IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಚಿನ್ನಸ್ವಾಮಿ ಪಂದ್ಯಗಳೇ ಟಾರ್ಗೆಟ್ ಏಕೆ?

IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAMಚಿನ್ನಸ್ವಾಮಿ ಪಂದ್ಯಗಳೇ ಟಾರ್ಗೆಟ್ ಏಕೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇನ್ನೆರಡು ಟಿ-20ಐ ಪಂದ್ಯಗಳು ಬಾಕಿ ಇವೆ. ಬುಧವಾರ ಹೈದ್ರಾಬಾದ್​ನಲ್ಲಿ ನಾಲ್ಕನೇ ಮ್ಯಾಚ್ ನಡೆದ್ರೆ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸರಣಿಯ ಕೊನೇ ಪಂದ್ಯ ಶೆಡ್ಯೂಲ್ ಆಗಿದೆ. ಆದ್ರೆ ಬೆಂಗಳೂರಿನ ಪಂದ್ಯ ನೋಡ್ಬೇಕು ಅಂತಿದ್ದ ಅಭಿಮಾನಿಗಳಿಗೆ ಮಹಾಮೋಸ ಮಾಡಿದ್ದಾರೆ. ಫ್ಯಾನ್ಸ್ ಕ್ರೇಜ್​ನಲ್ಲೂ ಸ್ಕ್ಯಾಮ್ ನಡೆದಿದೆ.

ಇದನ್ನೂ ಓದಿ : ವಿಂಡೀಸ್ ಗೆ ಮರುಜನ್ಮದ HOPE! – ಕೆರೆಬಿಯನ್ಸ್ ಗತವೈಭವ ಮರುಕಳಿಸುತ್ತಾ?

ಕರ್ನಾಟಕದಲ್ಲಿ ಕ್ರಿಕೆಟ್ ಅಂದ್ರೆ ಅಭಿಮಾನಿಗಳು ಮುಗಿ ಬೀಳೋ ವಿಚಾರ ಎಲ್ರಿಗೂ ಗೊತ್ತಿರೋದೇ. ಚಿನ್ನಸ್ವಾಮಿಯಲ್ಲಿ ಪಂದ್ಯಗಳು ನಡೀತಿವೆ ಅಂದ್ರೆ ಗ್ಯಾಲರಿ ಹೌಸ್​ಫುಲ್ ಆಗಿರುತ್ವೆ. ಈವನ್ ಐಪಿಎಲ್​ನಲ್ಲೂ ನೀವೆಲ್ಲಾ ನೋಡೇ ಇರ್ತೀರಿ. ಈಗ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಐದನೇ ಟಿ-20ಐ ಪಂದ್ಯವನ್ನ ಅಕ್ಟೋಬರ್ 17ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಫಿಕ್ಸ್ ಮಾಡಿದ್ರು. ಸೋ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ರು. ಆದ್ರೆ ಟಿಕೆಟ್ ಖರೀದಿಗೂ ಮೊದ್ಲೇ ವಂಚಿಸಿದ್ದಾರೆ.

ಕನಿಷ್ಠ ದರ ₹1,000.. ಬುಕ್ಕಿಂಗ್ ನಲ್ಲಿ ₹2,500ಕ್ಕೆ ಏರಿಕೆ!

ಭಾರತ ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯಕ್ಕೂ ಮುನ್ನ ಟಿಕೆಟ್ ಬೆಲೆ ಏರಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಧಿಕೃತ ಟಿಕೆಟಿಂಗ್ ಪಾಲುದಾರ ಸಂಸ್ಥೆಯಾದ TicketGenie Portal ಮತ್ತು ಆರಂಭಿಕ ಬ್ಯಾನರ್‌ಗಳಲ್ಲಿ ಜನರಲ್ ಗ್ಯಾಲರಿಗಳ (G Upper ಮತ್ತು H Upper  ಕನಿಷ್ಠ ಟಿಕೆಟ್ ದರವನ್ನು ₹1,000 ಎಂದು ಪ್ರಕಟಿಸಲಾಗಿತ್ತು. ಆದರೆ, ಬುಕಿಂಗ್ ವಿಂಡೋ ತೆರೆಯುವ ಕೆಲವೇ ನಿಮಿಷಗಳ ಮೊದಲು ಯಾವುದೇ ಮುನ್ಸೂಚನೆ ಇಲ್ಲದೆ ಈ ಬೇಸ್ ಪ್ರೈಸ್ ಅನ್ನು ₹2,500 ಕ್ಕೆ ಏರಿಸಲಾಯಿತು. ಇದು ಶೇಕಡಾ 150 ರಷ್ಟು ಭಾರಿ ದರ ಏರಿಕೆಯಾಗಿದೆ. ಬೆಲೆ ಏರಿಕೆಯ ಆಘಾತದ ನಡುವೆಯೂ ಟಿಕೆಟ್ ಖರೀದಿಸಲು ಲಾಗ್-ಇನ್ ಆದ ಅಭಿಮಾನಿಗಳಿಗೆ ಮತ್ತೊಂದು ನಿರಾಸೆ ಕಾದಿತ್ತು. ಬುಕಿಂಗ್ ಲೈವ್ ಆದ ಕೇವಲ 60 ಸೆಕೆಂಡುಗಳ ಒಳಗೆ ಅಂದ್ರೆ ಒಂದು ನಿಮಿಷದಲ್ಲಿ ಎಲ್ಲಾ ಟಿಕೆಟ್‌ಗಳು ‘ಸೋಲ್ಡ್ ಔಟ್’ಅಥವಾ ‘ಅಲಭ್ಯ’ ಎಂದು ತೋರಿಸಲಾರಂಭಿಸಿದವು.  ಈ ದಿಢೀರ್ ಬೆಲೆ ಏರಿಕೆಯಿಂದ ಸಿಟ್ಟಾದ ಕ್ರಿಕೆಟ್ ಫ್ಯಾನ್ಸ್  BCCI ಮತ್ತು TicketGenie ಸಂಸ್ಥೆಗಳನ್ನು ಟ್ಯಾಗ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ ಈ ಟಿಕೆಟ್ ಬುಕ್ಕಿಂಗ್​ನಲ್ಲೂ ದೊಡ್ಡ ಸ್ಕ್ಯಾಮ್ ಆಗಿದೆ ಎಂದು ಆರೋಪಿಸಿದ್ದಾರೆ. ಕೇವಲ ಒಂದು ನಿಮಿಷದಲ್ಲಿ ಟಿಕೆಟ್‌ಗಳು ಮಾಯವಾಗಲು ಆನ್‌ಲೈನ್ ಬಾಟ್‌ಗಳ ಬಳಕೆ ಅಥವಾ Black Market ದಂಧೆಯೇ ಕಾರಣ ಇರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಅನಧಿಕೃತ ಮರುಸೇಲ್ ಜಾಲತಾಣಗಳಲ್ಲಿ ಈ ಟಿಕೆಟ್‌ಗಳು ಮೂಲ ಬೆಲೆಗಿಂತ 4 ರಿಂದ 8 ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿರುವುದು ಅಭಿಮಾನಿಗಳ ಸಿಟ್ಟನ್ನ ಜಾಸ್ತಿ ಮಾಡ್ತಿದೆ. ಇದೇ ಸರಣಿಯ ರಾಂಚಿ ಮತ್ತು ಇಂದೋರ್ ಪಂದ್ಯಗಳ ವೇಳೆಯೂ ಟಿಕೆಟ್ ಬ್ಲಾಕ್ ಮಾರ್ಕೆಟ್ ಹಾಗೂ ನಕಲಿ ಟಿಕೆಟ್ ಹಾವಳಿಯ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈಗ ಬೆಂಗಳೂರಲ್ಲಿ ಇದೇ ರೀತಿ ಆಗ್ತಿರೋದ್ರಿಂದ ಮ್ಯಾಚ್ ನೋಡ್ಬೇಕು ಅನ್ಕೊಳ್ತಿದ್ದ ಅಭಿಮಾನಿಗಳಿಗೆ ನಿರಾಸೆ ತಂದಿದೆ.

Shantha Kumari

2 thoughts on “IND Vs WI ಸರಣಿಯಲ್ಲೂ ಮೋಸ! – ಫ್ಯಾನ್ಸ್ ಕ್ರೇಜ್ ಮುಂದಿಟ್ಟು SCAM
ಚಿನ್ನಸ್ವಾಮಿ ಪಂದ್ಯಗಳೇ ಟಾರ್ಗೆಟ್ ಏಕೆ?
”

Leave a Reply

Your email address will not be published. Required fields are marked *