ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಮಾಡುತ್ತಾ ಮ್ಯಾಜಿಕ್ – ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯ ಲೆಕ್ಕಾಚಾರಗಳೇನು?
ಟಿ-20 ಸೀರಿಸ್ ಟೈ ಆಯ್ತು.. ವಂಡೇ ಸೀರಿಸ್ ಗೆದ್ದಾಯ್ತು.. ಈಗ ಟೆಸ್ಟ್ ಸರಣಿ.. ಟೀಂ ಇಂಡಿಯಾ ಅಸಲಿ ಟೆಸ್ಟ್ನ್ನ ಫೇಸ್ ಮಾಡ್ತಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಬಾರಿ ಟೆಸ್ಟ್ ಸೀರಿಸ್ ಗೆದ್ದಿಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ಯಾರೂ ಮಾಡದ ಸಾಧನೆಯನ್ನ ಮಾಡಲು ಅವಕಾಶವಿದೆ. ಇದರ ಜೊತೆಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಎಂಬ ಬಗ್ಗೆಯೂ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟೆಸ್ಟ್ ಪಂದ್ಯ – ಸೆಂಚುರಿಯನ್ ಪಿಚ್ ಟೀಮ್ ಇಂಡಿಯಾಕ್ಕೆ ವರವಾಗುತ್ತಾ?
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಡಿಸೆಂಬರ್ 26 ರಿಂದ ಜನವರಿ 7 ರವರೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಕೆಎಲ್ ರಾಹುಲ್ ಫಸ್ಟ್ ಟೆಸ್ಟ್ನಲ್ಲಿ ವಿಕೆಟ್ ಕೀಪರ್ ಆಗಿರೋ ಸಾಧ್ಯತೆ ಇದೆ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಕೆಎಲ್ ರಾಹುಲ್ ಇದುವರೆಗೂ ಟೀಂ ಇಂಡಿಯಾದ ಫುಲ್ಟೈಮ್ ವಿಕೆಟ್ ಕೀಪರ್ ಆಗಿರಲೇ ಇಲ್ಲ. ವಂಡೇ ವರ್ಲ್ಡ್ಕಪ್ ಮತ್ತು ಸೌತ್ ಆಫ್ರಿಕಾ ವಿರುದ್ಧ ವಂಡೇ ಸೀರಿಸ್ನಲ್ಲಿ ಕೆಎಲ್ ಕೀಪರ್ ಆಗಿದ್ರು. ಆದ್ರೀಗ ಟೆಸ್ಟ್ನಲ್ಲಿ ಕೀಪಿಂಗ್ ಮಾಡಬೇಕಿದೆ. ಟೆಸ್ಟ್ನಲ್ಲಿ ಒಬ್ಬ ಫುಲ್ ಟೈಮ್ ವಿಕೆಟ್ ಕೀಪರ್ ಎಕ್ಸ್ಪೀರಿಯನ್ಸ್ ಇಲ್ಲಾಂದ್ರೆ 90 ಓವರ್ಗಳ ಕಾಲ ನಿರಂತರವಾಗಿ ಕೀಪಿಂಗ್ ಮಾಡೋದು ಅಷ್ಟು ಸುಲಭ ಅಲ್ಲ. ಅದು ಕೂಡ ಸೌತ್ ಆಫ್ರಿಕಾದಲ್ಲಿನ ಪಿಚ್ಗಳಲ್ಲಿ. ಪೇಸ್ ಮತ್ತು ಬೌನ್ಸಿ ಪಿಚ್ ಆಗಿರೋದ್ರಿಂದ ಬ್ಯಾಟ್ಸ್ಮನ್ಗಳು ಬಾಲ್ನ್ನ ಲೀವ್ ಮಾಡ್ತಾನೆ ಇರ್ತಾರೆ. ಬೀಟ್ ಆಗ್ತಾನೆ ಇರುತ್ತೆ, ಎಕ್ಸ್ಟ್ರಾ ಬೌನ್ಸ್ ಆಗಿ ಬರೋ ಬಾಲ್ನ್ನ ವಿಕೆಟ್ ಕೀಪರ್ ನಿರಂತರವಾಗಿ ಕಲೆಕ್ಟ್ ಮಾಡ್ತಾನೆ ಇರಬೇಕಾಗುತ್ತೆ. ಹೀಗಾಗಿ ವಿಕೆಟ್ ಕೀಪರ್ಗೆ ಇಲ್ಲಿ ತುಂಬಾನೆ ಕೆಲಸ ಇರುತ್ತೆ. ಆದ್ರೆ ಕೆಎಲ್ ರಾಹುಲ್ ಫಸ್ಟ್ ಕ್ಲಾಸ್ ಕ್ರಿಕೆಟ್ ವೇಳೆಯೂ ಇಂಥಾ ಲಾಂಗ್ ಇನ್ನಿಂಗ್ಸ್ನಲ್ಲಿ ಫುಲ್ ಟೈಮ್ ಕೀಪರ್ ಆಗಿರಲಿಲ್ಲ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲಿ ಕೀಪಿಂಗ್ ಮಾಡ್ತಾರೆ ಅಂದ್ರೆ ಬ್ಯಾಟಿಂಗ್ ಜೊತೆಗೆ ಕೆಎಲ್ ರಾಹುಲ್ಗೆ ಕೀಪಿಂಗ್ ಚಾಲೆಂಜ್ ಕೂಡ ಎದುರಾಗಲಿದೆ. ಆದ್ರೆ ಕೋಚ್ ರಾಹುಲ್ ದ್ರಾವಿಡ್ ಹೇಳೋ ಪ್ರಕಾರ, ಕಳೆದ 5-6 ತಿಂಗಳುಗಳಲ್ಲಿ ಕೆಎಲ್ ರಾಹುಲ್ ನಿರಂತವಾಗಿ ಕೀಪಿಂಗ್ ಮಾಡ್ತಾನೆ ಇದ್ದಾರೆ. ಜೊತೆಗೆ ದಕ್ಷಿಣಿ ಆಫ್ರಿಕಾದಲ್ಲಿ ಬಾಲ್ ಹೆಚ್ಚು ಸ್ಪಿನ್ ಆಗಲ್ಲ. ಹೀಗಾಗಿ ರಾಹುಲ್ ಈಸಿಯಾಗಿ ಕೀಪಿಂಗ್ ರೋಲ್ ನಿಭಾಯಿಸಬಹುದು ಎಂದಿದ್ದಾರೆ.
ಇನ್ನು ಸೌತ್ ಆಫ್ರಿಕಾ ವಿರುದ್ಧದ 2 ಮ್ಯಾಚ್ಗಳ ಟೆಸ್ಟ್ ಸೀರಿಸ್ ಕೂಡ ಟೀಂ ಇಂಡಿಯಾಗೆ ತುಂಬಾ ಮಹತ್ವದ್ದಾಗಿದೆ. ಯಾಕಂದರೆ, 2025ರಲ್ಲಿ ನಡೆಯುವ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗೆ ಕ್ವಾಲಿಫೈ ಆಗಬೇಕು ಅನ್ನೋದಾದ್ರೆ, ಈಗ ದಕ್ಷಿಣ ಆಫ್ರಿಕಾದಲ್ಲಿ ಗೆಲ್ಲೋದು ಕೂಡ ಇಂಪಾರ್ಟೆಂಟ್ ಆಗುತ್ತೆ. ನೆಕ್ಸ್ಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಜೊತೆಗೂ ಟೀಂ ಇಂಡಿಯಾ ಟೆಸ್ಟ್ ಸೀರಿಸ್ಗಳನ್ನ ಆಡಲಿದೆ. ಹೀಗಾಗಿ ಸೌತ್ ಆಫ್ರಿಕಾದಲ್ಲಿ ಸೀರಿಸ್ ಗೆದ್ದು ಹಿಸ್ಟ್ರಿ ಕ್ರಿಯೇಟ್ ಮಾಡಿದ್ರೆ ನೆಕ್ಸ್ಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ್ನ ಫೇಸ್ ಮಾಡೋಕೂ ಒಂದಷ್ಟು ಕಾನ್ಫಿಡೆನ್ಸ್ ಸಿಗುತ್ತೆ. ಹೀಗಾಗಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗೆ ಕ್ವಾಲಿಫೈ ಆಗೋ ದೃಷ್ಟಿಯಿಂದಲೂ ಸೌತ್ ಆಫ್ರಿಕಾ ವಿರುದ್ಧದ ಪರ್ಫಾಮೆನ್ಸ್ ಮುಖ್ಯವಾಗುತ್ತೆ. ಎನಿವೇ ಫಸ್ಟ್ ಟೆಸ್ಟ್ ಮ್ಯಾಚ್ ಡಿಸೆಂಬರ್ 26 ರಂದು ಮಧ್ಯಾಹ್ನ 1.30ಕ್ಕೆ ಶುರುವಾಗುತ್ತೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ನಲ್ಲಿ ಲೈವ್ ನೋಡಬಹುದು.
ಇನ್ನು ಫಸ್ಟ್ ಟೆಸ್ಟ್ ಮ್ಯಾಚ್ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಯಾರೆಲ್ಲಾ ಆಡಬಹುದು ಅನ್ನೋ ಸಂಭಾವ್ಯ ಪ್ಲೇಯರ್ಸ್ ಲಿಸ್ಟ್ ಇಲ್ಲಿದೆ.
ಟೀಂ ಇಂಡಿಯಾ PLAYING-11
- ರೋಹಿತ್ ಶರ್ಮಾ
- ಯಶಸ್ವಿ ಜೈಸ್ವಾಲ್
- ಶುಬ್ಮನ್ ಗಿಲ್
- ವಿರಾಟ್ ಕೊಹ್ಲಿ
- ಕೆ.ಎಲ್.ರಾಹುಲ್
- ಶ್ರೇಯಸ್ ಅಯ್ಯರ್
- ರವೀಂದ್ರ ಜಡೇಜ
- ಆರ್.ಅಶ್ವಿನ್ OR ಶಾರ್ದುಲ್ ಠಾಕೂರ್
- ಮುಕೇಶ್ ಕುಮಾರ್
- ಮೊಹಮ್ಮದ್ ಸಿರಾಜ್
- ಜಸ್ಪ್ರಿತ್ ಬುಮ್ರಾ