ನಾನ್ ವೆಜ್ ಹಾಲು ಕಳಿಸುತ್ತಾ ಅಮೆರಿಕ? ಹಸುಗಳಿಂದ ನಾನ್ ವೆಜ್ ಹಾಲು ಹೇಗೆ?
ಅಮೆರಿಕ ಹಾಲು ಬೇಡವೆಂದಿದ್ದೇಕೆ ಮೋದಿ?

ನಾನ್ ವೆಜ್ ಹಾಲು ಕಳಿಸುತ್ತಾ ಅಮೆರಿಕ?  ಹಸುಗಳಿಂದ ನಾನ್ ವೆಜ್ ಹಾಲು ಹೇಗೆ?ಅಮೆರಿಕ ಹಾಲು ಬೇಡವೆಂದಿದ್ದೇಕೆ ಮೋದಿ?

ಅಮೆರಿಕಾವು ಭಾರತದ ಡೈರಿ ಮತ್ತು ಕೃಷಿ ಕ್ಷೇತ್ರಕ್ಕೂ ಎಂಟ್ರಿಯಾಗೋಕೆ ರಣ ಹದ್ದಿನಂತೆ ಕಾಯುತ್ತಿದೆ. ಇಂಡಿಯಾಕ್ಕೆ ಟ್ರಂಪ್ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಸೇರಿದಂತೆ ಎಲ್ಲವನ್ನೂ ರಫ್ತು ಮಾಡೋಕೆ ಬಯಸಿದ್ದಾರೆ. ಆದ್ರೆ ಇನ್ನೂ ಮಾತುಕತೆಯ ಹಂತದಲ್ಲಿದೆ. ಯಾಕಂದ್ರೆ ಅಮೆರಿಕಾದಿಂದ ಭಾರತಕ್ಕೆ ಹಾಲು ಆಮದು ಮಾಡಿದರೆ ಭಾರತದ ಹೈನುಗಾರಿಕೆ ನಂಬಿರುವ ರೈತರ ಬದುಕು ಬೀದಿಗೆ ಬರುತ್ತೆ.   ಹೀಗಾಗಿ ಇದ್ದಕ್ಕೆ ಭಾರತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇನ್ನೊಂದು ವಿಷ್ಯ  ಏನ್ ಅಂದ್ರೆ ಅಮೆರಿಕಾದ ಹಸುಗಳು, ಭಾರತದಂತೆ ಅಲ್ಲ.. ಅಲ್ಲಿ ಹಸುಗಳು ಪವಿತ್ರತೆಯನ್ನೇ ಕಳೆದು ಕೊಂಡಿವೆ.. ಅಮೆರಿಕದಿಂದ ಹಾಲು ತರಿಸಿದ್ರೆ ನಾವು ಮಾಂಸದ ಹಾಲನ್ನ ಕುಡಿಬೇಕಾಗುತ್ತೆ..

ಭಾರತಕ್ಕೆ ಬರುತ್ತಾ ನಾನ್ ವೆಜ್ ಹಸು ಹಾಲು?

ಅಮೆರಿಕದ ಹಸುವಿನ ಹಾಲು ಭಾರತಕ್ಕೆ ಬಂದ್ರೆ ಬೆಂಕಿ ಹೊತ್ತಿಕೊಳ್ಳುವುದು ಪಕ್ಕಾ. ಯಾಕಂದ್ರೆ ಅಮೆರಿಕದ ಹಸುಗಳ ಕಥೆ ಕೇಳಿದ್ರೆ ನೀವು ಹೀಗೂ ಉಂಟಾ ಅಂತೀರಾ.. ಹೌದುಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ. ನಾನ್ ವೆಜ್ ಹಸುಗಳ ಹಾಲನ್ನು ಅಮೆರಿಕಾ ಭಾರತಕ್ಕೆ ರಫ್ತು ಮಾಡಲು ಬಯಸಿದೆ. ಒಂದು ವೇಳೆ ಈ ಹಾಲು ಭಾರತಕ್ಕೆ ಬಂದ್ರೆ ಜನ ಬೀದಿಗಿಳಿದು ಹೋರಾಟ ಮಾಡ್ತಾರೆ..   ಹಸುವನ್ನು ಗೋ ಮಾತೆ ಎಂದು ಭಾರತದಲ್ಲಿ ಜನರು ಪೂಜಿಸುತ್ತಾರೆ. ಹಸುವಿನ ಹಾಲು ಬಗ್ಗೆ ಶ್ರದ್ದೆ, ಭಕ್ತಿ, ಗೌರವ ಇದೆ. ದೇವರ ನೈವೇದ್ಯಕ್ಕೂ ಶುದ್ದ ಹಸುವಿನ ಹಾಲು ಬಳಕೆ ಮಾಡಲಾಗುತ್ತೆ. ಹಸುವಿನ ಹಾಲಿನ ಜೊತೆ ಒಂದು ವೈವಿಕ ಭಾವನೆ ಇದೆ. ಹೀಗಾಗಿ ಇಂಥ ದೇಶಕ್ಕೆ ನಾನ್ ವೆಜ್ ಹಸುಗಳ ಹಾಲು ರಫ್ತು ಮಾಡಲು ಅಮೆರಿಕಾ ಹೊರಟಿದೆ. ಸದ್ಯಕ್ಕೆ ಇದಕ್ಕೆ ಕೇಂದ್ರದ ಮೋದಿ ಸರ್ಕಾರ ಒಪ್ಪಿಲ್ಲ. ಭಾರತಕ್ಕೆ ಪೂರೈಕೆಯಾಗುವ ಹಾಲು, ನಾನ್ ವೆಜ್ ಹಸುವಿನ ಹಾಲು ಅಲ್ಲ ಎಂಬ ಸರ್ಟಿಫಿಕೇಟ್ ಬೇಕೆಂದು ಭಾರತ ಕೇಳುತ್ತಿದೆ.ಹೀಗಾಗಿ ಭಾರತ- ಅಮೆರಿಕಾದ ಟ್ರೇಡ್ ಡೀಲ್ ಫೈನಲ್ ಆಗುತ್ತಿಲ್ಲ.  ಭಾರತದ ಡೈರಿ ವಲಯಕ್ಕೆ ಅಮೆರಿಕಾ ಬಂದ್ರೆ ವರ್ಷಕ್ಕೆ 1.03 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಲಿದೆ.   ಹೀಗಾಗಿ ಭಾರತದಲ್ಲಿ ಡೈರಿ, ಕೃಷಿ ವಲಯವನ್ನು ಅಮೆರಿಕಾಕ್ಕೆ ತೆರೆಯಲು ಭಾರತ ಒಪ್ಪುತ್ತಿಲ್ಲ.

ಹಾಲು, ಬೆಣ್ಣೆ, ತುಪ್ಪವನ್ನು ಭಾರತದಲ್ಲಿ ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತೆ. ದೇವರ ಅಭಿಷೇಕ, ದೇವರ ಪ್ರಸಾದ, ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಬಳಸಲಾಗುತ್ತೆ. ಇವುಗಳೆಲ್ಲಾ ನಾನ್ ವೆಜ್ ಹಸುವಿನ ಉತ್ಪನ್ನಗಳಾದರೆ ಬಳಸುವುದು ಹೇಗೆ? ಜನರ ಧಾರ್ಮಿಕ ನಂಬಿಕೆ, ಭಾವನೆಗೆ ಧಕ್ಕೆ ಬರುತ್ತೆ ಅನ್ನೋದು ಕೇಂದ್ರ ಸರ್ಕಾರದ ಆತಂಕ. ಜೊತೆಗೆ ಭಾರತದಲ್ಲಿ ಕೋಟ್ಯಾಂತರ ಮಂದಿ ಸಸ್ಯಹಾರಿಗಳಿದ್ದಾರೆ. ಸಸ್ಯಹಾರಿಗಳು ಹಸುವಿನ ಹಾಲನ್ನು ಸಸ್ಯಹಾರ ಎಂದೇ ಉಪಯೋಗಿಸುತ್ತಾರೆ. ಅಮೆರಿಕಾದ ನಾನ್ ವೆಜ್ ಹಸುವಿನ ಹಾಲು, ಭಾರತಕ್ಕೆ ಬಂದರೆ ಅದನ್ನು ಮಾಂಸಹಾರದ ಉತ್ಪನ್ನ ಎಂದು ತಿರಸ್ಕರಿಸಬೇಕಾಗುತ್ತೆ. ಅದರ ಜೊತೆ ನಮ್ಮ ಹಸುವಿನ ಹಾಲಿನ ಮೇಲೆ ಅನುಮಾನ ಬರುತ್ತೆ..

ಅಮೆರಿಕಾದಲ್ಲಿ ಹಸುಗಳಿಗೆ ಮೀನು,ಚಿಕನ್, ಹಂದಿ ಮಾಂಸವೇ ಆಹಾರ

ನಿಜಕ್ಕೂ ಇದ್ದನ್ನ ಕೇಳಿದ್ರೆ ಶಾಕ್ ಆಗುತ್ತೆ ಅಲ್ವಾ.. ಆದ್ರೆ ಇದು 100% ನಿಜ..  ಅಮೆರಿಕಾದಲ್ಲಿ ಹಸುಗಳಿಗೆ ಹಂದಿ ಮಾಂಸ, ಮೀನು, ಚಿಕನ್, ಬೆಕ್ಕು, ನಾಯಿ ಮಾಂಸವನ್ನು ನೀಡಲಾಗುತ್ತೆ. ಹಸುಗಳು, ಪ್ರೋಟೀನ್​​ಗಾಗಿ ಕುದುರೆ ರಕ್ತ ಹಾಗೂ ಹಂದಿ ಮಾಂಸವನ್ನು ಸೇವಿಸುತ್ತವೆ ಎಂದು ಅಮೆರಿಕಾದ ದಿನ ಪತ್ರಿಕೆ ಸೀಯಾಟಲ್ ಟೈಮ್ಸ್​ನಲ್ಲಿ ವರದಿ ಪ್ರಕಟವಾಗಿದೆ. ಅಷ್ಟೇ ಅಲ್ಲ ಹಲವು ಕಡೆ ಅಮೆರಿಕಾದಲ್ಲಿ ಹಸುಗಳಿಗೆ ಪೌಲ್ಟ್ರಿಗಳ ಕಸ, ಕೋಳಿ ರೆಕ್ಕೆಪುಕ್ಕ, ಚಿಕನ್ ಡ್ರಾಪಿಂಗ್ ಅನ್ನು ಕಡಿಮೆ ವೆಚ್ಚದ ಆಹಾರವಾಗಿ ನೀಡಲಾಗುತ್ತಿದೆ ಎಂದು ಸೀಯಾಟಲ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಭಾರತವು ತನ್ನ ಕೋಟ್ಯಾಂತರ ಹೈನುಗಾರಿಕೆಯ ರೈತರ ಹಿತಾಸಕ್ತಿ ಕಾಪಾಡಲು ಈಗ ಅಮೆರಿಕಾದ ಒತ್ತಡಕ್ಕೆ ಮಣಿಯುತ್ತಿಲ್ಲ. ಭಾರತದ ರೈತರೇ ಈಗ 140 ಕೋಟಿ ಭಾರತೀಯರಿಗೂ ಬೇಕಾದ ಹಾಲು ಅನ್ನು ಪೂರೈಸುತ್ತಿದ್ದಾರೆ. ಡೈರಿ ವಲಯದಲ್ಲಿ 8 ಕೋಟಿ ಜನರು ಉದ್ಯೋಗ ಕಂಡುಕೊಂಡಿದ್ದಾರೆ. 8 ಕೋಟಿ ಜನರಿಗೆ ಡೈರಿ ವಲಯವೇ ಜೀವನೋಪಾಯಕ್ಕೆ ಆಧಾರವಾಗಿದೆ. ಭಾರತವು ಅಮೆರಿಕಾದ ಡೈರಿ ಉತ್ಪನ್ನಗಳಿಗೆ ತನ್ನ ಮಾರ್ಕೆಟ್ ಅನ್ನು ತೆರೆದು ಬಿಟ್ಟರೆ ಅಮೆರಿಕಾದಿಂದ ಅಗ್ಗದ ಡೈರಿ ಉತ್ಪನ್ನಗಳು ಭಾರತಕ್ಕೆ ಎಂಟ್ರಿಯಾಗುತ್ತವೆ. ಇದರಿಂದ ಭಾರತದ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಯೇ ಕುಸಿಯುತ್ತೆ. ಭಾರತದ ಹೈನುಗಾರಿಕೆಯ ರೈತರ ಆದಾಯ, ಜೀವನೋಪಾಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಎಂಟ್ರಿಯಾಗಲು ಅಮೆರಿಕಾಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಭಾರತದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕಾ ನಡುವೆ 2030ರ ವೇಳೆಗೆ 500 ಬಿಲಿಯನ್ ಡಾಲರ್ ನಷ್ಟು ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ ನಡೆಸಬೇಕೆಂಬ ಗುರಿಯನ್ನು ಭಾರತ- ಅಮೆರಿಕಾ ಹೊಂದಿವೆ. ಹೀಗಾಗಿ ಭಾರತದ ಡೈರಿ, ಕೃಷಿ ಕ್ಷೇತ್ರಕ್ಕೆ ಎಂಟ್ರಿಯಾಗಲು ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ತಮಗೆ ಅವಕಾಶ ನೀಡಬೇಕೆಂದು ಅಮೆರಿಕಾ ಕೇಳುತ್ತಿದೆ. ಡೈರಿ, ಕೃಷಿ ಕ್ಷೇತ್ರಗಳ ವಿಷಯದಲ್ಲಿ ಭಾರತ ಒಂದು ತಪ್ಪು ನಿರ್ಧಾರ ತಗೊಂಡ್ರೆ, ಭಾರತ ಕೃಷಿಕರ ಜೀವನ ಬೀದಿಗೆ ಬೀಳುವುದು ಪಕ್ಕಾ.

Kishor KV