ಆಟಗಾರರ ಅಚ್ಚುಮೆಚ್ಚು ಚಂಪಕ್ – ಐಪಿಎಲ್ ನಲ್ಲಿ ರೋಬೋ ಡಾಗಿ ಸ್ಪೆಷಾಲಿಟಿ ಏನು?

2025ರ ಐಪಿಎಲ್ ಸೀಸನ್ನಲ್ಲಿ, ಕ್ರಿಕೆಟ್ ಜೊತೆ ಜೊತೆಗೆ ಈ ರೋಬೋ ನಾಯಿ ಚಂಪಕ್ ಎಲ್ಲರ ಫೇವರೆಟ್ ಆಗೋದಿದೆ. ಪ್ರತೀ ಪಂದ್ಯದ ಟೈಮಲ್ಲೂ ಪ್ಲೇಯರ್ಗಳು ಚಂಪಕ್ ಜೊತೆ ಕೆಲ ಕಾಲ ಫನ್ನಿ ಮೂಮೆಂಟ್ಸ್ ಸ್ಪೆಂಡ್ ಮಾಡ್ತಿದ್ದಾರೆ. ಒಬ್ಬೊಬ್ಬರೂ ಒಂದೊಂದು ಸ್ಟೈಲಲ್ಲಿ ರಿಯಾಕ್ಟ್ ಮಾಡ್ತಿದ್ದಾರೆ.
ಇದನ್ನೂ ಓದಿ : ಬ್ಯಾಟಿಂಗ್ & ಕೀಪಿಂಗ್ ನಲ್ಲಿ ಬೆಸ್ಟ್ ಪರ್ಫಾಮೆನ್ಸ್ – ಜಿತೇಶ್ ಶರ್ಮಾ ಪರ್ಫೆಕ್ಟ್ ಪ್ಲೇಯರ್
ಚಂಪಕ್ ಐಪಿಎಲ್ನಲ್ಲಿ ಪ್ಲೇಯರ್ಸ್ ಮತ್ತು ಫ್ಯಾನ್ಸ್ಗೆ ಫೇವರೆಟ್. ಹಾಗಂತ ಇದು ಜಸ್ಟ್ ಫಾರ್ ಎಂಟರ್ಟೈನ್ಮೆಂಟ್ ಗೆ ಮಾಡಿಲ್ಲ. ಕ್ರೀಡಾ ಪ್ರಸಾರದಲ್ಲಿ ತಾಂತ್ರಿಕ ಕ್ರಾಂತಿಯ ಸಂಕೇತವೂ ಆಗಿದೆ. ಮೊದಲಿಗೆ ಏಪ್ರಿಲ್ 13ರಂದು ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಕಾಮೆಂಟೇಟರ್ ಡ್ಯಾನಿ ಮಾರಿಸನ್ ಈ ರೋಬೋ ನಾಯಿಯನ್ನು “ಪ್ರಸಾರ ತಂಡದ ಹೊಸ ಸದಸ್ಯ” ಎಂದು ವಿಡಿಯೋ ಮೂಲಕ ತೋರಿಸಿದ್ದರು. ಇದಕ್ಕೆ ಏನು ಹೆಸರಿಡಬೇಕು ಅಂತಾ ಐಪಿಎಲ್ ಆಯೋಜಕರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಚುಲ್ಬುಲ್, ಜಾಫಾ, ಬಡ್ಡಿ ಮತ್ತು ಚಂಪಕ್ ಎಂಬ ಹೆಸರು ಗಳು ಜಾಸ್ತಿ ಕೇಳಿ ಬಂದಿದ್ವು. ಕೊನೆಗೆ ಚಂಪಕ್ ಹೆಸರೇ ಫೈನಲ್ ಆಯ್ತು.
ಚಂಪಕ್ನ ಸ್ಪೆಷಾಲಿಟಿ ಅಂದ್ರೆ ಕ್ವಾಡ್ರಪೆಡ್ ರೋಬೋಟ್ ಆಗಿದ್ದು, ಬೋಸ್ಟನ್ ಡೈನಾಮಿಕ್ಸ್ನ ಸ್ಫೂರ್ತಿಯಿಂದ ರೂಪಿಸಲಾಗಿದೆ. ಇದರ ಮುಖ್ಯ ವೈಶಿಷ್ಟ್ಯವೆಂದರೆ ಹೈ-ಡೆಫಿನಿಷನ್ ಕ್ಯಾಮೆರಾ, ಇದು ನಾಯಿಯ ದೃಷ್ಟಿಕೋನದಿಂದ ಮೈದಾನದ ವಿಶಿಷ್ಟ ದೃಶ್ಯಗಳನ್ನು ಚಿತ್ರೀಕರಿಸುತ್ತದೆ. ನೋಡೋಕೆ ಮುಧೋಳ ನಾಯಿ ಥರ ಕಂಡ್ರೂ ಇದರ ತೂಕ 14 ಕೆಜಿ ಇದೆ. ಚಂಪಕ್ ಸ್ವಯಂ-ಚಾರ್ಜಿಂಗ್ ಸಾಮರ್ಥ್ಯ, ಡೇಟಾ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಾಗೇ ಧ್ವನಿ ಆದೇಶಗಳಿಗೂ ರಿಯಾಕ್ಟ್ ಮಾಡುತ್ತೆ. ಹೀಗಾಗಿ ಆಟಗಾರರು ಚಂಪಕ್ ಜೊತೆ ಒಳ್ಳೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ.