ಮೂರನೇ ಮದುವೆ ಬೆನ್ನಲ್ಲೆ ತಗ್ಲಾಕ್ಕೊಂಡ ಶೋಯೆಬ್ ಮಲಿಕ್ – ಪಾಕ್ ಕ್ರಿಕೆಟಿಗನ ವಿರುದ್ಧ ಕೇಳಿ ಬಂದಿರೋ ಆರೋಪ ಏನು?

ಮೂರನೇ ಮದುವೆ ಬೆನ್ನಲ್ಲೆ ತಗ್ಲಾಕ್ಕೊಂಡ ಶೋಯೆಬ್ ಮಲಿಕ್ – ಪಾಕ್ ಕ್ರಿಕೆಟಿಗನ ವಿರುದ್ಧ ಕೇಳಿ ಬಂದಿರೋ ಆರೋಪ ಏನು?

ಪಾಕಿಸ್ತಾನದಲ್ಲಿರೋರಿಗೆ ಮೋಸ ಮಾಡದೆ ಬದುಕೋಕೆ ಆಗಲ್ಲ ಅನ್ಸುತ್ತೆ. ಯಾವುದೇ ಫೀಲ್ಡನ್ನೇ ತೆಗೆದುಕೊಳ್ಳಿ ಅಲ್ಲಿ ಪಾಕಿಗಳಿಂದ ಒಂದಲ್ಲಾ ಒಂದು ಮೋಸದಾಟ ಇದ್ದೇ ಇರುತ್ತೆ. ಮೋಸವೇ ನಮ್ಮ ಬಂದು ಬಳಗ ಎಂಬಂತೆ ವರ್ತಿಸ್ತಾರೆ. ಅದ್ರಲ್ಲೂ ಕ್ರಿಕೆಟ್​​ನಲ್ಲಂತೂ ಪಾಕಿಸ್ತಾನಿಗಳಿಗೆ ಮೋಸದಾಟದ ದೊಡ್ಡ ಇತಿಹಾಸವೇ ಇದೆ. ಮ್ಯಾಚ್​​ ಫಿಕ್ಸಿಂಗ್​ಗೂ  ಪಾಕಿಸ್ತಾನಿಗಳಿಗೂ ಎಲ್ಲಿಲ್ಲದ ನಂಟು. ಈಗ ಲೇಟೆಸ್ಟ್ ಆಗಿ ತಗ್ಲಾಕ್ಕೊಂಡಿರೋದು ಸಾನಿಯಾ ಮಿರ್ಜಾರ ನಿವೃತ್ತ ಪತಿರಾಯ ಶೋಯೆಬ್ ಮಲಿಕ್​. ನ್ಯಾಷನಲ್​ ಟೀಮ್​ನಲ್ಲಂತೂ ಶೋಯೆಬ್ ಈಗ ಆಡ್ತಿಲ್ಲ. ಅಲ್ಲೋ ಇಲ್ಲೋ ಒಂದಷ್ಟು ಕಾಂಜಿ ಪೀಂಜಿ ಟಿ20 ಕ್ರಿಕೆಟ್​ ಲೀಗ್​ಗಳನ್ನ ಆಡಿ ದುಡ್ಡು ಮಾಡೋಕೆ ನೋಡ್ತಿದ್ದಾರೆ. ಆದ್ರೆ ಅದನ್ನಾದ್ರೂ ಸ್ವಲ್ಪ ನಿಯತ್ತಿನಿಂದ ಆಡ್ಬೇಕಲ್ವಾ. ಇಲ್ಲೂ ಶೋಯೆಬ್ ಮಲಿಕ್ ಕಳ್ಳಾಟವಾಡೋಕೆ ಹೋಗಿರೋದು ಜಗಜ್ಜಾಹೀರಾಗಿದೆ. ಅಷ್ಟಕ್ಕೂ ಶೋಯೆಬ್​ ಮಲಿಕ್ ವಿರುದ್ಧ ಕೇಳಿ ಬಂದಿರೋ ಆರೋಪ ಏನು? ಹಾಗೆಯೇ ಮ್ಯಾಚ್ ಫಿಕ್ಸಿಂಗ್ ಮತ್ತು ಮೋಸದಾಟದಲ್ಲಿ ಪಾಕ್ ಕ್ರಿಕೆಟಿಗರ ಮೋಸದಾಟದ ಇತಿಹಾಸ ಎಂಥಾದ್ದು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಬಿರುಕು ಸುದ್ದಿ ಬೆನ್ನಲ್ಲೇ ಶಾಕಿಂಗ್ ನ್ಯೂಸ್ – ಪಾಕಿಸ್ತಾನಿ ನಟಿ ಜೊತೆ ಶೋಯೆಬ್ ಮಲಿಕ್ ಮದುವೆ

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಶೋಯೆಬ್ ಮಲಿಕ್ ಫಾರ್ಚ್ಯುನ್ ಬರಿಶಾಲ್ ಅನ್ನೋ ತಂಡದ ಪರ ಆಡ್ತಾ ಇದ್ರು. ಜನವರಿ 22ರಂದು ಬರಿಶಾಲ್ ಮತ್ತು ಖುಲಾನ ಟೈಗರ್ಸ್ ನಡುವಿನ ಮ್ಯಾಚ್​ ವೇಳೆ ಶೋಯೆಬ್ ಮಲಿಕ್ ಒಂದೇ ಓವರ್​ನಲ್ಲಿ ಒಟ್ಟು ಮೂರು ನೋ ಬಾಲ್​​ಗಳನ್ನ ಎಸೆದಿದ್ದಾರೆ. ಈ ಮೂರು ನೋ ಬಾಲ್​ಗಳನ್ನ ಕೂಡ ಓವರ್​ ಸ್ಟೆಪ್​ ಆಗಿಯೇ ಎಸೆದಿರೋದು. ಮ್ಯಾಚ್​​ನ 4ನೇ ಓವರ್​ ಸಂದರ್ಭ ಶೋಯೆಬ್​ ಮಲಿಕ್ ಒಟ್ಟು ಮೂರು ಬಾರಿ ಓವರ್​ ಸ್ಟೆಪ್​ ಆಗಿ ನೋ ಬಾಲ್​ ಎಸೆದಿದ್ದಾರೆ. ಒಂದು ಬಾರಿ ಓಕೆ, ಅಬ್ಬಬ್ಬಾ ಅಂದ್ರೆ ಎರಡು ಬಾರಿ ಓವರ್​ ಸ್ಟೆಪ್​ ಆಗಬಹುದೋ ಏನೊ. ಬಟ್ ಒಂದೇ ಓವರ್​​ನಲ್ಲಿ ಮೂರು ಬಾರಿ ಓವರ್​​ಸ್ಟೆಪ್​ ಆಗಿ ಬೌಲಿಂಗ್ ಮಾಡೋದು ಅಂದ್ರೆ ಏನರ್ಥ. ಅದು ಕೂಡ ಫಸ್ಟ್​  5 ಬಾಲ್​ ಎಸೆದಾಗ ಶೋಯೆಬ್​​ ಮಲಿಕ್ ಒಂದು ನೋ ಬಾಲ್ ಅಷ್ಟೇ ಹಾಕಿದ್ರು. ಬಟ್ ಓವರ್​ನ ಕೊನೆಯ ಬಾಲ್ ವೇಳೆಗೆ ಓವರ್​ಸ್ಟೆಪ್​ ಆಗಿಯೇ ಬ್ಯಾಕ್​ ಟು ಬ್ಯಾಕ್ ಎರಡು ನೋ ಬಾಲ್​ಗಳನ್ನ ಎಸೆದಿದ್ದಾರೆ. ಶೊಯೆಬ್​ ಮಲಿಕ್​ರ ಈ ನಡೆ ಭಾರಿ ಅನುಮಾನಕ್ಕೆ ಕಾರಣವಾಗಿದೆ. ಈ ವೇಳೆ ಬರಿಶಾಲ್ ತಂಡದ ಕ್ಯಾಪ್ಟನ್ ತಮೀಮ್ ಇಕ್ಬಾಲ್ ತುಂಬಾನೆ ಅಪ್​​​ಸೆಟ್ ಆಗ್ತಾರೆ. ಆ ಒಂದೇ ಓವರ್​​ನಲ್ಲಿ ಶೋಯೆಬ್​ಮಲಿಕ್ 18 ರನ್ ಬೇರೆ ಕೊಟ್ಟಿದ್ರು. ಅಫ್​ಕೋಸ್​​ ಮೂರು ನೋ ಬಾಲ್​ ಅಂದ್ರೆ ಮೂರು ಫ್ರೀ ಹಿಟ್ ಬೇರೆ ಸಿಕ್ಕಿತ್ತಲ್ವಾ. ಅದೇ ಲಾಸ್ಟ್​, ಆ ಬಳಿಕ ಇನ್ನಿಂಗ್ಸ್​ ಮುಗಿಯೋವರೆಗೂ ಶೋಯೆಬ್ ಮಲಿಕ್​​ಗೆ ಒಂದೇ ಒಂದು ಓವರ್ ಮಾಡೋಕೆ ಕ್ಯಾಪ್ಟನ್ ತಮೀಮ್ ಇಕ್ಬಾಲ್ ಅವಕಾಶ ಕೊಟ್ಟಿಲ್ಲ.

ಈ ಮೂರು ನೋಬಾಲ್ ಇನ್ಸಿಡೆಂಟ್​​ನಿಂದ ಫಾರ್ಚ್ಯುನ್ ಬರಿಶಾಲ್ ಟೀಮ್​​ನ ಮ್ಯಾನೇಜ್ಮೆಂಟ್​​ಗೂ ಶೋಯೆಬ್ ಮಲಿಕ್​​ ಬಗ್ಗೆ ಡೌಟ್ ಬಂದಿದೆ. ಬರಿಶಾಲ್​​ ತಂಡದ ಸಪೋರ್ಟರ್ಸ್​​ಗಳೆಲ್ಲಾ ಶೊಯೆಬ್ ಮಲಿಕ್ ವಿರುದ್ಧ ಮ್ಯಾಚ್​​ ಫಿಕ್ಸಿಂಗ್​​ನ ಆರೋಪ ಮಾಡ್ತಿದ್ದಾರೆ. ಇದ್ರಿಂದ ಫ್ರಾಂಚೈಸಿಯ ರೆಪ್ಯುಟೇಶನ್​​ಗೂ ಡ್ಯಾಮೇಜ್ ಆಗಿದೆ. ಹೀಗಾಗಿ ಫಾರ್ಚ್ಯುನ್ ಬರಿಶಾಲ್ ಮ್ಯಾನೇಜ್ಮೆಂಟ್ ಶೋಯೆಬ್ ಮಲಿಕ್ ಜೊತೆಗಿನ ಕಾಂಟ್ರ್ಯಾಕ್ಟ್​ನ್ನೇ ಟರ್ಮಿನೇಟ್ ಮಾಡಿದೆ. ತಮ್ಮನ್ನ ಟರ್ಮಿನೇಟ್ ಮಾಡೋ ಮುನ್ನವೇ ಶೋಯೆಬ್​ ಮಲಿಕ್ ಕೂಡ ಇದ್ದಕ್ಕಿದ್ದಂತೆ ಪಾಕಿಸ್ತಾನಕ್ಕೆ ವಾಪಸ್ ಆಗಿದ್ರು. ಸದ್ಯಕ್ಕಂತೂ ಶೋಯೆಬ್​ ಮಲಿಕ್​ಗೆ ಫಾರ್ಚ್ಯುನ್ ಬರಿಶಾಲ್ ತಂಡದ ಪರವಾಗಲಿ, ಬಾಂಗ್ಲಾದೇಶ ಪ್ರೀಮಿಯರ್​​​ ಲೀಗ್​​ನಲ್ಲಾಗಲಿ ಆಡೋಕೆ ಅವಕಾಶ ಇಲ್ಲ.

​​ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​​ನಿಂದ ಸಸ್ಪೆಂಡ್ ಆಗಿರೋ ಶೊಯೆಬ್​ ಮಲಿಕ್ ತಮ್ಮ ವಿರುದ್ಧದ ಮ್ಯಾಚ್​​ ಫಿಕ್ಸಿಂಗ್ ಆರೋಪಕ್ಕೆ ರಿಯಾಕ್ಟ್ ಮಾಡಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲಾ ಸುಳ್ಳು. ಇವೆಲ್ಲಾ ಜಸ್ಟ್​ ರೂಮರ್ಸ್​ಗಳಷ್ಟೇ. ಈ ಬಾರಿಯ ಬಾಂಗ್ಲಾದೇಶ ಪ್ರೀಮಿಯರ್​ ಲೀಗ್​​ನಲ್ಲಿ ಮೂರು ಮ್ಯಾಚ್​​ಗಳನ್ನಷ್ಟೇ ಆಡ್ತೇನೆ ಅಂತಾ ಫ್ರಾಂಚೈಸಿ ಜೊತೆಗೆ ಚರ್ಚೆ ನಡೆಸಿದ್ದು. ಕ್ಯಾಪ್ಟನ್​​ ತಮೀಮ್​ ಇಕ್ಬಾಲ್​ಗೂ ಈ ಬಗ್ಗೆ ತಿಳಿಸಿದ್ದೆ. ಹೀಗಾಗಿ ಟೂರ್ನಿ ಮುಗಿಯೋ ಮುನ್ನವೇ ಲೀಗ್​​​ನಿಂದ ಹೊರ ಬಂದಿದ್ದೆ ಅಂತಾ ಶೋಯೆಬ್ ಮಲಿಕ್ ಹೇಳ್ತಾ ಇದ್ದಾರೆ. ದುಬೈನಲ್ಲಿ ಈವೆಂಟ್​ ಒಂದರಲ್ಲಿ ಪಾರ್ಟಿಸಿಪೇಟ್ ಮಾಡೋದಕ್ಕಾಗಿ ಟೂರ್ನಿಯಲ್ಲಿ ಕಂಟಿನ್ಯೂ ಮಾಡಿಲ್ಲ ಅಂತಾ ಶೋಯೆಬ್ ಮಲಿಕ್ ಹೇಳ್ತಿದ್ದಾರೆ. ಪಾಕಿಸ್ತಾನಿ ಆಟಗಾರನ ಈ ಸಮರ್ಥನೆಯನ್ನ ನಂಬೋದು ಸ್ವಲ್ಪ ಕಷ್ಟವೇ. ಯಾಕಂದ್ರೆ ಒಂದು ಈವೆಂಟ್ ಅಟೆಂಡ್ ಆಗೋದಕ್ಕೋಸ್ಕರ ಫ್ರಾಂಚೈಸಿ ಪರ ಮ್ಯಾಚ್​​ ಆಡೋದನ್ನ ಬಿಟ್ಟು ಬಿಡೋಕಾಗುತ್ತಾ? ಫ್ರಾಂಚೈಸಿ ಟೂರ್ನಿಯಲ್ಲೂ ನಡೆಯೋದು ಪ್ರೊಫೆಷನಲ್​​ ಕ್ರಿಕೆಟ್. ಶೋಯೆಬ್ ಮಲಿಕ್ ಈಗ ಏನೇ ಹೇಳಿದ್ರೂ ಆ ಮೂರು ನೋ ಬಾಲ್​​ಗಳಲ್ಲಿ ಏನೋ ಆಟ ನಡೆದಿರೋದಂತೂ ಗ್ಯಾರಂಟಿ. ​​

Sulekha