ಭಾರತದಲ್ಲಿ ಎಷ್ಟಿದೆ ವಕ್ಫ್ ಆಸ್ತಿ? – ಆಸ್ತಿ ನಿಜವಾಗಿಯೂ ಯಾರದ್ದು?
ವಕ್ಫ್ ಕಾಯ್ದೆ ರೂಲ್ಸ್ ಏನು?

ಭಾರತದಲ್ಲಿ ಎಷ್ಟಿದೆ ವಕ್ಫ್ ಆಸ್ತಿ? – ಆಸ್ತಿ ನಿಜವಾಗಿಯೂ ಯಾರದ್ದು?ವಕ್ಫ್ ಕಾಯ್ದೆ ರೂಲ್ಸ್ ಏನು?

ದೇಶದಲ್ಲಿ ಈಗ ಚರ್ಚೆ ಹುಟ್ಟು ಹಾಕಿರೋದು ವಕ್ಫ್ ಆಸ್ತಿ.. ಆದ್ರೆ ವಕ್ಫ್‌ ಮಂಡಳಿಯ ಆಸ್ತಿ ಎಷ್ಟಿದೇ? ಇದಕ್ಕೆ ಸರಿಯಾದ ಉತ್ತರವಿಲ್ಲ. ಯಾಕೆಂದರೆ, ದೇಶಾದ್ಯಂತ ಒಟ್ಟು 9 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ವಕ್ಫ್‌ ಆಸ್ತಿ ಇದೆ ಎನ್ನಲಾಗುತ್ತಿದೆ. ಕರ್ನಾಟಕದ ವಿಧಾನಸೌಧ, ತಾಜ್ ಮಹಲ್  , ದೆಹಲಿ ವಿಮಾನ ನಿಲ್ದಾಣ,  ಹೊಸ ಸಂಸತ್ತು ಭವನ ಹೀಗೆ ಹಲವು ಐತಿಹಾಸಿಕ ನಂಟು ಹೊಂದಿರುವ ಭೂಮಿಗಳು ವಕ್ಫ್‌ ಮಂಡಳಿಯ ಆಸ್ತಿ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದರ ನಡುವೆ ವಿಜಯಪುರ ಜಿಲ್ಲೆಯ ನೂರಾರು ಎಕರೆ ರೈತರ ಜಮೀನು ನನ್ನದು ಎನ್ನುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ನರ್ವಸ್ 90ಗೆ ದಿಗ್ಗಜರೇ OUT – ಸಚಿನ್, ದ್ರಾವಿಡ್, ಧೋನಿಗೂ ಕಾಟ

ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್‌ ಬೋರ್ಡ್​ ನೋಟಿಸ್ ನೀಡಿದ್ದು ದೊಡ್ಡ ಸಂಚಲವನ್ನ ಮೂಡಿಸಿದೆ. ಹಾಗೇ ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರ ಮಧ್ಯೆ ವಾಕ್​ ಸಮರಕ್ಕೆ ಕಾರಣವಾಗಿದೆ. 1974ರಲ್ಲಿ ಆಗಿದ್ದ ವಕ್ಫ್‌ ಗೆಜೆಟ್ ಪ್ರಕಾರ ಇದೀಗ ಅವುಗಳನ್ನು ಇಂದೀಕರಣ ಮಾಡಲು ಮುಂದಾಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ. ರೈತರು ಕೂಡ ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೃಷ್ಟಿ ಮಾಡುತ್ತಾ ಜೀವನ ಕಟ್ಟಿಕೊಂಡ ರೈತರಿಗೆ ನೋಟಿಸ್ ಬರುತ್ತಿದ್ದಂತೆ ಜಮೀನು ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಹೀಗಾಗಿ ಈ ವಕ್ಫ್ ಆಸ್ತಿ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿದ್ದು, ಕಮಲ ನಾಯಕರು ಕೈ ನಾಯಕರ ವಿರುದ್ಧ ಮುಗಿ ಬೀಳುತ್ತಿದ್ದಾರೆ.

ಏನಿದು ವಕ್ಫ್ ಆಸ್ತಿ ವಿವಾದ?

ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಪ್ ಸೇರಿದೆ. ಈ ಪೈಕಿ 1354 ಎಕರೆ ಒತ್ತುವರಿಯಾಗಿದೆ. ಉಳಿದ ಜಮೀನು ವಕ್ಫ್ ಇನ್ಟಿಟ್ಯೂಶನ್ಸ್, ಇನಾಮ್ ಆಬ್ಲಿಷನ್ಸ್, ಲ್ಯಾಂಡ್ ರಿಫಾರ್ಮ್ ಹಾಗೂ ವಕ್ಪ್ ಆ್ಯಕ್ಟ್ ವಶದಲ್ಲಿದೆ ಎಂದು ತಿಳಿಸಿದೆ. ಆದರೆ ಜಿಲ್ಲಾ ವಕ್ಫ್ ಬೋರ್ಡ್ ಆಸ್ತಿಯಲ್ಲಿ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ 1200 ಎಕರೆ ಜಮೀನು ಶಾ ಅಮೀನುದ್ದೀನ್ ದರ್ಗಾಕ್ಕೆ ಸೇರಿದ್ದು ಎಂದು ಹಲವು ತಾಲೂಕಿನ ರೈತರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಆದರೆ ಹೊನವಾಡ ಗ್ರಾಮದಲ್ಲಿ ಶಾ ಅಮೀನುದ್ದೀನ್ ದರ್ಗಾವೇ ಇಲ್ಲ. ಆದರೂ 13 ತಾಲೂಕಿನ ರೈತರಿಗೆ “ನಿಮ್ಮ ಜಮೀನುಗಳು ವಕ್ಫ್ ಬೋರ್ಡ್ ಆಸ್ತಿಯೆಂದು” ಆಯಾ ತಹಶೀಲ್ದಾರ್ ಕಚೇರಿಯಿಂದ ತಿಳವಳಿಕೆ ಪತ್ರ ನೀಡಲಾಗಿದೆ. ಇದಲ್ಲದೇ, ಇನ್ನೂ ನೂರಾರು ರೈತರಿಗೆ ನೊಟೀಸ್ ಜಾರಿ ಮಾಡಲು ತಹಶೀಲ್ದಾರರು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.

ಏನೀದು ವಕ್ಫ್‌ ಮಂಡಳಿ..?

ಮೊದಲ 1954ರಲ್ಲಿ ದೇಶದಲ್ಲಿ ಬಾರಿಗೆ ವಕ್ಫ್ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ನಂತರ ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಕ್ಫ್ ಎಂದು ಗುರುತಿಸಲಾದ, ದಾನ ಮಾಡಲಾದ ಔಕಾಫ್ ಆಸ್ತಿಗಳ ನಿಯಂತ್ರಣಕ್ಕೆ ಜಾರಿಗೊಳಿಸಲಾಗಿದ್ದೇ ಈ ವಕ್ಫ್‌ ಕಾಯ್ದೆ. ಅಷ್ಟೇ ಅಲ್ಲದೇ ಯಾವುದೇ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸರ್ವೋಚ್ಛ ಅಧಿಕಾರವನ್ನು ವಕ್ಫ್‌ ಮಂಡಳಿ ಹೊಂದಿದೆ. ನಂತರ ಮನಮೋಹನ್ ಸಿಂಗ್ ಅವರ ಸರ್ಕಾರ 2013ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಪ್ರಸ್ತುತ ಕಾನೂನಿನ ಅಡಿಯಲ್ಲಿ, ಭಾರತದಲ್ಲಿನ ಪ್ರತಿ ರಾಜ್ಯವು ಅಧ್ಯಕ್ಷರ ನೇತೃತ್ವದ ವಕ್ಫ್ ಮಂಡಳಿಯನ್ನು ಹೊಂದಿದೆ.  ಕಾಯ್ದೆ ಅಧಿಕಾರವನ್ನು ವಕ್ಫ್ ಮಂಡಳಿಯ ಸದಸ್ಯರುಗಳು ಭೂಕಬಳಿಕೆಗೆ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ದೂರುಗಳು ಸಾಕಷ್ಟು ಬಂದಿವೆದೇಶಾದ್ಯಂತ 9.40 ಲಕ್ಷ ಎಕರೆ ಪ್ರದೇಶದಲ್ಲಿ ದೇಶಾದ್ಯಂತ ವಕ್ಫ್‌ ಆಸ್ತಿ ಇದ್ದು,  ಆದರ ಅಂದಾಜು ಮೌಲ್ಯ   9 ಲಕ್ಷ ಕೋಟಿಗೂ ಹೆಚ್ಚು  ಎನ್ನಲಾಗಿದೆ. ಇದರೊಂದಿಗೆ ಸಾಕಷ್ಟು ವಕ್ಫ್‌ ಆಸ್ತಿಗಳು ಪ್ರಮುಖ ಸ್ಥಳಗಳ ಆಯಕಟ್ಟಿನ ಪ್ರದೇಶಗಳಲ್ಲೇ ಇವೆ. ಜೊತೆಗೆ ಇವುಗಳಲ್ಲಿ ವಿವಾದಿತ ಭೂಮಿಗಳೇ ಹೆಚ್ಚಾಗಿದ್ದು, ಕೆಲವು ಆಸ್ತಿಗಳಿಗೆ ಐತಿಹಾಸಿಕ ನಂಟಿದೆ.

ಯಾವ ಆಸ್ತಿ ಬೇಕಾದ್ರೂ ವಕ್ಫ್  ವಶಪಡಿಸಿಕೊಳ್ಳಬಹುದಾ?

ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ಬೇಕಾಬಿಟ್ಟಿಯಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ವಕ್ಫ್ ಮಂಡಳಿಯು ಕೇವಲ ಭಾರತ ಹಾಗೂ ಪಾಕಿಸ್ತಾನದ ವಿಭಜನೆಯ ಮೊದಲು ಕಂದಾಯ ಇಲಾಖೆಯ ದಾಖಲೆಗಳಲ್ಲಿ ದಾಖಲಾಗಿರುವ ಭೂಮಿಯನ್ನು ಮಾತ್ರ ವಶಪಡಿಸಿಕೊಳ್ಳಬಹುದು. ನಂತರ ಆ ಜಮೀನುಗಳನ್ನು ವಾಸ್ತವಿಕವಾಗಿ ವಕ್ಫ್ ಆಸ್ತಿ ಎಂಬುದನ್ನು ಮಂಡಳಿ ಸಾಬೀತುಪಡಿಸಬೇಕು. ಇದರೊಂದಿಗೆ ಮಂಡಳಿಯು ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದರ ಜೊತೆಗೆ, ಸಮಯ ಕಳೆದಂತೆ ಯಾವುದೇ ವಕ್ಫ್ ಆಸ್ತಿಯನ್ನು ಮರುಪಡೆಯಲು ಮಂಡಳಿಗಳು ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಇವು ವಕ್ಫ್ ಮಂಡಳಿ ಕಾಯಿದೆಯ ವಿವಾದಾತ್ಮಕ 40 ಷರತ್ತುಗಳನ್ನು ಅನ್ವಯಿಸುವ ಮೂಲಕ ಮಂಡಳಿಯು ಇದನ್ನು ಮಾಡಬಹುದಾಗಿದೆ.

Shwetha M

Leave a Reply

Your email address will not be published. Required fields are marked *