ಸಮುದ್ರದೊಳಗಿರುವ ದ್ವಾರಕಾ ನಗರದ ಇತಿಹಾಸವೇನು?- ದ್ವಾರಕಾ ನಗರಿ ಅನ್ನೋದು ಕಟ್ಟು ಕಥೆನಾ? ನಿಜಾನಾ?

ಸಮುದ್ರದೊಳಗಿರುವ ದ್ವಾರಕಾ ನಗರದ ಇತಿಹಾಸವೇನು?- ದ್ವಾರಕಾ ನಗರಿ ಅನ್ನೋದು ಕಟ್ಟು ಕಥೆನಾ? ನಿಜಾನಾ?

ಫೆಬ್ರವರಿ 25ರಂದು ಪ್ರಧಾನಿ ಮೋದಿ ಗುಜರಾತ್​​ನ ಅರಬ್ಬಿ ಸಮುದ್ರ ಭಾಗದಲ್ಲಿ ಸ್ಕೂಬಾ ಡೈವ್ ಮಾಡಿ ಐತಿಹಾಸಿಕ ದ್ವಾರಕಾ ನಗರಿಯ ದರ್ಶನ ಮಾಡಿದ್ದರು. ದ್ವಾರಕಾ ನಗರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಕೂಡ ಸಲ್ಲಿಸಿದ್ದರು. ಅಲ್ಲೇ ಧ್ಯಾನವನ್ನೂ ಮಾಡಿದ್ದರು. ಪ್ರಧಾನಿ ಮೋದಿಯ ಈ ದ್ವಾರಕಾ ಯಾತ್ರೆಯಿಂದ ಈ ಜಾಗದ ಬಗ್ಗೆ ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿದೆ. ಅಷ್ಟಕ್ಕೂ ಸಮುದ್ರದೊಳಗಿರುವ ಈ ದ್ವಾರಕಾ ನಗರದ ಇತಿಹಾಸವೇನು? ಅಲ್ಲಿ ನಗರವನ್ನೇ ನಿರ್ಮಾಣ ಮಾಡಿದವರು ಯಾರು? ಸಮುದ್ರದೊಳಗಿರುವ ಈ ದ್ವಾರಕಾ ನಗರ ಪತ್ತೆಯಾಗಿದ್ದಾದ್ರೂ ಹೇಗೆ? ಅದು ನೀರಲ್ಲಿ ಮುಳುಗೋಕೆ ಕಾರಣವೇನು? ಸಂಶೋಧನೆಯಿಂದ ಬಯಲಾದ ಸಂಗತಿಗಳೇನೆಲ್ಲಾ? ದ್ವಾರಕಾ ನಗರಿ ಅನ್ನೋದು ಕಟ್ಟು ಕಥೆನಾ? ನಿಜಾನಾ? ಇವೆಲ್ಲದರ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ VS ಸ್ಮೃತಿ ಇರಾನಿ – ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿಯನ್ನ ಮಣಿಸೋಕೆ ಸಾಧ್ಯಾನಾ?

1983ರಲ್ಲಿ ಪುರಾತತ್ವಶಾಸ್ತ್ರಜ್ಞರ ಒಂದು ತಂಡ ಗುಜರಾತ್​ನ ಢಬಾರಿ ಅನ್ನೋ ಗ್ರಾಮದ ಬಳಿಯಿರೋ ಸಮುದ್ರ ಭಾಗವನ್ನ ಎಕ್ಸ್​​ಪ್ಲೋರ್ ಮಾಡ್ತಿದ್ರು. ಅಂದ್ರೆ ಸಮುದ್ರದಾಳಕ್ಕೆ ಜಿಗಿದು ಸಂಶೋಧನೆಯಲ್ಲಿ ತೊಡಗಿದ್ರು. ಸಮುದ್ರದ ಸುಮಾರು 130 ಅಡಿ ಆಳಕ್ಕೆ ಇಳಿಯುತ್ತಲೇ ತಮ್ಮ ಕಣ್ಣಿಗೆ ಕಂಡಿದ್ದನ್ನ ನೋಡಿ ಸಂಶೋಧಕರೆಲ್ಲರೂ ಶಾಕ್​​ಗೊಳಗಾಗ್ತಾರೆ. ಅದನ್ನ ನೋಡಿ ಸಮುದ್ರದಾಳದಿಂದ ಮೇಲೆಕ್ಕೆ ಬಂದ ಪುರಾತತ್ವಶಾಸ್ತ್ರಜ್ಞರ ತಂಡ ತಾವು ಕಂಡ ಸಂಗತಿಯನ್ನ ತಮ್ಮ ತಂಡದ ನಾಯಕನಿಗೆ ಮಾಹಿತಿ ನೀಡ್ತಾರೆ. ಅದನ್ನ ಕೇಳಿದ ಪುರಾತತ್ವಶಾಸ್ತ್ರಜ್ಞರ ಟೀಮ್ ಕ್ಯಾಪ್ಟನ್ ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಸಂಶೋಧಕರು ಸಮುದ್ರದೊಳಗೊಂದು ದೊಡ್ಡ ನಗರವನ್ನೇ ಕಂಡಿದ್ರು. ಇದು 1983ರಲ್ಲಿ ನಡೆದ ಸಂಶೋಧನೆಯಾಗಿತ್ತು. ಆದ್ರೆ ಅದಕ್ಕೂ ಮುನ್ನವೇ ದ್ವಾರಕಾ ನಗರದ ಸಂಶೋಧನೆ ಆರಂಭವಾಗಿತ್ತು. 1930ರಲ್ಲೇ ಗುಜರಾತ್​ನ ಜಾಮ್ನಗರ್ ಜಿಲ್ಲೆಯಿಂದ 30 ಕಿಲೋ ಮೀಟರ್​ ದೂರದಲ್ಲಿ ಉತ್ಖನನ ನಡೆದಿತ್ತು. 1960ರ ಅವಧಿಯಲ್ಲಿ ಇನ್ನಷ್ಟು ಸಂಶೋಧನೆ ನಡೆದಿತ್ತು. ಅಂತಿಮವಾಗಿ 1983ರಲ್ಲಿ ಸಮುದ್ರದೊಳಗೆ ಐತಿಹಾಸಿಕ ನಗರವೇ ಸಂಶೋಧಕರ ಕಣ್ಣಿಗೆ ಬೀಳುತ್ತೆ. ಅದೇನೂ ಸಾಮಾನ್ಯದ ನಗರ ಆಗಿರಲಿಲ್ಲ. ಅತ್ಯಂತ ಸುಸಜ್ಜಿತ, ಅತ್ಯಾಕರ್ಷಕ, ದೊಡ್ಡ ನಗರವೇ ಆಗಿತ್ತು. ಸೌಂದರ್ಯದ ಖನಿಜವೇ ಅಲ್ಲಿತ್ತು. ಭಾರಿ ಎತ್ತರದ ದ್ವಾರ, ದೊಡ್ಡ ಬಾಗಿಲು, ದೊಡ್ಡ ದೊಡ್ಡ ಗೇಟ್​​ಗಳು ಹಾಗೆಯೇ ಅದರಲ್ಲಿದ್ದ ಕೆತ್ತನೆಗಳು, ಫುಲ್ ಪ್ಲ್ಯಾನ್ ಮಾಡಿ ಕಟ್ಟಿದ ಕಟ್ಟಡಗಳು, ಓಡಾಡೋಕೆ ರಸ್ತೆ ಇವೆಲ್ಲವೂ ಸಮುದ್ರದಾಳದಲ್ಲಿ ಸಂಶೋಧಕರಿಗೆ ಕಂಡಿತ್ತು. ಒಂದೇ ಮಾತಲ್ಲಿ ಹೇಳೋದಾದ್ರೆ ಈಗಿನ ಕಾಲದ ಅತ್ಯಾಧುನಿಕ ನಗರಗಳನ್ನ ಕೂಡ ಮೀರಿಸುವಂತಾ ನಗರಿ ಗುಜರಾತ್​​ನ ಸಮುದ್ರ ಭಾಗದೊಳಗೆ ಹುದುಗಿತ್ತು. ಸಹಜವಾಗಿಯೇ ಸಂಶೋಧಕರನ್ನ ಹಲವು ಪ್ರಶ್ನೆಗಳು ಕಾಡೋಕೆ ಶುರುವಾಗುತ್ತೆ. ಈ ನಗರ ಇಲ್ಲಿ ಹೇಗೆ ಬಂತು? ಸಮುದ್ರದೊಳಗೆ ಇಂಥದ್ದೊಂದು ನಗರ ನಿರ್ಮಿಸಿದ್ಯಾರು? ಇದು ಎಷ್ಟು ಹಳೆಯದ್ದು? ಈ ಎಲ್ಲಾ ಪ್ರಶ್ನೆಗಳು ಸಂಶೋಧಕರ ತಲೆಯಲ್ಲಿ ಗಿರಕಿ ಹೊಡೆಯೋಕೆ ಶುರುವಾಗುತ್ತೆ. ಇದನ್ನ ಪತ್ತೆ ಹಚ್ಚೋದಕ್ಕಾಗಿ ಸಂಶೋಧಕರು ಸಮುದ್ರದೊಳಗಿದ್ದ ನಗರದ ಕಲ್ಲುಗಳ ಸ್ಯಾಂಪಲ್​​​ನ್ನ ಸಂಗ್ರಹಿಸ್ತಾರೆ. ಅವಶೇಷಗಳ ತುಂಡನ್ನ ಕಲೆಕ್ಟ್ ಮಾಡ್ತಾರೆ. ಅವುಗಳನ್ನ ಕಾರ್ಬನ್ ಡೆಂಟಿಕ್ಸ್ ಮಾಡಿ ಪರಿಶೀಲನೆ ನಡೆಸಿದಾಗ ಒಂದು ಅಚ್ಚರಿಯ ವಿಚಾರ ಬೆಳಕಿಗೆ ಬರುತ್ತೆ. ಸಮುದ್ರದ ಕೆಳಗೆ ಪತ್ತೆಯಾದ ನಗರದಲ್ಲಿ ಬಳಸಿದ್ದ ಕಲ್ಲುಗಳು ಮಹಾಭಾರತ ಕಾಲದ್ದು ಅನ್ನೋದು. ಮಹಾಭಾರತ ನಡೆದಾಗಿನ ವರ್ಷದಷ್ಟು ಹಿಂದಿನ ಕಲ್ಲುಗಳು ಅನ್ನೋದು ಸ್ಪಷ್ಟವಾಗುತ್ತೆ. ಅಷ್ಟೇ ಅಲ್ಲ, ಮಹಾಭಾರತದಲ್ಲಿ ಉಲ್ಲೇಖವಾಗಿರುವ ಶ್ರೀಕಷ್ಣನ ನಗರ ಅಂದ್ರೆ ದ್ವಾರಕಾ ನಗರವೇ ಇದು ಅನ್ನೋದು ಖಚಿತವಾಗುತ್ತೆ. ಭಗವಾನ್ ಶ್ರೀಕೃಷ್ಣ ಮಥುರಾವನ್ನ ತೊರೆದು ಗುಜರಾತ್​​ನ ಸಮುದ್ರ ತಟದಲ್ಲಿ ದ್ವಾರಕಾ ಅನ್ನೋ ನಗರವನ್ನ ನಿರ್ಮಾಣ ಮಾಡಿದ್ದ. ಅದೇ ನಗರ ಈ ಸಮುದ್ರದೊಳಗಿರುವ ದ್ವಾರಕಾ.

ಈಗ ನಿಮ್ಮಲ್ಲೊಂದು ಪ್ರಶ್ನೆ ಬಂದಿರಲೂಬಹುದು. ಸಮುದ್ರದೊಳಗೆ ಪತ್ತೆಯಾಗಿರೋದೆ ದ್ವಾರಕಾ ನಗರಿ ಅನ್ನೋದಕ್ಕೆ ಏನು ಪುರಾವೆ ಇದೆ? ಅದು ಬೇರೆ ನಗರವೇ ಆಗಿರಬಹುದಲ್ಲಾ? ಅನ್ನೋದಾಗಿ. ಆಗಲೇ ಹೇಳಿದ ಹಾಗೆ ದ್ವಾರಕಾ ಅನ್ನೋದು ಗುಜರಾತ್​ನ ಜಾಮ್ನಗರ್ ಬಳಿಯಿರೋ ಅರಬ್ಬೀ ಸಮುದ್ರದ ತಟದಲ್ಲಿರೋ ಒಂದು ನಗರ. ಇದನ್ನ ಭಗವಾನ್ ವಿಷ್ಣುವಿನ ನಾಲ್ಕು ಧಾಮಗಳಲ್ಲಿ ಒಂದು ಅಂತಾ ಗುರುತಿಸಲಾಗುತ್ತೆ. ಸಾವಿರಾರು ಮಂದಿ ಭಕ್ತರು ನಿತ್ಯವೂ ಶ್ರೀಕೃಷ್ಣನ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸ್ತಾರೆ. ಸಮುದ್ರ ತಟದಲ್ಲಿರೋದೆ ದ್ವಾರಕಾ ಅನ್ನೋದಾದ್ರೆ ಸಮುದ್ರದೊಳಗಿರೋದು ಏನು ಅನ್ನೋದು ಇಲ್ಲಿರೋ ಇನ್ನೊಂದು ಪ್ರಶ್ನೆ. ಶ್ರೀಮದ್ಭಗವತ್ ಪುರಾಣದ 10ನೇ ಅಧ್ಯಾಯದ ಪ್ರಕಾರ ಕಂಸನನ್ನ ವಧೆ ಮಾಡಿದ ಬಳಿಕ ಭಗವಾನ್ ಶ್ರೀಕೃಷ್ಣ ಯಾದವ ವಂಶದವರ ಜೊತೆಗೆ ಮಥುರಾದಲ್ಲಿ ನೆಲೆಸಿದ್ದ. ಆದ್ರೆ ಕಂಸನ ವಧೆಗೆ ಸೇಡು ತೀರಿಸಿಕೊಳ್ಳೋಕೆ ಅಂತಾ ಜರಾಸಂಧ ಮಥುರಾದ ಮೇಲೆ ಒಟ್ಟು 17 ಬಾರಿ ದಾಳಿ ನಡೆಸಿದ್ದ. ಮೇಲಿಂದ ಮೇಲೆ ನಡೀತಿದ್ದ ದಾಳಿಯಿಂದ ಮಥುರಾದ ಜನರು ರೋಸಿ ಹೋಗಿದ್ದಲ್ಲದೆ, ಶ್ರೀಕೃಷ್ಣ ಕೂಡ ಸಾಕಷ್ಟು ನೋವು ಅನುಭವಿಸ್ತಾನೆ. ಹೀಗಾಗಿ ತನ್ನ ಪ್ರಜೆಗಳನ್ನ ರಕ್ಷಿಸೋದಕ್ಕೋಸ್ಕರ ಶ್ರೀಕೃಷ್ಣ ಮಥುರಾವನ್ನ ಬಿಟ್ಟು ದೂರ ಹೋಗೋಕೆ ನಿರ್ಧರಿಸ್ತಾನೆ. ತನ್ನ ಕುಟುಂಬ ಮತ್ತು ಪ್ರಜೆಗಳ ಸಮೇತ ಅರಬ್ಬೀ ಸಮುದ್ರದ ತಟದ ಬಳಿಗೆ ವಲಸೆ ಹೋಗ್ತಾನೆ. ಹಾಗೆಯೇ ವಿಶ್ವಕರ್ಮನಿಗೆ ಸಮುದ್ರದ ಮೇಲೆಯೇ ಒಂದು ನಗರವನ್ನ ನಿರ್ಮಾಣ ಮಾಡುವಂತೆ ಸೂಚಿಸ್ತಾನೆ. ಆದ್ರೆ ಸಮುದ್ರ ದೇವನ ಅನುಮತಿ ಇಲ್ಲದೆ ಇದು ಸಾಧ್ಯವೇ ಇರುತ್ತಿರಲಿಲ್ಲ. ಹೀಗಾಗಿ ಶ್ರೀಕಷ್ಣ ಸಮುದ್ರದೇವನಿಗೆ ವಿಶೇಷ ಪೂಜೆ ಸಲ್ಲಿಸ್ತಾನೆ. ಇದ್ರಿಂದ ಖುಷಿಯಾದ ಸಮುದ್ರದೇವ ಅರಬ್ಬೀ ಸಮುದ್ರದ ಮಧ್ಯೆ 153.6 ಕಿಲೋ ಮೀಟರ್ ನೆಲಭಾಗವನ್ನ ಶ್ರೀಕೃಷ್ಣನಿಗೆ ಉಡುಗೊರೆಯಾಗಿ ನೀಡ್ತಾನೆ. ಸಮುದ್ರದ ಮಧ್ಯೆ ಸಿಕ್ಕ ಇದೇ ಭೂಮಿಯಲ್ಲಿ ಭಗವಾನ್ ವಿಶ್ವಕರ್ಮನು ವಿಶಾಲವಾದ ದ್ವಾರಕಾ ನಗರವನ್ನೇ ನಿರ್ಮಿಸುತ್ತಾನೆ. ನಗರದ ಮಧ್ಯ ಭಾಗದಲ್ಲಿ ಶ್ರೀಕಷ್ಣನ ಮಹಲ್​​ನ್ನ ಕೂಡ ನಿರ್ಮಾಣ ಮಾಡಲಾಗಿತ್ತು. ಅದು ಅತ್ಯಂತ ಐಷಾರಾಮಿ ಮಹಲ್ ಆಗಿತ್ತು. ಮಥುರಾದಿಂದ ಬಂದಿದ್ದ ಇಡೀ ಯಾದವ ವಂಶ ಮತ್ತು ಪ್ರಜೆಗಳನ್ನ ಇಲ್ಲಿಗೆ ಕರೆತಂದ ಬಳಿಕ, ಅವರು ಅಲ್ಲೇ ನೆಲೆಸಿದ ಬಳಿಕ ಶ್ರೀಕೃಷ್ಣ ಮಾತ್ರ ಮತ್ತೆ ಮಥುರಾಗೆ ಮರಳುತ್ತಾನೆ. ಅಲ್ಲಿ ಪದೇ ಪದೆ ಕಾಟ ಕೊಡ್ತಿದ್ದ ಜರಾಸಂಧನ ವಿರುದ್ಧ ಯುದ್ಧ ಮಾಡಿ, ಆತನನ್ನ ಕೊಲ್ಲುತ್ತಾನೆ. ಅಷ್ಟಕ್ಕೇ ಶ್ರೀಕೃಷ್ಣನಿಗೆ ನೆಮ್ಮದಿ ಸಿಗೋದಿಲ್ಲ. ಒಂದಲ್ಲಾ ಒಂದು ಸಂಕಷ್ಟ, ಸವಾಲುಗಳು ಪದೆ ಪದೆ ಎದುರಾಗುತ್ತಲೇ ಇರುತ್ತೆ. ಕೆಲ ಸಮಯದಲ್ಲೇ ಪಾಂಡವರು ಮತ್ತು ಕೌರವರ ಮಧ್ಯೆ ಕದನ ಶುರುವಾಗುತ್ತೆ. ಆಗ ಶ್ರೀಕೃಷ್ಣ ಅರ್ಜುನನ ಸಾಥಿಯಾಗ್ತಾನೆ. ಸುಮಾರು 18 ದಿನಗಳ ಯುದ್ಧದ ಬಳಿಕ ಪಾಂಡವರು ಗೆಲ್ತಾರೆ. ಇಲ್ಲಿಂದಲೇ ಶುರುವಾಯ್ತು ನೋಡಿ, ದ್ವಾರಕಾ ನಗರಿಯ ಸರ್ವನಾಶ.

ಮಹಾಭಾರತದ ಸ್ತ್ರೀಪರ್ವದ ಪ್ರಕಾರ ಪಾಂಡವರು ಮತ್ತು ಕೌರವರ ನಡುವಿನ ಕದನದಲ್ಲಿ ಮಾತಾ ಗಂಧಾರಿ ತನ್ನ ನೂರು ಮಕ್ಕಳನ್ನ ಕಳೆದುಕೊಳ್ತಾರೆ. ಮಕ್ಕಳ ಶವವನ್ನ ನೋಡಿ ಕಂಗಾಲಾಗ್ತಾಳೆ. ತನ್ನ ಮಕ್ಕಳ ಸಾವಿಗೆ ಶ್ರೀಕೃಷ್ಣನನ್ನೇ ಹೊಣೆಯಾಗಿಸ್ತಾಳೆ. ತನ್ನ ವಂಶದ ವಿನಾಶವಾಗಿರುವಂತೆ 36 ವರ್ಷಗಳ ಬಳಿಕ ನಿನ್ನ ವಂಶ ಕೂಡ ಇದೇ ರೀತಿ ನಾಶವಾಗುತ್ತೆ ಅಂತಾ ಶ್ರೀಕೃಷ್ಣನಿಗೆ ಶಾಪ ಹಾಕ್ತಾಳೆ. ಈ ವಿಚಾರ ಶ್ರೀಕಷ್ಣನಿಗೂ ಮೊದಲೇ ಗೊತ್ತಿರುತ್ತೆ. ಹೀಗಾಗಿಯೇ ಮಾತಾ ಗಂಧಾರಿಯ ಶಾಪವನ್ನ ಆಶೀರ್ವಾದ ಅಂತ ಪರಿಗಣಿಸ್ತಾನೆ. ಇದಿಷ್ಟೇ ಅಲ್ಲ, ಯಾದವ ವಂಶದ ವಿನಾಶದಿಂದಾಗಿ ಶ್ರೀಕೃಷ್ಣನ ಮೇಲೆ ಇನ್ನೊಂದು ಶಾಪ ಕೂಡ ಇರುತ್ತೆ. ದ್ವಾರಕಾದ ಬಳಿಯಿದ್ದ ಪೆಂಡಾರಕ್ ಅನ್ನೋ ಪವಿತ್ರ ಸ್ಥಳಕ್ಕೆ ಹಲವು ಸಾಧು-ಸಂತರು ಆಗಮಿಸಿದ್ರು. ಶ್ರೀಕಷ್ಣನ ಪುತ್ರ ಸಾಂಬನು ಸಾಧು-ಸಂತರನ್ನ ಕಿಚಾಯಿಸೋಕೆ ಮುಂದಾಗ್ತಾನೆ. ಗರ್ಭಿಣಿಯಂತೆ ವೇಶ ಧರಿಸಿ ಸಾಧು-ಸಂತರ ಬಳಿಗೆ ತೆರಳ್ತಾನೆ. ಅಲ್ಲಿ ತನಗೆ ಹುಟ್ಟಲಿರೋ ಮಗುವಿನ ಬಗ್ಗೆ ಋಷಿಮುನಿಗಳ ಬಳಿ ಕೇಳ್ತಾನೆ. ಸಾಂಬನ ಕಳ್ಳಾಟ ನೋಡಿ ಸಿಟ್ಟಾದ ಋಷಿ ಮುನಿಗಳು ಸಿಟ್ಟಲ್ಲಿ ನೀನೊಂದು ಲೋಹದ ಕೊಡಲಿಗೆ ಜನ್ಮ ಕೊಡ್ತೀಯಾ. ಅದು ಯಾದವ ವಂಶದ ವಿನಾಶಕ್ಕೆ ಕಾರಣವಾಗುತ್ತೆ ಅಂತಾ ಶಾಪವನ್ನೇ ಕೊಟ್ಟು ಬಿಡ್ತಾರೆ. ಇದಾಗಿ ಕೆಲ ಹೊತ್ತಲ್ಲೇ ಕೃಷ್ಣನ ಪುತ್ರ ಸಾಂಬನ ಹೊಟ್ಟೆಯಲ್ಲಿ ಲೋಹದ ಕೊಡಲಿ ಪತ್ತೆಯಾಗುತ್ತೆ.ಈ ವಿಚಾರವನ್ನ ಶ್ರೀಕೃಷ್ಣನು ನಾನಾ ಉಗ್ರ ಸೇನನಿಗೆ ತಿಳಿಸ್ತಾನೆ. ಆಗ ನಾನಾ ಉಗ್ರ ಸೇನಾ ಸಾಂಬನ ಹೊಟ್ಟೆಯಲ್ಲಿ ಸಿಕ್ಕ ಆ ಲೋಹದ ಕೊಡಲಿಯ ಒಂದು ತುಂಡನ್ನ ಸಮುದ್ರಕ್ಕೆ ಎಸೆಯುತ್ತಾನೆ. ಈ ಮೂಲಕ ಯಾದವ ವಂಶವನ್ನ ಶಾಪದಿಂದ ಬಚಾವ್ ಮಾಡಿದೆ ಅಂತಾ ನಾನಾ ಉಗ್ರ ಸೇನಾ ಅಂದುಕೊಳ್ತಾನೆ. ಲೋಹದ ತುಂಡನ್ನ ಉಗ್ರಸೇನಾ ಸಮುದ್ರಕ್ಕೆ ಎಸೆಯುತ್ತಲೇ ಅದನ್ನ ಒಂದು ಮೀನು ನುಂಗಿ ಬಿಡುತ್ತೆ. ಅದೇ ಮೀನು ಮೀನುಗಾರರ ಬಲೆಗೂ ಬೀಳುತ್ತೆ. ಅದ್ರ ಹೊಟ್ಟೆಯಲ್ಲಿ ಉಗ್ರಸೇನಾ ಎಸೆದಿದ್ದ ಸಾಂಬನ ಹೊಟ್ಟೆಯಲ್ಲಿ ಸಿಕ್ಕ ಲೋಹದ ತುಂಡು ಪತ್ತೆಯಾಗುತ್ತೆ. ಆ ಲೋಹದ ಇಡೀ ತುಂಡು ಏನಿತ್ತು ಅದು ಯಾದವ ವಂಶದ ವಿನಾಶಕ್ಕಾಗಿಯೇ ಪುನ: ಇಡೀ ಲೋಹದ ಕೊಡಲಿಯಾಗಿ ನಿರ್ಮಾಣಗೊಳ್ಳುತ್ತೆ.

36 ವರ್ಷಗಳು ಉರುಳಿತು.. ಅಂದ್ರೆ ಮಾತಾ ಗಂಧಾರಿ ಶಾಪ ಹಾಕಿ 36 ವರ್ಷಗಳಾಯ್ತು. ಆ ಶಾಪ ಸಾಬೀತಾಗುವ ಸಮಯ ಬಂದಿತ್ತು. ಇದೀ ಯಾದವ ವಂಶ ನಶೆಯಲ್ಲಿ ಮುಳುಗಿ ಹೋಗಿತ್ತು. ಪರಸ್ಪರ ಹೊಡೆದಾಡಿಕೊಳ್ಳೋಕೂ ಶುರು ಮಾಡ್ತಾರೆ. ಯಾದವ ವಂಶದಲ್ಲಿ ಆಂತರಿಕ ಕಲಹ ತಾರಕಕ್ಕೇರುತ್ತೆ. ತಮ್ಮ ತಮ್ಮವರನ್ನೇ ಕೊಲ್ತಾರೆ. ನೋಡ ನೋಡ್ತಿದ್ದಂತೆ ಇಡೀ ಯಾದವ ರಾಜ ವಂಶ ಸರ್ವನಾಶವಾಗಿಬಿಡುತ್ತೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಶ್ರೀಕಷ್ಣನು ಒಬ್ಬಂಟಿಯಾಗಿ ಕಾಡಿನ ಕಡೆಗೆ ತೆರಳುತ್ತಾನೆ. ಕೆಲ ದೂರ ಸಾಗಿದ ಬಳಿಕ ಒಂದು ಮರದ ಕೆಳಗೆ ಕುಳಿತುಕೊಳ್ತಾನೆ. ಈ ವೇಳೆ ಬೇಟೆಗಾರನೊಬ್ಬ ಮರದ ಕೆಳಗೆ ಇರೋದು ಜಿಂಕೆ ಇರ್ಬೇಕು ಅಂದುಕೊಂಡು ಬಾಣ ಬಿಡ್ತಾನೆ. ಆ ಬೇಟೆಗಾರ ಮತ್ಯಾರೂ ಅಲ್ಲ, ಮೀನಿನ ಹೊಟ್ಟೆಯಲ್ಲಿ ಸಿಕ್ಕ ಲೋಹದ ತುಂಡಿನಿಂದಲೇ ಆತ ಬಾಣವನ್ನ ಮಾಡಿದ್ದ. ಅಂದ್ರೆ ಶ್ರೀಕೃಷ್ಣನ ಪುತ್ರನ ಹೊಟ್ಟೆಯಲ್ಲಿದ್ದ ಲೋಹದಿಂದ ನಿರ್ಮಿಸಿದ ಬಾಣವೇ ಈಗ ಬೇಟೆಗಾರನ ಮೂಲಕ ಕೃಷ್ಣನ ಕಾಲಿಗೆ ಚುಚ್ಚಿತ್ತು. ಆ ಲೋಹದ ಬಾಣ ಕಾಲಿಗೆ ಚುಚ್ಚುತ್ತಲೇ ಶ್ರೀಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೀತಾನೆ. ಅಲ್ಲಿಗೆ ಇಡೀ ಯಾದವ ವಂಶವೇ ಸಂಪೂರ್ಣ ನಾಶವಾಗಿಬಿಡುತ್ತೆ. ಈ ವಿಚಾರ ಗೊತ್ತಾಗುತ್ತಲೇ ಅರ್ಜುನನು ಓಡಿಕೊಂಡು ದ್ವಾರಕಾಗೆ ಬರ್ತಾನೆ. ಅಷ್ಟೊತ್ತಿಗಾಗಲೇ ಇಡೀ ದ್ವಾರಕಾ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುತ್ತೆ. ಸಂಕಷ್ಟದಲ್ಲಿ ದ್ವಾರಕಾದ ಜನರನ್ನ ಅದೇಗೋ ಮಾಡಿ ಅರ್ಜುನನು ರಕ್ಷಿಸ್ತಾನೆ. ಇಡೀ ದ್ವಾರಕೆ ನಾಶವಾಗುತ್ತಲೇ ಸಮುದ್ರದಲ್ಲಿ ಮುಳುಗಿಬಿಡುತ್ತೆ. ಇದು ದ್ವಾರಕಾ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿರೋ ವಿಚಾರ.

ಈಗ ದ್ವಾರಕಾವನ್ನ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ದ್ವಾರಕಾ.. ಮತ್ತೊಂದು ಬೇಟ್ ದ್ವಾರಕಾ. ಈ ಪೈಕಿ ದ್ವಾರಕಾ ಅನ್ನೋದು ಗುಜರಾತ್​​ನ ಸಮುದ್ರದ ತಟದಲ್ಲಿರೋ ಒಂದು ಸಣ್ಣ ನಗರ ಅಷ್ಟೇ. ಅದೇ ಬೇಟ್ ದ್ವಾರಕಾ ಅಂದ್ರೆ ಅರಬ್ಬಿ ಸಮುದ್ರದ ಒಳಗೆ ಇರೋ ನಗರ. ಆದ್ರೆ ಇದೊಂದು ಕಾಲ್ಪನಿಕ ಕಥೆ. ಪೌರಾಣಿಕ ಕಥೆ ಅಂತಾ ದ್ವಾರಕಾ ಅನ್ನೋ ಕಾನ್ಸೆಪ್ಟ್​ನ್ನ, ನಗರವನ್ನ ಕಂಪ್ಲೀಟ್ ನೆಗ್ಲೆಕ್ಟ್ ಮಾಡಲಾಗಿತ್ತು. ಯಾಕಂದ್ರೆ ಈ ಬಗ್ಗೆ ನಂಬುವಂಥಾ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಆದ್ರೆ 1930ರಲ್ಲಿ ಅರಬ್ಬೀ ಸಮುದ್ರದಲ್ಲಿ ಒಂದಷ್ಟು ಅವಶೇಷಗಳು ಸಿಕ್ಕಿದ್ವು. 1963ರಲ್ಲಿ ಅರಬ್ಬೀ ಸಮುದ್ರದ ಮಧ್ಯದಲ್ಲಿದ್ದ ದ್ವೀಪದಲ್ಲಿ ಉತ್ಖನನ ಮಾಡಿದಾಗ ಹಳೆಯ ಮೂರ್ತಿಗಳು, ಕೆತ್ತನೆಗಳೆಲ್ಲಾ ಪತ್ತೆಯಾಗಿದ್ವು. 1983-1990ರ ಅವಧಿಯಲ್ಲಿ ಸಮುದ್ರದಾಳದಲ್ಲಿ ಪುರಾತತ್ವಶಾಸ್ತ್ರಜ್ಞ ಡಾ.ಎಸ್.ಆರ್.ರಾವ್ ನೇತೃತ್ವದಲ್ಲಿ ಸಂಶೋಧನೆಯನ್ನ ಕಂಪ್ಲೀಟ್ ಮಾಡುತ್ತೆ. ಈ ವೇಳೆ ಅವರಿಗೆ ಸಮುದ್ರದೊಳಗೆ ಅದ್ಭೂತವಾದ ನಗರ ಇರೋದು ಕನ್ಫರ್ಮ್ ಆಗುತ್ತೆ. ಅವರು ಎಲ್ಲವನ್ನೂ ಕಣ್ಣಾರೆ ನೋಡಿರ್ತಾರೆ. ಅವಶೇಷಗಳ ಕಾರ್ಬನ್ ಡೆಂಟಿಂಗ್ ಮಾಡಿದಾಗ 5000 ವರ್ಷಗಳ ಹಿಂದಿನದ್ದು ಅನ್ನೋದು ಗೊತ್ತಾಗುತ್ತೆ. ಅಂದ್ರೆ ಮಹಾಭಾರತದ ಸಮಯದಲ್ಲೇ ಈ ನಗರ ನಿರ್ಮಾಣವಾಗತ್ತು. ಹಾಗೆಯೇ ಅದು ದ್ವಾರಕಾ ನಗರವೇ ಅನ್ನೋದನ್ನ ಖಚಿತಪಡಿಸಿಕೊಳ್ಳೋಕೆ ಸಂಶೋಧಕರು ಸಮುದ್ರದಾಳಕ್ಕೆ ಡೈವ್ ಮಾಡಿ ಇಡೀ ನಗರದ ಏರಿಯಾ ಮ್ಯಾಪ್ ಮಾಡ್ತಾರೆ. ಆಗ 153.6 ಕಿಲೋ ಮೀಟರ್​ನಷ್ಟು ಗಾತ್ರ ಇರೋದು ಗೊತ್ತಾಗುತ್ತೆ. ಆಗಲೇ ಹೇಳಿದ ಹಾಗೆ ಭಾಗವತ್ ಪುರಾಣದಲ್ಲೂ ಸೂರ್ಯದೇವನು ಶ್ರೀಕೃಷ್ಣನಿಗೆ ಇಷ್ಟೇ ವ್ಯಾಪ್ತಿಯ ಭೂಮಿಯನ್ನ ಉಡುಗೊರೆಯಾಗಿ ನೀಡಿದ್ದ ಅನ್ನೋದು ಉಲ್ಲೇಖವಾಗಿದೆ. ಹೀಗಾಗಿಯೇ ಸಮುದ್ರದಾಳದಲ್ಲಿರೋ ಶ್ರೀಕೃಷ್ಣ ಕಟ್ಟಿಸಿದ ದ್ವಾರಕಾ ನಗರವೇ ಅನ್ನೋ ತೀರ್ಮಾನಕ್ಕೆ ಬರಲಾಗಿದೆ. ಈ ಬಗ್ಗೆ ಇನ್ನಷ್ಟು ಸಾಕ್ಷ್ಯ ಸಂಗ್ರಹಕ್ಕಾಗಿ ಈಗಲೂ ಸಂಶೋಧನೆ ನಡೀತಾನೆ ಇದೆ.

Sulekha