ಡಾಕ್ಟರ್ ಸಲಹೆ ಕೇಳದೆ ಮಾತ್ರೆ ತಗೋತೀರಾ? – ನಿಮ್ಮಿಷ್ಟದಂತೆ ಟ್ಯಾಬ್ಲೆಟ್ ತಗೊಂಡ್ರೆ ಏನಾಗುತ್ತೆ?
ನಮ್ ದೇಶದಲ್ಲಿ ನಾವೇ ಡಾಕ್ಟರ್.. ನಾವೇ ಪೇಷೆಂಟ್ ಅನ್ನೋ ತರ ಕೆಲವರು ವೈದ್ಯರ ಸಲಹೆ ಪಡೆಯದೇ ಸಿಕ್ಕ ಸಿಕ್ಕ ಮಾತ್ರೆ ತಗೊಳ್ತಾರೆ.. ಅದ್ರಲ್ಲೀ ಕೆಲವರು ವಿಟಮಿನ್ ಮತ್ತು ಮಿನರಲ್ ಸಪ್ಲಿಮೆಂಟ್ ತಗೋಳ್ತಾರೆ. ಕೂದಲಿನ, ಉಗುರಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಬಯೋಟಿನ್ ತೆಗೆದುಕೊಳ್ಳುವುದು, ಕಣ್ಣುಗಳ ದೃಷ್ಟಿ ಚೆನ್ನಾಗಿರಲೆಂದು ವಿಟಮಿನ್ ಎ ಸಪ್ಲಿಮೆಂಟ್ ಸೇವಿಸುವುದು, ಹಾಗೆಯೇ ಕಬ್ಬಿಣಾಂಶ, ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಶಿಫಾರಸು ಇಲ್ಲದೇ ಸೇವನೆ ಮಾಡುವುದು ಅಪಾಯಕಾರಿ. ಇದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಬಹುದು.
ಇದನ್ನೂ ಓದಿ: ಬಿಸಿಯೂಟ ಮಾಡಿ ಬಡಿಸುವ ತಾಯಂದಿರ ಸಂಬಳಕ್ಕೇ ಕತ್ತರಿ? – ನವೆಂಬರ್ ತಿಂಗಳಿಂದಲೇ ಸಂಬಳ ಪಾವತಿ ಬಾಕಿ..!
ನಮ್ಮ ದೇಹಕ್ಕೆ ವಿಟಮಿನ್ ಎ ಅಗತ್ಯ ಸಾಕಷ್ಟಿದೆ. ಇದು ದೃಷ್ಟಿಯನ್ನು ಆರೋಗ್ಯಪೂರ್ಣವಾಗಿರಿಸಲು ಸಹಕಾರಿ. ಹಾಗೆಯೇ, ರೋಗನಿರೋಧಕ ಶಕ್ತಿಯನ್ನು ಸಹ ಉತ್ತೇಜಿಸುತ್ತದೆ. ಆದರೆ ಅಗತ್ಯಕ್ಕಿಂಯ ವಿಟಮಿನ್ ಎ ಸಪ್ಲಿಮೆಂಟ್ ತೆಗೆದುಕೊಳ್ಳುವುದರಿಂದ ಲಿವರ್ ಗೆ ತಿಂದರೆ ಆಗಬಹುದು.. ತಲೆ ಸುತ್ತುವ ಸಮಸ್ಯೆ ಶುರುವಾಗಬಹುದು, ದೃಷ್ಟಿ ಮಂಜಾಗಬಹುದು, ಮೂಳೆಗಳು ಸವೆಯಬಹುದು. ಇನ್ನು ವಿಟಮಿನ್ ಇ ಸಪ್ಲಿಮೆಂಟ್ ಅನ್ನು ಬಹಳಷ್ಟು ಜನ ಸೇವನೆ ಮಾಡುತ್ತಾರೆ. ಇದರಲ್ಲಿರುವ ಆ್ಯಂಟಿಆಕ್ಸಿಡಂಟ್ ಗಳಿಂದ ಸಾಕಷ್ಟು ಪ್ರಯೋಜನವಿದೆಯಾದರೂ, ವಿಟಮಿನ್ ಇ ಪ್ರಮಾಣ ಅಧಿಕವಾದರೆ ಕ್ಯಾನ್ಸರ್ ಅಪಾಯ ಹೆಚ್ಚು. ಹಲವು ಅಧ್ಯಯನಗಳು ವಿಟಮಿನ್ ಇ ಮತ್ತು ಕ್ಯಾನ್ಸರ್ ಗೆ ಇರುವ ಸಂಬಂಧವನ್ನು ತಿಳಿಸಿವೆ.
ಇನ್ನು ಕಬ್ಬಿಣಾಂಶದ ಮಾತ್ರೆಗಳನ್ನು ವೈದ್ಯರ ಸಲಹೆ ಇರಲಿ, ಇಲ್ಲದಿರಲಿ, ಹಲವರು ಸೇವನೆ ಮಾಡುತ್ತಾರೆ. ಮುಖ್ಯವಾಗಿ, ಮಹಿಳೆಯರು ತಮಗೆ ಕಬ್ಬಿಣಾಂಶ ಬೇಕು ಎಂದು ತಾವೇ ನಿರ್ಧರಿಸುವುದು ಹೆಚ್ಚು. ಕಬ್ಬಿಣಾಂಶದ ಕೊರತೆಯಿಂದ ಅನೀಮಿಯಾ ಉಂಟಾಗುತ್ತದೆ. ಆದರೆ, ಇದರ ಅಂಶ ಹೆಚ್ಚಾದರೆ ಹೃದಯಕ್ಕೆ ತೊಂದರೆಯಾಗುತ್ತದೆ. ಐರನ್ ಸಪ್ಲಿಮೆಂಟ್ ಗೂ ಹೃದಯ ಸ್ತಂಭನಕ್ಕೂ ಸಂಬಂಧವಿರುವುದನ್ನು ಅಧ್ಯಯನವೊಂದು ಹೇಳಿದೆ.. ಹೀಗಾಗಿ ಯಾವುದೇ ಮಾತ್ರೆಗಳನ್ನ ತೆಗೆದುಕೊಳ್ಳೋ ಮುನ್ನ ವೈದ್ಯರ ಸಲಹೆ ಪಡೆಯೋದು ಒಳ್ಳೆದು.