ತಪ್ಪು ಮಾಹಿತಿ ನೀಡಿದ ಗೂಗಲ್ – ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ನಷ್ಟ?

ತಪ್ಪು ಮಾಹಿತಿ ನೀಡಿದ ಗೂಗಲ್ – ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ನಷ್ಟ?

ನ್ಯೂಯಾರ್ಕ್: ಮೈಕ್ರೋಸಾಫ್ಟ್ ನ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ ಜಿಟಿಪಿಗೆ ಪರ್ಯಾಯವಾಗಿ ಗೂಗಲ್ ಸೋಮವಾರ ‘ಬ್ರಾಡ್’ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಬ್ರಾಡ್ ಗೆ ಮಾರುಕಟ್ಟೆಯಲ್ಲಿ ಭಾರಿ ಹಿನ್ನೆಡೆ ಉಂಟಾಗಿದೆ.

ಸೋಮವಾರ ಬಿಡುಗಡೆಯಾದ ‘ಬ್ರಾಡ್’ ಅಪ್ಲಿಕೇಶನ್ ತಪ್ಪು ಮಾಹಿತಿಯೊಂದನ್ನು ಬುಧವಾರ ನೀಡಿತ್ತು. ಇದರ ಬೆನ್ನಲ್ಲೇ ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: SSLV-D2 ರಾಕೆಟ್ ಉಡಾವಣೆ ಯಶಸ್ವಿ – ಕಕ್ಷೆ ಸೇರಿದ ಮೂರು ಉಪಗ್ರಹಗಳು

‘ಬಾರ್ಡ್‌’ನ ಪ್ರಾತ್ಯಕ್ಷಿಕೆ ವೇಳೆ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಗ್ಗೆ ವಿವರಿಸುತ್ತಿದ್ದ ಬಾರ್ಡ್‌, ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಮೊಟ್ಟಮೊದಲ ಬಾರಿಗೆ ನಮ್ಮ ಸೌರವ್ಯೂಹದ ಹೊರಗಿರುವ ಗ್ರಹವೊಂದರ ಫೋಟೋವನ್ನು ತೆಗೆದಿದೆ ಎಂದು ಉತ್ತರಿಸಿದೆ. ಆದರೆ ಬಾಹ್ಯಗ್ರಹದ ಫೋಟೋವನ್ನು 2004ರಲ್ಲಿ ಮೊದಲ ಬಾರಿಗೆ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ ಲಾರ್ಜ್ ಟೆಲಿಸ್ಕೋಪ್‌ ತೆಗೆದಿದೆ. ಇದನ್ನು ನಾಸಾ  ಸಹ ಒಪ್ಪಿಕೊಂಡಿದೆ. ಗೂಗಲ್‌ನಿಂದ ಈ ರೀತಿಯ ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಆಲ್ಫಾಬೆಟ್‌ನ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದೆ. ಕಂಪನಿ ಒಟ್ಟಾರೆ 8.2 ಲಕ್ಷ ಕೋಟಿ ರೂ. ನಷ್ಟಅನುಭವಿಸಿದೆ. ಈ ನಡುವೆಯೇ ಚಾಟ್‌ಜಿಪಿಟಿಗೆ ಸಹಾಯ ಮಾಡುತ್ತಿರುವ ಮೈಕ್ರೋಸಾಫ್ಟ್ ಕಂಪನಿಯ ಷೇರುಗಳು ಶೇ.3ರಷ್ಟು ಏರಿಕೆ ಕಂಡಿವೆ ಎಂದು ವರದಿಯಾಗಿದೆ.

suddiyaana