ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು?- ಯಾರು ಔಟ್? ಯಾರು ಇನ್?
ಇಂಗ್ಲೆಂಡ್ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್ನ್ನ ಟೀಂ ಇಂಡಿಯಾ ಸೋತಾಗಿದೆ. ಫಸ್ಟ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಸೆಕೆಂಡ್ ಟೆಸ್ಟ್ನಲ್ಲೂ ಕೊಹ್ಲಿ ಆಡ್ತಾ ಇಲ್ಲ. ಇದ್ರ ಬೆನ್ನಲ್ಲೇ ನೆಕ್ಸ್ಟ್ ಮ್ಯಾಚ್ಗೆ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ ಕೂಡ ಟೀಮ್ನಲ್ಲಿ ಇರೋದಿಲ್ಲ. ಫಸ್ಟ್ ಟೆಸ್ಟ್ನ ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಆಡಿರೋದೆ ಇವರಿಬ್ಬರು. ರಾಹುಲ್ ಮತ್ತು ಜಡೇಜ ಇಬ್ರೂ ಸೆಂಚೂರಿ ಹತ್ತಿರ ಬಂದಿದ್ರು. ಅದ್ರಲ್ಲೂ ಆಲ್ರೌಂಡರ್ ರವೀಂದ್ರ ಜಡೇಜ ಟೀಮ್ಗೆ ಎಷ್ಟು ಇಂಪಾರ್ಟೆಂಟ್ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಇಂಜ್ಯೂರಿಯಿಂದಾಗಿ ಇಬ್ರೂ ಸೆಕೆಂಡ್ ಟೆಸ್ಟ್ಗೆ ಟೀಮ್ನಿಂದ ಹೊರಗುಳಿದಿದ್ದಾರೆ. ಟೀಮ್ಗೆ ಯಂಗ್ಸ್ಟರ್ ಸರ್ಫರಾಜ್ ಖಾನ್ ಎಂಟ್ರಿಯಾಗಿದೆ. ಇವತ್ತಿನ ಎಪಿಸೋಡ್ನಲ್ಲಿ ಮುಂದಿನ ಟೆಸ್ಟ್ ಮ್ಯಾಚ್ಗಳಿಗೆ ಟೀಂ ಇಂಡಿಯಾದಲ್ಲಿ ಏನೆಲ್ಲಾ ಚೇಂಜೆಸ್ಗಳಾಗಬಹುದು? ಎಂಬ ವಿವರ ಇಲ್ಲಿದೆ.
ಇದನ್ನೂ ಓದಿ: ಮೂರನೇ ಮದುವೆ ಬೆನ್ನಲ್ಲೆ ತಗ್ಲಾಕ್ಕೊಂಡ ಶೋಯೆಬ್ ಮಲಿಕ್ – ಪಾಕ್ ಕ್ರಿಕೆಟಿಗನ ವಿರುದ್ಧ ಕೇಳಿ ಬಂದಿರೋ ಆರೋಪ ಏನು?
ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜ.. ಇಬ್ಬರೂ ಆಗಾಗ ಇಂಜ್ಯೂರಿ ಸಮಸ್ಯೆಗೆ ಒಳಗಾಗ್ತಾನೆ ಇದ್ದಾರೆ. ವಂಡೇ ವರ್ಲ್ಡ್ಕಪ್ಗೂ ಮೊದಲು ಇಬ್ಬರೂ ಇಂಜ್ಯೂರಿಗೊಳಗಾಗಿದ್ರು. ಬಳಿಕ ರೈಟ್ಟೈಮ್ನಲ್ಲಿ ಟೀಮ್ಗೆ ಕಮ್ಬ್ಯಾಕ್ ಮಾಡಿದ್ರು. ಇದೀಗ ಟಿ20 ವರ್ಲ್ಡ್ಕಪ್ಗೂ ಮುನ್ನ ಮತ್ತೊಮ್ಮೆ ಇಂಜ್ಯೂರಿಗೊಳಗಾಗಿದ್ದಾರೆ. ಕೆಎಲ್ ರಾಹುಲ್ಗೆ ಭುಜದಲ್ಲಿ ನೋವು ಕಾಣಿಸಿಕೊಂಡಿದೆ. ರವೀಂದ್ರ ಜಡೇಜಾಗೆ ಕಾಲಿನ ಮಂಡಿಯಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಇಬ್ಬರೂ ಮುಂದಿನ ಟೆಸ್ಟ್ ಮ್ಯಾಚ್ನಲ್ಲಿ ಆಡೋದಿಲ್ಲ. ಹೀಗಾಗಿ ಮುಂಬೈ ಮೂಲದ ಸರ್ಫರಾಜ್ ಖಾನ್, ಆಲ್ರೌಂಡರ್ಗಳಾದ ಸೌರಬ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್ರನ್ನ 2ನೇ ಟೆಸ್ಟ್ಗಾಗಿ ಸ್ಕ್ವಾಡ್ಗೆ ಪಿಕ್ ಮಾಡಲಾಗಿದೆ. ಈ ಪೈಕಿ ಸರ್ಫರಾಜ್ ಖಾನ್, ಆಲ್ರೌಂಡರ್ ಸೌರಬ್ ಕುಮಾರ್ ಬಗ್ಗೆ ಒಂದಷ್ಟು ಇನ್ಫಾರ್ಮೇಶನ್ ಕೊಡ್ತೀನಿ. ಅದಕ್ಕೂ ಮುನ್ನ ಪದೇ ಪದೆ ಇಂಜ್ಯೂರಿಗೊಳಗಾಗ್ತಿರೋ ನಮ್ಮ ಕೆಲ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನ ನೋಡಿ ಕಲಿಯಬೇಕಾಗಿರೋದು ಸಾಕಷ್ಟಿದೆ. ಯಾಕಂದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ರನ್ ಮಷಿನ್ ಕೊಹ್ಲಿಯ ಫಿಟ್ನೆಸ್ ಮತ್ತು ಟೀಮ್ಗೆ ನೀಡಿರೋ ಕಾಂಟ್ರಿಬ್ಯೂಷನ್ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ವಿರಾಟ್ ಕೊಹ್ಲಿ ಒಂದೇ ಒಂದು ಬಾರಿ ಬೆಂಗಳೂರಿನಲ್ಲಿರೋ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಹೋಗಿಲ್ವಂತೆ. ಎನ್ಸಿಎ ಅನ್ನೋದು ಒಂಥರಾ ಪುನರ್ವಸತಿ ಕೇಂದ್ರ ಇದ್ದಂತೆ. ಇಂಜ್ಯೂರಿಗೆ ಒಳಗಾದವರು, ಫಾರ್ಮ್ ಕಳೆದುಕೊಂಡವರು ಎನ್ಸಿಎನಲ್ಲಿ ಟ್ರೈನಿಂಗ್ ಪಡೆದು, ಫಿಟ್ ಆಗಿ ಟೀಮ್ಗೆ ಕಮ್ಬ್ಯಾಕ್ ಮಾಡ್ತಾರೆ. ಆದ್ರೆ ವಿರಾಟ್ ಕೊಹ್ಲಿ ಮಾತ್ರ ತಮ್ಮ ಕೆರಿಯರ್ನಲ್ಲಿ ಇದುವರೆಗೂ ಒಂದೇ ಒಂದು ಬಾರಿ ಎನ್ಸಿಎಗೆ ಹೋಗಿಲ್ಲ. ಯಾಕಂದ್ರೆ ಇಂಜ್ಯೂರಿಗೊಳಗಾಗಿ ಕೊಹ್ಲಿ ಟೀಮ್ನಿಂದ ಔಟಾಗಿರೋ ಉದಾಹರಣೆಗಳೇ ಇಲ್ಲ. ಎನ್ಸಿಎಗೆ ಹೋಗುವಂತಾ ಪ್ರಮೇಯವೇ ಕೊಹ್ಲಿಗೆ ಬಂದಿಲ್ಲ. ಆ ರೇಂಜಿಗೆ ತಮ್ಮ ಫಿಟ್ನೆಸ್ನ್ನ ವಿರಾಟ್ ಕೊಹ್ಲಿ ಮೇಂಟೇನ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರೋ ರೋಹಿತ್ ಶರ್ಮಾ ಎಲ್ಲಾ ಯಂಗ್ಸ್ಟರ್ಸ್ಗಳು ಕೂಡ ಈ ವಿಚಾರದಲ್ಲಿ ಕೊಹ್ಲಿಯನ್ನ ನೋಡಿ ಕಲಿಯಬೇಕಿದೆ. ಕೊಹ್ಲಿ ಯಾವ ರೀತಿ ಬ್ಯಾಟಿಂಗ್ ಮಾಡ್ತಾರೆ ಅನ್ನೋದನ್ನ ಬಿಟ್ಟು ಬಿಡಿ. ಆದ್ರೆ ಒಬ್ಬ ಪ್ಲೇಯರ್ ಆಗಿ ಕೊಹ್ಲಿ ಎಷ್ಟು ಕ್ವಾಲಿಟಿ ಮೇಂಟೇನ್ ಮಾಡಿಕೊಂಡಿದ್ದಾರೆ. ಅಷ್ಟೊಂದು ಅಚೀವ್ ಮಾಡಿರೋ ಕೊಹ್ಲಿಗೆ ಎಲ್ಲಾ ಮ್ಯಾಚ್ಗಳನ್ನ ಕೂಡ ಆಡಬೇಕು ಅಂತೇನಿಲ್ಲ. ತಮಗೆ ಬೇಕಾದಾಗಲೆಲ್ಲಾ ರೆಸ್ಟ್ ತೆಗೆದುಕೊಳ್ಳಬಹುದು. ಆದ್ರೆ ಕೊಹ್ಲಿ ಯಾವತ್ತಿಗೂ ಟೀಮ್ಗೆ ಎವೈಲೇಬಲ್ ಇರ್ತಾರೆ. ಕ್ರಿಕೆಟ್ ಬಗ್ಗೆ ಅಷ್ಟೊಂದು ಪ್ಯಾಶನೇಟ್ ಆಗಿದ್ರಿಂದಲೇ ಕೊಹ್ಲಿಗೆ ಇಷ್ಟೆಲ್ಲಾ ಸಾಧಿಸೋಕೆ ಸಾಧ್ಯವಾಯ್ತು ಅಂತಾ ರೋಹಿತ್ ಶರ್ಮಾ ಹೇಳಿದ್ದಾರೆ. ನಿಜಕ್ಕೂ ಫಿಟ್ನೆಸ್ ಮತ್ತು ಪ್ಯಾಶನ್ ವಿಚಾರಕ್ಕೆ ಬಂದ್ರೆ ಕೊಹ್ಲಿಗಿಂತ ಬೆಸ್ಟ್ ರೋಲ್ ಮಾಡೆಲ್ ಮತ್ತೊಬ್ಬರಿಲ್ಲ ಅಂತಾನೆ ಹೇಳಬಹುದು.