ಏನಿದು BOXING DAY ಟೆಸ್ಟ್? – ಈ ಮ್ಯಾಚ್‌ಗೆ ಯಾಕಿಷ್ಟು ಮಹತ್ವ ಕೊಡುತ್ತಾರೆ?

ಏನಿದು BOXING DAY ಟೆಸ್ಟ್? – ಈ ಮ್ಯಾಚ್‌ಗೆ ಯಾಕಿಷ್ಟು ಮಹತ್ವ ಕೊಡುತ್ತಾರೆ?

ಬಾಕ್ಸಿಂಗ್ ಡೇ.. ಏನಿದು? ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫಸ್ಟ್ ಮ್ಯಾಚ್​ನ್ನ ಬಾಕ್ಸಿಂಗ್ ಡೇ ಟೆಸ್ಟ್ ಅಂತಾನೆ ಕರೆಯಲಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಆಡ್ತಿರೋ ಫಸ್ಟ್ ಮ್ಯಾಚ್​ನ್ನ ಕೂಡ ಬಾಕ್ಸಿಂಗ್​ ಡೇ ಟೆಸ್ಟ್ ಅಂತಾ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೆ ಏನು? ಬಾಕ್ಸಿಂಗ್ ಡೇ ಅನ್ನೋ ಹೆಸರು ಯಾಕೆ ಬಂತು? ಈ ಬಗ್ಗೆ ಕ್ರಿಕೆಟ್ ಫಾಲೋವರ್ಸ್​ಗಳೆಲ್ಲಾ ತಿಳಿದುಕೊಳ್ಳಲೇಬೇಕಾಗಿರೋ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಮಾಡುತ್ತಾ ಮ್ಯಾಜಿಕ್ – ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯ ಲೆಕ್ಕಾಚಾರಗಳೇನು?

ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಫಸ್ಟ್ ಟೆಸ್ಟ್ ಮ್ಯಾಚ್​ ನಡೀತಿದೆ. ಡಿಸೆಂಬರ್ 26ರಿಂದ 30ರವರೆಗೆ ನಡೆಯುವ ಟೆಸ್ಟ್​ ಮ್ಯಾಚ್​ನ್ನ ಮಾತ್ರ ಬಾಕ್ಸಿಂಗ್​ ಡೇ ಟೆಸ್ಟ್ ಅಂತಾ ಹೇಳಲಾಗುತ್ತೆ. ಬೇರೆ ಡೇಟ್​​ನಲ್ಲಿ ನಡೆಯೋ ಟೆಸ್ಟ್​ ಮ್ಯಾಚ್​​ನ್ನ ಬಾಕ್ಸಿಂಗ್​ ಡೇ ಅನ್ನೋದಿಲ್ಲ. ಕೇವಲ ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ನಡೆಯೋ ಮ್ಯಾಚ್​​ನ್ನ ಮಾತ್ರ. ಅದು ಕೂಡ ಈ ಡೇಟ್​​ನಲ್ಲಿ ಎಲ್ಲಾ ದೇಶಗಳಲ್ಲೂ ನಡೆಯೋ ಟೆಸ್ಟ್​ ಮ್ಯಾಚ್​​ನ್ನ ಬಾಕ್ಸಿಂಗ್ ಡೇ ಮ್ಯಾಚ್ ಅನ್ನೋದಿಲ್ಲ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಈ ಮೂರು ದೇಶಗಳಲ್ಲಿ ಮಾತ್ರ ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ ಟೆಸ್ಟ್ ಮ್ಯಾಚ್ ನಡೆಯುತ್ತೆ ಅನ್ನೋದಾದ್ರೆ ಅದನ್ನ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಅಂತಾರೆ. ಇದು ಕ್ರಿಸ್​ಮಸ್​ ಹಬ್ಬದ ಮರುದಿನವೇ ನಡೆಯೋದ್ರಿಂದ ಈ ಕಾರಣಕ್ಕಾಗಿ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್​ ಅಂತಾ ಕರೀತಾರೆ. ಡಿಸೆಂಬರ್​ 26ರಿಂದ ಪಂದ್ಯ ಆರಂಭವಾದರೆ ಮಾತ್ರ ಅದು ಬಾಕ್ಸಿಂಗ್​ ಡೇ ಆಗುತ್ತೆ. ಡಿಸೆಂಬರ್ 26ನ್ನ ಬಾಕ್ಸಿಂಗ್ ಡೇ ಅಂತಾ ಕರಿಯೋಕೆ ಇಲ್ಲೊಂದು ಇಂಟ್ರೆಸ್ಟಿಂಗ್ ರೀಸನ್ ಕೂಡ ಇದೆ. ಕ್ರಿಸ್ಮಸ್ ಮರುದಿನ ಅಂದ್ರೆ ಡಿಸೆಂಬರ್​ 26ನೇ ತಾರೀಖನ್ನ ಬ್ರಿಟೀಷರ ಆಡಳಿತಕ್ಕೊಳಗಾದ ದೇಶಗಳು ಅಂದ್ರೆ ಕಾಮೆನ್​ವೆಲ್ತ್ ರಾಷ್ಟ್ರಗಳ ಪೈಕಿ ಕೆಲ ದೇಶಗಳಲ್ಲಿ ಡಿಸೆಂಬರ್ 26ನ್ನ ಬಾಕ್ಸಿಂಗ್ ಡೇ ಅಂತಾ ಸೆಲೆಬ್ರೇಟ್ ಮಾಡಲಾಗುತ್ತೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಕೆನಡಾ, ನೈಜೀರಿಯಾ, ಟ್ರಿನಿಡಾಡ್ & ಟೊಬೆಗೋ ಮತ್ತು ಸೌತ್ ಆಫ್ರಿಕಾದಲ್ಲಿ ಬಾಕ್ಸಿಂಗ್ ಡೇ ಆಚರಣೆ ಮಾಡಲಾಗುತ್ತೆ. ಈ ಬಾಕ್ಸಿಂಗ್ ಡೇ ಅನ್ನೋ ಹೆಸರು ಬರೋಕೆ ಇನ್ನೊಂದು ಕಾರಣ ಕೂಡ ಇದೆ. 1800ನೇ ಇಸವಿಯಲ್ಲಿ ಬ್ರಿಟನ್​​ ರಾಣಿ ವಿಕ್ಟೋರಿಯಾ ಆಡಳಿತದ ಸಂದರ್ಭದಲ್ಲಿ ಕೆಳ ಮಟ್ಟದ ಬ್ರಿಟಿಷ್ ಸಮಾಜಕ್ಕೆ ಕ್ರಿಸ್ಮಸ್ ಹಬ್ಬದ ವೇಳೆ ಗಿಫ್ಟ್​ ನೀಡಲಾಗ್ತಿತ್ತು. ಜೊತೆಗೆ ಕ್ರಿಸ್ಮಸ್​ನಂದು ಅಂದ್ರೆ ಡಿಸೆಂಬರ್ 25ಕ್ಕೆ ಹಬ್ಬದ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ನೌಕರರಿಗೆ ಕ್ರಿಸ್ಮಸ್ ಮರುದಿನ ಡಿಸೆಂಬರ್ 26ಕ್ಕೆ ಬಾಕ್ಸ್​​ನಲ್ಲಿ ಗಿಫ್ಟ್ ನೀಡಲಾಗುತ್ತೆ. ಆ ಗಿಫ್ಟ್​​ ಬಾಕ್ಸ್​ಗೆ ಕ್ರಿಸ್ಮಸ್ ಬಾಕ್ಸ್ ಅಂತಾ ಹೆಸರಿಡಲಾಗಿತ್ತು.  ನಂತರ ಅದನ್ನ ಬಾಕ್ಸಿಂಗ್ ಡೇ ಅಂತಾನೆ ಕರೆಯಲಾಯ್ತು. ಬಾಕ್ಸಿಂಗ್ ಡೇ ಅಂದ್ರೆ ಗಿಫ್ಟ್ ಬಾಕ್ಸ್​ಗಳನ್ನ ನೀಡೋ ದಿನ.  ಗಿಫ್ಟ್ ಬಾಕ್ಸ್​ಗಳನ್ನ ನೀಡೋದ್ರ ಜೊತೆಗೆ ಡಿಸೆಂಬರ್​ 26 ರಿಂದ ಡಿಸೆಂಬರ್​ 30ರವರೆಗೂ ಕಾಮನ್​ವೆಲ್ತ್ ರಾಷ್ಟ್ರಗಳಲ್ಲಿ ವಿವಿಧ ಕ್ರೀಡಾಕೂಟಗಳನ್ನ ಕೂಡ ಆಯೋಜಿಸಲಾಗ್ತಿತ್ತು. ಹೀಗಾಗಿ ಬಾಕ್ಸಿಂಗ್ ಡೇ ಮ್ಯಾಚ್​ ಅನ್ನೋ ಹೆಸರು ಕೂಡ ಬಂತು.

ಕ್ರಿಕೆಟ್​​ನಲ್ಲಿ ಬಾಕ್ಸಿಂಡ್​ ಡೇ ಮ್ಯಾಚ್ ಅನ್ನೋದು ಶುರುವಾಗಿದ್ದು 1892ರಲ್ಲಿ. ಫಸ್ಟ್ ಟೈಮ್​ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ಲೋಕಲ್ ಟೀಂಗಳ ಮಧ್ಯೆ ಬಾಕ್ಸಿಂಗ್ ಡೇ ಮ್ಯಾಚ್ ನಡೆಯುತ್ತೆ.  ಆದ್ರೆ 1950ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ಫಸ್ಟ್ ಬಾಕ್ಸಿಂಗ್ ಡೇ ಇಂಡರ್​​ನ್ಯಾಷನಲ್​​ ಮ್ಯಾಚ್ ನಡೆಯುತ್ತೆ. 1980ರ ಬಳಿಕ ಪ್ರತಿ ವರ್ಷ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್​ನ್ನ ಹೋಸ್ಟ್ ಮಾಡ್ತಾ ಬಂದಿದೆ. ಸಾಮಾನ್ಯವಾಗಿ ಬಾಕ್ಸಿಂಗ್ ಡೇನಂದು ಟೆಸ್ಟ್​ ಮ್ಯಾಚ್​​ನ್ನ ನಡೆಸಲಾಗುತ್ತೆ. ಅಪರೂಪಕ್ಕೊಮ್ಮೆ ವಂಡೇ ಮ್ಯಾಚ್​ ಕೂಡ ನಡೆದಿದೆ. ಆದ್ರೆ ಬಾಕ್ಸಿಂಗ್​​ ಡೇನಂದು ಟೆಸ್ಟ್​ ಮ್ಯಾಚ್​​ನ್ನ ನಡೆಸೋದು ಆಸ್ಟ್ರೇಲಿಯಾದಲ್ಲಿರೋ ಸಂಪ್ರದಾಯ. ಇನ್ನು ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್ ಯಾವಗಲೂ ಮೆಲ್ಬೋರ್ನ್ ಗ್ರೌಂಡ್​​ನಲ್ಲೇ ನಡೆಯೋದು. ಎಂಸಿಜಿ ಬಿಟ್ಟು ಆಸ್ಟ್ರೇಲಿಯಾ ಇನ್ಯಾವುದೇ ಗ್ರೌಂಡ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ನ್ನ ಹೋಸ್ಟ್ ಮಾಡೋದಿಲ್ಲ. ಆದ್ರೆ ಡಿಸೆಂಬರ್​ 26 ಅಂದ್ರೆ ಟೆಸ್ಟ್​ ಮ್ಯಾಚ್​ ಫಸ್ಟ್​ಡೇಯಂತೂ ಎಂಸಿಜಿ ಹೌಸ್​ಫುಲ್ ಆಗಿರುತ್ತೆ. ಈ ಹಿಂದೆ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾದಲ್ಲಿ ಹಲವು ಬಾಕ್ಸಿಂಗ್ ಡೇ ಮ್ಯಾಚ್​ಗಳನ್ನ ಆಡಿದೆ. 1985, 1991, 1999, 2003, 2007, 2011, 2014, 2018 ಮತ್ತು 2020ರಲ್ಲಿ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾ ವಿರುದ್ಧ ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್ ಆಡಿತ್ತು. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಕೂಡ ಬಾಕ್ಸಿಂಗ್ ಡೇ ಟೆಸ್ಟ್ ಮ್ಯಾಚ್​​ಗಳನ್ನ ಆಯೋಜಿಸ್ತಿದೆ. ಬಾಕ್ಸಿಂಗ್​ ಡೇ ಟೆಸ್ಟ್ ಅಂದ್ರೆ ಸಾಕು ಅದಕ್ಕೊಂದು ಸ್ಪೆಷಲ್ ಹೈಪ್ ಇರುತ್ತೆ. ಪ್ಲೇಯರ್ಸ್​ಗಳು ಅಷ್ಟೇ ಎಕ್ಸ್​​ಟ್ರಾ ಜೋಶ್​ನಲ್ಲಿ ಆಡ್ತಾರೆ.

ಈ ಬಾರಿಯ ಸ್ಪೆಷಾಲಿಟಿ ಏನಂದ್ರೆ, ಏಕಕಾಲಕ್ಕೆ ಎರಡು ಬಾಕ್ಸಿಂಗ್​ ಡೇ ಟೆಸ್ಟ್ ಮ್ಯಾಚ್​ ನಡೀತಾ ಇದೆ. ಒಂದು ಇಂಡಿಯಾ VS ಸೌತ್​ ಆಫ್ರಿಕಾ.. ಇನ್ನೊಂದು ಆಸ್ಟ್ರೇಲಿಯಾ VS ಪಾಕಿಸ್ತಾನ.. ಈಗಾಗ್ಲೇ ಆಸಿಸ್-ಪಾಕ್ ಮಧ್ಯೆ ಫಸ್ಟ್ ಟೆಸ್ಟ್ ಮ್ಯಾಚ್​​ ನಡೆದಿದೆ. 2ನೇ ಟೆಸ್ಟ್​ ಮ್ಯಾಚ್​ ಬಾಕ್ಸಿಂಗ್​ ಡೇನಂದೇ ಎಂಸಿಜಿಯಲ್ಲಿ ನಡೀತಾ ಇದೆ. ಹೀಗಾಗಿ ಬ್ಯಾಕ್ಸಿಂಗ್ ಡೇನಂದು ಯಾರು ಹೆಚ್ಚು ಪಂಚ್ ಕೊಡ್ತಾರೋ, ಯಾರು ಹೆಚ್ಚು ಗುದ್ದು ತಿಂತಾರೋ ನೋಡ್ಬೇಕಿದೆ.

 

Sulekha