CSK ವಿರುದ್ಧ ಹೀರೋ! – RR ಎದುರು ಝೀರೋ! -RCB ಮಾಡಿದ ತಪ್ಪೇನು?

CSK ವಿರುದ್ಧ ಹೀರೋ! – RR ಎದುರು ಝೀರೋ! -RCB ಮಾಡಿದ ತಪ್ಪೇನು?

ಬದಲಾದ ಸೀಸನ್‌ನಲ್ಲಿ ಹೊಸ ಅಧ್ಯಾಯವನ್ನೇ ಬರೆಯಲು ಆರ್‌ಸಿಬಿ ಮುಂದಾಗಿತ್ತು.. ಸತತ ಆರು ಸೋಲಿನ ನಂತರ ಸತತ ಆರು ಗೆಲುವು.. ಪಾಯಿಂಟ್‌ ಟೇಬಲ್‌ನಲ್ಲಿ ಬಾಟಮ್‌ನಲ್ಲಿದ್ದ ತಂಡ ಟಾಪ್‌ ಫೋರ್‌ನಲ್ಲಿ ಸ್ಥಾನ ಪಡೆದಿದ್ದೇ ಸೋಜಿಗ.. ಪ್ಲೇಆಫ್‌ಗೆ ಅದೃಷ್ಟದಿಂದ ಮಾತ್ರ ಎಂಟ್ರಿ ಕೊಟ್ಟಿದ್ದಲ್ಲ.. ಅರ್ಹತೆಯೂ ಸೇರಿತ್ತು.. ಬ್ಯಾಕ್‌ ಟು ಬ್ಯಾಕ್ ಗೆಲುವಿನ ಜೊತೆಗೆ ನೆಟ್‌ರನ್‌ರೇಟ್‌ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ.. ಇವೆಲ್ಲವನ್ನೂ ದಾಟಿಯೇ ಪ್ಲೇಆಫ್‌ಗೆ ಬಂದಿತ್ತು ಆರ್‌ಸಿಬಿ.. ಆದ್ರೆ ಆರು ಪಂದ್ಯಗಳಲ್ಲಿ ಅಟ್ಯಾಕಿಂಗ್‌ ಮೋಡ್‌ನಲ್ಲಿದ್ದ ಟೀಂ ಪ್ಲೇಆಫ್‌ಗೆ ಬರುತ್ತಿದ್ದಂತೆ ಡಿಫೆಂಡಿಂಗ್‌ ಮೋಡ್‌ಗೆ ಬದಲಾಗಿದ್ದೇಕೆ ಎಂಬ ಪ್ರಶ್ನೆ ಎಲಿಮಿನೇಟರ್‌ ಪಂದ್ಯ ನೋಡಿದ ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಯನ್ನೂ ಕಾಡುತ್ತಿದೆ.. ಇನ್ನು ಸಿಎಸ್‌ಕೆ ಎದುರು ಹೀರೋ ಆಗಿ ಮಿಂಚಿದ್ದ ಮ್ಯಾಕ್ಸಿ, ಆರ್‌ಆರ್‌ ಎದುರು ಕಂಪ್ಲೀಟ್‌ ಝೀರೋ ಆಗಿದ್ದರಿಂದ ತಂಡಕ್ಕೆ ಗೆಲ್ಲಲು ಇದ್ದ ಅವಕಾಶ ಮಿಸ್‌ ಆಗಿದೆ.

ಇದನ್ನೂ ಓದಿ: ಅಪ್ಪನ ಸಾವು, ಅಣ್ಣನಿಗೆ ಕೊಟ್ಟ ಮಾತು- ಕ್ರಿಕೆಟ್ ಲೋಕದಲ್ಲಿ ಈಗ ವಿರಾಟ್ ಕೊಹ್ಲಿ ಕಿಂಗ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೂ ಆರ್‌ಸಿಬಿಗೆ ತವರಿನ ಫೀಲಿಂಗ್‌ ಸಿಕ್ಕಿತ್ತು.. 87 ಸಾವಿರದಷ್ಟು ಪ್ರೇಕ್ಷಕರು ನೆರೆದಿದ್ದ ನ್ಯೂಟ್ರಲ್‌ ಸ್ಟೇಡಿಯಂನಲ್ಲೂ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆ ಮುಗಿಲುಮುಟ್ಟಿತ್ತು.. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗಿಂತ ಡಬಲ್‌ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು.. ಆದ್ರೆ ಅಂತಿಮವಾಗಿ ಆರ್‌ಸಿಬಿ ಅಭಿಮಾನಿಗಳು ಆಘಾತದಿಂದ ಮನೆಗೆ ತೆರಳುವಂತಾಗಿದೆ.. ಕಿಂಗ್‌ ಕೊಹ್ಲಿ ತಲೆ ಮೇಲೆ ಆರೆಂಜ್ ಕ್ಯಾಪ್‌ ತೊಟ್ಟು ಮತ್ತೊಂದು ಸೀಸನ್‌ನ ಸೋಲಿನ ಆಘಾತ ಅನುಭವಿಸುವಂತಾಗಿದೆ..

ಟಾಸ್‌ ಗೆದ್ದ ಆರ್‌ಆರ್‌ ಫೀಲ್ಡಿಂಗ್‌ ಆಯ್ದುಕೊಂಡಾಗಲೇ ಅರ್ಧ ಮ್ಯಾಚ್‌ ರಾಜಸ್ಥಾನ್‌ ಗೆದ್ದಾಗಿತ್ತು.. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೇಸಿಂಗ್‌ ಮಾಡೋರೇ ಬಾಸ್‌ ಎನ್ನುವುದು ಈಗಾಗ್ಲೇ ಸಾಬೀತಾಗಿದೆ.. ಹೀಗಾಗಿ ಅಡ್ವಾಂಟೇಜ್‌ ಆರ್‌ಆರ್‌ ತಂಡಕ್ಕೆ ಆರಂಭದಲ್ಲೇ ಸಿಕ್ಕಿತ್ತು.. ಆದ್ರೆ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು, ಸಿಎಸ್‌ಕೆ ಎದುರು ಶುರುವಿಟ್ಟುಕೊಂಡಂತೆ ಆರಂಭದಲ್ಲೇ ಬಿಗ್‌ಶಾಟ್‌ ಕಡೆಗೆ ಕೈಹಾಕಲಿಲ್ಲ.. ರನ್‌ರೇಟ್‌ ಚೆನ್ನಾಗಿತ್ತು ಎನ್ನುವುದು ನಿಜವಾದ್ರೂ ಮೊದಲ ಆರು ಓವರ್‌ಗಳು 60 ರನ್‌ ದಾಟಿಸುವ ರೀತಿಯ ಓಪನಿಂಗ್‌ ಸಿಗಲಿಲ್ಲ.. ಅದರಲ್ಲೂ ಫಾಫ್‌ ಔಟಾದ್ಮೇಲೆ ತಂಡ ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತ್ತು.. ಅದಾದ ನಂತರ ಕೊಹ್ಲಿ ಪೆವಿಲಿಯನ್‌ಗೆ ನಡೆದ ಮೇಲಂತೂ ಟೀಂ ಡಿಫೆನ್ಸ್‌ ಮೋಡ್‌ಗೆ ಜಾರಿತ್ತು.. ಗ್ರೀನ್‌ ಮತ್ತು ರಜತ್‌ ಪಟಿದಾರ್ ಸಿಕ್ಸರ್‌ ಬೌಂಡರಿ ಸುರಿಸುವ ತಮ್ಮ ಸಹಜ ಆಟಕ್ಕೆ ಮರಳಿದ್ದರೆ ಆರ್‌ಆರ್‌ ಬೌಲರ್‌ಗಳ ಮೇಲೆ ಒತ್ತಡ ಹೇರುವ ಅವಕಾಶವಿತ್ತು.. ಆದ್ರೆ ಅದೂ ಸಾಧ್ಯವಾಗಲಿಲ್ಲ.. ಅದರಲ್ಲೂ ಸಿಎಸ್‌ಕೆ ವಿರುದ್ಧ ಕ್ರೂಷಿಯಲ್‌ ಬ್ಯಾಟಿಂಗ್‌ ಮಾಡಿದ್ದು ಮ್ಯಾಕ್ಸ್‌ವೆಲ್‌.. 5 ಎಸೆತಗಳಲ್ಲಿ 16 ರನ್ ಹೊಡೆದಿದ್ದ ಮ್ಯಾಕ್ಸಿ ಸಾಧನೆಯಿಂದಾಗಿಯೇ ಸಿಎಸ್‌ಕೆಗೆ ಪ್ಲೇಆಫ್‌ಗೆ ಎಂಟ್ರಿಕೊಡಲು ಬೇಕಿದ್ದ ನೆಟ್‌ರನ್‌ರೇಟ್‌ ಸಿಕ್ಕಿರಲಿಲ್ಲ.. ಆದ್ರೆ ಸಿಎಸ್‌ಕೆ ವಿರುದ್ಧ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲೂ ಹೀರೋ ಆಗಿದ್ದ ಮ್ಯಾಕ್ಸಿ, ಆರ್‌ಆರ್‌ ವಿರುದ್ಧ ಬಿಗ್‌ ಝೀರೋ ಆದ್ರು.. ಆರ್‌ ಅಶ್ವಿನ್‌ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ರೀತಿಯಲ್ಲಿ ಕೆಟ್ಟ ಶಾಟ್‌ಗೆ ಕೈಹಾಕಿದ ಮ್ಯಾಕ್ಸ್‌ವೆಲ್‌, ಧುವ ಜುರೇಲ್‌ಗೆ ಸುಲಭ ಕ್ಯಾಚಿತ್ತು ಪೆವಿಲಿಯನ್‌ಗೆ ನಡೆದ್ರು.. ಇದ್ರಿಂದಾಗಿ 190ಕ್ಕಿಂತ ಹೆಚ್ಚು ಸ್ಕೋರ್‌ ದಾಖಲಿಸಿಕೊಳ್ಳುವ ಅವಕಾಶವನ್ನು ಆರ್‌ಸಿಬಿ ಕೈಚೆಲ್ಲಿಕೊಂಡಿತು.. ಅದರಲ್ಲೂ ದಿನೇಶ್‌ ಕಾರ್ತಿಕ್‌ ಅವರನ್ನು ಕಟ್ಟಿಹಾಕುವಲ್ಲಿ ಆರ್‌ಆರ್‌ ಬೌಲರ್‌ಗಳು ಯಶಸ್ವಿಯಾದ್ರು.. ಯಾವುದೇ ಬಿಗ್‌ ಶಾಟ್‌ ಹೊಡೆಯಲು ಡಿಕೆಗೆ ಸಾಧ್ಯವಾಗಲಿಲ್ಲ.. ಸಾಮಾನ್ಯವಾಗಿ 13 ಎಸೆತ ಎದುರಿಸಿದ್ದರೆ 25ಕ್ಕೂ ಹೆಚ್ಚು ರನ್ ಹೊಡೆಯುವ ಡಿಕೆ, ಆರ್‌ಆರ್‌ ಎದುರು ಕೇವಲ 11 ರನ್‌ ಗಳಿಸಿದ್ರು.. ಬೋರ್ಡ್‌ನಲ್ಲಿ 185ಕ್ಕಿಂತ ಹೆಚ್ಚು ಸ್ಕೋರ್‌ ದಾಖಲಿಸಿಕೊಂಡಿರುತ್ತಿದ್ದರೆ ಗೆಲುವು ಆರ್‌ಸಿಬಿ ಪರವಾಗಿ ವಾಲುವ ಎಲ್ಲಾ ಅವಕಾಶಗಳು ಮೋದಿ ಸ್ಟೇಡಿಯಂನಲ್ಲಿತ್ತು.. ಆದ್ರೆ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಂಡ 173ರನ್‌ಗಳ ಈಸಿ ಟಾರ್ಗೆಟ್‌ ಮುಂದಿಟ್ಟಾಗಲೇ ಆರ್‌ಆರ್‌ ಗೆಲುವು ನಿಶ್ಚಿತವಾಗಿತ್ತು..

ಆರ್‌ಆರ್‌ ಬ್ಯಾಟಿಂಗ್‌ ವೇಳೆ ಒಂದಿಷ್ಟು ವಿಕೆಟ್‌ಗಳು ಉರುಳಿದಾಗ ಸ್ವಲ್ಪ ಒತ್ತಡಕ್ಕೆ ಒಳಗಾಗಿದ್ದು ಬಿಟ್ಟರೆ, ಬಹುತೇಕ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳು ರನ್‌ರೇಟ್‌ ನೋಡಿಕೊಂಡೇ ಬ್ಯಾಟಿಂಗ್‌ ಮಾಡಿದ್ದರಿಂದ ಆರ್‌ಸಿಬಿಗೆ ಗೆಲ್ಲುವ ಅವಕಾಶ ಕ್ಷೀಣವಾಗಿಯೇ ಇತ್ತು.. ಫೀಲ್ಡಿಂಗ್‌ನಲ್ಲಿ ಆರ್‌ಸಿಬಿ ಫುಲ್‌ಮಾರ್ಕ್ಸ್‌ ಸಿಗುವಂತೆಯೇ ಆಡಿತ್ತು.. ಅದರಲ್ಲೂ ಕೊಹ್ಲಿ ಮಾಡಿದ ರನೌಟ್‌, ನಿಜಕ್ಕೂ ಅದ್ಭುತಾಗಿತ್ತು.. ಆದ್ರೆ ಅಂತಿಮವಾಗಿ ಸೋಲಿನೊಂದಿಗೆ ಎಲಿಮಿನೇಟ್‌ ಆಗಿದೆ ಆರ್‌ಸಿಬಿ.. ಡಿಫೆನ್ಸಿವ್‌ ಆಟದ ಬದಲು ಡಾಮಿನೇಟಿಂಗ್‌ ಆಟದ ಕಡೆಗೆ ಒತ್ತು ಕೊಟ್ಟಿರುತ್ತಿದ್ದರೆ ಆರ್‌ಸಿಬಿಗೆ ಗೆಲ್ಲುವ ಅವಕಾಶವಿತ್ತು.. ಆದ್ರೆ ಅತಿ ಹೆಚ್ಚು ತಂತ್ರಗಾರಿಕೆಯಿಂದ ನಾಜೂಕಿನ ಆಟಕ್ಕೆ ಹೋಗಿದ್ದರಿಂದಲೇ ಕಪ್‌ಗೆಲ್ಲುವ ಅವಕಾಶವನ್ನು ಮತ್ತೆ ಮಿಸ್‌ ಮಾಡ್ಕೊಂಡಿದೆ.. ಬೆಟರ್‌ಲಕ್‌ ನೆಕ್ಸ್ಟ್‌ ಟೈಂ ಅನ್ನೋದಷ್ಟೇ ಈಗ ಆರ್‌ಸಿಬಿ ಅಭಿಮಾನಿಗಳಿಗೆ ಉಳಿದಿರುವ ಮಾತು..

Sulekha