ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಟಿ-20 ಭವಿಷ್ಯವೇನು? -ಬಿಸಿಸಿಐ ಕೊಟ್ಟ ಸೂಚನೆ ಏನು?

ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಟಿ-20 ಭವಿಷ್ಯವೇನು? -ಬಿಸಿಸಿಐ ಕೊಟ್ಟ ಸೂಚನೆ ಏನು?

ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ. ಈ ಬಾರಿಯ ವರ್ಲ್ಡ್​​ಕಪ್​ ಇವರಿಬ್ಬರ ಕೈಯಲ್ಲೂ ಇರಬೇಕಿತ್ತು. ಆದರೆ, ಫೈನಲ್​​ ಮ್ಯಾಚ್​​ನಲ್ಲಿ ಅಂದುಕೊಂಡಂತೆ ಆಗಿಲ್ಲ. ಆದರೆ, ಈಗ ಟೀಂ ಇಂಡಿಯಾದ ಈ ಇಬ್ಬರೂ ಸೀನಿಯರ್ ಮೋಸ್ಟ್ ಕ್ರಿಕೆಟರ್ಸ್​​ಗಳ ಕೆರಿಯರ್​ ಬಗ್ಗೆ ಒಂದಷ್ಟು ಬಿಸಿಬಿಸಿ ಚರ್ಚೆಗಳು ಶುರುವಾಗಿದೆ. ಎಸ್ಪೆಷಲಿ ಟಿ-20 ಕೆರಿಯರ್ ಬಗ್ಗೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಟೌಟ್..! – ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?

ಮುಂದಿನ ಟಿ-20 ವರ್ಲ್ಡ್​​ಕಪ್​​ನಲ್ಲಿ ರೋಹಿತ್ ಮತ್ತು ಕೊಹ್ಲಿ ಆಡ್ತಾರಾ ಅನ್ನೋದು ಇನ್ನೂ ಕೂಡ ಗ್ಯಾರಂಟಿ ಇಲ್ಲ. ಯಾಕಂದ್ರೆ 2022ರಲ್ಲಿ ಟಿ-20 ವರ್ಲ್ಡ್​​ಕಪ್​ನಲ್ಲಿ ಸೋತ ಬಳಿಕ ಇಬ್ಬರೂ ಕೂಡ ಅಲ್​ಮೋಸ್ಟ್ ಎಲ್ಲಾ ಟಿ-20 ಸೀರಿಸ್​​ಗಳಿಂದಲೂ ಹೊರಗಿದ್ದಾರೆ. ಯಂಗ್​ಸ್ಟರ್ಸ್ಗಳ ತಂಡವೇ ಟಿ-20 ಸೀರಿಸ್​​ಗಳನ್ನ ಆಡ್ತಿದೆ. ವಂಡೇ ವರ್ಲ್ಡ್​​ಕಪ್​ ಪ್ರಿಪರೇಷನ್ ದೃಷ್ಟಿಯಿಂದ ರೋಹಿತ್​ ಮತ್ತು ವಿರಾಟ್ ಕೊಹ್ಲಿ ಟಿ-20ಯಿಂದ ದೂರವುಳಿದಿದ್ರು. ಆದ್ರೀಗ ODI ವಿಶ್ವಕಪ್ ಕೂಡ ಮುಗಿದಿದೆ. ಈಗ ಮುಂದಿರೋದು ಮತ್ತೊಂದು ಟಿ-20 ವರ್ಲ್ಡ್​​ಕಪ್. ಹೀಗಾಗಿ ಬಿಸಿಸಿಐ ರೋಹಿತ್ ಮತ್ತು ಕೊಹ್ಲಿಗೆ ಟಿ-20 ವರ್ಲ್ಡ್​​ಕಪ್ ಆಡೋ ಕುರಿತಾಗಿ ಒಂದು ಕ್ಲೀಯರ್​ ಮೆಸೇಜ್ ಪಾಸ್ ಮಾಡಿದೆ. ಇದ್ರ ಜೊತೆಗೆ ರೋಹಿತ್ ಶರ್ಮಾ ಕೂಡ ತಮ್ಮ ಸ್ಟ್ಯಾಂಡ್ ಏನ್ನೋದನ್ನ ಈಗಾಗ್ಲೇ ಬಿಸಿಸಿಐಗೆ ಸ್ಪಷ್ಟಪಡಿಸಿದ್ದಾರೆ ಅನ್ನೋ ಸುದ್ದಿ ಕೂಡ ಇದೆ. ​

ಸದ್ಯದ ಸ್ವಿಚ್ಯುವೇಷನ್ ನೋಡಿದ್ರೆ, ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಿ-20 ಕ್ರಿಕೆಟ್​ಗೆ ಗುಡ್​​ಬೈ ಹೇಳಿದರೂ ಆಶ್ಚರ್ಯ ಇಲ್ಲ. ಕಳೆದ ಒಂದು ವರ್ಷದಿಂದ ಇಬ್ಬರೂ ಯಾವುದೇ ಅಂತಾರಾಷ್ಟ್ರೀಯ ಟಿ-20 ಮ್ಯಾಚ್​​ ಆಡಿಲ್ಲ. ಜೊತೆಗೆ ಟಿ-20ಗಾಗಿಯೇ ಟೀಂ ಇಂಡಿಯಾದ ಪ್ರತ್ಯೇಕ ತಂಡ ಸೆಟ್​ಅಪ್​ ಆಗ್ತಿದೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿಯನ್ನ ಟಿ-20 ಕ್ರಿಕೆಟ್​ಗೆ ಇನ್ಮುಂದೆ ಕನ್ಸಿಡರ್ ಮಾಜಡೋದು ಅನುಮಾನವೇ ಅಂತೆಲ್ಲಾ ಒಂದಷ್ಟು ಸುದ್ದಿಗಳು ಹರಿದಾಡ್ತಿದೆ. ಅದ್ರೂ, ಬಿಸಿಸಿಐನ ಸೋರ್ಸ್​ ಪ್ರಕಾರ, ಮುಂದಿನ ಟಿ-20 ವರ್ಲ್ಡ್​​ಕಪ್​​ನಲ್ಲಿ ಆಡೋಕೆ ಇಬ್ಬರಿಗೂ ಚಾನ್ಸ್ ನೀಡುವ ಸಾಧ್ಯತೆ ಇದ್ಯಂತೆ. ಯಾಕಂದ್ರೆ ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಟಾಪ್ ಸ್ಕೋರರ್ಸ್. ಹೀಗಾಗಿ ಇನ್ನೊಂದು ಅವಕಾಶ ನೀಡೋಕೆ ಬಿಸಿಸಿಐ ಮನಸ್ಸು ಮಾಡಿದ್ಯಂತೆ. 2024ರ ಟಿ-20 ವರ್ಲ್ಡ್​ಕಪ್​ನಲ್ಲಿ ಆಡೋ ಬಗ್ಗೆ ಅಂತಿಮ ನಿರ್ಧಾರವನ್ನೇ ನೀವೇ ತೆಗೆದುಕೊಳ್ಳುವಂತೆ ಈಗಾಗ್ಲೇ ಬಿಸಿಸಿಐ ರೋಹಿತ್​ ಮತ್ತು ಕೊಹ್ಲಿಗೆ ಸೂಚಿಸಿದ್ಯಂತೆ. ಅವರು ಆಡೋಕೆ ಬಯಸಿದ್ರೆ, ಖಂಡಿತಾ ಟೀಂನಲ್ಲಿ ಅವಕಾಶ ಇದೆ ಅನ್ನೋದು ಬಿಸಿಸಿಐ ಮೂಲಗಳ ಮಾಹಿತಿ.

ಇಲ್ಲಿ ಇನ್ನೊಂದು ವಿಚಾರ ಕೂಡ ಇದೆ. ಒಂದು ವೇಳೆ ರೋಹಿತ್​ ಶರ್ಮಾ ಟಿ-20 ಕ್ರಿಕೆಟ್​​ಗೆ ಗುಡ್​​ಬೈ ಹೇಳೋಕೆ ಡಿಸೈಡ್ ಮಾಡಿದ್ರೆ, ಆಗ ಹಾರ್ದಿಕ್ ಪಾಂಡ್ಯಾ ಟಿ-20 ಟೀಮ್​​ನ ಫುಲ್​ಟೈಮ್ ಕ್ಯಾಪ್ಟನ್ ಆಗಲಿದ್ದಾರೆ. ಇಲ್ಲವಾದಲ್ಲಿ ರೋಹಿತ್​ ಶರ್ಮಾ ಅವರೇ ಕ್ಯಾಪ್ಟನ್ ಆಗಿ 2024ರ ಟಿ-20 ವರ್ಲ್ಡ್​ಕಪ್​ನಲ್ಲೂ ತಂಡವನ್ನ ಮುನ್ನಡೆಸಲಿದ್ದಾರೆ. ಹೀಗಾಗಿ ರೋಹಿತ್​ ಶರ್ಮಾ ತಮ್ಮ ಟಿ-20 ಕೆರಿಯರ್​ ಬಗ್ಗೆ ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದು ಈಗ ತುಂಬಾ ಇಂಪಾರ್ಟೆಂಟ್ ಆಗಿದೆ.

ಇನ್ನು ರೋಹಿತ್ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇಬ್ಬರೂ ಕೂಡ ಸುಮಾರು ಒಂದು ತಿಂಗಳುಗಳ ಕಾಲ ರಜೆ ಪಡೆದುಕೊಂಡಿದ್ದಾರಂತೆ. ಹೀಗಾಗಿ ಡಿಸೆಂಬರ್​ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸೀರಿಸ್​​ನಲ್ಲೂ ರೋಹಿತ್ ಮತ್ತು ಕೊಹ್ಲಿ ಆಡೋದು ಡೌಟ್. ಸೌತ್ ಆಫ್ರಿಕಾ ವಿರುದ್ಧ ಹಾರ್ದಿಕ್​ ಪಾಂಡ್ಯಾ ಟೀಂ ಇಂಡಿಯಾವನ್ನ ಮುನ್ನಡೆಸುವ ಸಾಧ್ಯತೆ ಇದೆ. ಇಂಜ್ಯೂರಿಗೊಳಗಾಗಿ ಸದ್ಯ ರೆಸ್ಟ್​​ನಲ್ಲಿರುವ ಹಾರ್ದಿಕ್ ಪಾಂಡ್ಯಾ ಸೌತ್​ ಆಫ್ರಿಕಾ ಸೀರಿಸ್​​ನಲ್ಲಿ ಕಮ್​ಬ್ಯಾಕ್ ಮಾಡಲಿದ್ದಾರೆ.

ನಿಮಗೆ ಗೊತ್ತಿರಲಿ..2024ರಲ್ಲಿ ನಡೆಯೋ ಟಿ-20 ವರ್ಲ್ಡ್​​ಕಪ್​​ಗೂ ಮುನ್ನ ಟೀಂ ಇಂಡಿಯಾ ಕೇವಲ ಮೂರು ಟಿ-20 ಸೀರಿಸ್​ಗಳನ್ನಷ್ಟೇ ಆಡ್ತಿದೆ. ಫಸ್ಟ್ ಸೀರಿಸ್​​ ಈಗಾಗ್ಲೇ ಆಸ್ಟ್ರೇಲಿಯಾ ವಿರುದ್ಧ ನಡೀತಿದೆ. ಸೆಕೆಂಡ್​ ಸೀರಿಸ್​ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಮೂರನೇ ಟಿ-20 ಸೀರಿಸ್​​ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿದೆ. ಈ ಪೈಕಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ-ರೋಹಿತ್ ಆಡ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​ನಲ್ಲೂ ಆಡೋದು ಡೌಟ್. ಬಾಕಿ ಉಳಿಯೋದು ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ ಮಾತ್ರ. ನಂತರ ಐಪಿಎಲ್​ ನಡೆಯುತ್ತೆ. ಇದಾದ ಬಳಿಕ ನೇರವಾಗಿ ವರ್ಲ್ಡ್​​ಕಪ್​​ನಲ್ಲಿ ಟೀಂ ಇಂಡಿಯಾ ಆಡಲಿದೆ. ಹೀಗಾಗಿ ರೋಹಿತ್​ ಮತ್ತು ಕೊಹ್ಲಿಗೆ ಟಿ-20 ವರ್ಲ್ಡ್​​ಕಪ್​ಗೆ ಪ್ರಿಪೇರ್ ಆಗೋಕೆ ಸಿಗೋದು ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ ಮಾತ್ರ.

ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಟಿ-20 ವರ್ಲ್ಡ್​​ಕಪ್​ನಲ್ಲಿ ಆಡೋ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಕೂಡ ರಿಯಾಕ್ಟ್ ಮಾಡಿದ್ದಾರೆ. ಅಕ್ರಂ ಪ್ರಕಾರ, ಇಬ್ಬರೂ ಸೀನಿಯರ್​​ ಕ್ರಿಕೆಟರ್ಸ್ ಟಿ-20 ವರ್ಲ್ಡ್​​ಕಪ್​ ಆಡಬೇಕಾದ ಅವಶ್ಯಕತೆ ಇದೆ. ಬರೀ ಯಂಗ್​ಸ್ಟರ್ಸ್​ಗಳನ್ನೇ ಹೊತ್ತುಕೊಂಡು ವರ್ಲ್ಡ್​​ಕಪ್​ನಂಥಾ ಟೂರ್ನಿಯಲ್ಲಿ ಆಡೋಕೆ ಆಗಲ್ಲ. ಎಕ್ಸ್​​ಪೀರಿಯನ್ಸ್ ಪ್ಲೇಯರ್ಸ್​​ ಅತ್ಯಂತ ಅನಿವಾರ್ಯ ಎಂದಿದ್ದಾರೆ. ಗೌತಮ್​ ಗಂಭೀರ್​ ಕೂಡ ರೋಹಿತ್ ಮತ್ತು ಕೊಹ್ಲಿ ವರ್ಲ್ಡ್​​ಕಪ್​​ನಲ್ಲಿ ಆಡಲೇಬೇಕು ಎಂದಿದ್ದಾರೆ. ಎಸ್ಪೆಷಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನ ಲೀಡ್ ಮಾಡಬೇಕು. ರೋಹಿತ್​ಗಿಂತ ಬೆಟರ್​ ಕ್ಯಾಪ್ಟನ್​ ಸದ್ಯಕ್ಕೆ ಯಾರೂ ಇಲ್ಲ ಎಂದಿದ್ದಾರೆ.

ಇಲ್ಲಿ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಯ ಟಿ-20 ಟ್ರ್ಯಾಕ್​ ರೆಕಾರ್ಡ್​ ಬಗ್ಗೆ ಒಂದಷ್ಟು ಡೇಟಾಗಳನ್ನ ಕೂಡ ತೋರಿಸ್ತೀನಿ.

  • ರೋಹಿತ್ ಒಟ್ಟು 148 ಟಿ-20 ಮ್ಯಾಚ್​ ಗಳನ್ನ ಆಡಿದ್ದಾರೆ
  • 3853 ರನ್, 4 ಶತಕ, 29 ಅರ್ಧಶತಕ
  • ವಿರಾಟ್ ಕೊಹ್ಲಿ ಒಟ್ಟು 115 ಟಿ-20 ಮ್ಯಾಚ್ ​ಗಳನ್ನಾಡಿದ್ದಾರೆ
  • 4008 ರನ್, 1 ಶತಕ, 37 ಅರ್ಧಶತಕ

 

ಇನ್ನು ಟಿ-20ಯಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ಸಿ ವಿಚಾರಕ್ಕೆ ಬಂದಾಗ, ಇಬ್ಬರ ಟ್ರ್ಯಾಕ್ ರೆಕಾರ್ಡ್ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ.

ಕ್ಯಾಪ್ಟನ್ಸಿ ರೆಕಾರ್ಡ್! 

ರೋಹಿತ್ ಶರ್ಮಾ ಒಟ್ಟು 35 ಮ್ಯಾಚ್ ​​ಗಳಲ್ಲಿ ಕ್ಯಾಪ್ಟನ್

35 ಪಂದ್ಯಗಳ ಪೈಕಿ 29 ಮ್ಯಾಚ್​ ಗಳನ್ನ ಭಾರತ ಗೆದ್ದಿದೆ

ವಿರಾಟ್ ಕೊಹ್ಲಿ 50 ಮ್ಯಾಚ್ ​ಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್

50 ಪಂದ್ಯಗಳ ಪೈಕಿ 30 ಮ್ಯಾಚ್​ ಗಳನ್ನ ಭಾರತ ಗೆದ್ದಿದೆ

ಐಪಿಎಲ್​ ಸೇರಿ ಒಟ್ಟು 182 ಮ್ಯಾಚ್​ ಗಳಲ್ಲಿ ರೋಹಿತ್ ಕ್ಯಾಪ್ಟನ್

182 ಮ್ಯಾಚ್ ​ಗಳಲ್ಲಿ 111 ಪಂದ್ಯಗಳನ್ನ ಟೀಮ್ ಗೆದ್ದಿದೆ

ವಿರಾಟ್ ಕೊಹ್ಲಿ ಒಟ್ಟು 190 ಮ್ಯಾಚ್​​ ಗಳಲ್ಲಿ ಕ್ಯಾಪ್ಟನ್

190 ಮ್ಯಾಚ್ ​ಗಳಲ್ಲಿ 90 ಪಂದ್ಯಗಳನ್ನ ಟೀಮ್ ಗೆದ್ದಿದೆ

ಇಲ್ಲಿ ಓವರ್​​ಆಲ್ ಆಗಿ ನೋಡಿದಾಗ ಟಿ-20 ಕ್ಯಾಪ್ಟನ್ಸಿಯಲ್ಲಿ ವಿರಾಟ್​​ ಕೊಹ್ಲಿಗಿಂತ ರೋಹಿತ್​ ಶರ್ಮಾ ಮೋಸ್ಟ್ ಸಕ್ಸಸ್​ಫುಲ್ ಕ್ಯಾಪ್ಟನ್. ಮತ್ತು ರೋಹಿತ್ ನಾಯಕತ್ವದಲ್ಲಿ ತಂಡದ ವಿನ್ನಿಂಗ್ ಪರ್ಸೆಂಟೇಜ್ ಕೂಡ ಹೆಚ್ಚಿದೆ. ಐಪಿಎಲ್​ ಟೀಂ ಆಗಲಿ, ಟೀಂ ಇಂಡಿಯಾವೇ ಆಗಲಿ ಟಿ-20 ಫಾರ್ಮೆಟ್​ನಲ್ಲಿ ರೋಹಿತ್ ಶರ್ಮಾ ದಿ ಬೆಸ್ಟ್ ಕ್ಯಾಪ್ಟನ್​​ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಅಂತೂ ಸದ್ಯ ಈ ಇಬ್ಬರೂ ಸೀನಿಯರ್​ ಕ್ರಿಕೆಟರ್ಸ್​ಗಳ ಟಿ-20 ಕೆರಿಯರ್ ಬಗ್ಗೆ ಸಾಕಷ್ಟು ಕ್ವಶ್ಚನ್ ಮಾರ್ಕ್​​ಗಳಿವೆ. ಐಪಿಎಲ್​​ನಲ್ಲಿ ಆಡಬಹುದು. ಅದ್ರಲ್ಲಿ ಡೌಟೇ ಇಲ್ಲ. ಆದ್ರೆ, ಟೀಂ ಇಂಡಿಯಾ ಪರ ಕಂಟಿನ್ಯೂ ಆಗ್ತಾರಾ? ಅದ್ರಲ್ಲೂ ವರ್ಲ್ಡ್​​ಕಪ್​ ರೋಹಿತ್ ಮತ್ತು ಕೊಹ್ಲಿ ತಂಡದಲ್ಲಿರ್ತಾರಾ ಅನ್ನೋದು ಈಗಿರುವ ಪ್ರಶ್ನೆ.

Sulekha