ಚಿನ್ನಸ್ವಾಮಿಯಲ್ಲೂ ಬಿಗ್ TARGET – ಸಣ್ಣ ಬೌಂಡರಿ.. ಸಿಕ್ಸರ್ ಗಳ ಸುರಿಮಳೆ
IND Vs WI.. ಯಾರ ದರ್ಬಾರ್?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿಯ ಕೊನೇ ಬ್ಯಾಟಲ್ಗೆ ಚಿನ್ನಸ್ವಾಮಿ ಮೈದಾನ ಸಿದ್ಧವಾಗಿದೆ. ಆಲ್ರೆಡಿ ಈ ಸರಣಿಯ ಹಿಂದಿನ ಪಂದ್ಯಗಳಲ್ಲಿ ರನ್ಸ್ ಮಳೆ ಹರಿದಿರೋದ್ರಿಂದ ಈ ಮ್ಯಾಚಲ್ಲೂ ಬಿಗ್ ಸ್ಕೋರ್ ಪಕ್ಕಾನೇ. ಯಾಕಂದ್ರೆ ಬೆಂಗಳೂರು ಗ್ರೌಂಡ್ ಇರೋದೇ ಸಣ್ಣದು. ಅಂಥಾದ್ರಲ್ಲಿ ಎರಡೂ ತಂಡಗಳಲ್ಲೂ ಪವರ್ ಹಿಟ್ಟರ್ಗಳೇ ಇದ್ದಾಗ ಕೇಳ್ಬೇಕಾ.. ಬೌಂಡರಿಗಳಿಗಿಂತ ಜಾಸ್ತಿ ಸಿಕ್ಸರ್ಗಳೇ ಇರುತ್ತೆ.
ಇದನ್ನೂ ಓದಿ : ಸೋತರೂ ದಾಖಲೆ ಬರೆದ ಅಭಿಷೇಕ್!- ಒಂದೇ ವರ್ಷದಲ್ಲಿ ಸಿಕ್ಸರ್ಗಳ ವಿಶ್ವದಾಖಲೆ?
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟರ್ಗಳ ಸ್ವರ್ಗ ಅಂತಾನೇ ಫೇಮಸ್. ಇಲ್ಲಿನ ಸಣ್ಣ ಬೌಂಡರಿಗಳು ಮತ್ತು ಫ್ಲಾಟ್ ಪಿಚ್ನಿಂದಾಗಿ ಬ್ಯಾಟರ್ಗಳು ಉಳಿದೆಲ್ಲಾ ಮೈದಾನಗಳಿಗಿಂತ ಇಲ್ಲಿನ ಆರ್ಭಟ ಜಾಸ್ತಿ ಇರುತ್ತೆ. ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯದಲ್ಲೂ ಇದೇ ನಿರೀಕ್ಷೆ ಮೂಡಿದೆ. ಪ್ರಸ್ತುತ ಭರ್ಜರಿ ಫಾರ್ಮ್ನಲ್ಲಿರುವ ಭಾರತದ ಅಭಿಷೇಕ್ ಶರ್ಮಾ ಮತ್ತು ವೆಸ್ಟ್ ಇಂಡೀಸ್ನ ಶಾಯ್ ಹೋಪ್ ಅವರಂತಹ ಸ್ಫೋಟಕ ಬ್ಯಾಟರ್ಗಳಿಗೆ ಈ ಮೈದಾನ ಸಿಕ್ಕರೆ ಸಿಕ್ಸರ್ಗಳ ಸುರಿಮಳೆಯಾಗುವುದರಲ್ಲಿ ಡೌಟೇ ಇಲ್ಲ.
ಚಿನ್ನಸ್ವಾಮಿಯಲ್ಲಿ ಬ್ಯಾಟರ್ ಗಳ ದರ್ಬಾರ್ ಪಕ್ಕಾ!
ಚಿನ್ನಸ್ವಾಮಿ ಮೈದಾನ ಈಗಾಗ್ಲೇ ದಾಖಲೆಯ ಮಟ್ಟದ ರನ್ಸ್ಗಳಿಗೆ ಸಾಕ್ಷಿಯಾಗಿದೆ. ಈ ಕ್ರೀಡಾಂಗಣದ ಬೌಂಡರಿಗಳು ತುಂಬಾ ಚಿಕ್ಕದಾಗಿವೆ. ಅಂದ್ರೆ ಸುಮಾರು 55 ರಿಂದ 65 ಮೀಟರ್ ಅಷ್ಟೇ ಇರೋದ್ರಿಂದ ಬ್ಯಾಟರ್ಗಳು ಜಸ್ಟ್ ಟೈಮಿಂಗ್ ಮಾಡಿದರೂ ಚೆಂಡು ಸುಲಭವಾಗಿ ಸಿಕ್ಸರ್ ಗೆರೆ ದಾಟುತ್ತದೆ. ಅಷ್ಟೇ ಅಲ್ಲದೆ ಇಲ್ಲಿನ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿಯಾಗಿದೆ. ಚೆಂಡು ನೇರವಾಗಿ ಬ್ಯಾಟ್ಗೆ ಬರೋದ್ರಿಂದ ಬ್ಯಾಟರ್ಗಳು ಮುಲಾಜಿಲ್ಲದೆ ಬಿಗ್ ಶಾಟ್ಗಳನ್ನ ಆಡ್ತಾರೆ. ಹಾಗೇ ಸೈಂಟಿಫಿಕ್ ರೀಸನ್ ಕೂಡ ಇದೆ. ಬೆಂಗಳೂರು ನಗರವು ಸಮುದ್ರ ಮಟ್ಟದಿಂದ ತುಂಬಾ ಎತ್ತರದಲ್ಲಿದೆ. ಇಲ್ಲಿನ ಗಾಳಿಯ ಸಾಂದ್ರತೆ ಕಡಿಮೆ ಇರುವುದರಿಂದ, ಬ್ಯಾಟರ್ಗಳು ಹೊಡೆಯುವ ಚೆಂಡು ಗಾಳಿಯಲ್ಲಿ ವೇಗವಾಗಿ ಮತ್ತು ಹೆಚ್ಚು ದೂರ ಸಾಗೋದು ಕೂಡ ಬ್ಯಾಟಿಂಗ್ ಹಬ್ಬಕ್ಕೆ ಕಾರಣವಾಗಿದೆ. ಹಲವು ಐತಿಹಾಸಿಕ ದಾಖಲೆಗಳೂ ಕ್ರಿಯೇಟ್ ಆಗಿವೆ.
ಐಪಿಎಲ್ ನಲ್ಲೂ ಸಿಡಿಲಬ್ಬರ ಬ್ಯಾಟಿಂಗ್!
ಇನ್ನು ಚಿನ್ನಸ್ವಾಮಿ ಮೈದಾನದಲ್ಲಿ ಈಗಾಗ್ಲೇ ಹಲವು ಬಾರಿ ಬಿಗ್ ಇನ್ನಿಂಗ್ಸ್ ಬಂದಿರೋದೇ ಇದಕ್ಕೆ ಸಾಕ್ಷಿ. ಐಪಿಎಲ್ನಲ್ಲಿ ಆರ್ಸಿಬಿ ತಂಡವು ಪುಣೆ ವಾರಿಯರ್ಸ್ ವಿರುದ್ಧ 263/5 ರನ್ಗಳ ಬೃಹತ್ ಮೊತ್ತ ಕಲೆಹಾಕಿದ್ದು ಇದೇ ಮೈದಾನದಲ್ಲಿ. ಹಾಗೇ ಆರ್ಸಿಬಿ ವರ್ಸಸ್ ಎಸ್ಆರ್ಹೆಚ್ ಪಂದ್ಯದಲ್ಲಿ IPL ಇತಿಹಾಸದ ಗರಿಷ್ಠ ಸ್ಕೋರ್ ದಾಖಲಾಗಿದ್ದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. 2024ರ ಏಪ್ರಿಲ್ 15ರಂದು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಹೈದ್ರಾಬಾದ್ 287 ರನ್ಸ್ ಕಲೆ ಹಾಕಿದ್ರೆ ಬೆಂಗಳೂರು 262 ರನ್ಸ್ ಬಾರಿಸಿತ್ತು. ಎರಡೂ ಇನ್ನಿಂಗ್ಸ್ಗಳಿಂದ 549 ರನ್ಸ್ ಬಂದಿದ್ದು IPL ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಒಟ್ಟು ರನ್ಗಳು ಅನ್ನೋ ದಾಖಲೆ ಇದೆ. ಹಾಗೇ ವೆಸ್ಟ್ ಇಂಡೀಸ್ನ ದಂತಕತೆ ಕ್ರಿಸ್ ಗೇಲ್ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದು ಇದೇ ಚಿನ್ನಸ್ವಾಮಿ ಮೈದಾನದಲ್ಲಿ. ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ತಮ್ಮ ಚೊಚ್ಚಲ ಏಕದಿನ ದ್ವಿಶತಕ (209 ರನ್, 16 ಸಿಕ್ಸರ್) ಬಾರಿಸಿದ್ದು ಕೂಡ ಇಲ್ಲೇ. ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20ಐ ಸರಣಿಯಲ್ಲೂ 200+ ರನ್ಸ್ ಟಾರ್ಗೆಟ್ ಎಲ್ಲಾ ಲೆಕ್ಕನೇ ಇಲ್ಲ ಅನ್ನೋ ಥರ ಬಾರಿಸ್ತಿದ್ದು ಚಿನ್ನಸ್ವಾಮಿಯಲ್ಲೂ ಬ್ಯಾಟರ್ಸ್ ಧೂಳೆಬ್ಬಿಸೋದು ಪಕ್ಕಾ ಆಗಿದೆ.

ನೋಡಿರಿ

