ಮಲಗಿದ್ದಲ್ಲೇ ಅಪ್ಪ ಅಮ್ಮ ಮಕ್ಕಳ ದುರಂತ ಅಂತ್ಯ – ಒಂದೇ ಮನೆಯಲ್ಲಿ ನಾಲ್ವರ ಸಾವಿಗೆ ಕಾರಣವೇನು?

ಮಲಗಿದ್ದಲ್ಲೇ ಅಪ್ಪ ಅಮ್ಮ ಮಕ್ಕಳ ದುರಂತ ಅಂತ್ಯ – ಒಂದೇ ಮನೆಯಲ್ಲಿ ನಾಲ್ವರ ಸಾವಿಗೆ ಕಾರಣವೇನು?

ಸಾವು ಯಾವಾಗ ಹೇಗೆ ಬರುತ್ತೆ ಅನ್ನೋದನ್ನು ಬಲ್ಲವರು ಇಲ್ಲ. ಆದ್ರೆ, ಮೈಸೂರಿನಲ್ಲಿ ನಡೆದ ದುರಂತ ಅಂತ್ಯ ವಿಧಿಯನ್ನೇ ಶಪಿಸುವಂತಿದೆ. ಅಪ್ಪ ಅಮ್ಮ ಮತ್ತು ಇಬ್ಬರು ಮುದ್ದಾದ ಹೆಣ್ಣುಮಕ್ಕಳು ವಿಧಿಯ ಕ್ರೂರ ದೃಷ್ಟಿಗೆ ಬಲಿಯಾಗಿದ್ದಾರೆ. ಮಲಗಿದ್ದಲ್ಲೇ ಸಾವಿನ ಅರಿವಿಲ್ಲದೇ ನಾಲ್ಕೂ ಜನ ಚಿರನಿದ್ರೆಗೆ ಜಾರಿದ್ದಾರೆ.

ಇದನ್ನೂ ಓದಿ: ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ವಿಧಿವಶ

ಮೈಸೂರಿನ ಯರಗನಹಳ್ಳಿಯಲ್ಲಿ ಬುಧವಾರ ಬೆಳಗ್ಗೆ(ಇವತ್ತು ಬೆಳಗ್ಗೆ) ಜನ ಆತಂಕದಲ್ಲಿದ್ದರು. ಯಾಕೆಂದ್ರೆ, ಒಂದೇ ಕುಟುಂಬ ನಾಲ್ವರು ಮಲಗಿದ್ದಲ್ಲೇ ಶವವಾಗಿ ಹೋಗಿದ್ದರು. ತಂದೆ ತಾಯಿ ಜೊತೆ ಇಬ್ಬರು ಮಕ್ಕಳು ಕೂಡಾ ಚಿರನಿದ್ರೆಗೆ ಜಾರಿದ್ದರು. ಸಿಲಿಂಡರ್ ಸೋರಿಕೆಯಿಂದ ಉಸಿರುಗಟ್ಟಿ ನಾಲ್ವರೂ ಕೂಡಾ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ಈ ದುರಂತ ಸಂಭವಿಸಿ ಎರಡು ದಿನಗಳ ನಂತರ ಗೊತ್ತಾಗಿದೆ.

ಬಟ್ಟೆ ಐರನ್ ಕೆಲಸ ಮಾಡುತ್ತಿದ್ದ ಮಂಜುಳಾ (39), ಕುಮಾರಸ್ವಾಮಿ (45), ಅರ್ಚನಾ (19), ಸ್ವಾತಿ (17) ಮೃತ ದುರ್ದೈವಿಗಳು. ಸ್ಥಳಕ್ಕೆ ಕಮಿಷನರ್​ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲತಃ ಚಿಕ್ಕಮಗಳೂರು ಸಖರಯಪಟ್ಟಣದ ಕುಟುಂಬ ಕಳೆದ 30 ವರ್ಷದಿಂದ ಮೈಸೂರಿನಲ್ಲಿ ವಾಸವಾಗಿದೆ. ನಾಲ್ವರೂ ಕಳೆದ ಗುರುವಾರ ಗುರುವಾರ ಸಂಬಂಧಿಕರ ಮದುವೆ ಹೋಗಿದ್ದರು. ಮದುವೆ ಮುಗಿಸಿಕೊಂಡು ತಮ್ಮ ಊರಾದ ಸಖರಯಪಟ್ಟಣಕ್ಕೆ ಹೋಗಿದ್ದರು. ಅಲ್ಲಿಂದ ಸೋಮವಾರ ಬೆಳಗ್ಗೆ ಮೈಸೂರಿಗೆ ವಾಪಸ್ಸಾಗಿದ್ದರು. ಸೋಮವಾರ ರಾತ್ರಿ ಅನಿಲ ಸೋರಿಕೆಯಾಗಿದೆ. ಇದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಂಗಳವಾರ ಇಡೀ ದಿನ ಮನೆಯ ಬಾಗಿಲು ತೆರೆದಿರಲಿಲ್ಲ. ಬುಧವಾರ ಬೆಳಗ್ಗೆ ಅರ್ಚನಾ ಮತ್ತು ಸ್ವಾತಿಯ ಕಾಲೇಜು ಸ್ನೇಹಿತರು ಮನೆ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಾಸವಾಗಿದ್ದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಮಿಷನರ್​ ರಮೇಶ್ ಬಾನೋತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್‌ನಲ್ಲಿ ಯಾವುದೇ ಸ್ಪೋಟ ಸಂಭವಿಸಿಲ್ಲ, ಸಾವಿನ ಬಗ್ಗೆ ಕೆಲ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.

Sulekha