MH-370 ವಿಮಾನ ಪತನದ ಸೀಕ್ರೆಟ್ ಏನು?- ವಿಮಾನದಲ್ಲಿದ್ದ 239 ಮಂದಿ ಎಲ್ಲಿ ಹೋದರು?

MH-370 ವಿಮಾನ ಪತನದ ಸೀಕ್ರೆಟ್ ಏನು?-  ವಿಮಾನದಲ್ಲಿದ್ದ 239 ಮಂದಿ ಎಲ್ಲಿ ಹೋದರು?

MH-370.. 2014ರ ಮಾರ್ಚ್ 8ರಂದು ಮಲೇಷ್ಯಾದ ಈ ವಿಮಾನ ಕೌಲಲಂಪುರ್​ನಿಂದ ಚೀನಾದ ಬೀಜಿಂಗ್​ನತ್ತ ಹೊರಟಿತ್ತು. ಆದ್ರೆ ಸಮುದ್ರದ ಮೇಲೆ ಹಾರಾಡ್ತಾ ಇದ್ದ ಸಂದರ್ಭ ಇದ್ದಕ್ಕಿದ್ದಂತೆ ವಿಮಾನ ನಾಪತ್ತೆಯಾಗಿಬಿಡುತ್ತೆ. 10 ವರ್ಷಗಳೇ ಕಳೆದ್ರೂ ಇನ್ನೂ ಕೂಡ ಈ ವಿಮಾನದ ಸುಳಿವೇ ಸಿಕ್ಕಿಲ್ಲ. ವಿಮಾನದಲ್ಲಿದ್ದ 239 ಮಂದಿ ಎಲ್ಲಿ ಹೋದ್ರು, ಏನಾದ್ರು ಅಂತಾನೆ ಗೊತ್ತಿಲ್ಲ. ಇದು ಜಗತ್ತಿನ ಅತ್ಯಂತ ದೊಡ್ಡ ಮಿಸ್ಟ್ರಿಗಳಲ್ಲಿ ಒಂದು. ಹಾಗಿದ್ರೆ ಎಂಹೆಚ್-370 ವಿಮಾನಕ್ಕೆ ಏನಾಯ್ತು? ಇಷ್ಟೆಲ್ಲಾ ಟೆಕ್ನಾಲಜಿ ಇದ್ರೂ ಈ ರಹಸ್ಯವನ್ನ ಇನ್ನೂ ಭೇದಿಸೋಕೆ ಆಗಿಲ್ಲ ಯಾಕೆ? ಇವೆಲ್ಲದರ ಬಗ್ಗೆಯೂ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪೋಖ್ರಾನ್‌ ವಿಸಿಟ್ ಮಾಡಿದ್ಯಾಕೆ? – ಪೋಖ್ರಾನ್ ಮೇಲೆ ಫೋಕಸ್ ಶಿಫ್ಟ್

2014ರ ಮಾರ್ಚ್ 8ರಂದು ಮಧ್ಯರಾತ್ರಿ 12 ಗಂಟೆ 42 ನಿಮಿಷಕ್ಕೆ ಕೌಲಾಲಂಪುರ್​​ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಿಂದ ಟೇಕಾಫ್ ಆಗುತ್ತೆ. ಐದು ಗಂಟೆಗಳ ಅವಧಿಯಲ್ಲಿ ವಿಮಾನ ಬೀಜಿಂಗ್ ರೀಚ್ ಆಗ್ಬೇಕಿತ್ತು. ಜಹ್ರೀ ಅಹ್ಮದ್ ಶಾ ಅನ್ನೋರು ವಿಮಾನದ ಮೇನ್ ಪೈಲೆಟ್ ಆಗಿದ್ರು. ಸುಮಾರು 33 ವರ್ಷಗಳ ಅನುಭವ ಇರುವ ಪೈಲೆಟ್. 7 ವರ್ಷಗಳ ಎಕ್ಸ್​​ಪೀರಿಯನ್ಸ್ ಹೊಂದಿದ್ದ ಫಾರುಕ್ ಅಬ್ದುಲ್ ಹಮೀದ್ ವಿಮಾನದ ಕೋ ಪೈಲಟ್ ಆಗಿದ್ರು. ತಡರಾತ್ರಿ 1 ಗಂಟೆ 8 ನಿಮಿಷಕ್ಕೆ MH-370 ಫ್ಲೈಟ್ ಮಲೇಷ್ಯಾ ಕರಾವಳಿ ವಲಯವನ್ನ ದಾಟಿ ದಕ್ಷಿಣ ಚೀನಾ ಸಮುದ್ರ ಪ್ರದೇಶದ ಮೇಲೆ ಹಾರಾಟ ನಡೆಸ್ತಿತ್ತು. ಸುಮಾರು 35,000 ಅಡಿ ಎತ್ತರದಲ್ಲಿ ಹಾರಾಡ್ತಾ ಇತ್ತು. ಈ ವೇಳೆಯೂ ಕೌಲಾಲಂಪುರದಲ್ಲಿರೋ ಕಂಟ್ರೋಲ್ ರೂಮ್​​ ಜೊತೆಗೆ MH-370ಯ ಪೈಲೆಟ್​ಗಳು ಕಾಂಟ್ಯಾಕ್ಟ್​ನಲ್ಲಿದ್ರು. ಎಲ್ಲವೂ ನಾರ್ಮಲ್ ಆಗಿಯೇ ಇತ್ತು. ರಾತ್ರಿ 1 ಗಂಟೆ 19 ನಿಮಿಷವಾಗುತ್ತಲೇ ಈ ವಿಮಾನ ವಿಯೆಟ್ನಾಂ ವೈಮಾನಿಕ ಪ್ರದೇಶವನ್ನ ಎಂಟ್ರಿಯಾಗುತ್ತೆ. ಆಗ MH-370 ಫ್ಲೈಟ್ ವಿಯೆಟ್ನಾಂನ ಹೋಚಿಮಿನ್ ಏರ್​​ ಕಂಟ್ರೋಲ್​​ ರೂಮ್​ನ ಸಂಪರ್ಕಕ್ಕೆ ಸಿಗುತ್ತೆ. ವಿಮಾನದ ಕ್ಯಾಪ್ಟನ್ ಅಂದ್ರೆ ಮೇನ್ ಪೈಲೆಟ್ ಅತ್ತ ಕೌಲಲಂಪುರದ ಏರ್​ಕಂಟ್ರೋಲ್​ ರೂಮ್​​ಗೆ ಗುಡ್​ನೈಟ್ ಹೇಳಿ ಮುಂದಕ್ಕೆ ಹೋಗ್ತಾರೆ. ಅದೇ ಕೊನೆ..ಗುಡ್ ​​ನೈಟ್ ಹೇಳಿದ ಬಳಿಕ MH-370 ವಿಮಾನದ ಪೈಲಟ್​ ಗಳು ಯಾರ ಜೊತೆಗೆ ಕಮ್ಯುನಿಕೇಟ್ ಮಾಡೋದಿಲ್ಲ. ವಿಯೆಟ್ನಾಂ ವೈಮಾನಿಕ ಪ್ರದೇಶಕ್ಕೆ ಎಂಟ್ರಿಯಾಗಿ ಎರಡೇ ನಿಮಿಷಗಳಲ್ಲಿ ಕೌಲಾಲಂಪುರ ಏರ್​ಕಂಟ್ರೋಲ್ ರೂಮ್​​ನ ರಾಡಾರ್​​ನಿಂದ ​MH-370 ವಿಮಾನದ ಸಂಪರ್ಕ ಕಟ್ ಆಗಿಬಿಡುತ್ತೆ. ಹಾಗಂತಾ ಅದ್ರಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ. ಯಾಕಂದ್ರೆ ಕೌಲಾಲಂಪುರ ಏರ್​ಕಂಟ್ರೋಲ್ ರೂಮ್​​ನಿಂದ ವಿಮಾನ ತುಂಬಾನೆ ದೂರದಲ್ಲಿದ್ದ ಕಾರಣ, ವಿಯೆಟ್ನಾಂ ವೈಮಾನಿಕ ಪ್ರದೇಶಕ್ಕೆ ಎಂಟ್ರಿಯಾಗಿದ್ದ ಕಾರಣ ಸಂಪರ್ಕ ಕಟ್ ಆಗಿತ್ತು. ಆದ್ರೆ ಇಲ್ಲಿ ಶಾಕಿಂಗ್ ಸಂಗತಿ ಏನಂದ್ರೆ ವಿಯೆಟ್ನಾಂ ಏರ್​ಕಂಟ್ರೋಲ್ ರೂಮ್​ ಜೊತೆಗಿನ MH-370 ವಿಮಾನದ ಕಾಂಟ್ಯಾಕ್ಟ್ ಕೂಡ ಕಟ್ ಆಗಿಬಿಡುತ್ತೆ. ವಿಯೆಟ್ನಾಂ ಎಟಿಸಿ ವಿಮಾನವನ್ನ ಕಾಂಟ್ಯಾಕ್ಟ್ ಮಾಡೋಕೆ ಮೇಲಿಂದ ಮೇಲೆ ಪ್ರಯತ್ನ ಪಡ್ತಾನೆ ಇರುತ್ತೆ. ಆದ್ರೆ MH-370 ಕಡೆಯಿಂದ ಯಾವುದೇ ಆನ್ಸರ್ ಬರೋದಿಲ್ಲ. ಪೈಲೆಟ್ ರೆಸ್ಪಾನ್ಸೇ ಮಾಡೋದಿಲ್ಲ. ಕೂಡಲೇ ಈ ಬಗ್ಗೆ ವಿಯೆಟ್ನಾಂ ಎಟಿಸಿಯಿಂದ ಕೌಲಲಂಪುರ ಏರ್​ ಕಂಟ್ರೋಲ್ ರೂಮ್​ಗೆ ಮಾಹಿತಿ ರವಾನಿಸಲಾಗುತ್ತೆ. ಆದ್ರೆ ವಿಮಾನ ಹೇಗೆ, ಎಲ್ಲಿ. ಯಾಕೆ ನಾಪತ್ತೆಯಾಯ್ತು ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಅದೇನೇ ಸರ್ಕಸ್ ಮಾಡಿದ್ರೂ ಫ್ಲೈಟ್ ಜೊತೆಗೆ ಸಂಪರ್ಕ ಸಾಧ್ಯವಾಗೋದಿಲ್ಲ. ಏನೋ ಟೆಕ್ನಿಕಲ್ ಪ್ರಾಬ್ಲಂನಿಂದಾಗಿ ವಿಮಾನದ ಜೊತೆಗೆ ಸಂಪರ್ಕ ಸಾಧ್ಯವಾಗ್ತಿಲ್ಲ ಅಂತಾ ಎಲ್ಲರೂ ಅಂದುಕೊಳ್ತಾರೆ. ಏರ್​​ಕಂಟ್ರೋಲ್ ಸಿಬ್ಬಂದಿ ತಲೆಕೆಡಿಸಿಕೊಳ್ತಾ ಇರ್ಬೇಕಾದ್ರೆನೇ ಸೂರ್ಯೋದಯವಾಗಿಬಿಡುತ್ತೆ. ಬೆಳಗ್ಗೆ 6 ಗಂಟೆಗೆ ಚೀನಾದ ಬೀಜಿಂಗ್​​ ನಲ್ಲಿ ಲ್ಯಾಂಡ್ ಆಗಬೇಕಿದ್ದ MH-370 ಅಲ್ಲಿಗೆ ತಲುಪಲೇ ಇಲ್ಲ. ಕೂಡಲೇ ವಿಮಾನದ ಪತ್ತೆಗಾಗಿ ಸರ್ಚ್ ಆಪರೇಷನ್ ಶುರುವಾಗುತ್ತೆ. ಕೊನೆಯ ಬಾರಿಗೆ ವಿಮಾನದ ಜೊತೆಗಿನ ಸಂಪರ್ಕ ಕಡಿತಗೊಂಡ ಜಾಗದಿಂದ ನೂರಾರು ಕಿಲೋ ಮೀಟರ್ ಸುತ್ತಳತೆಯಲ್ಲಿ ವಿಮಾನಕ್ಕಾಗಿ ಹುಡುಕಾಟ ನಡೆಸಲಾಗುತ್ತೆ. ಒಟ್ಟು ಏಳು ದೇಶಗಳ ನೌಕಾಪಡೆ ಹಡಗುಗಳು, ಹೆಲಿಕಾಪ್ಟರ್​​ಗಳನ್ನ ಸರ್ಚ್​ ಆಪರೇಷನ್​ಗೆ ಬಳಸಲಾಗುತ್ತೆ. ಮೂರು ದಿನಗಳ ಕಾಲ ನಾನ್​ಸ್ಟಾಪ್ ಹುಡುಕಾಟ ನಡೆಯುತ್ತೆ. ಆದ್ರೆ ವಿಮಾನದ ಸಣ್ಣ ಸುಳಿವು ಕೂಡ ಸಿಗೋದಿಲ್ಲ. MH-370 ನಾಪತ್ತೆಯಾದ ನಾಲ್ಕು ದಿನಗಳ ಬಳಿಕ ಅಂದ್ರೆ 2014ರ ಮಾರ್ಚ್ 12ರಂದು ವಿಮಾನದ ಕುರಿತ ಒಂದಷ್ಟು ಸೀಕ್ರೆಟ್ ಮಾಹಿತಿಗಳು ಹೊರಬೀಳುತ್ತೆ. ಅದು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತೆ. MH-370 ಸಿವಿಲಿಯನ್ ಏರ್​ಕಂಟ್ರೋಲ್​​ನ ರೆಡಾರ್​ ಸಂಪರ್ಕದಿಂದ ಕಟ್ ಆಗಿತ್ತು ಅನ್ನೋದೇನೋ ನಿಜ. ಆದ್ರೆ ಮಿಲಿಟರಿಗೆ ಸಂಬಂಧಿಸಿದ ಒಂದು ರೆಡಾರ್ ಈ ವಿಮಾನವನ್ನ ಟ್ರ್ಯಾಕ್ ಮಾಡ್ತಾನೆ ಇತ್ತು. ಮಿಲಿಟರಿ ರೇಡಾರ್​​ನಿಂದ ಸಂಗ್ರವಾದ ಡೇಟಾದ ಪ್ರಕಾರ, MH-370 ವಿಯೆಟ್ನಾಂ ವೈಮಾನಿಕ ಪ್ರದೇಶವನ್ನ ಎಂಟ್ರಿಯಾಗುತ್ತಲೇ ಸಿವಿಲಿಯನ್ ರೇಡಾರ್​​ ಸಂಪರ್ಕದಿಂದ ಕಡಿತಗೊಂಡುಬಿಡುತ್ತೆ. ಅಷ್ಟಾಗುತ್ತಲೇ ವಿಮಾನ ತನ್ನ ರೂಟ್​ನ್ನ ಬದಲಾಯಿಸುತ್ತೆ. ನೇರವಾಗಿ ಹೋಗ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿಕೊಳ್ಳುತ್ತೆ. ನಂತರ ಕೂಡಲೇ ಯೂಟರ್ನ್ ತಗೊಂಡು ವಾಪಸ್ ಮಲೇಷ್ಯಾ ಕಡೆಗೆ ಸಂಚರಿಸುತ್ತೆ. ಕೆಲ ಹೊತ್ತಿನ ಬಳಿಕ ಮಲೇಷ್ಯಾದ ಪೆನಾಂಗ್ ನಗರವನ್ನ ಪಾಸ್ ಆಗಿ ಮಲಾಕಾ ಸ್ಟ್ರೈಟ್ ಅನ್ನೋ ಜಾಗದ ಕಡೆಗೆ ತಿರುಗಿಕೊಳ್ಳುತ್ತೆ. ನಂತರ ನಮ್ಮ ಅಂಡಮಾನ್-ನಿಕೋಬಾರ್ ದ್ವೀಪಗಳ ಕಡೆಗೆ ಸಂಚರಿಸುತ್ತೆ. ರಾತ್ರಿ 2.22ರ ಸುಮಾರಿಗೆ ಮಿಲಿಟರಿ ರೆಡಾರ್ MH-370 ವಿಮಾನವನ್ನ ಟ್ರ್ಯಾಕ್ ಮಾಡುತ್ತೆ. ಇದಾಗಿ ಕೆಲ ಹೊತ್ತಿನಲ್ಲಿ ಮಿಲಿಟರಿ ರೆಡಾರ್​​ನ ಸಂಪರ್ಕಕ್ಕೂ ವಿಮಾನ ಸಿಗೋದಿಲ್ಲ.

ಇನ್ನು ಆರಂಭದ ಮೂರು ದಿನಗಳ ಕಾಲ ವಿಮಾನವನ್ನ ಹುಡುಕಾಡಿದ ಸಮುದ್ರ ಪ್ರದೇಶದಲ್ಲಿ MH-370ಯ ಸಣ್ಣ ಕುರುಹು ಕೂಡ ಸಿಗೋದಿಲ್ಲ. ಆದ್ರೆ ಸಡನ್ ಆಗಿ ಯೂಟರ್ನ್ ಹೊಡೆದು ಹೋದ ವಿಮಾನ ಹೋಗಿದ್ದಾದ್ರೂ ಎಲ್ಲಿಗೆ? ಅಷ್ಟಕ್ಕೂ ಯೂಟರ್ನ್ ಹೊಡೆದಿದ್ಯಾಕೆ? ಹಿಂದೂ ಮಹಾಸಾಗರದ ಮೇಲೆ ಹಾರಾಟ ನಡೆಸಿದ್ಯಾಕೆ? ಮಿಲಿಟರಿ ರೇಡಾರ್​​ ಸಂಪರ್ಕದಿಂದಲೂ ಔಟ್ ಆದ್ಮೇಲೆ ಫ್ಲೈ ಎಲ್ಲೋಯ್ತು? ಈ ಎಲ್ಲಾ ಪ್ರಶ್ನೆಗಳೂ ಏಳುತ್ತೆ. ಉತ್ತರ ಹುಡುಕೋಕೆ ಅಂತಾ ಹಿಂದೂ ಮಹಾಸಾಗರದಲ್ಲಿ ಮೆಗಾ ಸರ್ಚ್ ಆಪರೇಷನ್ ನಡೆಸೋಕೆ ನಿರ್ಧರಿಸಲಾಗುತ್ತೆ. ಹಲವು ದಿನಗಳ ಕಾಲ ಹುಡುಕಾಟ ನಡೆಸಿದ್ರೂ ಈ ಏರಿಯಾದಲ್ಲಿ ವಿಮಾನದ ಅವಶೇಷ ಸಿಗೋದಿಲ್ಲ. ಇದಾಗಿ ಕೆಲ ದಿನಗಳಲ್ಲಿ ಇಡೀ ಕೇಸ್​ಗೆ ಹೊಸ ಟ್ವಿಸ್ಟ್ ಸಿಗುತ್ತೆ.

MH-370 ಹಾರಾಟ ಸಂದರ್ಭದಲ್ಲಿ ಈ ವಿಮಾನ ಒಂದು ಸ್ಯಾಟ್​ಲೈಟ್ ಜೊತೆಗೆ ಸಂಪರ್ಕ ಸಾಧಿಸೋಕೆ ಮೇಲಿಂದ ಮೇಲೆ ಪ್ರಯತ್ನ ಪಡ್ತಾನೆ ಇರುತ್ತೆ. ಬೋಯಿಂಗ್​ 777 ವಿಮಾನವಾಗಿದ್ರಿಂದ ಸ್ಯಾಟ್​ ಲೈಟ್ ಜೊತೆಗೆ ಆಟೋಮ್ಯಾಟಿಕ್ ಕಮ್ಯುನಿಕೇಷನ್ ಮಾಡೋ ಟೆಕ್ನಾಲಜಿ ಈ ವಿಮಾನದಲ್ಲಿತ್ತು. ಪ್ರತಿ ಒಂದು ಗಂಟೆಗೊಮ್ಮೆ ಸ್ಯಾಟ್​ಲೈಟ್​ ಜೊತೆಗೆ ಸಂಪರ್ಕ ಸಾಧಿಸೋಕೆ ವಿಮಾನ ಯತ್ನಿಸಿದೆ. ಈ ಸ್ಯಾಟ್​​ಲೈಟ್ ಡೇಟಾವನ್ನ ಕೂಡ ಡಿಕೋಡ್ ಮಾಡಲಾಗಿದೆ. ಅದ್ರಲ್ಲಿ ಗೊತ್ತಾಗಿದ್ದೇನಂದ್ರೆ, ಮಿಲಿಟರಿ ರೇಡಾರ್​​ನಿಂದಲೂ MH-370 ಸಂಪರ್ಕ ಕಟ್ ಆಗುತ್ತಲೇ ವಿಮಾನ ಮತ್ತೊಮ್ಮೆ ಟರ್ನ್ ಹೊಡೆದಿತ್ತು. ನಂತರ ಸುಮಾರು ಐದು ಗಂಟೆಗಳ ಕಾಲ ಹಿಂದೂ ಮಹಾಸಾಗರದ ಮೇಲೆ ಹಾರಾಟ ನಡೆಸಿತ್ತು. ಬೆಳಗ್ಗೆ 8 ಗಂಟೆ 19 ನಿಮಿಷಕ್ಕೆ ಕೊನೆಯ ಬಾರಿಗೆ ಅಂದ್ರೆ 7ನೇ ಬಾರಿಗೆ ಸ್ಯಾಟ್​ಲೈಟ್ ಜೊತೆಗೆ ಸಂಪರ್ಕ ಸಾಧಿಸೋಕೆ ವಿಮಾನ ಯತ್ನಿಸಿತ್ತು. ತನಿಖಾಧಿಕಾರಿಗಳು ಸ್ಯಾಟ್​ಲೈಟ್​ನ ಕಾಂಪ್ಲೆಕ್ಸ್ ಡೇಟಾವನ್ನ ಅನಾಲಿಸಿಸ್ ಮಾಡೋಕೆ ಮಾಡಿದಾಗ ಇನ್ನೊಂದು ವಿಚಾರ ಬೆಳಕಿಗೆ ಬರುತ್ತೆ. ವಿಮಾನದ ವೇಗ ಮತ್ತು ಅದ್ರಲ್ಲಿದ್ದ ಇಂಧನ ಪ್ರಮಾಣವನ್ನ ಕ್ಯಾಲಿಕ್ಯುಲೇಷನ್ ಮಾಡಿದಾಗ, ಆಸ್ಟ್ರೇಲಿಯಾದಿಂದ ಸುಮಾರು 2000 ಕಿಲೋ ಮೀಟರ್ ದೂರದಲ್ಲಿ ಹಿಂದೂ ಮಹಾಸಾಗರದ ಭಾಗದಲ್ಲೇ ವಿಮಾನ ಪತನವಾಗಿರಬಹುದು ಅಂತಾ ಅಂದಾಜು ಮಾಡಲಾಗುತ್ತೆ. ನಂತರ ಶುರುವಾಯ್ತು ನೋಡಿ. ಜಗತ್ತಿನ ಅತೀ ದೊಡ್ಡ ಸರ್ಚ್ ಆಪರೇಷನ್. 160 ಮಿಲಿಯನ್ ಡಾಲರ್ ಖರ್ಚು ಮಾಡಿ ಸುಮಾರು ಮೂರು ವರ್ಷಗಳ ಕಾಲ ಹೈಕ್ಲಾಸ್ ಟೆಕ್ನಾಜಿಗಳನ್ನ ಬಳಸಿ ಸಮುದ್ರದಾಳದವರೆಗೂ ತಲಾಶ್ ನಡೆಸಿದ್ರೂ MH-370 ಸಣ್ಣ ತುಂಡು ಕೂಡ ಸಿಗೋದಿಲ್ಲ. ಹೀಗಾಗಿ ಸರ್ಚ್ ಆಪರೇಷನ್​ ಬಂದ್ ಮಾಡಲಾಗುತ್ತೆ. ಆದ್ರೆ ಮೆಡಗಾಸ್ಕರ್ ಅನ್ನೋ ದ್ವೀಪದಲ್ಲಿ MH-370 ವಿಮಾನದ್ದು ಎನ್ನಲಾದ ಒಂದು ಅವಶೇಷ ಪತ್ತೆಯಾಗುತ್ತೆ. ಅದು ವಿಮಾನದ ರೆಕ್ಕೆ ಭಾಗದ ಅವಶೇಷವಾಗಿತ್ತು. ಸಮುದ್ರದ ಅಲೆಯಿಂದಾಗಿ ಅವಶೇಷ ಐಲ್ಯಾಂಡ್​ನಲ್ಲಿ ಬಂದು ಬಿದ್ದಿತ್ತು. ಅದನ್ನ ಸಂಶೋಧನಗೆ ಒಳಪಡಿಸುತ್ತಲೇ ಇನ್ನೊಂದು ಆತಂಕಕಾರಿ ಸಂಗತಿ ಬಯಲಾಗುತ್ತೆ. MH-370 ವಿಮಾನವನ್ನ ಉದ್ದೇಶಪೂರ್ವಕವಾಗಿಯೇ ಸಮುದ್ರಕ್ಕೆ ಪತನ ಮಾಡಲಾಗಿದೆ ಅನ್ನೋದು. ಯಾಕಂದ್ರೆ ವಿಮಾನದ ತುದಿ ಭಾಗ ನೇರವಾಗಿಯೇ ನೀರಿಗೆ ಅಪ್ಪಳಿಸಿತ್ತು.

ಅಷ್ಟಕ್ಕೂ 239 ಮಂದಿಯಿದ್ದ ವಿಮಾನವನ್ನ ಉದ್ದೇಶಪೂರ್ವಕವಾಗಿಯೇ ಸಮುದ್ರಕ್ಕೆ ಅಪ್ಪಳಿಸಿರೋದ್ಯಾಕೆ ಅನ್ನೋ ಬಗ್ಗೆ ಸಪರೇಟ್ ಇನ್​ವೆಸ್ಟಿಗೇಶನ್ ನಡೆಯುತ್ತೆ. ಆಗಲೇ ಹೇಳಿದ ಹಾಗೆ ಮಲೇಷ್ಯಾವನ್ನ ದಾಟಿ ಪೆನಾಂಗ್ ಎಂಬಲ್ಲಿ ವಿಮಾನ ಶಾರ್ಪ್​​ ಟರ್ನ್ ಪಡೆದಿತ್ತು. ಮೋಸ್ಟ್ಲಿ ವಿಮಾನವನ್ನ ಯಾರಾದ್ರೂ ಹೈಜಾಕ್ ಮಾಡಿ ವಿಮಾನವನ್ನ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಪೈಲಟ್​ಗಳ ಮೂಲಕ ವಿಮಾನದ ರೂಟ್ ಚೇಂಜ್ ಮಾಡಿರಬಹುದು ಅನ್ನೋ ಅನುಮಾನ ಬರುತ್ತೆ. ಹೀಗಾಗಿ ವಿಮಾನದಲ್ಲಿ ಪ್ಯಾಸೆಂಜರ್​ಗಳ ಬ್ಯಾಕ್​ಗ್ರೌಂಡ್ ಕೂಡ ಚೆಕ್ ಮಾಡಲಾಗುತ್ತೆ. ಈ ವೇಳೆ ಇಬ್ಬರು ಫೇಕ್ ಪಾಸ್​ಪೋರ್ಟ್​ ಬಳಸಿ ವಿಮಾನದಲ್ಲಿ ಪ್ರಯಾಣಿಸ್ತಿದ್ರು ಅನ್ನೋದು ಗೊತ್ತಾಗುತ್ತೆ. ಇಬ್ಬರ ಬಗ್ಗೆ ಇನ್ನಷ್ಟು ತನಿಖೆ ನಡೆಸಿದಾಗ ಅವರಿಗೆ ಯಾವುದೇ ಸಂಘಟನೆಗಳ ಜೊತೆಗೆ ಲಿಂಕ್ ಇಲ್ಲ. ಅವರು ಫೇಕ್​ ಪಾಸ್​ಪೋರ್ಟ್ ಬಳಸಿ ಯುರೋಪ್​ಗೆ ಹೋಗಿ ಸೆಟ್ಲ್ ಆಗೋಕೆ ಮುಂದಾಗಿದ್ರು ಅನ್ನೋದು ಸ್ಪಷ್ಟವಾಗುತ್ತೆ. ಹೀಗಾಗಿ ಹೈಜಾಕಿಂಗ್ ಥಿಯರಿಯನ್ನ ರಿಜೆಕ್ಟ್ ಮಾಡಲಾಗುತ್ತೆ.

ಇಷ್ಟಾದ್ಮೇಲೆ ವಿಮಾನದ ಇಬ್ಬರು ಪೈಲೆಟ್​ಗಳ ಬಗ್ಗೆ ಇನ್​ವೆಸ್ಟಿಗೇಶನ್ ಶುರುವಾಗುತ್ತೆ. ಮೇನ್ ಪೈಲೆಟ್ ಆಗಿದ್ದ ಕ್ಯಾಪ್ಟನ್ ಜಹರಿ ಅಹ್ಮದ್​ನ ಮನೆಯಲ್ಲಿ ಒಂದು ವಿಮಾನದ ಸಿಮ್ಯುಲೇಟರ್ ಪತ್ತೆಯಾಗುತ್ತೆ. ಸಿಮ್ಯುಲೇಟರ್ ಅಂದ್ರೆ ವಿಮಾನವನ್ನ ಚಲಾಯಿಸಿದ ಅನುಭವವನ್ನ ಅದ್ರಲ್ಲಿ ಪಡೀಬಹುದು. ವಿಮಾನ ಚಲಾವಣೆಯ ಪ್ರಾಕ್ಟೀಸ್ ಮಾಡಬಹುದು. ಆದ್ರೆ ಆ ಪೈಲಟ್​​ನ ಮನೆಯಲ್ಲಿ ಸಿಮ್ಯುಲೇಟರ್ ಇತ್ತು ಅನ್ನೋದು ದೊಡ್ಡ ಸಂಗತಿಯೇನಲ್ಲ.

ಆದ್ರೆ ಆ ಸಿಮ್ಯುಲೇಟರ್​​ನಲ್ಲಿ ವಿಮಾನದ ಹಾದಿಯನ್ನ ಡ್ರಾ ಮಾಡಲಾಗಿತ್ತು. ಅದು MH-370 ಸಾಗಿದ ರೂಟ್​​ನ್ನೇ ತೋರಿಸ್ತಾ ಇತ್ತು. ಆ ರೂಟ್​ನಲ್ಲೇ, ಅಂದ್ರೆ ವಿಮಾನ ಪತನವಾಗಿರಬಹುದು ಎನ್ನಲಾದ ಹಿಂದೂ ಮಹಾಸಾಗರದ ಪ್ರದೇಶದ ದಾರಿಯಲ್ಲೇ ಫ್ಲೈಟ್​ ಆಪರೇಟ್ ಮಾಡೋದನ್ನ ಪೈಲೆಟ್ ಜಹರಿ ಅಹ್ಮದ್ ಸಿಮ್ಯುಲೇಟರ್ ಮೂಲಕ ಪ್ರಾಕ್ಟೀಸ್ ಮಾಡಿದ್ದ.

ಕೌಲಲಂಪುರದಿಂದ ವಿಮಾನ ಟೇಕಾಫ್ ಆಗಿ 42 ನಿಮಿಷಗಳ ಬಳಿಕ ವಿಯೆಟ್ನಾಂ ಏರ್​ಸ್ಪೇಸ್​ನ್ನ ಎಂಟ್ರಿಯಾದಾಗ ವಿಮಾನದ ಕಂಟ್ರೋಲ್​ನ್ನ ವಿಯೆಟ್ನಾಂ ಏರ್​ಕಂಟ್ರೋಲ್ ರೂಮ್ ಪಡೆಯಬೇಕಿತ್ತು. ಆದ್ರೆ, ವಿಯೆಟ್ನಾಂ ಏರ್​ಕಂಟ್ರೋಲ್ ರೂಮ್ ಸಂಪರ್ಕಕ್ಕೆ MH-370 ಸಿಗಲೇ ಇಲ್ಲ. ಯಾಕಂದ್ರೆ ವಿಮಾನದ ಟ್ರಾನ್ಸ್​ಫೌಂಡರ್​ನ್ನ ಪೈಲಟ್ ಬಂದ್ ಮಾಡಿರೋ ಸಾಧ್ಯತೆ ಇದೆ. ಟ್ರಾನ್ಸ್​ಫೌಂಡರ್ ಬಂದ್ ಮಾಡಿದ್ರೆ ಯಾವುದೇ ಏರ್​ಕಂಟ್ರೋಲ್ ರೂಮ್ ಜೊತೆಗೆ ಸಂಪರ್ಕ ಸಾಧಿಸೋಕೆ ಆಗೋದಿಲ್ಲ. ಆದ್ರೆ ಟ್ರಾನ್ಸ್​ಫೌಂಡರ್ ಬಂದ್ ಆದ್ರೂ ಈ ಅತ್ಯಾಧಿನಿಕ ವಿಮಾನದ ಜೊತೆಗೆ ಸಂಪರ್ಕ ಸಾಧಿಸೋಕೆ ಇನ್ನೂ ಮೂರು-ನಾಲ್ಕು ಆಪ್ಷನ್​ಗಳಿದ್ದವು. ಈ ಎಲ್ಲಾ ಕಮ್ಯುನಿಕೇಷನ್ ಡಿವೈಸ್​ಗಳು ಏಕಕಾಲಕ್ಕೆ ಹಾಳಾಗೋಕೆ ಸಾಧ್ಯವೇ ಇಲ್ಲ. ವೈಮಾನಿಕ ಇತಿಹಾಸದಲ್ಲೇ ಯಾವತ್ತೂ ಹೀಗೆ ಆಗಿಲ್ಲ. ಅಂದ್ರೆ ಉದ್ದೇಶಪೂರ್ವಕವಾಗಿಯೇ ಏರ್​​ಕಂಟ್ರೋಲ್​ ರೂಮ್ ಜೊತೆಗಿನ ಎಲ್ಲಾ ಕಮ್ಯುನಿಕೇಷನ್ ಸಿಸ್ಟಮ್​ಗಳನ್ನೂ ಆಫ್ ಮಾಡಲಾಗಿದೆ ಅನ್ನೋದು ಇಲ್ಲಿ ಸ್ಪಷ್ಟವಾಗುತ್ತೆ. ವಿಮಾನದ ಲೊಕೇಷನ್​ನ್ನ ಲೈವ್ ಆಗಿ ಯಾರೂ ಟ್ರ್ಯಾಕ್ ಮಾಡೋದು ಬೇಡ ಅನ್ನೋ ಕಾರಣಕ್ಕಾಗಿಯೇ ಪೈಲೆಟ್ ಎಲ್ಲಾ ಸಿಸ್ಟಮ್​​ನ್ನೂ ಬಂದ್ ಮಾಡಿದ್ದ. ಏರ್​ಕಂಟ್ರೋಲ್​​ ರೂಮ್​ನ ಯಾವುದೇ ನೆರವಿಲ್ಲದ ತಾನು ಉದ್ದೇಶಿಸಿದ್ದ ಜಾಗದ ಕಡೆಗೇ ಪೈಲೆಟ್ ವಿಮಾನ ಚಲಾಯಿಸಿದ್ದಾನೆ ಅಂದ್ರೆ ಅದು ಅತ್ಯಂತ ಎಕ್ಸ್​​ಪೀರಿಯನ್ಸ್​ ಮತ್ತು ಎಕ್ಸ್​ಪರ್ಟ್ ಪೈಲಟ್​​ಗಷ್ಟೇ ಸಾಧ್ಯ.

ಆದ್ರೆ ಮೇನ್ ಪೈಲೆಟ್ ಇಷ್ಟೆಲ್ಲಾ ಕಾರುಬಾರು ಮಾಡ್ತಿದ್ರೆ MH-370ಯಲ್ಲಿದ್ದ ಇನ್ನೊಬ್ಬ ಪೈಲಟ್ ಏನ್ಮಾಡ್ತಿದ್ದ ಅನ್ನೋ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಆ್ಯಕ್ಚುವಲಿ ವಿಮಾನ ಟೇಕಾಫ್ ಆಗೋವಾಗ ಹೈ ಆಲ್ಟಿಟ್ಯೂಡ್​​ವರೆಗೆ ವಿಮಾನ ತಲುಪೋ ತನಕ ಇಬ್ಬರೂ ಪೈಲೆಟ್​ಗಳು ಬ್ಯುಸಿ ಇರ್ತಾರೆ. ನಂತರ ವಿಮಾನ ಕ್ರೂಸ್​​ ಮೋಡ್​ಗೆ ಹೋಗುತ್ತೆ. ಆಗ ಪೈಲಟ್​ಗಳಿಗೆ ಒಂದಷ್ಟು ಗ್ಯಾಪ್ ಸಿಗುತ್ತೆ. ಆ ಸಂದರ್ಭದಲ್ಲಿ ಕೋ ಪೈಲಟ್​​ ಕಾಕ್​​ಪಿಟ್​ನಿಂದ ಹೊರಕ್ಕೆ ಹೋಗಿರಬಹುದು. ಆಗ ಕ್ಯಾಪ್ಟನ್ ಕಾಕ್​ಪಿಟ್ ಡೋರ್​​ನ್ನ ಬಂದ್ ಮಾಡಿರಬಹುದು. ಕಾಕ್​​ಪಿಟ್​ ಡೋರ್​​ನ್ನ ಒಳಗಿನಿಂದ ಮಾತ್ರ ಓಪನ್​ ಮಡುವಷ್ಟು ಸೆಕ್ಯೂರ್ ಆಗಿರುತ್ತೆ. ಪ್ಯಾಸೆಂಜರ್ ಕುಳಿತಿರೋ ವಿಮಅನದ ಏರಿಯಾದ ಆಕ್ಸಿಜನ್​ ಕೂಡ ಕಡಿಮೆ ಮಾಡಿರಬಹುದು. ನಂತರ ಮೇನ್ ಪೈಲಟ್ ವಿಮಾನವನ್ನ ಸಮುದ್ರಕ್ಕೆ ಅಪ್ಪಳಿಸಿರಬಹುದು ಅಂತಾ ಈಗ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಪೈಲಟ್ ಜಹಾರಿ ಅಹ್ಮದ್ ಶಾನೇ ಈ ಕೃತ್ಯವೆಸಗಿದ್ದಾನೆ ಅಂತಾ ಆರೋಪಿಸಲಾಗಿದೆ. ಇವಿಷ್ಟು MH-370 ವಿಮಾನ ಪತನದ ಸೀಕ್ರೆಟ್ ಕುರಿತ ಮಾಹಿತಿ.

 

Sulekha