ನಿಮ್ಮ ಕಣ್ಣುಗಳು ತುಂಬಾ‌ ಡ್ರೈ ಆಗ್ತಿದ್ಯಾ? – ಯಾಕೆ ಹೀಗಾಗುತ್ತೆ ಗೊತ್ತಾ?

ನಿಮ್ಮ ಕಣ್ಣುಗಳು ತುಂಬಾ‌ ಡ್ರೈ ಆಗ್ತಿದ್ಯಾ? – ಯಾಕೆ ಹೀಗಾಗುತ್ತೆ ಗೊತ್ತಾ?

ಅನೇಕರಿಗೆ ಈಗ  ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದ್ರಲ್ಲಿ ಡ್ರೈ ಐ ಸಿಂಡ್ರೋಮ್ ಕೂಡ ಒಂದು. ಇದ್ರಿಂದಾಗಿ ಕಣ್ಣಿಗಳಲ್ಲಿ  ಆಯಾಸ, ತುರಿಕೆ,  ಮಸುಕಾಗಿ ಕಾಣಿಸುವುದು, ಆಗಾಗ ತಲೆನೋವು, ಕಣ್ಣುಗಳು‌ ಆಗಾಗ ತೇವಾಂಶವನ್ನು ಕಳೆದುಕೊಳ್ಳುತ್ತವೆ. ವಯಸ್ಸು ಹೆಚ್ಚಾದಂತೆ, ಡ್ರೈ ಐ ಸಿಂಡ್ರೋಮ್ ಹೆಚ್ಚಾಗುತ್ತದೆ, ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ಯುವಕರಲ್ಲೂ ಕಂಡು ಬರುತ್ತಿದೆ. ಈಗಾಗಲೇ ಈ ಸಮಸ್ಯೆಯಿಂದ 2 ಕೋಟಿಗೂ ಅಧಿಕ ಜನರು ಬಳಲುತ್ತಿದ್ದಾರೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.

ಇದನ್ನೂ ಓದಿ: ನಿಮಗೆ ವಿಪರೀತ ಬಾಯಾರಿಕೆ ಆಗುತ್ತದೆಯಾ?  – ಈ ರೋಗದ ಲಕ್ಷಣವಿರಬಹುದು ಎಚ್ಚರ!

ಅಪೌಷ್ಟಿಕತೆ,  ಡ್ರೈ- ಐ ಸಿಂಡ್ರೋಮ್ ಪ್ರಕರಣಗಳು ಹೆಚ್ಚಾಗಲು ಮೊದಲ ಕಾರಣವಾಗಿದ್ದರೆ, ಮತ್ತೊಂದು ಪ್ರಮುಖ ಕಾರಣವೆಂದರೆ ದೀರ್ಘಕಾಲದ ಸ್ಮಾರ್ಟ್ಫೋನ್ ನೋಡೋದ್ರಿಂದ ಈ ಸಿಂಡ್ರೋಮ್ ಪ್ರಕರಣಗಳು ಹೆಚ್ಚಾಗುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಮತ್ತು ಗೆರೆಗಳು, ಕಣ್ಣಿನ ಸುತ್ತಲೂ ಸುಟ್ಟಗಾಯಗಳು, ನಿರಂತರ ಕಣ್ಣೀರು, ಕ್ಷಣಿಕ ಕುರುಡುತನವು ರೋಗಲಕ್ಷಣಗಳಲ್ಲಿ ಸೇರಿವೆ. ಹೆಚ್ಚುವರಿ ರೋಗಲಕ್ಷಣಗಳೆಂದರೆ ತಲೆ ಮತ್ತು ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತೆ.

ನಿರಂತರವಾಗಿ ಕಂಪ್ಯೂಟರ್ ಮುಂದೆ ಕುಳಿತಾಗ, ಕಣ್ಣುಗಳಲ್ಲಿ ಶುಷ್ಕತೆಯ ಸಮಸ್ಯೆ ಬರೋ ಸಾಧ್ಯತೆ ಇರುತ್ತೆ. ಕಣ್ಣುಗಳಲ್ಲಿ ಕೆಂಪಾಗುವಿಕೆ, ನೋವು ಅಥವಾ ನೀರು ಸಹ ಬರಬಹುದು. ಇದಕ್ಕೆ ಏಕೈಕ ಕಾರಣವೆಂದರೆ ಹೆಚ್ಚಿನ ಪರದೆಯ ಸಮಯ ಮತ್ತು ಪರದೆಯ ಮೇಲಿನ ಬೆಳಕು ಎಂದು ತಜ್ಞರು ಹೇಳುತ್ತಾರೆ.

ಇನ್ನು  ಅತಿಯಾದ ಧೂಮಪಾನ ಮಾಡಿದಾಗ ಅದು ವ್ಯಕ್ತಿಯ ದೃಷ್ಟಿಯಲ್ಲಿ ಶುಷ್ಕತೆಯನ್ನು ಉಂಟುಮಾಡಬಹುದು. ಧೂಮಪಾನವು ವಿಷಕಾರಿ ವಸ್ತುಗಳನ್ನು ಕಣ್ಣುಗಳನ್ನು ತಲುಪುವಂತೆ ಮಾಡುತ್ತದೆ. ಇದರಿಂದಾಗಿ ಕಣ್ಣುಗಳನ್ನು ರಕ್ಷಿಸುವ ಕಾಂಜಂಕ್ಟಿವಾ ಹಾನಿಗೊಳಗಾಗುತ್ತದೆ ಮತ್ತು ಕಣ್ಣುಗಳಲ್ಲಿ ಶುಷ್ಕತೆಯನ್ನು ಉಂಟುಮಾಡಬಹುದು.

ಇನ್ನು ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಿದಾಗ, ಈ ಕಾರಣದಿಂದಾಗಿ ಕಾರ್ನಿಯಾಕ್ಕೆ ಆಮ್ಲಜನಕದ ಪೂರೈಕೆಯು ಸರಿಯಾಗಿ ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕಣ್ಣುಗಳಲ್ಲಿ ಶುಷ್ಕತೆಯ ಸಮಸ್ಯೆ ಉಂಟಾಗಬಹುದು. ಇನ್ನು ಎಸಿ ಕೆಳಗೆ ಕೂತ್ರು ಕೂಡ ಡ್ರೈ ಐ ಸಿಂಡ್ರೋಮ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ. ನಿಮಗೂ ಇಂತಹ ಸಮಸ್ಯೆ ಕಾಣಿಸಿಕೊಂಡ್ರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

Shwetha M