ಚಪಾತಿ ತಯಾರಿಸುವಾಗ ಈ ತಪ್ಪು ಮಾಡ್ಬೇಡಿ! – ಒಂದು ತಪ್ಪಿನಿಂದ ಹೊಟ್ಟೆ ಕೆಡುತ್ತೆ!

ಆಧುನಿಕ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಅಧಿಕ ತೂಕದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಈ ಕಾರಣದಿಂದ ಹಲವರು ತೂಕ ಇಳಿಸಿಕೊಳ್ಳಲು ಜಿಮ್ನಲ್ಲಿ ವಿವಿಧ ವ್ಯಾಯಾಮ ಮಾಡಲು ಮುಂದಾಗುತ್ತಾರೆ. ಅನೇಕರು ಜಿಮ್ ಹೋಗುವುದರ ಜೊತೆಗೆ ಊಟದ ಜೊತೆ ಚಪಾತಿ ಸಹ ಸೇವಿಸುತ್ತಾರೆ. ಆದ್ರೆ ಚಪಾತಿ ವಿಚಾರದಲ್ಲಿ ಈ ತಪ್ಪು ಮಾಡಲೇಬೇಡಿ.. ಇದ್ರಿಂದ ನಿಮ್ಮ ಆರೋಗ್ಯಕ್ಕೆ ಕುತ್ತು.
ಇದನ್ನೂ ಓದಿ: 8 ತಂಡ.. ಕಪ್ ಗೆದ್ದಿದ್ದೇ 3 ಟೀಂ – ಭಾರತಕ್ಕೆ ಲಂಕನ್ನರೇ ವಿಲನ್!
ಹೌದು ಇತ್ತೀಚಿನ ದಿನಗಳಲ್ಲಿ ಡೆಯೆಟ್ ಅಂತ ಹೇಳ್ಕೊಂಡು ಅನೇಕರು ಚಪಾತಿ ತಿನ್ನುತ್ತಾರೆ. ಕೆಲವರು ಒಂದೇ ಬಾರಿಗೆ ಚಪಾತಿ ಮಾಡಿ, ಬಳಿಕ ಪದೇ ಪದೇ ಬಿಸಿ ಮಾಡಿ ತಿನ್ನುತ್ತಾರೆ. ಆದರೆ ಒಮ್ಮೆ ಮಾಡಿದ ಚಪಾತಿಗಳನ್ನ ಮತ್ತೆ ಬಿಸಿ ಮಾಡುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
ಹೌದು, ಅನೇಕರು ತಮ್ಮ ಆಹಾರದ ಭಾಗವಾಗಿ ಚಪಾತಿಗಳನ್ನ ತಿನ್ನುವ ಅಭ್ಯಾಸವನ್ನ ಹೊಂದಿರುತ್ತಾರೆ. ಕೆಲವರು ದಿನಕ್ಕೆ ಮೂರು ಬಾರಿಯೂ ಚಪಾತಿಗಳನ್ನ ತಿನ್ನಲು ಇಷ್ಟಪಡುತ್ತಾರೆ. ಅಂದರೆ ಹಲವು ಚಪಾತಿಗಳನ್ನ ಒಂದೇ ಬಾರಿಗೆ ತಯಾರಿಸಿ ಅಗತ್ಯವಿದ್ದಾಗ ಮತ್ತೆ ಬಿಸಿ ಮಾಡಲಾಗುತ್ತದೆ. ಆಹಾರವನ್ನ ಮತ್ತೆ ಬಿಸಿ ಮಾಡುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆಹಾರವನ್ನ ಮತ್ತೆ ಬಿಸಿ ಮಾಡಿದಾಗ ಅದು ಕಠಿಣವಾಗುತ್ತದೆ.
ಚಪಾತಿಗಳನ್ನ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಅವು ಸರಿಯಾಗಿ ಜೀರ್ಣವಾಗುವುದಿಲ್ಲ. ಇದು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನ ಉಂಟುಮಾಡಬಹುದು. ಆದರೆ ಹೊಸದಾಗಿ ತಯಾರಿಸಿದ ಚಪಾತಿಗಳಲ್ಲಿ ಬಹಳಷ್ಟು ತೇವಾಂಶ ಮತ್ತು ಪೋಷಕಾಂಶಗಳಿವೆ. ಅವುಗಳನ್ನ ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಈ ಪೋಷಕಾಂಶಗಳು ಕಡಿಮೆಯಾಗುತ್ತವೆ. ಆದ್ದರಿಂದ ಚಪಾತಿಯನ್ನ ಮತ್ತೆ ಬಿಸಿ ಮಾಡಿ ತಿನ್ನಬಾರದು.

ನೋಡಿರಿ

