಯಾದ್ರೆ, ಇಲ್ಲೇ ಇನ್ನೊಂದು ನೆಗೆಟಿವ್ ಪಾಯಿಂಟ್ ಕೂಡ ಇದೆ. ಯಾಕೆಂದರೆ, ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡಿ ಎದುರಾಳಿ ತಂಡಕ್ಕೆ ಟಾರ್ಗೆಟ್ ಕೊಟ್ಟಿಲ್ಲ. ಬಳಿಕ ಬೌಲಿಂಗ್​​ನಲ್ಲಿ ಡಿಫೆಂಡ್ ಮಾಡಿ ಒಂದೇ ಒಂದು ಪಂದ್ಯವನ್ನ ಗೆದ್ದಿಲ್ಲ. ಮೊದಲು ಬೌಲಿಂಗ್ ನಂತ್ರ ಚೇಸಿಂಗ್​ ಮೂಲಕವೇ ಎಲ್ಲಾ ಮ್ಯಾಚ್​ಗಳನ್ನೂ ಭಾರತೀಯ ತಂಡ ಗೆದ್ದಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಾದ್ರೂ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡಿ, ನಂತರ ಬೌಲಿಂಗ್​ ಮೂಲಕ ಎದುರಾಳಿಗಳನ್ನ ಕಟ್ಟಿ ಹಾಕಬೇಕಿದೆ. ಯಾಕಂದ್ರೆ ಮೊದಲು ಬ್ಯಾಟಿಂಗ್​​ ಮಾಡಿ ನಂತ್ರ ಬೌಲಿಂಗ್​ನಲ್ಲಿ ಡಿಫೆಂಡ್ ಮಾಡೋದು ಕೂಡ ದೊಡ್ಡ ಮಟ್ಟಿಗಿನ ಚಾಲೆಂಜ್. ಇದುವರೆಗೆ ನಾವು ಆಡಿರುವ ಬಹುತೇಕ ಪಿಚ್​​ಗಳು ಫಸ್ಟ್ ಬೌಲಿಂಗ್​​, ಸೆಕೆಂಡ್​​ ಬ್ಯಾಟಿಂಗ್​ಗೆ ಫೇವರ್ ಆಗಿತ್ತು. ಹೀಗಾಗಿ ಟಾಸ್​​ ಗೆದ್ದಾಗಲೆಲ್ಲಾ ಮ್ಯಾಚ್​ ಗೆಲ್ಲಬೇಕಾದ ದೃಷ್ಟಿಯಿಂದ ಟೀಂ ಇಂಡಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಸೆಮಿಫೈನಲ್​​ ಎಂಟ್ರಿ ಹಂತದಲ್ಲಿರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಈ ಮೂರೂ ತಂಡಗಳು ಚೇಸಿಂಗ್ ಮಾಡಿಯೂ ಮ್ಯಾಚ್​​ಗಳನ್ನ ಗೆದ್ದಿವೆ.. ಮೊದಲು ಬ್ಯಾಟಿಂಗ್​​ ಮಾಡಿ, ನಂತ್ರ ಬೌಲಿಂಗ್​ನಲ್ಲೂ​ ಡಿಫೆಂಡ್ ಮಾಡಿಯೂ ಪಂದ್ಯಗಳನ್ನ ಗೆದ್ದಿವೆ. ಆದ್ರೆ ಟೀಂ ಇಂಡಿಯಾ ಒಂದೇ ಒಂದು ಮ್ಯಾಚ್​ನಲ್ಲಿ ಸೆಕೆಂಡ್​​ ಇನ್ನಿಂಗ್ಸ್​ನಲ್ಲಿ ಬೌಲಿಂಗ್​​ನಲ್ಲಿ ಡಿಫೆಂಡ್ ಮಾಡಿ ಗೆದ್ದಿಲ್ಲ. ಇದು ವರ್ಲ್ಡ್​​ಕಪ್​ ಟೂರ್ನಿಯಲ್ಲಿ ಈಗಿನವರೆಗೆ ಟೀಂ ಇಂಡಿಯಾದ ಸಣ್ಣ ಡ್ರಾ ಬ್ಯಾಕ್. ಹಾಗಂತಾ ಫಸ್ಟ್ ಬ್ಯಾಟಿಂಗ್​ ಮಾಡಿ ಬಳಿಕ ಬೌಲಿಂಗ್​​ ಡಿಫೆಂಡ್​ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮ ಆಟಗಾರರಿಗೆ ಇಲ್ಲ ಅಂತಲ್ಲ. ಆದರೆ, ಈ ಟೂರ್ನಿಯಲ್ಲಿ ಇದುವರೆಗೆ ಎದುರಿಸದ ಚಾಲೆಂಜ್​ನ್ನ ಟೀಂ ಇಂಡಿಯಾ ಮುಂದಿನ ಪಂದ್ಯಗಳಲ್ಲೂ ಫೇಸ್ ಮಾಡಲೇಬೇಕಿದೆ. ಟಾಸ್​ ಗೆದ್ದರೆ ಮೊದಲು ಬ್ಯಾಟಿಂಗ್​ ಮಾಡಿ, ಬಳಿಕ ಬೌಲಿಂಗ್ ಮಾಡಿ ಮ್ಯಾಚ್ ಗೆಲ್ಲಬೇಕಿದೆ.

ಯಾಕಂದ್ರೆ ಫಸ್ಟ್ ಬ್ಯಾಟಿಂಗ್​ ಮಾಡುವ ಚಾಲೆಂಜ್​ ಸೆಮಿಫೈನಲ್​ನಲ್ಲಿ ಬೇಕಾದ್ರೂ ಎದುರಾಗಬಹುದು.. ಫೈನಲ್​ಗೆ ಎಂಟ್ರಿಯಾದ್ರೆ ಅಲ್ಲಿ ಬೇಕಾದ್ರೂ ಟಾಸ್ ಸೋತು ನಮಗೆ ಫಸ್ಟ್ ಬ್ಯಾಟಿಂಗ್ ಮಾಡೋ ಪರಿಸ್ಥಿತಿ ಬರಬಹುದು. ಫಸ್ಟ್ ಬ್ಯಾಟಿಂಗ್​ ಮಾಡೋವಾಗ ಬ್ಯಾಟ್ಸ್​​ಮನ್​ಗಳ ಮನಸ್ಥಿತಿಯೇ ಬೇರೆ ಇರುತ್ತೆ. ಚೇಸಿಂಗ್​ ಮಾಡೋ ವೇಳೆ ಮೆಂಟಾಲಿಟಿಯೇ ಡಿಫರೆಂಟ್ ಆಗಿರುತ್ತೆ. ಬೌಲರ್ಸ್​ಗಳಿಗೂ ಅಷ್ಟೇ.. ಹೀಗಾಗಿ ಸೆಮಿಫೈನಲ್​ನಲ್ಲೋ ಅಥವಾ ಫೈನಲ್​ನಲ್ಲೋ ಸಡನ್​ ಆಗಿ ಫಸ್ಟ್ ಬ್ಯಾಟಿಂಗ್​ ಮಾಡೋ ಪರಿಸ್ಥಿತಿ ಬಂದ್ರೆ ಟೀಂ ಮೇಲೆ, ಪ್ಲೇಯರ್ಸ್​​ಗಳ ಮೇಲಿನ ಒತ್ತಡ ಕೂಡ ಸಹಜವಾಗಿಯೇ ಹೆಚ್ಚಾಗುತ್ತೆ. ಹೀಗಾಗಿ ಸೆಮಿಫೈನಲ್​ಗೂ ಮುನ್ನ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡಿ, ನಂತ್ರ ಬೌಲಿಂಗ್ ಮಾಡಿದ್ರೆ ಆಗ ಇಲ್ಲೂ ನಮ್ಮ ಆಟಗಾರರ ಸಾಮರ್ಥ್ಯ ಏನು ಅನ್ನೋದು ಪ್ರೂವ್ ಆಗುತ್ತೆ. ಚೇಸಿಂಗ್ ವೇಳೆ ಗೆದ್ದೇ ಗೆಲ್ತಾರೆ ಅನ್ನೋ ಕಾನ್ಫಿಡೆನ್ಸ್ ಈಗಾಗ್ಲೇ ಎಲ್ಲರಿಗೂ ಬಂದಾಗಿದೆ. ಸೆಕೆಂಡ್​ ಬೌಲಿಂಗ್​ ಮಾಡೋವಾಗಲು ಇದೇ ಕಾನ್ಫಿಡೆನ್ಸ್ ತಂಡಕ್ಕೆ ಬೇಕಿದೆ.

 

Sulekha