ವಿಂಡೀಸ್ ಬೌಲರ್‌ಗಳಿಗೆ ಮಂಡಿಯೂರಿದ ಇಂಗ್ಲೆಂಡ್ – ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ ವೆಸ್ಟ್ ಇಂಡೀಸ್

ಟಿ20 ವಿಶ್ವಕಪ್‌ನ 15 ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸತತ ಎರಡನೇ ಗೆಲುವು ಸಾಧಿಸಿದೆ. ಈ ಭರ್ಜರಿ ಜಯದ ಮೂಲಕ ಗ್ರೂಪ್ ಸಿ ಅಂಕಪಟ್ಟಿಯಲ್ಲಿ ವಿಂಡೀಸ್ ಅಗ್ರಸ್ಥಾನಕ್ಕೇರಿದೆ.
ಇದನ್ನೂ ಓದಿ: ಇಂದು ಭಾರತ Vs ನಮಿಬಿಯಾ ಪಂದ್ಯ – ಟೀಂ ಇಂಡಿಯಾಗೆ ಪ್ಲಸ್ ಏನು? ಮೈನಸ್ ಏನು?
ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಟೀಮ್ ನೇಪಾಳ ವಿರುದ್ಧ ತಿಣುಕಾಡಿ ಗೆದ್ದ ಇಂಗ್ಲೆಂಡ್ ಇದೀಗ ವೆಸ್ಟ್ ಇಂಡೀಸ್ ಎದುರು ಹೀನಾಯ ಸೋಲು ಅನುಭವಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ವೆಸ್ಟ್ ಇಂಡೀಸ್ 30 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡ ಸತತ ಎರಡನೇ ಗೆಲುವು ಸಾಧಿಸಿದೆ. ಜೊತೆಗೆ ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರಿಬ್ಬರನ್ನೂ 8 ರನ್ ಗಳಿಗೆ ಕಳೆದುಕೊಂಡಿತು. ಅಲ್ಲಿಂದ ಶಿಮ್ರಾನ್ ಹೆಟ್ಮೈಯರ್, ರೋಸ್ಟನ್ ಚೇಸ್ ಜೊತೆಗೂಡಿ ಮೂರನೇ ವಿಕೆಟ್ ಗೆ 28 ಎಸೆತಗಳಲ್ಲಿ 47 ರನ್ ಗಳಿಸಿದರು. ಹೆಟ್ಮೈಯರ್ 12 ಎಸೆತಗಳಲ್ಲಿ 23 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಬಳಿಕ ಶೆರ್ಫೇನ್ ರುದರ್ಫೋರ್ಡ್ ಐದನೇ ವಿಕೆಟ್‌ಗೆ ರೋವ್ಮನ್ ಪೊವೆಲ್ ಅವರೊಂದಿಗೆ 29 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟವಾಡಿದರು. ಆರನೇ ವಿಕೆಟ್‌ಗೆ ಜೇಸನ್ ಹೋಲ್ಡರ್ ಅವರೊಂದಿಗೆ 32 ಎಸೆತಗಳಲ್ಲಿ 61 ರನ್‌ಗಳನ್ನು ಸೇರಿಸಿದರು. ಹೋಲ್ಡರ್ 17 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 33 ರನ್‌ಗಳಿಗೆ ಔಟಾದರು. ಆದರೆ ರುದರ್ಫೋರ್ಡ್ 7 ಸಿಕ್ಸರ್ ಮತ್ತು 2 ಬೌಂಡರಿಗಳೊಂದಿಗೆ 76 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಇಂಗ್ಲೆಂಡ್ ತಂಡದ ಪರ ಜೇಮೀ ಓವರ್ಟನ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು. ಜೋಫ್ರಾ ಆರ್ಚರ್ ಮತ್ತು ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು. 196 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಗೆಲುವಿಗೆ ಸ್ಯಾಮ್ ಕರನ್ ಅಜೇಯ 43 ರನ್ ಗಳಿಸಿ ಹೋರಾಡಿದರು. ಆದರೆ, ಅವರ ಇನ್ನಿಂಗ್ಸ್ ತಂಡಕ್ಕೆ ನೆರವಾಗಲಿಲ್ಲ.
ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟೀ 3 ವಿಕೆಟ್‌ಗಳನ್ನು ಪಡೆದರೆ, ರೋಸ್ಟನ್ ಚೇಸ್ 2 ವಿಕೆಟ್‌ಗಳನ್ನು ಕಬಳಿಸಿದರು. ಅಕೀಲ್ ಹೊಸೇನ್, ರೊಮಾರಿಯೊ ಶೆಫರ್ಡ್ ಮತ್ತು ಶಮರ್ ಜೋಸೆಫ್ ತಲಾ ಒಂದೊಂದು ವಿಕೆಟ್ ಪಡೆದರು.

ನೋಡಿರಿ

