ಬೇಸ್ಬಾಲ್ ಅಂದ್ರೆ ಏನು? ಯಾಕೆ ಆ ಹೆಸರು ಬಂತು? – ಬೇಸ್ಬಾಲ್ ಬೇಕೋ ಬೇಡವೋ?

ಬೇಸ್ಬಾಲ್ ಕ್ರಿಕೆಟ್.. ಇಂಗ್ಲೆಂಡ್ ತಂಡದ ಮೇನ್ ವೆಪನ್ ಇದು. ಬ್ರೆಂಡನ್ ಮೆಕಲಂ ಕೋಚ್ ಆದಾಗಿನಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಆಡೋ ರೀತಿಯೇ ಬದಲಾಗಿ ಹೋಯ್ತು. ಈ ಬೇಸ್ಬಾಲ್ ಕ್ರಿಕೆಟ್ನ್ನ ಫಸ್ಟ್ ಇಂಟ್ರಡ್ಯೂಸ್ ಮಾಡಿರೋದೆ ಬ್ರೆಂಡನ್ ಮೆಕಲಂ. ಈ ರೀತಿ ಕ್ರಿಕೆಟ್ ಆಡೋಕೆ ಫಸ್ಟ್ ಶುರು ಮಾಡಿರೋದು ಇಂಗ್ಲೆಂಡ್ ಟೀಮ್. ಕ್ರಿಕೆಟ್ನ್ನ ಕಂಡು ಹಿಡಿದ ಇಂಗ್ಲೆಂಡ್ ಇಡೀ ಕ್ರಿಕೆಟ್ ಫಾರ್ಮೆಟ್ಗೆ ಹೊಸ ಟ್ವಸ್ಟ್ ನೀಡಿದೆ.
ಬೇಸ್ಬಾಲ್ ಸ್ಟ್ರ್ಯಾಟಜಿಯಿಂದಾಗಿ ಇಂಗ್ಲೆಂಡ್ ಟೀಂ ಹಲವು ಟೆಸ್ಟ್ ಮ್ಯಾಚ್ಗಳನ್ನ ಕೂಡ ಗೆದ್ದುಕೊಂಡಿದೆ. ಇಂಗ್ಲೆಂಡ್ ಕ್ರಿಕೆಟರ್ಸ್ಗಳ ಮೆಂಟಾಲಿಟಿಯೇ ಚೇಂಜ್ ಆಗಿದೆ. ಅದ್ರಲ್ಲೂ ಟೆಸ್ಟ್ ಆಡೋವಾಗ ಅವರ ಅಪ್ರೋಚ್ ಕಂಪ್ಲೀಟ್ ಚೇಂಜ್ ಆಗಿದೆ. ಆದ್ರೆ ಭಾರತದಲ್ಲಿ ಮಾತ್ರ ಇಂಗ್ಲೆಂಡ್ನ ಬೇಸ್ಬಾಲ್ ಸ್ಟ್ರ್ಯಾಟಜಿ ವರ್ಕೌಟ್ ಆಗ್ತಾ ಇರುವಂತೆ ಕಾಣ್ತಿಲ್ಲ. 2ನೇ ಟೆಸ್ಟ್ನಲ್ಲಿ ಸೋತ ಬಳಿಕ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗರೊಬ್ಬರು ಬೇಸ್ಬಾಲ್ ಮೈಂಡ್ಸೆಟ್ ಬಗ್ಗೆ ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡ್ತೀನಿ. ಇದ್ರ ಜೊತೆಗೆ ಸಾಕಷ್ಟು ಮಂದಿ ಬೇಸ್ಬಾಲ್ ಸ್ಟ್ರ್ಯಾಟಜಿ ಬಗ್ಗೆ ವಿವರಿಸುವಂತೆ ಕಾಮೆಂಟ್ಸ್ ಮಾಡಿದ್ರು. ಬೇಸ್ಬಾಲ್ ಅಂದ್ರೆ ಏನು? ಯಾಕೆ ಆ ಹೆಸರು ಬಂತು? ಇವೆಲ್ಲದರ ಬಗ್ಗೆಯೂ ತಿಳಿಸ್ತೀನಿ. ಜೊತೆಗೆ ಬೇಸ್ಬಾಲ್ ಬಗ್ಗೆ ನಡೀತಾ ಇರೋ ಪರ-ವಿರೋಧದ ಚರ್ಚೆ ಕೂಡ ಇಂಟ್ರೆಸ್ಟಿಂಗ್ ಆಗಿದೆ.
ಇದನ್ನೂ ಓದಿ: ಐಸಿಸಿ ಅಂಡರ್-19 ವಿಶ್ವಕಪ್ 2024 ರ ಫೈನಲ್ – ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತದ ಯುವಪಡೆ
ಬೇಸ್ಬಾಲ್ ಅಂದ್ರೆ ಏನು ಅನ್ನೋದನ್ನು ತಿಳಿದುಕೊಳ್ಳೋಣ. ಬೇಸ್ಬಾಲ್ ಅಂದ್ರೆ ಅಗ್ರೆಸ್ಸಿವ್ ಟೈಪ್ ಆಫ್ ಕ್ರಿಕೆಟ್. ಇದೊಂದು ಮೈಂಡ್ಸೆಟ್ ಗೇಮ್. ಬ್ಯಾಟಿಂಗ್, ಬೌಲಿಂಗ್ ಎಲ್ಲವನ್ನೂ ಅಗ್ರೆಸ್ಸಿವ್ ಆಗಿಯೇ ಆಡೋದು ಬೇಸ್ಬಾಲ್ನ ಮೇನ್ ಸ್ಟ್ರ್ಯಾಟಜಿ. ಬೇಸ್ಬಾಲ್ ಅನ್ನೋ ಪದ ಕ್ರಿಕೆಟ್ನಲ್ಲಿ ಬರೋಕೆ ಕಾರಣ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕಲಂ. ಇಎಸ್ಪಿಎನ್ ಕ್ರಿಕ್ ಇನ್ಫೋದ ಪತ್ರಕರ್ತ ಆಂಡ್ರ್ಯೂ ಮಿಲ್ಲರ್ ಅನ್ನೋರು ಬೇಸ್ಬಾಲ್ ಪದವನ್ನ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ಬಳಸ್ತಾರೆ. 2022ರ ಮೇನಲ್ಲಿ ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಂ ಇಂಗ್ಲೆಂಡ್ ಕೋಚ್ ಆಗಿ ಆಯ್ಕೆಯಾದಾಗ ಪತ್ರಕರ್ತ ಆ್ಯಂಡ್ರ್ಯೂ ಮಿಲ್ಲರ್ ಬೇಸ್ ಪದ ಬಳಕೆ ಮಾಡ್ತಾರೆ. ನ್ಯೂಜಿಲ್ಯಾಂಡ್ ಪರ ಬ್ರೆಂಡನ್ ಮೆಕಲಂ ಕ್ರಿಕೆಟ್ ಆಡ್ತಿದ್ದಾಗ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಆಗಿದ್ರು. ಫಸ್ಟ್ ಬಾಲ್ನಿಂದಲೇ ಬೌಂಡರಿ, ಸಿಕ್ಸರ್ ಹೊಡಿಯುವಂಥಾ ಜಾಯಮಾನ. 2008ರಲ್ಲಿ ಐಪಿಎಲ್ ಆರಂಭವಾದಾಗ, ಟೂರ್ನಿಯ ಮೊದಲ ಮ್ಯಾಚ್ನಲ್ಲೇ ರಾಯಲ್ ಚಾಲೆಂಜರ್ಸ್ ಪರ ಬ್ರೆಂಡನ್ ಮೆಕಲಂ ಸೆಂಚೂರಿ ಹೊಡೆದಿದ್ರು. ಐಪಿಎಲ್ನಲ್ಲಿ ಫಸ್ಟ್ ಸೆಂಚೂರಿ ಹೊಡೆದಿದ್ದೇ ಬ್ರೆಂಡನ್ ಮೆಕಲಂ. ಬೆನ್ಸ್ಟೋಕ್ಸ್ ಇಂಗ್ಲೆಂಡ್ ಕ್ಯಾಪ್ಟನ್ ಆಗಿದ್ದಾಗ, ಮೆಕಲಂ ಇಂಗ್ಲೆಂಡ್ ಕೋಚ್ ಆಗುತ್ತಲೇ ಕ್ರಿಕೆಟ್ನಲ್ಲಿ ಬೇಸ್ಬಾಲ್ ಅಂದ್ರೆ ಅಗ್ರೆಸಿವ್ ಆಟ ಅನ್ನೋ ಹೆಸರು ಬಂತು. ಇಲ್ಲಿ ಮೆಕಲಂ ಮತ್ತು ಬೆನ್ಸ್ಟೋಕ್ಸ್ ಇಬ್ಬರೂ ಅಗ್ರೆಸ್ಸಿವ್ ಕ್ರಿಕೆಟರ್ಸೇ. ಕ್ಯಾಪ್ಟನ್ ಮತ್ತು ಕೋಚ್ ಇವರಿಬ್ಬರ ಕಾಂಬಿನೇಷನ್ನಿಂದಾಗಿಯೇ ಇಂಗ್ಲೆಂಡ್ ಟೀಮ್ ಬೇಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಸಕ್ಸಸ್ ಆಗಿರೋದು. ಇನ್ನು, ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬ್ಯಾರ್ಸ್ಟೋ ಬೇಸ್ಬಾಲ್ ವರ್ಡ್ನ್ನ ಫ್ರೀಡಂ ಅಂತಾನೂ ಡಿಫೈನ್ ಮಾಡಿದ್ದಾರೆ. ಅಂದ್ರೆ ಬ್ಯಾಟ್ಸ್ಮನ್, ಬೌಲರ್ಸ್ಗಳಿಗೆ ಹೀಗೆಯೇ ಆಡಬೇಕು ಅಂತಾ ಯಾವುದೇ ಷರತ್ತು ವಿಧಿಸದೆ ಅವರ ಮನಸ್ಸಿಗೆ ತೋಚಿದ ಹಾಗೆ, ಬಿಂದಾಸ್ ಆಗಿ ಆಡುವ ಸ್ವಾತಂತ್ರ್ಯ. ಆ ಮೂಮೆಂಟ್ನಲ್ಲಿ ಹೇಗೆ ಆಡಬೇಕು ಅನ್ನೋ ಬಗ್ಗೆ ನಿರ್ಧರಿಸುಂಥಾ ಫುಲ್ ಫ್ರೀಡಂ ಫ್ಲೇಯರ್ಸ್ಗಳಿಗೆ ಇರುತ್ತೆ.
2022ರ ಡಿಸೆಂಬರ್ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಫಾರ್ ದಿ ಫಸ್ಟ್ ಟೈಮ್ ಬೇಸ್ಬಾಲ್ ಸ್ಟ್ರ್ಯಾಟಜಿಯೊಂದಿಗೆ ಕ್ರಿಕೆಟ್ ಆಡಿತ್ತು. ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ಕೇವಲ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿತ್ತು. ಮೂವರು ಬ್ಯಾಟ್ಸ್ಮನ್ಗಳು ಸೆಂಚೂರಿ ಬಾರಿಸಿದ್ರು. ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲೇ ಮೊದಲ ದಿನದಾಟದಲ್ಲೇ ಅಷ್ಟೊಂದು ರನ್ ಪೇರಿಸಿರೋದು ದಾಖಲೆ. ಬೇಸ್ಬಾಲ್ ಅಸ್ತ್ರದ ಮೂಲಕ ಇಂಗ್ಲೆಂಡ್ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. 6.75 ರನ್ ರೇಟ್ನಲ್ಲಿ ಅಂದು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಪಾಕಿಸ್ತಾನದ ಬೌಲರ್ಗಳನ್ನ ಚಚ್ಚಿ ಬಿಸಾಕಿದ್ರು. ಬ್ರೆಂಡನ್ ಮೆಕಲಂ ಕೋಚ್ ಆದ ಬಳಿಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸ್ಟ್ರೈಕ್ರೇಟ್ 77.06ಕ್ಕೆ ಏರಿತ್ತು. ಅಷ್ಟೇ ಅಲ್ಲ, ಬ್ಯಾಟ್ಸ್ಮನ್ಗಳು ಟಿ-20ಯಲ್ಲಿ ಆಡುವಂತೆ ಅನ್ಆರ್ಥಡಾಕ್ಸ್ ಶಾಟ್ಸ್ಗಳನ್ನ ಟೆಸ್ಟ್ನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಹೊಡೆಯೋಕೆ ಶುರು ಮಾಡಿದ್ರು. ಜೋ ರೋಟ್, ಬೆನ್ಸ್ಟೋಕ್ರಂಥಾ ಆಟಗಾರರು ವಿಕೆಟ್ ಕೀಪರ್ ಹಿಂಭಾಗದಿಂದ ರಿವರ್ಸ್ ಱಂಪ್, ರಿವರ್ಸ್ ಸ್ವೀಚ್, ಸ್ವಿಚ್ ಹಿಟ್ನಂಥಾ ಶಾಟ್ಸ್ ಹೊಡೆಯೋಕೆ ಆರಂಭಿಸಿದ್ರು. ಹೈದರಾಬಾದ್ನಲ್ಲಿ ಭಾರತದ ವಿರುದ್ಧ ಫಸ್ಟ್ ಟೆಸ್ಟ್ನಲ್ಲಿ 196 ರನ್ ಹೊಡೆದಿದ್ದ ಓಲಿ ಪಾಪ್ ಕೂಡ ದಿಲ್ಸ್ಕೂಪ್, ರಿವರ್ಸ್ ಸ್ವೀಪ್ ಶಾಟ್ಸ್ಗಳನ್ನ ಹೊಡೆದಿದ್ರು. ಆಲ್ಮೋಸ್ಟ್ ಎಲ್ಲಾ ಬಾಲ್ನಲ್ಲೂ ಸ್ಕೋರ್ ಗಳಿಸೋದು ಬೇಸ್ಬಾಲ್ ಕ್ರಿಕೆಟ್ನ ಮೇನ್ ಸ್ಟ್ರ್ಯಾಟಜಿ. ಅಂದ್ರೆ ಬಹುತೇಕ ಟಿ-20 ಮಾದರಿಯಲ್ಲೇ ಬ್ಯಾಟಿಂಗ್ ಮಾಡೋದು. ಹಳೆಯ ಟೆಸ್ಟ್ ಶೈಲಿಯಂತೆ ನಿಧಾನಕ್ಕೆ ಸ್ಕೋರ್ ಮಾಡೋದನ್ನ ಬಿಟ್ಟು ವೇಗವಾಗಿ ರನ್ ಕಲೆ ಹಾಕೋದೆ ಬ್ಯಾಟ್ಸ್ಮನ್ಗಳ ಉದ್ದೇಶವಾಗಿರುತ್ತೆ.
2023ರ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬೆನ್ಸ್ಟೋಕ್ಸ್ ಏಕಾಂಗಿ ಹೋರಾಟ ನಡೆಸಿ 150 ರನ್ ಹೊಡೆದಿದ್ರು. ಆ ಇನ್ನಿಂಗ್ಸ್ನಲ್ಲಿ 9 ಸಿಕ್ಸರ್ಗಳನ್ನ ಬಾರಿಸಿದ್ರು. ಬೆನ್ಸ್ಟೋಕ್ ಅಂತೂ ಬೇಸ್ಬಾಲ್ ಕ್ರಿಕೆಟ್ನ ಎಕ್ಸ್ಪರ್ಟ್ ಆಗಿದ್ದಾರೆ. ಇನ್ನು ಈ ಬೇಸ್ಬಾಲ್ ಅಸ್ತ್ರ ಕೇವಲ ಬ್ಯಾಟಿಂಗ್ಗಷ್ಟೇ ಸೀಮಿತವಾಗಿಲ್ಲ. ಫೀಲ್ಡಿಂಗ್, ಬೌಲಿಂಗ್ ವೇಳೆಯೂ ಇಂಗ್ಲೆಂಡ್ ತಂಡ ಬೇಸ್ಬಾಲ್ ಸ್ಟ್ರ್ಯಾಟಜಿಯಲ್ಲೇ ಆಡ್ತಿದೆ.
ಇಲ್ಲಿ ರನ್ ತಡೆಗಟ್ಟೋದು ಉದ್ದೇಶವಲ್ಲ.. ವಿಕೆಟ್ ತೆಗಿಯೋ ಏಕೈಕ ಉದ್ದೇಶದೊಂದಿಗೆ ಬೇಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಇಂಗ್ಲೆಂಡ್ ಆಟವಾಡ್ತಿದೆ. ಅದ್ರಲ್ಲೂ 2023ರ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಂತೂ ಬೆನ್ಸ್ಟೋಕ್ ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿರದ ರೀತಿ ವಿಚಿತ್ರವಾಗಿ ಫೀಲ್ಡಿಂಗ್ ಸೆಟ್ ಮಾಡಿ, ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾರನ್ನ ಔಟ್ ಮಾಡಿದ್ರು. ಅದು ಬೇಸ್ಬೇಲ್ ಸ್ಟ್ರ್ಯಾಟಜಿಯ ಒಂದು ಭಾಗವಾಗಿತ್ತು. ಬೇಸ್ಬಾಲ್ ಸ್ಟ್ರ್ಯಾಟಜಿ ಪ್ರಕಾರ ಆಡುತ್ತಿರುವ ಇಂಗ್ಲೆಂಡ್ ತಂಡದ ಉದ್ದೇಶ ಏನೇ ಇದ್ರೂ ಮ್ಯಾಚ್ ಗೆಲ್ಲೋದು. ಪಂದ್ಯ ಡ್ರಾ ಮಾಡಬೇಕು ಅನ್ನೋ ಯೋಚನೆ ಆಟಗಾರರಿಗೆ ಯಾವ ಹಂತದಲ್ಲೂ ಕೂಡ ಬರೋದಿಲ್ಲ. ಇಂಗ್ಲೆಂಡ್ ಬೇಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಆಡಿದ ಬಹುತೇಕ ಎಲ್ಲಾ ಟೆಸ್ಟ್ ಪಂದ್ಯಗಳಲ್ಲೂ ಕೂಡ ಫಲಿತಾಂಶ ಬಂದಿವೆ.
ಟೆಸ್ಟ್ ಕ್ರಿಕೆಟ್ ಸೇವ್ ಮಾಡುತ್ತಾ BAZBALL?
ಈಗಿನ ಪರಿಸ್ಥಿತಿ ನೋಡಿದ್ರೆ ಒಂದು ಲೆಕ್ಕದಲ್ಲಿ ಟೆಸ್ಟ್ ಕ್ರಿಕೆಟ್ಗೆ ಬೇಸ್ಬಾಲ್ ಸ್ಟ್ರ್ಯಾಟಜಿ ಒಳ್ಳೆಯದೇ. ಯಾಕಂದ್ರೆ ಟಿ-20 ಅಬ್ಬರದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಬಗ್ಗೆ ಜನರು ಆಸಕ್ತಿಯೇ ಕಳೆದುಕೊಂಡಿದ್ದಾರೆ. ಕಟ್ಟಾ ಕ್ರಿಕೆಟ್ ಫಾಲೋವರ್ಸ್ ಕೂಡ ಟೆಸ್ಟ್ ಮ್ಯಾಚ್ಗಳನ್ನ ನೋಡ್ತಾ ಇಲ್ಲ. ಐದು ದಿನ ಆಡಿ ಮ್ಯಾಚ್ ಡ್ರಾ ಆಗೋದಾದ್ರೆ ನೋಡೋದ್ಯಾಕೆ ಅನ್ನೋ ಮನೋಭಾವನೆಯೇ ಬಹುತೇಕ ಮಂದಿಯದ್ದು. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್ ಬರೀ ಬೋರಿಂಗ್ ಅಂತಾ ಯುವಕರು ಕೂಡ ಆಸಕ್ತಿ ವಹಿಸುತ್ತಿಲ್ಲ. ಆದ್ರೆ ಈ ಬೇಸ್ಬಾಲ್ ಮಾದರಿ ಕ್ರಿಕೆಟ್ನಿಂದ ಟೆಸ್ಟ್ ಬಗ್ಗೆಯೂ ಹೆಚ್ಚಿನ ಆಸಕ್ತಿಯುಂಟಾಗುವಂತೆ ಮಾಡಬಹುದು. ಅಗ್ರಸ್ಸಿವ್ ಕ್ರಿಕೆಟ್ ಆಡೋದ್ರಿಂದ. ಬ್ಯಾಟ್ಸ್ಮನ್ಗಳು ಮೇಲಿಂದ ಮೇಲೆ ಫೋರ್, ಸಿಕ್ಸರ್ಗಳನ್ನ ಟೆಸ್ಟ್ನಲ್ಲೂ ಹೊಡೆದ್ರೆ. ಸುಮ್ನೆ ಬಾಲ್ ತಿನ್ನೋ ಬದಲು ಹೆಚ್ಚಿನ ಸ್ಕೋರ್ ಗಳಿಸೋಕೆ ಯತ್ನಿಸಿದ್ರೆ.. ಅಗ್ರೆಸಿವ್ ಆಗಿ ಬೌಲಿಂಗ್, ಫೀಲ್ಡಿಂಗ್ ಮಾಡಿದ್ರೆ.. ಗೆಲ್ಲಲೇಬೇಕು ಅನ್ನೋ ಹಠದಲ್ಲಿ ಕ್ರಿಕೆಟ್ ಆಡಿದ್ರೆ ಟೆಸ್ಟ್ ಮ್ಯಾಚ್ಗಳು ಕೂಡ ಇಂಟ್ರೆಸ್ಟಿಂಗ್ ಆಗಿರುತ್ತೆ. ಈಗ ನೋಡಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸೀರಿಸ್ಗೆ ಸ್ಟೇಡಿಯಂಗೆ ಬರ್ತಾ ಇರೋ ಜನರ ಸಂಖ್ಯೆ ಹೆಚ್ಚಾಗ್ತಿದೆ. ಕೆಲ ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಮ್ಯಾಚ್ ಆಡೋವಾಗ ಸ್ಟೇಡಿಯಂಗಳೆಲ್ಲಾ ಖಾಲಿ ಹೊಡೀತಿದ್ವು. ಬಟ್ ಈಗ ಟೆಸ್ಟ್ ಮ್ಯಾಚ್ಗಳಲ್ಲಿ ರಿಸಲ್ಟ್ ಬರ್ತಿದೆ. ಅಗ್ರೆಸ್ಸಿವ್ ಆಗಿ ಆಡ್ತಾರೆ. ಅದ್ರಲ್ಲೂ ಬೇಸ್ಬಾಲ್ನಂಥಾ ಕಾನ್ಸೆಪ್ಟ್ ಟೆಸ್ಟ್ ಕ್ರಿಕೆಟ್ಗೆ ಜೀವ ಕೊಡಬಹುದು.
ಆದ್ರೆ ಬೇಸ್ಬಾಲ್ ಕ್ರಿಕೆಟ್ ಬಗ್ಗೆಯೂ ಒಂದಷ್ಟು ಟೀಕೆಗಳು ವ್ಯಕ್ತವಾಗಿವೆ. ಎಲ್ಲಾ ಪರಿಸ್ಥಿತಿಯಲ್ಲೂ ಬೇಸ್ಬಾಲ್ ಕ್ರಿಕೆಟ್ ಆಡೋಕೆ ಸಾಧ್ಯವಿಲ್ಲ. ಕೆಲವೊಂದು ಪಿಚ್ಗಳಲ್ಲಿ ಅಗ್ರೆಸಿವ್ ಆಗಿ ಆಡೋದು ಸಾಧ್ಯವೇ ಇಲ್ಲ. ಅತ್ಯುತ್ತಮ ಬೌಲರ್ಗಳು ಇರುವಾಗ ಎಲ್ಲಾ ಬಾಲ್ಗೂ ಹೊಡೆಯುತ್ತೇನೆ ಅಂತಾ ನಿರ್ಧರಿಸೋದು ಮೂರ್ಖತನವಾಗುತ್ತೆ ಅಂತಾ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ಈ ಹಿಂದೆಯೇ ಹೇಳಿದ್ರು. ಅದು ಇಂಗ್ಲೆಂಡ್ಗೆ ಈಗ ಭಾರತದ ಪಿಚ್ಗಳಲ್ಲಿ ಆಡೋವಾಗ ಅರ್ಥವಾಗ್ತಿರಬಹುದೋ ಏನೊ. ಯಾಕಂದ್ರೆ ಮೊದಲ ಎರಡು ಮ್ಯಾಚ್ಗಳಲ್ಲೂ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಬೇಸ್ಬಾಲ್ ಸ್ಟ್ರ್ಯಾಟಜಿಯಲ್ಲಿ ಆಡೋಕೆ ಅಷ್ಟಾಗಿ ಯತ್ನಿಸಿಲ್ಲ. ಸೆಕೆಂಡ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಸೋತ ಬಳಿಕ ಮಾಜಿ ಕ್ರಿಕೆಟರ್ ಜೆಫ್ರಿ ಬಾಯ್ಕಾಟ್ ಒಂದು ಇಂಪಾರ್ಟೆಂಟ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಬೇಸ್ಬಾಲ್ ಕ್ರಿಕೆಟ್ ಅಂತಾ ಹೇಳ್ಕೊಂಡು ಟೆಸ್ಟ್ ಮ್ಯಾಚ್ನ್ನ ಯಾವಾಗಲೂ ಟಿ20 ಫಾರ್ಮೆಟ್ನಲ್ಲಿ ಆಡೋದು ಒಳ್ಳೆಯದಲ್ಲ. ಟೆಸ್ಟ್ನಲ್ಲೇ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಸ್ವೀಪ್, ಸ್ವೈಪ್, ಕ್ರಾಸ್ ಬ್ಯಾಟ್ನಲ್ಲಿ ಹೊಡಿಯೋಕೆ ಹೋಗಿಯೇ ಔಟಾಗ್ತಿದ್ದಾರೆ. ಕಳೆದ ಆ್ಯಶಸ್ ಸೀರಿಸ್ನಲ್ಲಿ ಲಾರ್ಡ್ಸ್ ಮತ್ತು ಎಡ್ಜ್ಬ್ಯಾಸ್ಟನ್ ಟೆಸ್ಟ್ ಮ್ಯಾಚ್ಗಳನ್ನ ಬೇಸ್ಬಾಲ್ ಸ್ಟ್ರ್ಯಾಟಜಿಯಿಂದಾಯೇ ಇಂಗ್ಲೆಂಡ್ ಸೋತಿತ್ತು ಅಂತಾ ಜೆಫ್ರಿ ಬಾಯ್ಕಾಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಒಂದು ಸಂಗತಿಯನ್ನ ರಿವೀಲ್ ಮಾಡಿದ್ದಾರೆ. ಈ ಬೇಸ್ಬಾಲ್ ಸ್ಟ್ರ್ಯಾಟಜಿಯಿಂದಾಗಿ ಈಗ ಇಂಗ್ಲೆಂಡ್ ಟೀಮ್ ಮೀಟಿಂಗ್ ಕೂಡ ಮಾಡ್ತಿಲ್ಲ ಎಂದಿದ್ದಾರೆ. ಬೆನ್ ಸ್ಟೋಕ್ಸ್ ಕ್ಯಾಪ್ಟನ್ಸಿಯಲ್ಲಿ ಯಾವುದೇ ಟೀಮ್ ಮೀಟಿಂಗ್ ನಡೀತಾ ಇಲ್ವಂತೆ. ಬೇಸ್ಬಾಲ್ ಅನ್ನೋದು ಇಂಗ್ಲೆಂಡ್ ಟೀಮ್ನ್ನ ಎಷ್ಟರ ಮಟ್ಟಿಗೆ ಚೇಂಜ್ ಮಾಡಿದೆ ಅನ್ನೋದಕ್ಕೆ ಇದೇ ಸಾಕ್ಷಿ ನೋಡಿ.