ಉಡುಪಿ ಪ್ರಕರಣದ ತನಿಖೆಯನ್ನು ಎಸ್ಐಟಿ ಗೆ ವಹಿಸದಿರಲು ಕಾರಣವೇನು? – ಸಿಎಂಗೆ ಬಿಜೆಪಿಯಿಂದ ಪ್ರಶ್ನೆಗಳ ಸುರಿಮಳೆ!

ಉಡುಪಿ ಪ್ರಕರಣದ ತನಿಖೆಯನ್ನು ಎಸ್ಐಟಿ ಗೆ ವಹಿಸದಿರಲು ಕಾರಣವೇನು? – ಸಿಎಂಗೆ ಬಿಜೆಪಿಯಿಂದ ಪ್ರಶ್ನೆಗಳ ಸುರಿಮಳೆ!

ಬೆಂಗಳೂರು: ಉಡುಪಿ ಕಾಲೇಜೊಂದರಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣ ಈಗ ರಾಜಕೀಯ ತಿರುವು ಪಡೆದಿದೆ. ಮೂವರು ವಿದ್ಯಾರ್ಥಿನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಉನ್ನತ ಮಟ್ಟದ ತನಿಖೆ ನಡೆಸಬೇಕು ಅಂತಾ ಬಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಉಡುಪಿ ಕಾಲೇಜು  ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಪ್ರಶ್ನೆ ಉದ್ಬವವಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಕಿಡಿಕಾರಿದೆ. ಉಡುಪಿಯ ಕಾಲೇಜಿನ ಪ್ರಕರಣದ ಸಾಕ್ಷಿಯನ್ನು ನಾಶಗೊಳಿಸಲು ಪೊಲೀಸರ ಮೇಲೆ ಒತ್ತಡ ತಂದದ್ದು ಸರಿಯೇ..? ಎಂದು ಪ್ರಶ್ನಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಪೊಡವಿಗೊಡೆಯ ಶ್ರೀ ಕೃಷ್ಣನ ಸನ್ನಿಧಾನ-ಉಡುಪಿಗೆ ಭೇಟಿ ನೀಡುವ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ..? ಎಂದು ಹಲವು ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದೆ.

ಇದನ್ನೂ ಓದಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಎಸ್‌ಐಟಿ ಸಮಿತಿ ರಚನೆ ಬೇಡಿಕೆ ತಳ್ಳಿ ಹಾಕಿದ ಸಿಎಂ

ಉಡುಪಿ ಕಾಲೇಜಿನ ಘಟನೆಯನ್ನು ಸಿದ್ದರಾಮಯ್ಯ ಸರ್ಕಾರ ತಿರುಚಲು ಪ್ರಯತ್ನಿಸಿದ್ದು ಏಕೆ..? ಉಡುಪಿಯ ಕಾಲೇಜಿನ ಪ್ರಕರಣದ ಸಾಕ್ಷಿಯನ್ನು ನಾಶಗೊಳಿಸಲು ಪೊಲೀಸರ ಮೇಲೆ ಒತ್ತಡ ತಂದದ್ದು ಸರಿಯೇ..? ರಾತ್ರೋರಾತ್ರಿ ಸಾಮಾಜಿಕ ಕಾರ್ಯಕರ್ತೆಯ ಮನೆಗೆ ಪೊಲೀಸರನ್ನು ನುಗ್ಗಿಸಿದ್ದು ಏಕೆ..? ಉಡುಪಿ ಘಟನೆಯ ತಪ್ಪಿತಸ್ಥರು ಹಾಗೂ ಅವರ ಪ್ರೇರಕ ಶಕ್ತಿಗಳ ಗಡಿಪಾರು ಯಾವಾಗ..?  ಎಂದು ಪ್ರಶ್ನಿಸಿದೆ.

ಉಡುಪಿ ಪ್ರಕರಣದ ತನಿಖೆಯನ್ನು ಎಸ್.ಐ.ಟಿ ಗೆ ವಹಿಸದಿರಲು ಪ್ರಮುಖ ಕಾರಣವೇನು..? ಖುದ್ದು ಸಂಪೂರ್ಣ ಸರ್ಕಾರವೇ ಭಾಗಿಯಾಗಿ ಈ ಪ್ರಕರಣದ ದಿಕ್ಕನ್ನು ತಪ್ಪಿಸುತ್ತಿರುವುದು ಯಾರನ್ನು ರಕ್ಷಿಸುವುದಕ್ಕಾಗಿ..? ಜಿಹಾದಿ ಮತ್ತು ನಿಷೇಧಿತ ಸಂಘಟನೆಗಳನ್ನು ಪೋಷಿಸುತ್ತಿರುವುದು ಅವರ ಮೇಲಿನ ಭಯದ ಕಾರಣಕ್ಕೋ ಅಥವಾ ಅವರ ಮೇಲಿನ ವಾತ್ಸಲ್ಯಕ್ಕೋ..? ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

suddiyaana