ಮಧ್ಯರಾತ್ರಿ ಕುರುಕುಲು ತಿಂಡಿ ತಿನ್ನುತ್ತೀರಾ? – ತೂಕ ಹೆಚ್ಚಳ.. ಅಜೀರ್ಣ.. ಜಂಕ್ ಫುಡ್ ನಿಂದ ಬರೀ ಪ್ರಾಬ್ಲಂ!

ಅನೇಕರಿಗೆ ತಿಂಡಿ, ತಿನಿಸುಗಳು ಅಂದ್ರೆ ತುಂಬಾ ಇಷ್ಟ.. ಇಡೀ ದಿನ ಏನಾದ್ರೂ ತಿಂತಾ ಇರ್ತಾರೆ.. ಹಿಂದೆಲ್ಲಾ ಏನಾದ್ರೂ ತಿನ್ಬೇಕು ಅಂತಾ ಅನ್ಸಿದ್ರೆ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿ, ಫ್ರೂಟ್ಸ್, ಡ್ರೈಫ್ರೂರ್ಟ್ ಮುಂತಾದವುಗಳನ್ನು ತಿನ್ನುತ್ತಿದ್ರು.. ಆದ್ರೆ ಈಗ ಹಾಗಲ್ಲ ಮಾರ್ಕೆಟ್‌ನಲ್ಲಿ ಸಿಗೋ ಚಿಪ್ಸ್, ಐಸ್ ಕ್ರೀಮ್, ಚಾಕೋಲೇಟ್, ಸ್ನಾಕ್ಸ್ ಅಥವಾ ಮ್ಯಾಗಿ ತಿಂತಾರೆ. ನೀವೂ ಮಧ್ಯರಾತ್ರಿ ಕುರುಕಲು ತಿಂಡಿಗಳನ್ನ ತಿಂದ್ರೆ ನಿಮ್ಮ ಆರೋಗ್ಯಕ್ಕೆ ಅಪಾಯ ಗ್ಯಾರಂಟಿ.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ! – ರಾಷ್ಟ್ರಗೀತೆಗೆ ಡಿಎಂಕೆ ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ
ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ತಡರಾತ್ರಿಯ ತಿಂಡಿಗಳು ಹಾನಿಕಾರಕವಾಗಬಹುದು. ಯಾಕಂದ್ರೆ ದಿನದ ಆ ಸಮಯದಲ್ಲಿ ಹೆಚ್ಚಾಗಿ ಜಂಕ್ ಫುಡ್ಗಳನ್ನು ಮಾತ್ರ ಜನರು ಸೇವಿಸಲು ಇಷ್ಟಪಡುತ್ತಾರೆ. ಇದು ನಿಮ್ಮ ಜೀರ್ಣ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು ಈ ಕಡುಬಯಕೆಗಳನ್ನು ನಿಯಂತ್ರಿಸುವುದು ಬಹಳ ಕಷ್ಟ. ಹಸಿವು, ರೂಢಿ, ಬೇಸರ, ಒತ್ತಡದ ಕಾರಣದಿಂದ ನಿಮಗೂ ತಡರಾತ್ರಿಯಲ್ಲಿ ಏನಾದ್ರೂ ತಿನ್ನುವ ಅಭ್ಯಾಸವಾಗಬಹುದು. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವಾಗ ಈ ರೀತಿಯ ಜಂಕ್ ಫುಡ್ ತಿನ್ನುವುದರಿಂದ ನಿಮ್ಮ ನಿದ್ರೆಯ ಮೇಲೂ ಪರಿಣಾಮ ಉಂಟಾಗುತ್ತದೆ. ಈ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದರಿಂದ ನಿದ್ರೆಯೂ ಸರಿಯಾಗಿ ಬರುವುದಿಲ್ಲ. ನಿದ್ರೆಯ ಸಮಯದಲ್ಲಿ ಜೀರ್ಣಕ್ರಿಯೆಗೆ ದೇಹ ಹೆಚ್ಚುವರಿ ಶಕ್ತಿಯನ್ನು ಬಳಸುತ್ತದೆ. ಆ ವೇಳೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ತೂಕ ಹೆಚ್ಚಾಗತೊಡಗುತ್ತದೆ.. ಆದಷ್ಟು ಕರಿದ, ಚೀಸೀ ಆಗಿರುವ ಅಥವಾ ಮಸಾಲೆಯುಕ್ತ ಆಹಾರ ಸೇವಿಸುವುದನ್ನು ಬಿಟ್ಟಿಬಿಡಿ. ಅಗತ್ಯವಿದ್ದರೆ, ಸುಲಭವಾಗಿ ಜೀರ್ಣವಾಗುವ ತಿಂಡಿಗಳನ್ನು ಮಾತ್ರ ತಿನ್ನುವುದನ್ನು ಅಭ್ಯಾಸ ಮಾಡಿ.