ರೈತರಿಗೆ ಕೈ ಕೊಟ್ಟ ನಿರ್ಮಲಾ! – ಕೃಷಿ ಕ್ಷೇತ್ರಕ್ಕೆ ಕೊಡುಗೆ ಏನು?

ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಮೋದಿ ಸರ್ಕಾರ ಕೃಷಿ ಕೇತ್ರಕ್ಕೆ ಏನೆಲ್ಲಾ ಗಿಫ್ಟ್ ನೀಡಿದೆ?. ಇದರ ಜೊತೆ ಯಾವೆಲ್ಲಾ ಕ್ಷೇತ್ರಕ್ಕೆ ಏನೆಲ್ಲಾ ಸಿಕ್ಕಿದೆ ಎಂಬ ವಿವರ ಇಲ್ಲಿದೆ.
ಇದನ್ನೂ ಓದಿ:ಗೋಡಂಬಿ ಹಾಗೂ ತೆಂಗು ಬೆಳೆಗಾರರಿಗೆ ಬಂಪರ್ – ಕ್ಯಾನ್ಸರ್, ಮಧುಮೇಹ ಔಷಧಿ ಅಗ್ಗ
ತೆಂಗು ಬೆಳೆಗಾರರಿಗೆ ಬಂಪರ್
- ತೆಂಗು ಬೆಳೆ ಮತ್ತು ಮಾರಾಟಕ್ಕೆ ವಿಶೇಷ ಯೋಜನೆ
- ಒಣ ಹಣ್ಣುಗಳ ಬೆಳೆಗೆ ಒತ್ತು
- ಗೋಡಂಬಿ ಸೇರಿದಂತೆ ಹಲವು ಒಣ ಹಣ್ಣುಗಳಿಗೆ ಪ್ರೋತ್ಸಾಹ
- ಕೋಕೋ ಬೆಳೆಗೆ ಪ್ರೋತ್ಸಾಹ
- ಶ್ರೀಗಂಧ ಬೆಳೆಯಲು ಉತ್ತೇಜನ
ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಹಳೆ ಮರ ತೆಗೆಯುವ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಬಜೆಟ್‌ನಲ್ಲಿ ತೆಂಗು ಬೆಳೆ, ತೆಂಗಿನಕಾಯಿ ಉತ್ಪಾದನೆ ಹೆಚ್ಚಳಕ್ಕಾಗಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಯೋಜನೆಗಳನ್ನು ಪ್ರಸ್ತುತಪಡಿಸಿದ್ದಾರೆ. ಹಳೆಯ ತೆಂಗಿನ ಮರಗಳು, ಕಾಯಿ ನೀಡದ ಮರಗಳು, ರೋಗ ಬಂದಂತಹ, ಉಪಯೋಗವಿಲ್ಲದ ತೆಂಗಿನ ಮರಗಳನ್ನು ತೆಗೆದು ಹೊಸ ಗಿಡಗಳನ್ನು ನೆಡಲು ಒತ್ತು ನೀಡಲಾಗುತ್ತದೆ ಎನ್ನಲಾಗಿದೆ.ಇನ್ನು ಗೋಡಂಬಿ ಸೇರಿದಂತೆ ಹಲವು ಒಣ ಹಣ್ಣುಗಳ ಬೆಳೆಗೆ ಒತ್ತು ನೀಡಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಕೋಕೋ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಲಾಗಿದೆ. ಶ್ರೀಗಂಧ ಬೆಳೆಯಲು ಉತ್ತೇಜನ ನೀಡಲಾಗಿದೆ.
ಮಹಿಳೆಯರಿಗೆ ನಿರ್ಮಲಾ ಭಾಗ್ಯ
- ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆ
- ಮಹಿಳೆಯರು ನಡೆಸುವ ಉದ್ಯಮಗಳಿಗೆ ಶಿ-ಮಾರ್ಟ್‌ಗಳು
- ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ವಸತಿ ನಿಲಯ ಸ್ಥಾಪನೆ
- ಪ್ರತಿಜಿಲ್ಲೆಯಲ್ಲೂ ಒಂದೊಂದು ಬಾಲಕಿಯರ ಹಾಸ್ಟೆಲ್ ಘೋಷಣೆ
ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆಗೆ ಒತ್ತು ನೀಡಲಾಗಿದೆ. ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗೆ ಶಿ-ಮಾರ್ಟ್‌ಗಳು ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ಸ್ವ-ಸಹಾಯ ಉದ್ಯಮಗಳು ಅಂದರೆ ಶಿ-ಮಾರ್ಟ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಾಗೇ ದೇಶದ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ವಸತಿ ನಿಲಯ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿದೆ.
ಟೂರಿಸಂ ಅಭಿವೃದ್ಧಿಗೆ ಉತ್ತೇಜನ
- ಭಾರತೀಯ ಟೂರಿಸಂ ಅಭಿವೃದ್ಧಿಗೆ ಉತ್ತೇಜನ
- 10 ಸಾವಿರ ಗೈಡ್ ಗಳಿಗೆ 12 ಗಂಟೆ ತರಬೇತಿ
ಕರ್ನಾಟಕ, ಕೇರಳ ಕರಾವಳಿ ಅಭಿವೃದ್ಧಿಗೆ ಆದ್ಯತೆ ಭಾರತೀಯ ಟೂರಿಸಂ ಅಭಿವೃದ್ಧಿಗೆ ಉತ್ತೇಜಸಲು ನಿರ್ಧರಿಸಿದ್ದು, 20 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ 10 ಸಾವಿರ ಗೈಡ್ ಗಳಿಗೆ 12 ಗಂಟೆ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಆದಾಯ ತೆರಿಗೆ ಕುರಿತು ದೊಡ್ಡ ಘೋಷಣೆ
- ನೇರ ತೆರಿಗೆ ಕುರಿತು ನಿರ್ಮಲಾ ಘೋಷಣೆ
- ಹೊಸ ತೆರಿಗೆ ಕಾಯ್ದೆ ಜಾರಿಗೊಳಿಸೋ ಘೋಷಣೆ
- ಏಪ್ರಿಲ್ 1ರಿಂದ ಹೊಸ ತೆರಿಗೆ ಕಾಯ್ದೆ ಜಾರಿ
- ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ
- ವಿದ್ಯಾರ್ಥಿ, ಐಟಿ ಉದ್ಯೋಗಿಗಳಿಗೆ ಹೊಸ ಸ್ಕೀಂ
- 6 ತಿಂಗಳಿಗೊಮ್ಮೆ ಆಸ್ತಿ ಘೋಷಣೆಯ ಅವಕಾಶ
- ಆದಾಯ ಘೋಷಣೆ ಮಾಡದಿದ್ದರೆ 100% ದಂಡ
- ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷೆ ಇಲ್ಲ, ದಂಡ ಮಾತ್ರ
ಹೊಸ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಘೋಷಣೆ ಮಾಡಿದ್ದಾರೆ. ಆದಾಯ ತೆರಿಗೆ ನಮೂನೆಗಳನ್ನು ಸರಳೀಕರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಹೊಸ ಕಾನೂನು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ತಾಂತ್ರಿಕ ದೋಷಗಳನ್ನು ದಂಡಗಳಾಗಿ ಪರಿವರ್ತಿಸಲು ಈ ಕಾನೂನು ಪ್ರಸ್ತಾಪಿಸುತ್ತದೆ. ವಿದೇಶಿ ಪ್ರಯಾಣದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗುತ್ತದೆ. ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು 5% ಕ್ಕೆ ಇಳಿಸಲಾಗಿದೆ. ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ವಿದ್ಯಾರ್ಥಿ, ಐಟಿ ಉದ್ಯೋಗಿಗಳಿಗೆ ಹೊಸ ಸ್ಕೀಂ ತಂದಿದ್ದು, 6 ತಿಂಗಳಿಗೊಮ್ಮೆ ಆಸ್ತಿ ಘೋಷಣೆಯ ಅವಕಾಶ ನೀಡಲಾಗಿದೆ. ಆದಾಯ ಘೋಷಣೆ ಮಾಡದಿದ್ದರೆ 100% ದಂಡ ಹಾಕಲಾಗುತ್ತೆ. ಆದ್ರೆ
ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷೆ ಇರಲ್ಲ, ದಂಡ ಮಾತ್ರ.
ಲೆದರ್ ಶೂ, ಉತ್ಪನ್ನಗಳ ರಫ್ತು ಹೆಚ್ಚಳ
- ಸಮುದ್ರ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಕ್ರಮ
ಲೆದರ್ ಶೂ, ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಕ್ರಮ
ಸೋಲಾರ್ ಗ್ಲಾಸ್ ಕಚ್ಚಾವಸ್ತು ಆಮದು ಸುಲಭ - ಕ್ಯಾನ್ಸರ್ ಸಂಬಂಧಿತ 17 ಔಷಧಿಗಳಿಗೆ ವಿನಾಯಿತಿ
- ಶೂ, ಜವಳಿ ರಫ್ತು, ಬ್ಯಾಟರಿಗಳು ಅಗ್ಗ
ಲೆದರ್ ಶೂ, ಉತ್ಪನ್ನಗಳ ರಫ್ತು ಹೆಚ್ಚಳವಾಗಿದೆ. ಸಮುದ್ರ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಕೇಂದ್ರ ಕ್ರಮ ಕೈಗೊಂಡಿದೆ.
ಲೆದರ್ ಶೂ, ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ. ಸೋಲಾರ್ ಗ್ಲಾಸ್ ಕಚ್ಚಾವಸ್ತು ಆಮದು ಸುಲಭವಾಗುವಂತೆ ಮಾಡಲಾಗುತ್ತದೆ. ಕ್ಯಾನ್ಸರ್ ಸಂಬಂಧಿತ 17 ಔಷಧಿಗಳಿಗೆ ವಿನಾಯಿತಿ ನೀಡಲಾಗಿದೆ. ಶೂ, ಜವಳಿ ರಫ್ತು, ಬ್ಯಾಟರಿಗಳು ಅಗ್ಗವಾಗಿದೆ.

ನೋಡಿರಿ

