23 ವರ್ಷಗಳ ನಂತರ ಶತಕದ ಖುಷಿಯಲ್ಲಿ ವೆಸ್ಟ್ ಇಂಡೀಸ್ – ಭಾರತದ ಲೆಕ್ಕಾಚಾರ ಕೈ ಕೊಡ್ತಾ?

23 ವರ್ಷಗಳ ನಂತರ ಶತಕದ ಖುಷಿಯಲ್ಲಿ ವೆಸ್ಟ್ ಇಂಡೀಸ್ – ಭಾರತದ ಲೆಕ್ಕಾಚಾರ ಕೈ ಕೊಡ್ತಾ?

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯೋಜನೆ ಕೈ ಕೊಟ್ಟಂತೆ ಕಾಣುತ್ತಿದೆ. ಯಾಕೆಂದರೆ, ಫಾಲೋ ಆನ್ ಹೊತ್ತು ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ ಈ ಸರಣಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪ್ರತಿರೋಧ ತೋರುವ ರೀತಿ ಬ್ಯಾಟ್ ಬೀಸುತ್ತಿದೆ. ಅದರಲ್ಲೂ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಕಣಕ್ಕಿಳಿದ ಜಾನ್ ಕ್ಯಾಂಪ್​ಬೆಲ್ 115 ರನ್​ ಬಾರಿಸಿ ಮಿಂಚಿದ್ದಾರೆ.

ಇದನ್ನೂ ಓದಿ: IPL ಮಿನಿ ಹರಾಜಿಗೆ ಡೇಟ್ ಫಿಕ್ಸ್ – RCBಯಿಂದ ಯಾರಿಗೆ ಗೇಟ್ ಪಾಸ್?

ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್​ರೊಬ್ಬರು ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಕಣಕ್ಕಿಳಿದ ಜಾನ್ ಕ್ಯಾಂಪ್​ಬೆಲ್ 115 ರನ್​ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ವಿಂಡೀಸ್ ಪಡೆಯ ಶತಕದ ಬರ ನೀಗಿದೆ. ಅಂದರೆ ಕಳೆದ 23 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಯಾವುದೇ ಬ್ಯಾಟರ್ ಭಾರತದ ಪಿಚ್​ನಲ್ಲಿ ಟೆಸ್ಟ್ ಶತಕ ಬಾರಿಸಿರಲಿಲ್ಲ. 2002 ರಲ್ಲಿ ನಡೆದ ಈಡನ್ ಗಾರ್ಡನ್ಸ್ ಟೆಸ್ಟ್ ಪಂದ್ಯದಲ್ಲಿ ವಾವೆಲ್ಸ್ ಹಿಂಡ್ಸ್ 100 ರನ್​ಗಳಿಸಿದ್ದೇ ಕೊನೆ. ಇದಾದ ಬಳಿಕ ವಿಂಡೀಸ್ ತಂಡದ ಯಾವುದೇ ಒಪನರ್​ ಬ್ಯಾಟರ್ ಭಾರತೀಯ ಪಿಚ್​ನಲ್ಲಿ ಮೂರಂಕಿ ಮೊತ್ತ ಗಳಿಸಿರಲಿಲ್ಲ. ಇದೀಗ ಬರೋಬ್ಬರಿ 23 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ಆರಂಭಿಕ ದಾಂಡಿಗ ಜಾನ್ ಕ್ಯಾಂಪ್​ಬೆಲ್ ಶತಕ ಸಿಡಿಸಿದ್ದಾರೆ.

Sulekha