ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ರಿಸಲ್ಟ್ – ಹೀಗೆ ಆದರೆ ಟೆಸ್ಟ್ ಪಂದ್ಯದ ಭವಿಷ್ಯವೇನು?
1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಅಲ್ಲಿಂದ 2024ರ ವರೆಗೆ ಟೆಸ್ಟ್ ಪಂದ್ಯವೊಂದು ಕೇವಲ 642 ಎಸೆತಗಳಲ್ಲಿ ಅಂತ್ಯಗೊಂಡಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಕೇವಲ 107 ಓವರ್‌ಗಳನ್ನು ಮಾತ್ರ ಬೌಲ್ ಮಾಡಲಾಯಿತು. ವಾಸ್ತವವಾಗಿ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಿಂದ 100 ಓವರ್‌ಗಳನ್ನು ಬೌಲ್ ಮಾಡಲಾಗುತ್ತದೆ. ಇದರರ್ಥ ಈ ಪಂದ್ಯ ಕೂಡ ಬಹುತೇಕ ಏಕದಿನ ಪಂದ್ಯದಂತೆ ಇತ್ತು.
ಇದನ್ನೂ ಓದಿ: 31 ವರ್ಷಗಳ ನಂತರ ಗೆಲುವು ಸಾಧಿಸಿದ ಟೀಮ್ಇಂಡಿಯಾ – ಸೌತ್ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ ಪಡೆ
ಟೀಂ ಇಂಡಿಯಾದ ಒಬ್ಬ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್ ಅಂತಾ ಯಾರಾದ್ರೂ ಇದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಸೆಕೆಂಡ್ ಪೊಸೀಶನ್ನಲ್ಲಿ ರೋಹಿತ್ ಶರ್ಮಾ. ಆದ್ರೂ ರೋಹಿತ್ ಒಬ್ಬ ಟೆಸ್ಟ್ ಕ್ರಿಕೆಟರ್ ಅಂತಾ ಐಡೆಂಟಿಟಿಯನ್ನ ಪಡೆದೇ ಇಲ್ಲ. ಕೆಲ ಸಮಯದ ಹಿಂದೆ ಚೇತೇಶ್ವರ್ ಪೂಜಾರಾ ಇದ್ರು.. ಅಜಿಂಕ್ಯ ರಹಾಣೆ ಇದ್ರು.. ಇವರಿಬ್ಬರು ಟೆಸ್ಟ್ಗೆ ಹೇಳಿ ಮಾಡಿಸಿದಂಥಾ ಪ್ಲೇಯರ್ಸ್. ಆದ್ರೀಗ ಟೀಮ್ನಿಂದ ಔಟಾಗಿದ್ದಾರೆ. ಆ್ಯಕ್ಚುವಲಿ ರಹಾನೆಯನ್ನಂತೂ ಖಂಡಿತಾ ಆಡಿಸ್ಬಹುದು. ಸರಿ ಪೂಜಾರಾ ಔಟ್ ಆಫ್ ಫಾರ್ಮ್ ಅಂತಾ ಡ್ರಾಪ್ ಮಾಡಿದ್ರು. ಆದ್ರೆ ಪೂಜಾರ ರೀತಿಯಲ್ಲಿ ಆಡೋ ಮತ್ತೊಬ್ಬ ಬ್ಯಾಟ್ಸ್ಮನ್ನನ್ನ ಸೆಲೆಕ್ಟ್ ಮಾಡಿದ್ದಾರಾ? ಇನ್ನೂ ಇಲ್ಲ. ಈ 1990 – 2010ವರೆಗಿನ ಟೈಮ್ನ್ನ ನೆನಪಿಸಿಕೊಳ್ಳಿ. ನಮ್ಮ ಟೆಸ್ಟ್ ಟೀಂ ಹೇಗಿತ್ತು. ಎಲ್ಲಾ ರೀತಿಯ ಪ್ಲೇಯರ್ಸ್ಗಳು ಕೂಡ ತಂಡದಲ್ಲಿದ್ರು. ವಿರೇಂದ್ರ ಸೆಹ್ವಾಗ್ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಿದ್ರು. ರಾಹುಲ್ ದ್ರಾವಿಡ್ ಅಂತೂ ಕ್ರೀಸ್ನಲ್ಲಿ ಸೆಟ್ ಆದ್ರು ಅಂದ್ರೆ ಕದಲುತ್ತಲೇ ಇರಲಿಲ್ಲ. ಡಿಫೆನ್ಸ್..ಡಿಫೆನ್ಸ್..ಡಿಫೆನ್ಸ್.. ನ್ಯೂ ಬಾಲ್ನ್ನ ಓಲ್ಡ್ ಮಾಡೋದೆ ದ್ರಾವಿಡ್ ಕೆಲಸವಾಗಿತ್ತು. ಅದೊಂದು ಬಾರಿ ಒಂದು ರನ್ ಮಾಡೋಕೆ ಸುಮಾರು 70 ಬಾಲ್ಗಳನ್ನ ತಗೊಂಡಿದ್ರು. 71ನೇ ಬಾಲ್ನಲ್ಲೇನೊ ಒಂದು ರನ್ ಮಾಡಿದ್ರು. ಇಡೀ ಸ್ಟೇಡಿಯಂ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು. ದ್ರಾವಿಡ್ ಕೂಡ 50 ಹೊಡೆದಂತೆ ಪೋಸ್ ಕೊಟ್ಟಿದ್ರು. ನಂತರ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಎಲ್ಲರೂ ಪಕ್ಕಾ ಟೆಸ್ಟ್ ಪ್ಲೇಯರ್ಸ್ಗಳು. ಈವನ್ ಗೌತಮ್ ಗಂಭೀರ್ ಕೂಡ ವನ್ ಆಫ್ ದಿ ಬೆಸ್ಟ್ ಟೆಸ್ಟ್ ಕ್ರಿಕೆಟರ್ ಆಗಿದ್ರು. ಫಸ್ಟ್ ಇನ್ನಿಂಗ್ಸ್ನಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ್ರೆ ಕನಿಷ್ಠ ಎರಡು ದಿನ ಅಂತೂ ಆಡ್ತಾ ಇದ್ರು. 400 ರನ್ ಕಾಮನ್ ಆಗಿರ್ತಿತ್ತು. 500..600..ಈವನ್ 700 ಮಾಡಿ ಡ್ರಾ ಮಾಡಿರೋ ಉದಾಹರಣೆಗಳು ಕೂಡ ಸಾಕಷ್ಟಿದೆ. ಕೇವಲ ಟೀಂ ಇಂಡಿಯಾ ಅಂತೇನಲ್ಲ.. ಒಪೋಸಿಟ್ ಟೀಂ ಕೂಡ ಅಷ್ಟೇ ಸ್ಟ್ರಾಂಗ್ ಆಗಿರ್ತಿತ್ತು. ಆಸ್ಟ್ರೇಲಿಯನ್ನರಂತೂ ಕೇಳೋದೇ ಬೇಡ. ಆಗೆಲ್ಲಾ ಕಂಪ್ಲೀಟ್ 5 ಡೇಸ್ ಫುಲ್ ಫ್ಲೆಡ್ಜ್ ಟೆಸ್ಟ್ ಮ್ಯಾಚ್ ನಡೀತಾ ಇತ್ತು. ಅದೆಷ್ಟೋ ಮ್ಯಾಚ್ಗಳು ಡ್ರಾ ಆಗ್ತಾ ಇತ್ತು. ಆಸ್ಟ್ರೇಲಿಯಾ ವಿರುದ್ಧ ಅಂತೂ ಡ್ರಾ ಮಾಡೋದೆ ದೊಡ್ಡ ಸಾಧನೆಯಾಗಿತ್ತು. ಲಾಸ್ಟ್ ಡೇ ಮ್ಯಾಚ್.. 10 ಓವರ್ಗಳಷ್ಟೇ ಇರೋದು.. ಬ್ಯಾಟಿಂಗ್ ಟೀಂ ಬಳಿ ಇರೋದು ಕೊನೆಯ ಒಂದು ವಿಕೆಟ್ ಮಾತ್ರ. ಬೌಲರ್ ಬ್ಯಾಟಿಂಗ್ ಮಾಡ್ತಾ ಇರ್ತಾನೆ. ಹಂಗೋ ಹಿಂಗೋ ಒದ್ದಾಡಿ ಮ್ಯಾಚ್ ಡ್ರಾ ಮಾಡೋಕೆ ಕೊನೆಯ ಓವರ್ತನಕವೂ ಆಡ್ತಾನೆ. ಇನ್ನೇನು ಎರಡು ಬಾಲ್ಗಳಷ್ಟೇ ಇರೋದು ಅನ್ನೋವಾಗ ಔಟ್. ಬೌಲಿಂಗ್ ಟೀಂ ವಿನ್.. ಆ್ಯಶಸ್ನಲ್ಲಿ ಇಂಥಾ ರಿಸಲ್ಟ್ಗಳು ಬಂದಿವೆ. ಅದ್ರಲ್ಲೂ 2005ರಲ್ಲಿ ನಡೆದ ಆ್ಯಶಸ್ ಸೀರಿಸ್ ಅಂತೂ ದಿ ಬೆಸ್ಟ್.. ಎವರ್ಗ್ರೀನ್ ಟೆಸ್ಟ್ ಸೀರಿಸ್. ಟೆಸ್ಟ್ ಮ್ಯಾಚ್ ಗೆಲ್ಲೋದು ಅಂದ್ರೆ ಗ್ರೇಟ್ ಅಚೀವ್ಮೆಂಟ್ ಆಗಿರ್ತಿತ್ತು. ಬ್ಯಾಟಿಂಗ್, ಬೌಲಿಂಗ್, ಓವರ್ಆಲ್ ಟೀಂ ಎಲ್ಲವೂ ಸ್ಟ್ರಾಂಗ್.. ಭಾರತದಲ್ಲಿ ಕ್ರಿಕೆಟ್ ಸ್ಟೇಡಿಯಂಗಳಂತೂ 5 ದಿನಗಳೂ ಫುಲ್ ಪ್ಯಾಕ್ ಆಗಿರ್ತಿತ್ತು.. ಈಗ ಎಲ್ಲಿ? ಅಂಥಾ ಟೆಸ್ಟ್ ಮ್ಯಾಚ್ಗಳನ್ನೆಲ್ಲಾ ನೋಡದೆ ಕಾಲವೇ ಆಯ್ತು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಡಿದ್ದೇ ಲಾಸ್ಟ್ ಬೆಸ್ಟ್ ಕ್ರಿಕೆಟ್ ಸೀರಿಸ್. ಗಬ್ಬಾದಲ್ಲಿ ಪಂತ್ ಚೇಸ್ ಮಾಡಿ ಸೀರಿಸ್ ವಿನ್ ಮಾಡಿಸಿಕೊಟ್ಟಿದ್ದೇ ಮೆಮೋರೇಬಲ್. ಆದ್ರೆ ಇತ್ತೀಚೆಗೆ ಟೀಂ ಇಂಡಿಯಾ ಆಡ್ತಿರೋ ಟೆಸ್ಟ್ ಮ್ಯಾಚ್ಗಳೆಲ್ಲವೂ ಬೋರಿಂಗ್ ಅನ್ನಿಸಿಬಿಟ್ಟಿದ್ರು. ಅದ್ರಲ್ಲೂ ಹೀಗೆ ಒಂದೂವರೆ ದಿನಕ್ಕೆಲ್ಲಾ ಟೆಸ್ಟ್ ಮ್ಯಾಚ್ ರಿಸಲ್ಟ್ ಬಂದ್ರೆ, ಟೆಸ್ಟ್ ಫಾರ್ಮೆಟ್ನ ಭವಿಷ್ಯ ಏನು ಅನ್ನೋ ಪ್ರಶ್ನೆ ಬಂದೇ ಬರುತ್ತೆ.
ಇಲ್ಲಿ ಪಿಚ್ನ್ನ ದೂರಿ ಪ್ರಯೋಜನ ಇಲ್ಲ. ಈವನ್ ರೋಹಿತ್ ಶರ್ಮಾ ಕೂಡ ಈಗ ಅದೇ ಮಾತನ್ನ ಹೇಳಿದ್ದಾರೆ. ಎಲ್ಲರೂ ಇಂಡಿಯಾದ ಕ್ರಿಕೆಟ್ ಪಿಚ್ಗಳನ್ನೇ ಬ್ಲೇಮ್ ಮಾಡ್ತಾರೆ. ಕ್ರಿಟಿಸೈಸ್ ಮಾಡ್ತಾರೆ. ಹಾಗಿದ್ರೆ ಕೇಪ್ಟೌನ್ನಲ್ಲಿ ರೆಡಿ ಮಾಡಲಾಗಿದ್ದ ಪಿಚ್ ಎಂಥಾದ್ದು? ಅದನ್ನ ಕೂಡ ಹೋಪ್ಲೆಸ್ ಪಿಚ್ ಅನ್ಬಹುದಲ್ಲಾ. ಪಿಚ್ ಹೇಗೆಯೇ ಇರಲಿ, ಯಾರಿಗೇ ಫೇವರ್ ಆಗಿರಲಿ..ಎಷ್ಟೇ ಚಾಲೆಂಜಿಂಗ್ ಆಗಿರಲಿ.. ಪಕ್ಕಾ ಸ್ಟ್ರ್ಯಾಟಜಿಯೊಂದಿಗೆ ನಿಂತು ಆಡೋದೆ ಇಂಪಾರ್ಟೆಂಟ್. ತಾಕತ್ತು ತೋರಿಸಬೇಕಿರೋದು ಇಂಥಾ ಪಿಚ್ನಲ್ಲೇ. ಎಂಥದ್ದೇ ಬೌಲಿಂಗ್ ಪಿಚ್ ಆದ್ರೂ ಬ್ಯಾಟ್ಸ್ಮನ್ಗಳು ನಿಂತು ಆಡ್ಬೇಕು. ಆದ್ರೆ ಸೌತ್ ಆಫ್ರಿಕಾ ಮತ್ತು ಟೀಂ ಇಂಡಿಯಾ ಎರಡೂ ಟೀಂಗಳು ಬ್ಯಾಟ್ಸ್ಮನ್ಗಳು ಒಂದೂವರೆ ದಿನ ಬರೀ ಪರೇಡ್ ಮಾಡಿದ್ದೇ ಆಯ್ತು. ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಂಥಾ ಬೌನ್ಸಿ, ಸ್ವಿಂಗ್ ಪಿಚ್ಗಳಲ್ಲಿ ನಿಂತೂ ಆಡೋಕೆ ಆಗಿಲ್ಲ ಅಂದ್ರೆ ಅವರು ಬ್ಯಾಟ್ಸ್ಮನ್ಗಳೇ ಅಲ್ಲ. ಕ್ರಿಕೆಟರ್ಸ್ಗೆ ಅಸಲಿ ಟೆಸ್ಟ್ ನಡೆಯೋದೆ ಇಂಥಾ ಪಿಚ್ಗಳಲ್ಲಿ ಅಂತಾ ಗವಾಸ್ಕರ್ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ನ್ನ ನಿಜವಾಗಿಯೂ ಇಷ್ಟ ಪಡೋರು ಗವಾಸ್ಕರ್ ಹೇಳಿದ ಮಾತನ್ನ ಒಪ್ಪಲೇಬೇಕಾಗುತ್ತೆ.