ಸುಡು ಬಿಸಿಲು ಅಂತ ಕೋಲ್ಡ್ ವಾಟರ್ ಕುಡಿಯುತ್ತೀರಾ? – ಎಚ್ಚರ.. ಈ ಸಮಸ್ಯೆ ನಿಮ್ಮನ್ನು ಕಾಡಬಹುದು!

ದೇಶದಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಷ್ಟು ನೀರು ಕುಡಿದ್ರೂ ಸಾಕಾಗಲ್ಲ.. ತಣ್ಣೀರು ಕೂಡ ಬಿಸಿ ನೀರಿನಂತೆ ಭಾಸವಾಗುತ್ತದೆ. ಹೀಗಾಗಿ ಅನೇಕರು ನೀರನ್ನ ಫ್ರಿಡ್ಜ್ನಲ್ಲಿಟ್ಟು ಕುಡಿಯುತ್ತಾರೆ. ಆದ್ರೆ ಫ್ರಿಡ್ಜ್ನಲ್ಲಿಟ್ಟ ನೀರು ಕುಡಿಯುತ್ತಿದ್ರೆ ಎಚ್ಚರ. ಇದ್ರಿಂದ ನಿಮ್ಮ ಆರೋಗ್ಯ ಹಾಳಾಗಬಹುದು. ಇನ್ನು ತೂಕ ಇಳಿಸಿಕೊಳ್ಳುವವರಿಗೂ ಕೋಲ್ಡ್ ವಾಟರ್ ಡೇಂಜರ್!
ಇದನ್ನೂ ಓದಿ:ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲೂ ಸೀಸದ ಅಂಶ ಪತ್ತೆ! – ಸರ್ಕಾರದಿಂದಲೇ ಟೆಸ್ಟ್ಗೆ ಆದೇಶ
ಈ ಸುಡು ಬೇಸಿಗೆಯಲ್ಲಿ ಶಾಖದ ಹೊಡೆತ, ನಿರ್ಜಲೀಕರಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಕಾರಣ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅನೇಕರು ಈ ಸಮಯದಲ್ಲಿ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಲು, ದೇಹವನ್ನು ತಂಪಾಗಿರಿಸಲು ಹೆಚ್ಚಿನ ಪ್ರಮಾಣದಲ್ಲಿ ಫ್ರಿಡ್ಜ್ ನೀರನ್ನೇ ಸೇವನೆ ಮಾಡುತ್ತಾರೆ. ಇದು ಆಹ್ಲಾದಕರವಾಗಿರುತ್ತದೆ ನಿಜ ಆದರೆ ಬೇಸಿಗೆಯಲ್ಲಿ ನಿತ್ಯವೂ ಫ್ರಿಡ್ಜ್ನಲ್ಲಿರುವ ಕೋಲ್ಡ್ ನೀರು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾದರೆ ಫ್ರಿಡ್ಜ್ ನೀರು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಅನ್ನೋ ಮಾಹಿತಿ ಇಲ್ಲಿದೆ.
ಹೃದಯ ಬಡಿತ ಕಡಿಮೆಯಾಗುತ್ತದೆ
ಬೇಸಿಗೆಯಲ್ಲಿ ಅತಿಯಾದ ಪ್ರಮಾಣದಲ್ಲಿ ರೆಫ್ರಿಜರೇಟರ್ ನೀರನ್ನು ಕುಡಿಯುವುದರಿಂದ ನಿಮ್ಮ ಹೃದಯ ಬಡಿತ ಕಡಿಮೆಯಾಗುತ್ತದೆ. ತಣ್ಣೀರು ನೇರವಾಗಿ ವೇಗಸ್ ನರದ ಮೇಲೆ ಪರಿಣಾಮ ಬೀರುತ್ತದೆ, ನಿಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ.
ತಲೆನೋವು ಉಂಟಾಗುತ್ತದೆ
ನೀವು ಬಿಸಿಲಿನಿಂದ ಅಥವಾ ತೀವ್ರ ಶಾಖದಿಂದ ಬಂದು ನೇರವಾಗಿ ತಣ್ಣನೆಯ ಅಥವಾ ಐಸ್ ನೀರನ್ನು ಕುಡಿದರೆ, ನಿಮಗೆ ತಲೆನೋವು ಬರಬಹುದು. ತಣ್ಣೀರು ಕುಡಿಯುವುದರಿಂದ ಬೆನ್ನುಮೂಳೆಯ ಅನೇಕ ನರಗಳು ತಂಪಾಗುತ್ತವೆ, ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ತಲೆನೋವಿಗೆ ಕಾರಣವಾಗಬಹುದು.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ
ಒಬ್ಬ ವ್ಯಕ್ತಿಯು ಬಿಸಿ ವಾತಾವರಣದಿಂದ ಮನೆಯ ಒಳಗೆ ಬಂದಾಗ, ಅವನ ದೇಹವು ಈಗಾಗಲೇ ಹೆಚ್ಚಿನ ತಾಪಮಾನದಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೋಲ್ಡ್ ನೀರು ಕುಡಿಯುವುದು ದೇಹಕ್ಕೆ ಆಘಾತವನ್ನುಂಟು ಮಾಡುತ್ತದೆ. ಇದು ದೇಹದ ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮತ್ತು ದೇಹವು ಹೊರಗಿನಿಂದ ಶೀತ ಅಂಶವನ್ನು ಸಾಮಾನ್ಯ ತಾಪಮಾನಕ್ಕೆ ತರಲು ಹೆಚ್ಚುವರಿ ಶ್ರಮ ಪಡಬೇಕಾಗುತ್ತದೆ, ಇದು ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆಯಲ್ಲಿ ಸೆಳೆತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಹೊರತಾಗಿ, ಗಂಟಲು ನೋವು, ಶೀತ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಸಹ ಕಾಣಬಹುದು.
ಶೀತ ಮತ್ತು ಕೆಮ್ಮು
ನಿಮ್ಮ ದೇಹದ ಉಷ್ಣತೆಯು ಹೊರಗಿನ ತಾಪಮಾನಕ್ಕಿಂತ ಹೆಚ್ಚಾದಾಗ ಮತ್ತು ನೀವು ರೆಫ್ರಿಜರೇಟರ್ನಿಂದ ತಣ್ಣೀರು ಕುಡಿದಾಗ, ನಿಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಇದು ಶೀತ ಮತ್ತು ಜ್ವರಕ್ಕೆ ಕಾರಣವಾಗಬಹುದು. ಆದ್ದರಿಂದ, ರೆಫ್ರಿಜರೇಟರ್ ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ತೂಕ ಹೆಚ್ಚಾಗಬಹುದು
ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ರೆಫ್ರಿಜರೇಟರ್ನಲ್ಲಿಟ್ಟ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು. ರೆಫ್ರಿಜರೇಟರ್ನಲ್ಲಿಟ್ಟ ನೀರನ್ನು ಕುಡಿಯುವುದರಿಂದ ದೇಹದ ಕೊಬ್ಬು ಗಟ್ಟಿಯಾಗುತ್ತದೆ ಮತ್ತು ತೂಕ ನಷ್ಟಕ್ಕೆ ಅಡ್ಡಿಯಾಗುತ್ತದೆ.

ನೋಡಿರಿ

