ರಷ್ಯಾದಿಂದ ಭಾರತಕ್ಕೆ ತೈಲ ಬರದಿದ್ರೆ ಏನಾಗುತ್ತೆ? ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗುತ್ತಾ?

ಭಾರತದಲ್ಲಿ ಪೆಟ್ರೋಲ್,ಡೀಸೆಲ್‌ನ ಹಚ್ಚು ಬಳಸಲಾಗುತ್ತೆ.. ಸಾರ್ವಜನಿಕ ವಾಹನ, ಗೂಡ್ಸ್ ವಾಹನಗಳು ಡಿಪೆಂಡ್ ಆಗಿರುವುದು ಕಚ್ಚಾ ತೈಲದ ಮೇಲೆ..ಹೀಗಾಗಿಯೇ ಭಾರತ ಜಗತ್ತಿನಲ್ಲಿ ಅತೀ ಹೆಚ್ಚು ತೈಲ ಬಳಸುವ 3ನೇ ಅತೀ ದೊಡ್ಡ ದೇಶವಾಗಿದೆ. ಆದ್ರೆ ನಾವು ಬಳಸುವ ಕಚ್ಚಾ ತೈಲದಲ್ಲಿ ಶೇ 88 ರಷ್ಟು ಇಂಧನವನ್ನ ನಾವು ವಿದೇಶದಿಂದಲೇ ಖರೀದಿ ಮಾಡುತ್ತೇವೆ. ಇದ್ರಲ್ಲಿ ಹೆಚ್ಚಿನ ಪಾಲು ರಷ್ಯಾದಿಂದ ಬರುತ್ತೆ.. ಉಳಿದ ಅಲ್ಪಸ್ವಲ್ಪ ನಾವೇ ಉತ್ಪಾದನೆ ಮಾಡುತ್ತಿದ್ದೇವೆ.
ರಷ್ಯಾದಿಂದ ಈ ವರ್ಷದ ಜನವರಿಯಿಂದ ಜೂನ್‌ನ ತನಕ ಒಂದು ದಿನಕ್ಕೆ ಸುಮಾರು 1.75 ದಶಲಕ್ಷ ಬ್ಯಾರೆಲ್‌ಗಳಷ್ಟು ತೈಲ ಆಮದು ಮಾಡಿಕೊಂಡಿದೆ. ಒಟ್ಟಾರೆ ಭಾರತದ ಶೇ.40ರಷ್ಟು ಕಚ್ಚಾ ತೈಲ ಆಮದಿಗೆ ರಷ್ಯಾವೇ ಮೂಲವಾಗಿದೆ.ಇರಾನ್ ಮತ್ತು ವೆನುಜುವೆಲಾದ ಕಚ್ಚಾ ತೈಲದ ಮೇಲೆ ಪಾಶ್ಚಾತ್ಯ ದೇಶಗಳು ನೇರ ನಿರ್ಬಂಧ ಹೇರಿವೆ. ಆದರೆ ರಷ್ಯಾದ ತೈಲದ ಮೇಲೆ ನೇರವಾಗಿ ನಿರ್ಬಂಧ ಇಲ್ಲ. ಯುರೋಪಿಯನ್ ಯೂನಿಯನ್ ನಿಗದಿ ಮಾಡಿದಕ್ಕಿಂತ ಕಡಿಮೆ ದರಕ್ಕೆ ಭಾರತವು ರಷ್ಯಾದ ತೈಲವನ್ನು ಸಂಸ್ಕರಣೆ ಮಾಡುತ್ತದೆ.
ಒಂದು ವೇಳೆ ಅಮೆರಿಕದ ಒತ್ತಾಯಕ್ಕೆ ಮಣಿದು ಭಾರತವು ರಷ್ಯಾದಿಂದ ತೈಲ ಆಮದು ನಿಲ್ಲಿಸಿದರೆ ಭಾರತದ ವಾರ್ಷಿಕ ತೈಲ ಆಮದು ವೆಚ್ಚ 78 ಸಾವಿರ ಕೋಟಿ ರು.ನಿಂದ 95 ಸಾವಿರ ಕೋಟಿ ರು.ಗೆ ಏರಿಕೆಯಾಗುವ ಸಾಧ್ಯತೆ ಇದೆ. ರಷ್ಯಾದಿಂದ ಪ್ರತಿ ಬ್ಯಾರೆಲ್ ತೈಲಕ್ಕೆ ಕನಿಷ್ಠ 5 ಡಾಲರ್‌ನಷ್ಟು ರಿಯಾಯಿತಿ ಸಿಗುತ್ತಿದೆ. ಒಂದು ವೇಳೆ ಬೇರೆ ದೇಶದಿಂದ ತೈಲ ಖರೀದಿ ಆರಂಭಿಸಿದರೆ ಭಾರತಕ್ಕೆ ಅದು ದುಬಾರಿಯಾಗಲಿದೆ. ಆಗ ಭಾರತದಲ್ಲಿ ಆಟೋಮೆಟಿಕ್ ಆಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗುತ್ತೆ..
ಭಾರತದಲ್ಲಿ ಪ್ರತಿದಿನಕ್ಕೆ 5.44 ಲಕ್ಷ ಬ್ಯಾರೆಲ್ ತೈಲಾವನ್ನ ಉತ್ಫಾದನೆ ಆಗುತ್ತೆ. ಅಂದ್ರೆ 100 ರಲ್ಲಿ 12 ಪರ್ಸೆಂಟ್ ಅಷ್ಟೇ ನಾವು ಉತ್ಫಾದನೆ ಮಾಡ್ತಾ ಇರೋದು.. ಉಳಿದಿರುವುದು ಬೇರೆ ದೇಶಗಳಿಂದ ಭಾರತಕ್ಕೆ ಬರುತ್ತೆ..ಹಾಗಿದ್ರೆ ಯಾವೆಲ್ಲಾ ದೇಶಗಳಿಂದ ಭಾರತಕ್ಕೆ ಎಷ್ಟು ಇಂಧನ ಬರುತ್ತೆ ಅನ್ನೋದ್ದನ್ನ ನೋಡೋಣ ಬನ್ನಿ..
ಭಾರತಕ್ಕೆ ಎಲ್ಲಿಂದೆಲ್ಲಾ ಇಂಧನ ಬರುತ್ತೆ ?
ರಷ್ಯಾ – 30 -40%
ಇರಾಕ್ – 20 -30 %
ಸೌದಿ ಅರೇಬಿಯಾ – 16 -18%
ಯುಎಇ 8 -10%
ಅಮೆರಿಕ – 6 -7%
ಉಳಿದ ದೇಶ – 10 -20 %
ಇನ್ನೂ ಒಂದು ವೇಳೆ ರಷ್ಯಾದಿಂದ ತೈಲ ಆಮದು ಮಾಡಿಕೊಂಡಿಲ್ಲ ಅಂದ್ರೆ ಭಾರತ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ..ಆಮದು ವೆಚ್ಚ ಹೆಚ್ಚಳವಾಗಿ ಕಂಪನಿಗಳಿಗೆ ನಷ್ಟ ಆಗುತ್ತೆ..ಬೇರೆ ದೇಶದಿಂದ ತೈಲ ಹುಡುಕುವ ಸಮಸ್ಯೆ ಎದುರಾಗುತ್ತೆ. ಬೇರೆ ಕಡೆ ಬೆಲೆ ಹೆಚ್ಚಳವಾಗಿರುತ್ತೆ.. ಬೆಲೆ ಕೊಟ್ರು ಒಳ್ಳೆಯ ಇಂಧನ ಸಿಗಲ್ಲ. ವರ್ಷಕ್ಕೆ 75ರಿಂದ 95 ಸಾವಿರ ಕೋಟಿ ರೂಪಾಯಿ ಹೆಚ್ಚಿಗೆ ಆಗುತ್ತೆ. ಇದು ದೇಶ ಆರ್ಥಿಕದ ಮೇಲೆ ಎಫೆಕ್ಟ್ ಬೀಳುತ್ತೆ.. ಗ್ರಾಹರ ಮೇಲೆ ಬೆಲೆ ಏರಿಕೆ ಬರೆ ಬೀಳುತ್ತೆ.. ಹೀಗಾಗಿ ಭಾರತಕ್ಕೆ ರಷ್ಯಾವೇ ಆಸರೆಯಾಗಿದೆ.
ನಮ್ಮಲ್ಲಿ ಯಾಕೆ ತೈಲ ಉತ್ಪಾದನೆ ಮಾಡಲ್ಲ?
ನಮ್ಮ ದೇಶದಲ್ಲೂ ತೈಲ ನಿಕ್ಷೇಪಗಳು ಇವೆ. ಆದ್ರೆ ನಮ್ಮಲ್ಲಿ ತೈಲವನ್ನ ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆ ಮಾಡಲ್ಲ. ಅದ್ದಕ್ಕೆ ಕಾರಣ ಹಳೇ ತೈಲ ಬಾವಿಗಳು ಸಮರ್ಥ್ಯವನ್ನ ಕಳೆದುಕೊಳ್ಳುತ್ತಿವೆ. ನಿಕ್ಷೇಪಗಳನ್ನ ಹುಡುಕುವ ಕೆಲಸ ಆಗುತ್ತಿಲ್ಲ. ತಂತ್ರಜ್ಞಾನ ಕೊರತೆ ಜೊತೆ ಹೂಡಿಕೆ ಕೊರತೆ ಇದೆ. ಹೀಗಾಗಿ ನಮಲ್ಲಿ ಭೂಮಿಯೊಳಗೆ ತೈಲ ಇದ್ರೂ ಅದ್ದನ್ನ ಹೊರಗೆ ತೆಗೆಯುವ ಕೆಲಸ ಆಗುತ್ತಿಲ್ಲ.

ನೋಡಿರಿ

