ವಿಂಡೀಸ್ ಸ್ಟಾರ್ ಕ್ರಿಕೆಟರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಣೆ – ತವರಿನಲ್ಲಿ ಕೊನೇ ಪಂದ್ಯದ ನಂತರ ವಿದಾಯ

ವಿಂಡೀಸ್ ಸ್ಟಾರ್ ಕ್ರಿಕೆಟರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಣೆ – ತವರಿನಲ್ಲಿ ಕೊನೇ ಪಂದ್ಯದ ನಂತರ ವಿದಾಯ

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಿಸಿದ್ದಾರೆ. ಆ್ಯಂಡ್ರೆ ರಸೆಲ್ ವೆಸ್ಟ್ ಇಂಡೀಸ್ ಪರ 56 ಏಕದಿನ, 84 ಟಿ20 ಹಾಗೂ ಒಂದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಲು ರಸೆಲ್ ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಗೆದ್ದರೂ ಇಂಗ್ಲೆಂಡ್ ತಂಡಕ್ಕೆ ಬಿತ್ತು ಭಾರಿ ದಂಡ – ಭಾರತಕ್ಕಿಲ್ವಾ ಎಂದು ಐಸಿಸಿ ವಿರುದ್ಧ ಆಂಗ್ಲರ ಕಿರಿಕ್

ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ ರಸೆಲ್ ತಂಡಕ್ಕೆ ಶಕ್ತಿಯಾಗಿದ್ದರು. ಇದೀಗ ವಿಂಡೀಸ್ ಕ್ರಿಕೆಟಿಗ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಇಂಟರ್​ನ್ಯಾಷನಲ್ ಕೆರಿಯರ್​ಗೆ ವಿದಾಯ ಹೇಳುವುದಾಗಿ 37 ವರ್ಷದ ರಸೆಲ್ ತಿಳಿಸಿದ್ದಾರೆ. 2026 ರ ಟಿ20 ವಿಶ್ವಕಪ್​ಗೂ ಮುನ್ನ ನಿವೃತ್ತಿ ನೀಡಲು ನಿರ್ಧರಿಸಿದ್ದು, ಅದರಂತೆ ಜಮೈಕಾದ ಸಬೀನಾ ಪಾರ್ಕ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವುದಾಗಿ ರಸೆಲ್ ತಿಳಿಸಿದ್ದಾರೆ.

ಸಬೀನಾ ಪಾರ್ಕ್ ರಸೆಲ್ ಅವರ ತವರು ಮೈದಾನ. ಈ ಮೈದಾನಕ್ಕೂ ರಸೆಲ್ ಗೂ ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಇದೇ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ವಿದಾಯ ಹೇಳಲು ಅವರು ಬಯಸಿದ್ದಾರೆ. 2011 ರಲ್ಲಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್​ ಪರ ಟಿ20 ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ 84 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 73 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕಗೊಂದಿಗೆ 1078 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 61 ವಿಕೆಟ್ ಪಡೆದು ಮಿಂಚಿದ್ದಾರೆ. ಇನ್ನು 2011 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ ಆಡಿರುವುದು 56 ಪಂದ್ಯಗಳನ್ನು ಮಾತ್ರ. ಈ ವೇಳೆ 4 ಅರ್ಧಶತಕಗಳೊಂದಿಗೆ 1034 ರನ್ ಕಲೆಹಾಕಿದ್ದಾರೆ. ಇನ್ನು 55 ಏಕದಿನ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 70 ವಿಕೆಟ್​ಗಳನ್ನು ಪಡೆದಿದ್ದಾರೆ. ರಸೆಲ್ ಅವರ ಕ್ರಿಕೆಟ್ ಕೆರಿಯರ್ ಐಪಿಎಲ್,  ಸಿಪಿಎಲ್, ಎಂಸಿಎಲ್ ಸೇರಿದಂತೆ ವಿಶ್ವದ ಪ್ರಮುಖ ಟಿ20 ಲೀಗ್​ನಲ್ಲಿ ಮುಂದುವರೆಯಲಿದೆ.

Sulekha