ಹೆಚ್ಚು ಉಪ್ಪು ತಿಂದ್ರೆ ಬಿಪಿ ಮಾತ್ರವಲ್ಲ ಶುಗರ್ ಕೂಡ ಬರುತ್ತೆ!

ಹೆಚ್ಚು ಉಪ್ಪು ತಿಂದ್ರೆ ಬಿಪಿ ಮಾತ್ರವಲ್ಲ ಶುಗರ್ ಕೂಡ ಬರುತ್ತೆ!

ಅತಿಯಾಗಿ ಉಪ್ಪು ತಿನ್ನೋದು ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿರೋದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಸಮಸ್ಯೆ, ಬಿಪಿ ಹೆಚ್ಚಾಗುತ್ತೆ ಅಂತಾ ಗೊತ್ತಿತ್ತು. ಇನ್ನು ಶುಗರ್ ಇರೋರು ಸಕ್ಕರೆ ತಿಂದ್ರೆ ಶುಗರ್ ಜಾಸ್ತಿ ಆಗುತ್ತೆ ಅಂತಾ ಹೇಳಲಾಗ್ತಿತ್ತು. ಅದ್ರೆ ಸಕ್ಕರೆ ಮಾತ್ರವಲ್ಲದೆ ಉಪ್ಪನ್ನೂ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ಬರುವ ಅಪಾಯ ಹೆಚ್ಚುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಅಮೆರಿಕದ ತುಲೇನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಈ ಅಧ್ಯಯನದಲ್ಲಿ, ಆಹಾರ ಸೇವಿಸುವಾಗ ಉಪ್ಪು ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.  ಕಡಿಮೆ ಉಪ್ಪನ್ನು ಸೇವಿಸುವವರಿಗೆ ಹೋಲಿಸಿದರೆ, ಯಾವಾಗಲೂ ಉಪ್ಪನ್ನು ಸೇವಿಸುವವರಲ್ಲಿ ಟೈಪ್ 2 ಮಧುಮೇಹ ಬರುವ ಅಪಾಯವು 39 ಪ್ರತಿಶತದಷ್ಟು ಹೆಚ್ಚಾಗಿದೆ ಅಂತಾ ಗೊತ್ತಾಗಿದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – Smart Phone ತುಂಬಾ ಬಿಸಿಯಾದ್ರೆ ಬ್ಲಾಸ್ಟ್ ಆಗುತ್ತಾ?

ಇನ್ನು  ​ಮಧುಮೇಹಿಗಳಿಗೆ ಹಾನಿಕಾರಕ ಅಂತಾನು  ಹೇಳ್ತಿವಿ. ನೀವು ಮಧುಮೇಹ ಅಥವಾ ಪ್ರಿಡಿಯಾಬಿಟಿಸ್ ಹೊಂದಿದ್ದರೆ, ನೀವು ಸೇವಿಸುವ ಸೋಡಿಯಂ ಪ್ರಮಾಣವು ಅಧಿಕ ರಕ್ತದೊತ್ತಡವನ್ನು ಉಂಟುಮಾಡುವ ಮೂಲಕ ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ . ಮಧುಮೇಹ ಅಥವಾ ಪ್ರಿಡಿಯಾಬಿಟಿಸ್ ಇರುವವರು ಅಧಿಕ ರಕ್ತದೊತ್ತಡದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ, ಇದು ವ್ಯಕ್ತಿಯನ್ನು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ

Shwetha M