ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಲು ಕಾರಣಗಳೇನು? – ಎಷ್ಟು ವರ್ಷ ಟೀಮ್ ಇಂಡಿಯಾದಲ್ಲೇ ಇರ್ತಾರೆ ದ್ರಾವಿಡ್?

ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಲು ಕಾರಣಗಳೇನು? – ಎಷ್ಟು ವರ್ಷ ಟೀಮ್ ಇಂಡಿಯಾದಲ್ಲೇ ಇರ್ತಾರೆ ದ್ರಾವಿಡ್?

ಟೀಂ ಇಂಡಿಯಾದ ಹೆಡ್​ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರೇ ಮುಂದುವರಿಯಲಿದ್ದಾರೆ. ಕೇವಲ ದ್ರಾವಿಡ್ ಮಾತ್ರವಲ್ಲ. 2021ರಿಂದ ದ್ರಾವಿಡ್ ಜೊತೆಗೆ ಕೋಚ್​​ ಸ್ಟಾಫ್​ಗಳಾಗಿ ಯಾರೆಲ್ಲಾ ಇದ್ದರೋ, ಅವರೆಲ್ಲರೂ ಕೂಡಾ ಮುಂದುವರೆಯುತ್ತಾರೆ. ಟೀಂ ಇಂಡಿಯಾದ ಕೋಚಿಂಗ್​ ಸ್ಟಾಫ್​​​ನಲ್ಲಿ ಯಾವುದೇ ಬದಲಾವಣೆಗಳಾಗೋದಿಲ್ಲ. ಹಾಗಿದ್ರೆ ರಾಹುಲ್​ ದ್ರಾವಿಡ್​ ಇನ್ನೂ ಎಷ್ಟು ವರ್ಷಗಳ ಕಾಲ ಟೀಂ ಇಂಡಿಯಾದ ಕೋಚ್ ಆಗಿರ್ತಾರೆ. ದ್ರಾವಿಡ್​​ರನ್ನೇ ಕೋಚ್​ ಆಗಿ ಕಂಟಿನ್ಯೂ ಮಾಡೋಕೆ ಕಾರಣವೇನು? ಎಂಬ ಬಗ್ಗೆ ವರದಿ ಇಲ್ಲಿದೆ.

ಇದನ್ನೂ ಓದಿ: ಟಿ-20 ಸೀರಿಸ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ – ಟೀಮ್ ಇಂಡಿಯಾದ ಬೌಲರ್‌ಗಳು ಎಡವುತ್ತಿರುವುದು ಎಲ್ಲಿ?

ಬಿಸಿಸಿಐ ಜೊತೆಗಿನ ಒಪ್ಪಂದದ ಪ್ರಕಾರ ಈ ಬಾರಿಯ ವಂಡೇ ವರ್ಲ್ಡ್​ಕಪ್​ಗೆ ದ್ರಾವಿಡ್​ ಕೋಚಿಂಗ್ ಅವಧಿ ಮುಕ್ತಾಯವಾಗಿತ್ತು. ಎರಡು ವರ್ಷಗಳ ಕಾಲ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಕಾಂಟ್ರಾಕ್ಟ್​ಗೆ ಸಹಿ ಹಾಕಿದ್ದರು. ಈ ಬಾರಿ ವರ್ಲ್ಡ್​​ಕಪ್​ ಫೈನಲ್ ಮ್ಯಾಚ್​ನ್ನ ಗೆದ್ದಿಲ್ಲ ಅನ್ನೋದನ್ನು ಬಿಟ್ಟರೆ, ದ್ರಾವಿಡ್ ಕೋಚಿಂಗ್​ನಲ್ಲಿ ಟೀಂ ಇಂಡಿಯಾ ಬೆಸ್ಟ್ ಪರ್ಫಾಮ್ ಮಾಡಿದೆ. ಟಿ-20..ವಂಡೇ ಮತ್ತು ಟೆಸ್ಟ್​..ಈ ಮೂರೂ ವಿಭಾಗಗಳಲ್ಲೂ ಭಾರತವೇ ನಂಬರ್-1 ಟೀಂ ಆಗಿದೆ. ಇದರ, ಕ್ರೆಡಿಟ್ ರಾಹುಲ್​ ದ್ರಾವಿಡ್​ಗೆ ಕೂಡ ದೊಡ್ಡ ಮಟ್ಟದಲ್ಲಿ ಸಲ್ಲಲೇಬೇಕು. ಟ್ರ್ಯಾಕ್ ರೆಕಾರ್ಡ್ ಹೀಗಿರೋವಾಗ ಈಗಲೇ ಹೊಸ ಕೋಚ್​​ನ್ನ ನೇಮಕ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಆಪ್ಷನ್ ಬಿಸಿಸಿಐ ಬಳಿಯೂ ಇತ್ತು. ವಿವಿಎಸ್​​ ಲಕ್ಷ್ಮಣ್​​ರನ್ನ ಹೆಡ್ ಕೋಚ್ ಆಗಿ ಮಾಡಬಹುದಾಗಿತ್ತು. ಈ ಬಗ್ಗೆ ಬಿಸಿಸಿಐ ಚಿಂತನೆ ಕೂಡ ನಡೆಸಿತ್ತು. ಏಕದಿನ ಮತ್ತು ಟೆಸ್ಟ್ ಫಾರ್ಮೆಟ್​ಗೆ ಲಕ್ಷ್ಮಣ್​ರನ್ನ ಕೋಚ್​ ಮಾಡಿ, ಟಿ-20ಗೆ ಆಶಿಶ್ ನೆಹ್ರಾರನ್ನ ಕೋಚ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಯೋಚಿಸಿತ್ತು. ಈ ಬಗ್ಗೆ ನೆಹ್ರಾಗೆ ಆಫರ್​ ಕೂಡ ಮಾಡಿತ್ತು. ಆದ್ರೆ ಆಶಿಶ್ ನೆಹ್ರಾ ಸದ್ಯ ಐಪಿಎಲ್​​​ನಲ್ಲಿ ಗುಜರಾತ್ ಟೈಟಾನ್ಸ್ ಕೋಚ್ ಆಗಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ.  ಹೀಗಾಗಿ ಸದ್ಯಕ್ಕೆ ರಾಹುಲ್​ ದ್ರಾವಿಡ್​​ರನ್ನೇ ಹೆಡ್ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದೆ. ಹಾಗಂತಾ ಬಿಸಿಸಿಐ ಏನು ತನ್ನ ಪಾಡಿಗೆ ಈ ಡಿಸೀಶನ್​ನನ್ನ ತೆಗೆದುಕೊಂಡಿಲ್ಲ. ಈ ಬಗ್ಗೆ ರಾಹುಲ್​ ದ್ರಾವಿಡ್ ಜೊತೆಗೆ ಚರ್ಚೆ ನಡೆಸಿದೆ. ಯಾಕಂದ್ರೆ ರಾಹುಲ್​​ ದ್ರಾವಿಡ್ ಒಪ್ಪಿಕೊಂಡ್ರೆ ಮಾತ್ರ ಬಿಸಿಸಿಐ ಈ ನಿರ್ಧಾರ ತೆಗೆದುಕೊಳ್ಳೋಕೆ ಸಾಧ್ಯವಾಗುತ್ತೆ. ಕೋಚ್ ಆಗಿ ಮುಂದುವರಿಯಲು ದ್ರಾವಿಡ್ ಒಪ್ಪಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಕ್ಯಾಪ್ಟನ್ ರೋಹಿತ್​ ಶರ್ಮಾ ಜೊತೆಗೂ ಬಿಸಿಸಿಐ ಮಾತುಕತೆ ನಡೆಸಿದೆ. ರೋಹಿತ್ ಶರ್ಮಾ ಅಂತೂ ರಾಹುಲ್ ದ್ರಾವಿಡ್ ಅವರೇ ಮುಂದುವರಿಯಲಿ ಅಂತಾ ಬಯಸಿದ್ದರು. ಯಾಕಂದ್ರೆ ಕ್ಯಾಪ್ಟನ್ ಮತ್ತು ಕೋಚ್ ಇಬ್ಬರ ನಡುವೆಯೂ ಉತ್ತಮ ಅಂಡರ್​ಸ್ಟ್ಯಾಂಡಿಂಗ್ ಇದೆ. ಹಾಗೆಯೇ ಕಳೆದ ಎರಡು ವರ್ಷಗಳಲ್ಲಿ ದ್ರಾವಿಡ್​ ಒಂದು ಸಾಲಿಡ್ ಟೀಂನ್ನ ಕಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಒಂದು ಬೆಸ್ಟ್ ಸಿಸ್ಟಮ್​ನ್ನ, ಸ್ಟ್ರಕ್ಚರ್​​ನ್ನ ನಿರ್ಮಾಣ ಮಾಡಿದ್ದಾರೆ. ಒಂದು ವೇಳೆ ಈಗ ಇದ್ದಕ್ಕಿದ್ದಂತೆ ಹೊಸ ಕೋಚ್​ನ್ನ ನೇಮಕ ಮಾಡಿದರೆ ಟೀಮ್ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇನ್ನೆಷ್ಟು ವರ್ಷ ದ್ರಾವಿಡ್ ಕೋಚ್ ಆಗಿರ್ತಾರೆ?

ಇನ್ನು ಎಷ್ಟು ವರ್ಷ ರಾಹುಲ್ ದ್ರಾವಿಡ್ ಕೋಚ್ ಆಗಿರ್ತಾರೆ ಅನ್ನೋದು ಇಲ್ಲಿರುವ ಪ್ರಶ್ನೆ. ಈ ಬಗ್ಗೆ ಬಿಸಿಸಿಐ ಕೂಡ ಯಾವುದೇ ಕ್ಲ್ಯಾರಿಟಿ ಕೊಟ್ಟಿಲ್ಲ. 2021ರಲ್ಲಿ ದ್ರಾವಿಡ್​ರನ್ನ ಎರಡು ವರ್ಷಗಳವರೆಗೆ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದ್ರೀಗ ಕೋಚಿಂಗ್ ಅವಧಿಯನ್ನ ಇನ್ನೆಷ್ಟು ವರ್ಷ ವಿಸ್ತರಿಸಲಾಗಿದೆ ಅನ್ನೋ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ.  ಸಾಮಾನ್ಯವಾಗಿ ಟೀಂ ಇಂಡಿಯಾದ ಕೋಚಿಂಗ್​ ಕಾಂಟ್ರ್ಯಾಕ್ಟ್ ಎರಡು ವರ್ಷಗಳವರೆಗೆ ಇರುತ್ತೆ. ಆದ್ರೀಗ ದ್ರಾವಿಡ್ ವಿಚಾರದಲ್ಲಿ ಇನ್ನೂ ಎರಡು ವರ್ಷಕ್ಕೆ ನಿಗದಿಪಡಿಸಲಾಗಿದ್ಯೋ? ಇಲ್ವೋ ಅನ್ನೋದು ಈಗಿರುವ ಪ್ರಶ್ನೆ.

ಒಂದಂತೂ ಗ್ಯಾರಂಟಿ, ಕನಿಷ್ಠ ಒಂದು ವರ್ಷವಾದ್ರೂ ದ್ರಾವಿಡ್ ಟೀಂ ಇಂಡಿಯಾದ ಹೆಡ್ ಕೋಚ್ ಆಗಿರ್ತಾರೆ. ಅಂದ್ರೆ 2024ರಲ್ಲಿ ನಡೆಯಲಿರುವ ಟಿ-20 ವರ್ಲ್ಡ್​​ಕಪ್​ವರೆಗೆ. ಟಿ-20 ವಿಶ್ವಕಪ್​ವರೆಗೆ ಕೋಚ್ ಆಗಿ ಮುಂದುವರಿಯಿರಿ ಅಂತಾ ದ್ರಾವಿಡ್​​ಗೆ ಬಿಸಿಸಿಐ ಸೂಚನೆ ಕೊಟ್ಟಿರಲೂಬಹುದು. ಒಂದು ವೇಳೆ ಇನ್ನೂ ಎರಡು ವರ್ಷಗಳ ಕಾಲ ದ್ರಾವಿಡ್ ಕೋಚ್ ಆಗಿ ಇರ್ತಾರೆ ಅಂದ್ರೆ, ದ್ರಾವಿಡ್ ಗರಡಿಯಲ್ಲೇ ಟೀಂ ಇಂಡಿಯಾ ಒಟ್ಟು ಮೂರು ಐಸಿಸಿ ಟೂರ್ನಿಗಳನ್ನ ಆಡಲಿದೆ. 2024ರ ಜೂನ್​​​ನಲ್ಲಿ ಟಿ-20 ವರ್ಲ್ಡ್​ಕಪ್​ ನಡೆಯುತ್ತೆ. 2025ರ ಜೂನ್​​ನಲ್ಲಿ ವರ್ಲ್ಡ್​​ ಟೆಸ್ಟ್ ಚಾಂಪಿಯನ್​​ಶಿಪ್​ ನಡೆಯುತ್ತೆ. ಅದೇ ವರ್ಷ ಅಂದ್ರೆ 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯುತ್ತೆ. ಹೀಗಾಗಿ ಈ ಮೂರು ಮೇಜರ್​ ಐಸಿಸಿ ಟೂರ್ನಿಗಳು ರಾಹುಲ್​ & ಟೀಂ ಮುಂದೆ ಬರುತ್ತೆ. ಒಂದು ವೇಳೆ ಇನ್ನೂ ಎರಡು ವರ್ಷಗಳ ಕಾಲ ದ್ರಾವಿಡ್ ಕೋಚ್ ಆಗಿದ್ರೆ ಮಾತ್ರ. ಅದ್ರಲ್ಲೂ ಟಿ-20 ವರ್ಲ್ಡ್​ಕಪ್​ ವೇಳೆಗಂತೂ ದ್ರಾವಿಡ್ ಅವರೇ ಹೆಡ್ ಕೋಚ್ ಆಗಿರೋದು ಗ್ಯಾರಂಟಿ.

ಇನ್ನು ದ್ರಾವಿಡ್​​ ಜೊತೆಗೆ ಕಳೆದ ಎರಡು ವರ್ಷಗಳಿಂದ ಇದ್ದ ಇಡೀ ಕೋಚಿಂಗ್​ ಸ್ಟಾಫ್ ಮೆಂಬರ್ಸ್ ಕಾಂಟ್ರ್ಯಾಕ್ಟ್​ನ್ನ ಕೂಡ ರಿನೀವಲ್ ಮಾಡಲಾಗಿದೆ. ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅಂತೂ ವರ್ಲ್ಡ್​​ಕಪ್​ ಟೈಮ್​ನಲ್ಲಿ ಸ್ಟಾರ್ ಆಗಿದ್ರು. ಬೆಸ್ಟ್ ಫೀಲ್ಡಿಂಗ್ ಮಾಡಿದವರಿಗೆ ಯುನೀಕ್​ ಸ್ಟೈಲ್​​ನಲ್ಲಿ ಮೆಡಲ್​ ಕೊಡಿಸ್ತಿದ್ರು.  ಬೌಲಿಂಗ್ ಕೋಚ್ ಪಾರಸ್ ಮಾಮ್ರೆ ಅಂಡರ್​​ನಲ್ಲಿ ನಮ್ಮ ಬೌಲರ್ಸ್​ಗಳು ಅಕ್ಷರಶ: ಪಳಗಿದ್ದಾರೆ. ಅದಕ್ಕೆ ವರ್ಲ್ಡ್​ಕಪ್​ನಲ್ಲಿ ಬೌಲರ್ಸ್​ಗಳ ಪರ್ಫಾಮೆನ್ಸೇ ಸಾಕ್ಷಿ. ಆಸ್ಟ್ರೇಲಿಯಾ ವಿರುದ್ಧ ಟಿ-20 ಸೀರಿಸ್​ನಲ್ಲಿ ಆಡ್ತಿರೋ ಬೌಲರ್ಸ್​ಗಳಲ್ಲ. ಈಗ ಆಡ್ತಾ ಇರೋದು ಆಲ್​ಮೋಸ್ಟ್ ಇಂಡಿಯಾ-ಎ ಟೀಂ. ಆದ್ರೆ ಶಮಿ, ಸಿರಾಜ್, ಬುಮ್ರಾ ಸೇರಿದಂತೆ ನಮ್ಮ ಸೀನಿಯರ್ಸ್​ ಟೀಮ್​ನ ಬೌಲಿಂಗ್ ಯುನಿಟ್ ಇಷ್ಟು ಸ್ಟ್ರಾಂಗ್​ ಆಗೋಕೆ ಪಾರಸ್ ಮಾಮ್ರೆ ಕೂಡ ಕಾರಣ. ಜೊತೆಗೆ ಕೋಚ್​ಗಳಾಗಿ ಪಾರಸ್​ ಮಾಮ್ರೆ ಮತ್ತು ರಾಹುಲ್ ದ್ರಾವಿಡ್ ಲಾಂಗ್​​ಟೈಮ್​ನಿಂದ ಜೊತೆಗೆ ಇದ್ದಾರೆ. ದ್ರಾವಿಡ್ ಇಂಡಿಯಾ ಅಂಡರ್​-19 ಕೋಚ್ ಆಗಿದ್ದಾಗಲೂ ಪಾರಸ್ ಮಾಮ್ರೆ ಬೌಲಿಂಗ್ ಕೋಚ್ ಆಗಿ ದ್ರಾವಿಡ್ ಟೀಂನಲ್ಲೇ ಇದ್ರು.​​ ಇನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕಳೆದ 3-4 ವರ್ಷಗಳಿಂದ ಟೀಂ ಇಂಡಿಯಾದಲ್ಲೇ ಇದ್ದಾರೆ. ಹೀಗಾಗಿ ಒಂದು ಬೆಸ್ಟ್ ಸೆಟ್ ಆಫ್ ಕೋಚ್​ಗಳು ಟೀಂ ಇಂಡಿಯಾವನ್ನ ಗೈಡ್ ಮಾಡ್ತಾ ಇದ್ದಾರೆ. ಹೀಗಾಗಿಯೇ ದ್ರಾವಿಡ್ ನೇತೃತ್ವದ ಈ ಎಲ್ಲಾ ಕೋಚಿಂಗ್​ ಸ್ಟಾಫ್​​ಗಳ ಕಾಂಟ್ರ್ಯಾಕ್ಟ್​ನ್ನ ಕೂಡ ವಿಸ್ತರಿಸಲಾಗಿದೆ. ಇನ್ನು ವರ್ಲ್ಡ್​​ಕಪ್ ಫೈನಲ್ ಸೋತ ಮಾತ್ರಕ್ಕೆ ಕೋಚ್​ಗಳನ್ನ, ಕ್ಯಾಪ್ಟನ್​​ನನ್ನ ಬದಲಾಯಿಸಿದ್ರೆ ಅಲ್ಲಿ ರಾಂಗ್ ಮೆಸೇಜ್ ಪಾಸ್ ಆಗುತ್ತೆ. ಜೊತೆಗೆ ಟೀಂ ಮೇಲೂ ನೆಗೆಟಿವ್ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಂಥಾ ಯಾವುದೇ ರಿಸ್ಕ್ ತೆಗೆದುಕೊಳ್ಳೋಕೆ ಬಿಸಿಸಿಐ ಮುಂದಾಗಿಲ್ಲ. ಇಲ್ಲಿ ಬಿಸಿಸಿಐ ನಿಜಕ್ಕೂ ರೈಟ್ ಡಿಸೀಶನ್​ ತೆಗೆದುಕೊಂಡಿದೆ.

ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದೆ ನಿಜಕ್ಕೂ ಈಗ ದೊಡ್ಡ ಸವಾಲಿದೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ, ಟಿ-20, ವಂಡೇ ಮತ್ತು ಟೆಸ್ಟ್ ಸೀರಿಸ್​ನ್ನ ಆಡಲಿದೆ.  2022ರಲ್ಲಿ ಸೌತ್​ ಆಫ್ರಿಕಾದಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ವಂಡೇ ಸೀರಿಸ್ ಸೋತಿತ್ತು. ಟೆಸ್ಟ್​ ಸೀರಿಸ್​​ನ್ನ ಕೂಡ ಸೋತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಸೀರಿಸ್ ಗೆಲ್ಲೋಕೆ ನಮ್ಮಿಂದ ಸಾಧ್ಯವಾಗಿಲ್ಲ. ಹರಿಣಗಳನ್ನ ಅವರದ್ದೇ ನೆಲದಲ್ಲಿ ಸದೆಬಡಿಯೋಕೆ ಟೀಂ ಇಂಡಿಯಾಗೆ ಈವರೆಗೂ ಆಗಿಲ್ಲ. ಹೀಗಾಗಿ ಈ ಬಾರಿಯಾದ್ರೂ ಆ ಸಾಧನೆ ಮಾಡುತ್ತಾ ನೋಡಬೇಕಿದೆ. ಹೀಗಾಗಿ ಕೋಚ್ ಆಗಿ ದ್ರಾವಿಡ್ ಮುಂದೆ ಇರುವ ನೆಕ್ಟ್ಸ್ ಟಾರ್ಗೆಟ್ ಇದೇ.

Sulekha