ಮುಖದ ಮೇಲೆ ಮೊಡವೇ ಬೀಳುತ್ತಾ? – ಪಿಂಪಲ್ಸ್‌ ಬೀಳಲು ಇದೇ ಕಾರಣ!

ಮುಖದ ಮೇಲೆ ಮೊಡವೇ ಬೀಳುತ್ತಾ? – ಪಿಂಪಲ್ಸ್‌ ಬೀಳಲು ಇದೇ ಕಾರಣ!

ಮಹಿಳೆಯರಿಗೆ ಮುಖದ ಮೇಲಿನ ಪಿಂಪಲ್ಸ್‌ ದೊಡ್ಡ ತಲೆನೋವು. ಮೊಡವೆಗಳು ಹೋಗಬೇಕು ಎಂದು ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ಕ್ರೀಮ್‌ಗಳನ್ನ ಹಚ್ಚುತ್ತಾರೆ. ಆದ್ರೆ ಮುಖದಲ್ಲಿ ಮೊಡವೆ ಬೀಳಲು ಏನು ಕಾರಣ ಎಂದು ಯಾವತ್ತೂ ಯೋಚನೆ ಮಾಡುವುದಿಲ್ಲ. ಮೊಡವೆ ಬೀಳಲು ವಿಟಮಿನ್‌ ಕೊರತೆ ಕೂಡ ಪ್ರಮುಖ ಕಾರಣ ಅಂತ ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಧ್ರುವಂತ್‌ಗೆ ಕಿಚ್ಚನ ಸೀಸನ್‌ ಚಪ್ಪಾಳೆ ಅಲ್ಲ.. ವಾರದ ಚಪ್ಪಾಳೆ! – ವೀಕ್ಷಕರ ಆಕ್ರೋಶದ ಬೆನ್ನಲ್ಲೇ ಯೂಟರ್ನ್‌!

ಮುಖದಲ್ಲಿ ಮೊಡವೆಗಳು ಸೌಂದರ್ಯವನ್ನೇ ಕಾಳು ಮಾಡಿಬಿಡುತ್ತವೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌ಗಳನ್ನು ಹಚ್ಚುತ್ತಾರೆ. ಆದ್ರೆ ಮೊಡವೆ ಬೀಳಲು ಏನು ಕಾರಣ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಮೊಡವೆ ಬೀಳಲು ವಿಟಮಿನ್‌ ಕೂಡ ಕಾರಣವಾಗುತ್ತವೆ.

ಹೌದು, ವಿಟಮಿನ್ ಡಿ ಕೊರತೆಯಿಂದಲೂ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ಡಿ ಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಚರ್ಮದ ಉರಿಯೂತವನ್ನ ಕಡಿಮೆ ಮಾಡುವುದಲ್ಲದೆ, ಮೊಡವೆಗಳನ್ನ ತಡೆಯಲು ಸಹಾಯ ಮಾಡುತ್ತದೆ.

ವಿಟಮಿನ್ ಡಿ ಕೊರತೆಯನ್ನ ನೀಗಿಸಲು ನೀವು ಹಾಲು, ಕಿತ್ತಳೆ ರಸ, ಧಾನ್ಯಗಳು, ಬಾದಾಮಿ ಅಥವಾ ಸೋಯಾ ಹಾಲು ಸೇವಿಸಬಹುದು, ಏಕೆಂದರೆ ಇವುಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಡಿ ಇರುತ್ತದೆ.

ವಿಟಮಿನ್ ಎ ಕೊರತೆ ಇದ್ರೆ ಮೊಡವೆಗಳಿಗೆ ಕಾರಣವಾಗಬಹುದು. ವಿಟಮಿನ್ ಎ ಚರ್ಮದ ಕೋಶಗಳ ಬೆಳವಣಿಗೆಯನ್ನ ಉತ್ತೇಜಿಸಲು ಮತ್ತು ಎಣ್ಣೆ ಉತ್ಪಾದನೆಯನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ವಿಟಮಿನ್ ಎ ಕೊರತೆಯು ಚರ್ಮದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ವಿಟಮಿನ್ ಎ ಕೊರತೆಯನ್ನ ನೀಗಿಸಲು, ನೀವು ಡೈರಿ ಉತ್ಪನ್ನಗಳು, ಮೊಟ್ಟೆಯ ಹಳದಿ ಭಾಗ ಮತ್ತು ಮೀನಿನ ಎಣ್ಣೆಯನ್ನ ಸೇವಿಸಬಹುದು. ಕ್ಯಾರೆಟ್, ಸಿಹಿ ಗೆಣಸು, ಪಾಲಕ್, ಕುಂಬಳಕಾಯಿ, ಮಾವಿನಹಣ್ಣು, ಪಪ್ಪಾಯಿ ಮತ್ತು ಏಪ್ರಿಕಾಟ್‌ಗಳು ಸಹ ಗಮನಾರ್ಹ ಪ್ರಮಾಣದ ವಿಟಮಿನ್ ಎ ಯನ್ನ ಹೊಂದಿರುತ್ತವೆ.

Shwetha M