ವಿಶ್ವಕಪ್ ಫೈನಲ್ ಪಂದ್ಯಕ್ಕಿಂತಲೂ ಹೆಚ್ಚು ನಂಬರ್ – ಜಿಯೋ ಸಿನಿಮಾದಲ್ಲಿ ಲೈವ್ ಲೆಕ್ಕಾಚಾರವೇನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ-20 ಸೀರಿಸ್ ಜಿಯೋ ಸಿನಿಮಾದಲ್ಲಿ ಲೈವ್ ಟೆಲಿಕಾಸ್ಟ್ ಮಾಡಲಾಗುತ್ತಿದೆ. ವರ್ಲ್ಡ್ಕಪ್ ಹೇಗೆ ಹಾಟ್ಸ್ಟಾರ್ನಲ್ಲಿ ಟೆಲಿಕಾಸ್ಟ್ ಆಗ್ತಿತ್ತೋ ಅದೇ ರೀತಿ ಟಿ-20 ಸೀರಿಸ್ ಜಿಯೋ ಸಿನಿಮಾದಲ್ಲಿ ಬ್ರಾಡ್ಕಾಸ್ಟ್ ಆಗ್ತಿದೆ. ಆದ್ರೆ ಜಿಯೋದಲ್ಲಿ ಭಾರತ-ಆಸ್ಟ್ರೇಲಿಯಾ ಟಿ-20 ಮ್ಯಾಚ್ನ್ನ ನೋಡುತ್ತಿರುವವರ ಸಂಖ್ಯೆ ನೋಡಿದರೆ ನಂಬೋದು ಕೂಡ ಕಷ್ಟವಾಗ್ತಿದೆ. ಇಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನು? ನಂಬರ್ ಗೇಮ್ನ ಅಸಲಿಯತ್ತೇನು ಅನ್ನೋದರ ವಿವರ ಇಲ್ಲಿದೆ.
ಇದನ್ನೂ ಓದಿ: ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?
ಭಾರತ-ಆಸ್ಟ್ರೇಲಿಯಾ ಸೀರಿಸ್ನ್ನ ಜಿಯೋ ಸಿನಿಮಾ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ನೋಡುತ್ತಿರುವವರು ನಿಜಕ್ಕೂ ಕನ್ಫ್ಯೂಸ್ ಆಗಿದ್ದಾರೆ. ಯಾಕೆಂದರೆ, ವರ್ಲ್ಡ್ಕಪ್ ಫೈನಲ್ ಮ್ಯಾಚ್ನಂದು ಹಾಟ್ಸ್ಟಾರ್ನಲ್ಲಿ ಹೈಯೆಸ್ಟ್ ವ್ಯೂ 5.9 ಕೋಟಿಯಾಗಿತ್ತು. ಆದರೆ, ಜಿಯೋ ಸಿನಿಮಾದಲ್ಲಿ ಟಿ-20 ಮ್ಯಾಚ್ನ ವ್ಯೂಸ್ 15 ಕೋಟಿ, 20 ಕೋಟಿ, 23 ಕೋಟಿವರೆಗೆ ರೀಚ್ ಆಗ್ತಿದೆ. ಹಾಟ್ಸ್ಟಾರ್ನಂತೆ ಜಿಯೋ ಸಿನಿಮಾದಲ್ಲಿ ಕೂಡ ಲೈವ್ ವ್ಯೂವರ್ಶಿಪ್ ಎಷ್ಟು ಅನ್ನೋ ನಂಬರ್ ತೋರಿಸುತ್ತೆ. ಆದ್ರೆ ನಂಬರ್ನ್ನ ಮಾತ್ರ ನಂಬೋದು ಕಷ್ಟವಾಗ್ತಿದೆ. ವರ್ಲ್ಡ್ಕಪ್ ಫೈನಲ್ನ್ನೇ ಹಾಟ್ಸ್ಟಾರ್ನಲ್ಲಿ 5.9 ಕೋಟಿ ಮಂದಿ ನೋಡಿದ್ದಾರೆ ಅಂದ್ರೆ, ವಿಶ್ವಕಪ್ ಸೋತ ಮೇಲೆ ಟೀಂ ಇಂಡಿಯಾ ಆಡ್ತಿರೋ..ಅದು ಕೂಡ ರೋಹಿತ್ ಶರ್ಮಾ, ವಿರಾಟ್ ಇಲ್ಲದ ಮ್ಯಾಚ್ನ್ನ 23 ಕೋಟಿ ಮಂದಿ ಕೇವಲ ಜಿಯೋ ಸಿನಿಮಾದಲ್ಲೇ ನೋಡ್ತಿದ್ದಾರಾ ಅನ್ನೋ ಡೌಟ್ ಬರುತ್ತೆ. ಮ್ಯಾಚ್ ವೇಳೆ ಜಿಯೋ ಸಿನಿಮಾದಲ್ಲಿ ತೋರಿಸಲಾಗುವ ಈ ನಂಬರ್ನ ಸೀಕ್ರೆಟ್ ಇಷ್ಟೇ. ಜಿಯೋ ಸಿನಿಮಾದವರು ಇಡೀ ಮ್ಯಾಚ್ನ ಟೋಟಲ್ ವ್ಯೂವರ್ಶಿಪ್ನ್ನ ಸ್ಕ್ರೀನ್ನಲ್ಲಿ ಡಿಸ್ಪ್ಲೇ ಮಾಡ್ತಿದ್ದಾರೆ. ಅಂದ್ರೆ ಜಿಯೋದವರು ತುಂಬಾ ಸ್ಮಾರ್ಟ್ ಆಗಿ ವ್ಯೂವರ್ಶಿಪ್ನ್ನ ಕೌಂಟ್ ಮಾಡ್ತಿದ್ದಾರೆ. ಹಾಟ್ಸ್ಟಾರ್ನಲ್ಲಿ ಲೈವ್ನಲ್ಲಿ ಎಷ್ಟು ಮಂದಿ ನೋಡ್ತಿದ್ದಾರೆ ಅನ್ನೋ ನಂಬರ್ ಡಿಸ್ಪ್ಲೇ ಆಗ್ತಿತ್ತು. ಒಂದು ವೇಳೆ ನೀವು ಮ್ಯಾಚ್ ನೋಡೋದನ್ನ ನಿಲ್ಲಿಸಿದ್ರಿ ಅಂತಾ ಇಟ್ಕೊಳ್ಳಿ. ಅಂದ್ರೆ ಹಾಟ್ಸ್ಟಾರ್ನಿಂದ ಲಾಗ್ಔಟ್ ಆದ್ರೆ, ಆಗ ಅಲ್ಲಿ ನಂಬರ್ ಮೈನಸ್ ಆಗುತ್ತೆ. ಲಾಗ್ ಇನ್ ಆಗಿ ಮ್ಯಾಚ್ ನೋಡೋಕೆ ಆರಂಭಿಸಿದ ಕೂಡಲೇ ನಂಬರ್ ಪ್ಲಸ್ ಆಗುತ್ತೆ. ಲೈವ್ ವ್ಯೂವರ್ಸ್ ನಂಬರ್ ಆಟೋಮೆಟಿಕಲಿ ಅಪ್ಡೇಟ್ ಆಗುತ್ತೆ. ಹಾಟ್ಸ್ಟಾರ್ನಲ್ಲಿ ತೋರಿಸ್ತಾ ಇದ್ದಿದ್ದು ಲೈವ್ ವ್ಯೂವರ್ಶಿಪ್. ಅಂದ್ರೆ ಯಾರಾದ್ರು ಒಬ್ಬರು ಹಾಟ್ಸ್ಟಾರ್ ಆನ್ ಮಾಡಿ ಮ್ಯಾಚ್ ನೋಡೋಕೆ ಶುರು ಮಾಡಿದ್ರೆ, ಆ ವ್ಯಕ್ತಿ ಜಾಯಿನ್ ಆದಾಗ ನಂಬರ್ ಆ್ಯಡ್ ಆಗ್ತಿತ್ತು. ಹಾಟ್ಸ್ಟಾರ್ ಕ್ಲೋಸ್ ಮಾಡಿದಾಗ ನಂಬರ್ ಮೈನಸ್ ಆಗ್ತಿತ್ತು. ಲೈವ್ನಲ್ಲಿ ಎಷ್ಟು ಮಂದಿ ನೋಡ್ತಿದ್ದಾರೆ ಅನ್ನೋದನ್ನಷ್ಟೇ ಹಾಟ್ಸ್ಟಾರ್ನಲ್ಲಿ ಡಿಸ್ಪ್ಲೇ ಮಾಡ್ತಾರೆ. ಆದ್ರೆ ಜಿಯೋದವರು ಸ್ಮಾರ್ಟ್ ಸ್ಟ್ಯಾಟಜಿ ಮಾಡಿರೋದು ಈ ಕೌಂಟಿಂಗ್ ಪ್ರೊಸೀಜರ್ನಲ್ಲೇ. ನೀವು ಒಂದು ಬಾರಿ ಜಿಯೋ ಸಿನಿಮಾದಲ್ಲಿ ಮ್ಯಾಚ್ ನೋಡೋಕೆ ಲಾಗ್ಇನ್ ಆದ್ರೆ ಸಾಕು, ಬಳಿಕ ಲಾಗ್ಔಟ್ ಆದ್ರೂ ಮ್ಯಾಚ್ ಮುಗಿಯೋವರೆಗೂ ನಿಮ್ಮ ವ್ಯೂ ಕೌಂಟ್ ಆಗುತ್ತೆ. ಅಲ್ಲಿ ವ್ಯೂವರ್ಶಿಪ್ ನಂಬರ್ ಮೈನಸ್ ಆಗೋದೆ ಇಲ್ಲ. ಅದ್ರಲ್ಲೂ ಭಾರತ-ಅಸ್ಟ್ರೇಲಿಯಾ ಸೆಕೆಂಡ್ ಟಿ-20 ಮ್ಯಾಚ್ ವೇಳೆ ಜಿಯೋ ಸಿನಿಮಾದಲ್ಲಾದ ವ್ಯೂವರ್ಶಿಪ್ ನೋಡಿದವರು ನಿಜಕ್ಕೂ ಶಾಕ್ಗೊಳಗಾಗಿದ್ರು. ಯಾಕಂದ್ರೆ ಮ್ಯಾಚ್ ಮುಗಿಯೋ ವೇಳೆಗೆ 21.2 ಕೋಟಿ ವ್ಯೂಸ್ ಆಗಿತ್ತು. ಟೀಂ ಇಂಡಿಯಾ ವಿನ್ ಆಗಿ ಮ್ಯಾಚ್ ಮುಗಿದ್ರೂ ಕೂಡ ವ್ಯೂವರ್ಶಿಪ್ ಕಡಿಮೆಯಾಗಲೇ ಇಲ್ಲ. ಪ್ಲೇಯರ್ಸ್ಗಳು ಶೆಕ್ಹ್ಯಾಂಡ್ ವೇಳೆ 23 ಕೋಟಿ ದಾಟಿತ್ತು. ಮ್ಯಾಚ್ ಮುಗಿದ್ಮೇಲೂ 23 ಕೋಟಿ ಮಂದಿ ನೋಡೋಕೆ ಸಾಧ್ಯಾನಾ ಅನ್ನೋ ಪ್ರಶ್ನೆ ಕಾಡ್ತಿತ್ತು. ಹಾಟ್ಸ್ಟಾರ್ನಲ್ಲಿ ಮ್ಯಾಚ್ ಬ್ರಾಡ್ಕಾಸ್ಟ್ ಆಗೋವಾಗ ಸಾಮಾನ್ಯವಾಗಿ ಟೀಂ ಇಂಡಿಯಾ ಬ್ಯಾಟಿಂಗ್ ಮಾಡೋವಾಗ ವ್ಯೂವರ್ಶಿಪ್ ಹೆಚ್ಚಾಗುತ್ತೆ. ಅದ್ರಲ್ಲೂ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕ್ರೀಸ್ನಲ್ಲಿ ಇದ್ದಾರೆ ಅಂದ್ರೆ ಇನ್ನಷ್ಟು ಸಂಖ್ಯೆಯಲ್ಲಿ ಜನ ನೋಡ್ತಾರೆ. ಇಲ್ಲಾ ಮ್ಯಾಚ್ ಫೈಟ್ ಇದ್ದಾಗ, ಲಾಸ್ಟ್ ಓವರ್ ಗೇಮ್ ಆಗಿದ್ದಾಗ ವ್ಯೂವರ್ಶಿಪ್ ಡಬಲ್ ಆಗುತ್ತಾ ಹೋಗುತ್ತೆ. ಆದ್ರೆ ಈ ಟಿ-20 ಸೀರಿಸ್ನಲ್ಲಿ ವಿರಾಟ್ ಕೊಹ್ಲಿಯೂ ಆಡ್ತಿಲ್ಲ.. ರೋಹಿತ್ ಶರ್ಮಾ ಕೂಡ ಟೀಮ್ನಲ್ಲಿ ಇಲ್ಲ. ಇಷ್ಟಾದ್ರೂ ಭಾರತ-ಆಸ್ಟ್ರೇಲಿಯಾ ಟಿ-20 ಮ್ಯಾಚ್ನ್ನ ಲೈವ್ನಲ್ಲಿ 23 ಕೋಟಿ ಮಂದಿಯೆಲ್ಲಾ ನೋಡೋಕೆ ಸಾಧ್ಯಾನಾ? ಅದು ಕೂಡ ವರ್ಲ್ಡ್ಕಪ್ ಸೋತ ಮೇಲೆ.. ನೋ ಚಾನ್ಸ್.. ಇಲ್ಲಿ ಜಿಯೋದ ಕೌಂಟಿಂಗ್ ಸ್ಟ್ರ್ಯಾಟಜಿ ಬೇರೆಯಾಗಿದೆಯಷ್ಟೇ.
ಇಲ್ಲಿ ಜಿಯೋ ಸಿನಿಮಾಗೆ ಮತ್ತೊಂದು ಅಡ್ವಾಂಟೇಜ್ ಕೂಡ ಇದೆ. ಭಾರತ-ಆಸ್ಟ್ರೇಲಿಯಾ ಟಿ-20 ಮ್ಯಾಚ್ ನೋಡಬೇಕು ಅಂದ್ರೆ ಜಿಯೋ ಸಿನೆಮಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲೇಬೇಕು ಅಂತೇನಿಲ್ಲ. ಗೂಗಲ್ನಲ್ಲಿ ಹೋಗಿ ಜಿಯೋ ಸಿನಿಮಾ ಅಂತಾ ಸರ್ಚ್ ಕೊಟ್ರೂ ಪೇಜ್ ಓಪನ್ ಆಗುತ್ತೆ. ಅಲ್ಲಿ ಭಾರತ-ಆಸ್ಟ್ರೇಲಿಯಾ ಟಿ-20 ಮ್ಯಾಚ್ನ್ನ ಲೈವ್ ಆಗಿ ನೋಡಬಹುದು. ನೀವು ಗೂಗಲ್ ಸರ್ಚ್ ಕೊಟ್ಟು ಜಿಯೋ ಸಿನಿಮಾದಲ್ಲಿ ಮ್ಯಾಚ್ ನೋಡಿದ್ರೂ ಆ ವ್ಯೂವರ್ಶಿಪ್ ಕೂಡ ಕೌಂಟ್ ಆಗುತ್ತೆ. ಹಾಟ್ಸ್ಟಾರ್ ಮ್ಯಾಚ್ ಲೈವ್ ನೋಡಬೇಕು ಅನ್ನೋದಾದ್ರೆ, ಹಣ ಪೇ ಮಾಡಲೇಬೇಕು. ಆದ್ರೆ, ಜಿಯೋ ಸಿನಿಮಾದಲ್ಲಿ ಫ್ರೀಯಾಗಿ ಮ್ಯಾಚ್ ನೋಡಬಹುದು. ಈ ಮೂಲಕ ಜೊಯೋ ವ್ಯೂವರ್ಶಿಪ್ನ್ನ ಕೂಡ ರೈಸ್ ಮಾಡಿಕೊಳ್ತಿದೆ. ಇನ್ನು ಭಾರತ-ಆಸ್ಟ್ರೇಲಿಯಾ ಫಸ್ಟ್ ಟಿ-20 ಮ್ಯಾಚ್ ವೇಳೆಯಂತೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ನಲ್ಲೇ ಪ್ರಾಬ್ಲಂ ಆಗಿತ್ತು. ಹಲವು ಮಂದಿಗೆ ಮೊಬೈಲ್ನಲ್ಲಿ ಮ್ಯಾಚ್ ನೋಡೋಕೆ ಸಾಧ್ಯವಾಗಿರಲಿಲ್ಲ. ಫ್ರೀಯಾಗಿ ಮ್ಯಾಚ್ ನೋಡಬಹುದು ಅಂತಾ ಹೆಚ್ಚಿನ ಸಂಖ್ಯೆ ಜನ ಜೊಯೋ ಸಿನಿಮಾ ಓಪನ್ ಮಾಡಿದ್ರಿಂದ ಸರ್ವರ್ ಕ್ರ್ಯಾಶ್ ಆಗಿ ಲೈವ್ ಸ್ಟ್ರೀಮ್ಗೆ ಪ್ರಾಬ್ಲಂ ಆಗಿರುವ ಸಾಧ್ಯತೆ ಇದೆ. ಆದ್ರೆ ನಿಜಕ್ಕೂ ಸಮಸ್ಯೆಯಾಗಿದ್ದು ಹೇಗೆ ಅನ್ನೋದ್ರ ಬಗ್ಗೆ ಜಿಯೋ ಯಾವುದೇ ಕ್ಲ್ಯಾರಿಟಿ ಕೊಟ್ಟಿರಲಿಲ್ಲ. ಈ ಪ್ರಾಬ್ಲಂ ಫಸ್ಟ್ ಮ್ಯಾಚ್ನಂದು ಮಾತ್ರ ಆಗಿತ್ತು. ಬಳಿಕ ಎಲ್ಲಾ ಮ್ಯಾಚ್ಗಳು ಕೂಡ ಜಿಯೋ ಸಿನಿಮಾದಲ್ಲಿ ನೀಟಾಗಿ ಬ್ರಾಡ್ಕಾಸ್ಟ್ ಆಗಿದೆ. ಇದು ಜಿಯೋ ಸಿನಿಮಾದಲ್ಲಿ ಮ್ಯಾಚ್ ವ್ಯೂವರ್ಶಿಪ್ ಕುರಿತಾದ ಮಾಹಿತಿ.