ಸಾವು.. ನೋವು.. ಅಶುಭ.. ಬರೀ ಕಷ್ಟ ನಷ್ಟ! – ಕಾಗೆ ತಲೆ ಮೇಲೆ ಕುಕ್ಕಿದ್ರೆ ಅಪಶಕುನನಾ?

ಸಾವು.. ನೋವು.. ಅಶುಭ.. ಬರೀ ಕಷ್ಟ ನಷ್ಟ! – ಕಾಗೆ ತಲೆ ಮೇಲೆ ಕುಕ್ಕಿದ್ರೆ ಅಪಶಕುನನಾ?

ನಮ್ಮಲ್ಲಿ ಪಕ್ಷಿಗಳನ್ನ ತುಂಬಾ ಜನ ಪ್ರೀತಿಸ್ತಾರೆ. ಕೈಗೆ ಸಿಕ್ಕರೆ ಹಿಡ್ಕೊಂಡು ಮುದ್ದಾಡ್ತಾರೆ. ಆದ್ರೆ ಕಾಗೆ ಅಂದ್ರೆ ಮಾತ್ರ ಮೂಗು ಮುರಿಯುವವರೇ ಜಾಸ್ತಿ. ಅವುಗಳು ಮನೆಮುಂದೆ ಕೂಗಿಕೊಳ್ತಿದ್ರೆ ಓಡಿಸುತ್ತಾರೆ. ಕಾಗೆ ಏನಾದ್ರೂ ತಲೆ ಮೇಲೆ ಕುಕ್ಕಿ ಹೋದ್ರಂತೂ ಅಪಶಕುನಾ ಅಂತಾ ಭಯ ಪಡ್ತಾರೆ. ಯಾಕಂದ್ರೆ ಜ್ಯೋತಿಷ್ಯದ ಪ್ರಕಾರ ಇದಕ್ಕೆ ಅನೇಕ ಅರ್ಥಗಳಿದೆ.

ಇದನ್ನೂ ಓದಿ: ರಾತ್ರಿಯಿಡಿ ಹೆಡ್‌ಫೋನ್‌ ಹಾಕಿಕೊಂಡು ಮಲಗಿದ್ಲು.. ಬೆಳಗ್ಗೆ ಎಚ್ಚರಗೊಂಡಾಗ ಕಿವುಡಿ!

ಕಾಗೆಯನ್ನು ಸಾಮಾನ್ಯವಾಗಿ ಎಲ್ಲರೂ ನೋಡೇ ಇರ್ತಾರೆ. ಕಾಗೆಗಳನ್ನ ನಮ್ಮ ಪೂರ್ವಜರ ಸಂಕೇತ.. ಶನಿ ದೇವರ ವಾಹನ ಎಂದು ನಂಬಲಾಗುತ್ತೆ. ಹಾಗಾಗಿ ಕಾಗೆ ಮನೆ ಹತ್ತಿರ ಬಂದು ಕೂರುವುದಕ್ಕೂ, ಕೂಗುವುದಕ್ಕೂ, ತಲೆಗೆ ಬಂದು ಕುಕ್ಕಿದರೂ ನೂರಾರು ಅರ್ಥಗಳಿವೆ. ಶನಿದೇವರ ವಾಹನವಾಗಿರುವ ಕಾಗೆ ಮನುಷ್ಯನ ತಲೆ ಮೇಲೆ ಕುಕ್ಕಿದರೆ ಅದಕ್ಕೆ ಕೆಟ್ಟ ಅರ್ಥಗಳನ್ನೇ ಕಲ್ಪಿಸಲಾಗಿದೆ. ಈ ರೀತಿ ಆದ್ರೆ ಅಶುಭ. ಅಪಾಯ ಎದುರಾಗುತ್ತದೆ. ಸದ್ಯದಲ್ಲಿ ಅಶುಭ ಅಥವಾ ಸಾವಿನ ಸುದ್ದಿ ಕೇಳುವ ಸಂಭವವಿದೆ ಎಂಬುದರ ಸೂಚನೆ ಎನ್ನಲಾಗುತ್ತದೆ. ಯಾಕಂದ್ರೆ ಎಷ್ಟೋ ಜನ ಕಾಗೆ ನಮಗೆ ಭವಿಷ್ಯದ ಸೂಚನೆ ನೀಡುತ್ತದೆ ಎಂದೇ ನಂಬಿದ್ದಾರೆ. ಅಲ್ಲದೆ ಕೆಲ ವಿಚಾರಗಳ ಬಗ್ಗೆಯೂ ಕಾಗೆ ಈ ರೀತಿ ಕುಕ್ಕುವುದರ ಮೂಲಕ ಎಚ್ಚರಿಕೆ ನೀಡುತ್ತದೆ. ಜೀವನದಲ್ಲಿ ಕಷ್ಟ ಕಾಲ ಬರುವುದಿದೆ, ಹಾಗಾಗಿ ಎಚ್ಚರದಿಂದ ಯೋಚಿಸಿ ಹೆಜ್ಜೆ ಇಡಬೇಕು ಎಂಬ ಸೂಚನೆ ಎಂದು ಭಾವಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ, ಕಾಗೆಯನ್ನ ಯಮನ ಧೂತ ಎಂದು ಪರಿಗಣಿಸಲಾಗಿದೆ. ಹಾಗಾಗಿ ತಲೆಗೆ ಬಂದು ಕಾಗೆ ಕುಕ್ಕಿದರೆ ನಮ್ಮ ಜೀವಕ್ಕೂ ಸಹ ಅಪಾಯವಿದೆ ಎಂದರ್ಥ. ಹಾಗೇ ಹಣಕಾಸಿನ ಸಮಸ್ಯೆಗಳು ಸಹ ಉಂಟಾಗಬಹುದು. ಇದರಿಂದ ನೀವು ಅಪಾರ ನಷ್ಟ ಸಹ ಅನುಭವಿಸಬಹುದು ಎನ್ನಲಾಗುತ್ತದೆ. ಇನ್ನು ಕಾಗೆ ಮನೆಯ ಹತ್ತಿರ ಬಂದು ಪದೇ ಪದೇ ಕೂಗುತ್ತಿದ್ದರೆ ಇದು ಹಿರಿಯರು ಕಳುಹಿಸಿರುವ ಸಂಕೇತ ಎನ್ನಲಾಗುತ್ತದೆ. ನಿಮಗೆ ಮುಂದಿನ ಅಪಾಯದ ಬಗ್ಗೆ ಸೂಚನೆ ನೀಡುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಮನೆಗೆ ಅತಿಥಿಗಳು ಬರುವುದನ್ನ ಸಹ ಈ ಕಾಗೆಗಳು ಸೂಚಿಸುತ್ತವೆ.

ಇನ್ನು ಜ್ಯೋತಿಷಿಗಳು ಕಾಗೆ ಕುಕ್ಕಿದ್ರೆ ಹಲವು ಪೂಜೆಗಳನ್ನ ಮಾಡುವಂತೆ ಸಲಹೆ ನೀಡುತ್ತಾರೆ. ತಕ್ಷಣ ಮನೆಗೆ ಬಂದು ತಲೆಸ್ನಾನ ಮಾಡಿ, ಮನೆಯಲ್ಲಿ ದೀಪ ಹಚ್ಚಿ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿ. ನಂತರ ಮತ್ತೊಂದು ದೊಡ್ಡ ಹಣತೆಯಲ್ಲಿ ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಈ ಮೂರು ಎಣ್ಣೆಗಳನ್ನ ಮಿಕ್ಸ್ ಮಾಡಿ, ಅದಕ್ಕೆ 5 ಬಣ್ಣದ ಬತ್ತಿಯನ್ನ ಹಾಕಬೇಕು. ಬಿಳಿ, ಕೆಂಪು, ಹಸಿರು, ನೀಲಿ, ಕಪ್ಪು ಬತ್ತಿಯನ್ನ ಹಾಕಿ ದೀಪವನ್ನ ದೇವಸ್ಥಾನದಲ್ಲಿ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದೆಲ್ಲಾ ಹೇಳ್ತಾರೆ. ಇದೆಲ್ಲಾ ಧಾರ್ಮಿಕ ನಂಬಿಕೆಯಾದ್ರೆ ವೈಜ್ಞಾನಿಕ ಕಾರಣವೇ ಬೇರೆ ಇದೆ. ಕಾಗೆಗಳು ಸಂಘಜೀವಿಗಳು. ಅವುಗಳಿಗೆ ಒಂದು ಅಗುಳು ಅನ್ನ ಸಿಕ್ಕರೂ ತನ್ನೆಲ್ಲಾ ಬಳಗವನ್ನೂ ಕರೆದು ಹಂಚಿಕೊಂಡು ತಿನ್ನುತ್ತವೆ. ಅಂಥಾದ್ರಲ್ಲಿ ಜನ್ರಿಗೆ ಹೇಗೆ ಕೇಡು ಮಾಡಲು ಸಾದ್ಯ ಹೇಳಿ. ಕೆಲವೊಮ್ಮೆ ಅವುಗಳಿಗೆ ಗಾಬರಿ ಆದಾಗ ಅಥವಾ ಯಾರಾದ್ರೂ ತೊಂದ್ರೆ ಕೊಟ್ಟಾಗ ಇಲ್ಲದಿದ್ರೆ ತಮ್ಮ ಮರಿಗಳಿಗೆ ಅಪಾಯ ಆದಾಗ ಮನುಷ್ಯರ ತಲೆ ಮೇಲೆ ಬಡಿದು ಹೋಗುತ್ತವೆ. ಹೀಗಾಗಿ ಕೆಲವ್ರು ಕಾಗೆಗಳನ್ನ ಅಪಶಕುನಾ ಅಂದ್ರೆ ಇನ್ನೂ ಕೆಲವ್ರೂ ಅವುಗಳೂ ಎಲ್ಲಾ ಪಕ್ಷಿಗಳಂತೆ ಅಷ್ಟೇ ಎಂದು ನಂಬುತ್ತಾರೆ.

Shwetha M